“ತಾಯಿಗೆ ಜನ್ಮದಿನದ ಶುಭಾಶಯಗಳು. ಎಲ್ಲರೂ ಖುಷಿಯಾಗಿರಿ, ಶಾಲೆಗೆ ತನಗಾಗಿ ಕಟ್ಟಿರುವ ಶುಲ್ಕವನ್ನು ವಾಪಸ್ ಪಡೆದುಕೊಳ್ಳಿ. ನಿಮ್ಮಿಂದ ನಾನು ದೂರವಾಗುತ್ತಿದ್ದೇನೆ. ನೀವು ನನ್ನನ್ನು ದುಃಖಕ್ಕೆ ತಳ್ಳಿದಿರಿ. ಯಾರೂ ಅಳಬೇಡಿ.”
-ಹೀಗೆ ಇಂಗ್ಲಿಷ್‌ನಲ್ಲಿ ಡೆತ್ ನೋಟ್ ಬರೆದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ತಲಪಾಡಿಯ ದೇವಿನಗರದ ಶಾರದಾ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿನಿಲಯದಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ರಮೇಶ್- ಮಂಜುಳಾ ದಂಪತಿಯ ಪುತ್ರ ಪೂರ್ವಜ್ (14) ಆತ್ಮಹತ್ಯೆ ಮಾಡಿಕೊಂಡಿದ್ದು, ವಿದ್ಯಾನಿಕೇತನ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.
ಶನಿವಾರ ಪೂರ್ವಜ್ ತಾಯಿಯ ಜನ್ಮದಿನವಿತ್ತು. ಅಮ್ಮನಿಗೆ ಶುಭಕೋರಲು ಬಯಸಿದ್ದ ಪೂರ್ವಜ್‌ಗೆ ಹಾಸ್ಟೆಲ್ ವಾರ್ಡನ್ ಅವಕಾಶ ನೀಡಲಿಲ್ಲ. ಶಾಲಾ ಆಡಳಿತ ಮಂಡಳಿಯ ನಿಯಮದಂತೆ ಹಾಸ್ಟೆಲ್ ವಾರ್ಡನ್ ಮೊಬೈಲ್ ನೀಡಲು ನಿರಾಕರಿಸಿದ್ದರು ಎಂದು ‘ಪ್ರಜಾವಾಣಿ’ ವರದಿ ಮಾಡಿದೆ.
ರಾತ್ರಿ 12 ಗಂಟೆಯವರೆಗೂ ಮಂಕಾಗಿ ಕುಳಿತಿದ್ದ ಪೂರ್ವಜ್ ಡೆತ್‌ನೋಟ್ ಬರೆದಿಟ್ಟು ಹಾಸ್ಟೆಲ್ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಭಾನುವಾರ ಬೆಳಿಗ್ಗೆ ವಿದ್ಯಾರ್ಥಿಯೊಬ್ಬ ಪೂರ್ವಜ್ ಶವ ನೋಡಿ, ವಾರ್ಡನ್ ಗಮನಕ್ಕೆ ತಂದಿದ್ದಾನೆ.
ವಿದ್ಯಾಸಂಸ್ಥೆ, ಶಾಲಾ ಪ್ರಾಂಶುಪಾಲರು ಹಾಗೂ ಹಾಸ್ಟೆಲ್ ವಾರ್ಡನ್ ವಿರುದ್ಧ ಮಂಜುಳಾ (ಸಾವಿಗೀಡಾದ ವಿದ್ಯಾರ್ಥಿಯ ತಾಯಿ) ಸಹೋದರ ಅರುಣ್ ಅವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಶಾಲಾ ಆಡಳಿತ ಮಂಡಳಿಯ ಕಿರುಕುಳದಿಂದ ಪೂರ್ವಜ್ ಆತ್ಮಹತ್ಯೆ ಮಾಡಿದ್ದು, ಶಾಲಾ ಸೇರ್ಪಡೆ ವೇಳೆ ವಿದ್ಯಾರ್ಥಿಯ ಚಲನವಲನವನ್ನು ಪೋಷಕರಿಗೆ ತಿಳಿಸುತ್ತೇನೆ ಅಂದಿದ್ದರೂ ಈವರೆಗೆ ಪೂರ್ವಜ್ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ. ಹೆತ್ತವರು ಕರೆ ಮಾಡಿದರೂ ಸಂಭಾಷಣೆಗೆ ಶಾಲಾಡಳಿತ ಮಂಡಳಿ ಅವಕಾಶ ನೀಡುತ್ತಿರಲಿಲ್ಲ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈ ಕುರಿತು ಶಿಕ್ಷಕ ಲಕ್ಷ್ಮಿಕಾಂತ ಮಿರಜಕರ ಪೋಸ್ಟ್ ಮಾಡಿದ್ದು, “ಕರ್ನಾಟಕ ರಾಜ್ಯದಲ್ಲಿ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ 826 ವಸತಿ ಶಾಲೆಗಳಿವೆ. ಬಡ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಸರಕಾರ ಸ್ಥಾಪಿಸಿರುವ ಈ ವಸತಿ ಶಾಲೆಗಳು ಇಡಿದೇಶಕ್ಕೆ ಮಾದರಿಯಾಗಿವೆ. ಆದರೆ ಕೇವಲ ಹಣ ಮಾಡುವ ಉದ್ದೇಶಕ್ಕೋಸ್ಕರ ಹುಟ್ಟಿಕೊಂಡಿರುವ ಇಂತಹ ಖಾಸಗಿ ವಸತಿ ಶಾಲೆಗಳು ತಮ್ಮ ಅತಿಯಾದ ನೀತಿ ನಿಯಮಗಳಿಂದಾಗಿ ಇಂತಹ ಶೋಚನೀಯ ಘಟನೆಗಳು ನಡೆಯಲು ಕಾರಣವಾಗುತ್ತಿವೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಸಂಬಂಧಗಳ ಬೆಲೆ ಅರಿಯದೇ ಮಾನವೀಯತೆ ಮರೆತು ವರ್ತಿಸುವ ಇಂತಹ ಧನದಾಹಿ ರಕ್ಕಸ ವಸತಿ ಶಾಲೆಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳುವ ಅಗತ್ಯವಿದೆ. ಪ್ರತಿಷ್ಟೆಗೆಂದು, ಹಣವಿದೆಯೆಂದು ಇಂತಹ ಶಾಲೆಗಳ ಆಡಳಿತ ಮಂಡಳಿಗೆ ಬೆನ್ನು ಬಗ್ಗಿಸುವ ಪೋಷಕರು ತಮ್ಮ ಮಕ್ಕಳ ಜೀವದ ಬಗ್ಗೆ ಯೋಚಿಸಬೇಕಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.



ಇಂತಹ ಶಿಕ್ಷಣ ಸಂಸ್ಥೆಗೆ ತಮ್ಮ ಮಕ್ಕಳನ್ನು ಸೇರಿಸುವ ಹೆತ್ತವರು ಇನ್ನು ಮುಂದೆಯಾದರೂ ಯೋಚನೆ ಮಾಡಿ… ಇದರ ಒಳ ಮರ್ಮವನ್ನು ದೇವರೇ ಬಲ್ಲ…
ಇತ ಬರೆದಿದ್ದು ಎಲ್ಲಾ ಸುಳ್ಳು ಕಟ್ಟುಕಥೆ, ಪೀರ್ ಪಾಷಾ ಬಂಗ್ಲಾ ಚಾಲುಕ್ಯ ಶೈಲಿಯಲ್ಲಿ 12ನೇ ಶತಮಾನದಲ್ಲಿ ನಿರ್ಮಾಣವಾಗಿದೆ.