Homeರಾಷ್ಟ್ರೀಯಹಿಂಸಾಚಾರದ ಆರೋಪ; ಮನೆ ನೆಲಸಮಗೊಳಿಸಿದ ಯುಪಿ ಸರ್ಕಾರ - ಅಫ್ರೀನ್‌ ಫಾತಿಮಾ ಯಾರು?

ಹಿಂಸಾಚಾರದ ಆರೋಪ; ಮನೆ ನೆಲಸಮಗೊಳಿಸಿದ ಯುಪಿ ಸರ್ಕಾರ – ಅಫ್ರೀನ್‌ ಫಾತಿಮಾ ಯಾರು?

- Advertisement -
- Advertisement -

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಶುಕ್ರವಾರ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಹೋರಾಟಗಾರ್ತಿ ಅಫ್ರೀನ್ ಫಾತಿಮಾ ಮತ್ತು ಅವರ ತಂದೆ ಜಾವೇದ್ ಮೊಹಮ್ಮದ್ ಅವರ ಮನೆಯನ್ನು ಧ್ವಂಸಗೊಳಿಸಿದ ನಂತರ, ಟ್ವಿಟರ್‌ನಲ್ಲಿ #ISTandWithAfreenFatima ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌‌ ಆಗಿದ್ದು, ಭಾರಿ ಬೆಂಬಲ ವ್ಯಕ್ತವಾಗಿದೆ.

ಪ್ರವಾದಿ ಮುಹಮ್ಮದ್ ಕುರಿತು ಬಿಜೆಪಿ ಮಾಜಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರ ಹೇಳಿಕೆಗಳನ್ನು ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಭುಗಿಲೆದ್ದ ಹಿಂಸಾಚಾರಕ್ಕೆ ಫಾತಿಮಾ ಅವರ ತಂದೆ ಜಾವೇದ್ ಅವರೇ ಕಾರಣ ಎಂದು ಪೊಲೀಸರು ಆರೋಪಿಸಿದ್ದಾರೆ. ಪ್ರತಿಭಟನೆಯ ವೇಳೆ ಉದ್ರಿಕ್ತ ಜನರು ಬೈಕ್‌ಗಳು ಮತ್ತು ವಾಹನಗಳನ್ನು ಸುಟ್ಟು ಹಾಕಿದ್ದು, ಪೊಲೀಸ್ ವಾಹನವನ್ನೂ ಸುಟ್ಟು ಹಾಕಲು ಪ್ರಯತ್ನಿಸಿದರು ಎಂದು ಆರೋಪಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮನೆಯನ್ನು ನೆಲಸಮಗೊಳಿಸುವುದಕ್ಕೆ ಕಳೆದ ತಿಂಗಳು ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರೆ, ಹಿಂಸಾಚಾರ ನಡೆದಿರುವುದನ್ನು ಇಟ್ಟು ಮನೆಯನ್ನು ನೆಲಸಮಗೊಳಿಸಲಾಗಿದೆ ಎಂದು ಜನರು ಆರೋಪಿಸಿದ್ದು, ಸರ್ಕಾರದ ಕ್ರಮವನ್ನು ‘ಅನ್ಯಾಯ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕರೆಯಲಾಗುತ್ತಿದೆ.

ಇದನ್ನೂ ಓದಿ: ಬುಲ್ಡೋಜರ್ ರಾಜಕಾರಣ: ’ಜಹಾಂಗೀರ್ ಪುರಿ’ಯಿಂದ ದೇಶದ ವಿನಾಶಕ್ಕೆ ಮುಂದಾದ ಬಿಜೆಪಿ-ಸಂಘ ಪರಿವಾರ

ಯಾರು ಅಫ್ರೀನ್ ಫಾತಿಮಾ?

ವಿದ್ಯಾರ್ಥಿ ಹೋರಾಟಗಾರ್ತಿಯಾಗಿರುವ ಅಫ್ರೀನ್ ಫಾತಿಮಾ ಅವರು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದಾರೆ. ಅವರು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಹಿಳಾ ಕಾಲೇಜಿನ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷೆಯೂ ಆಗಿದ್ದಾರೆ.

2019-2020ರಲ್ಲಿ ದೆಹಲಿಯ ಶಾಹೀನ್ ಬಾಗ್‌ನಲ್ಲಿ ಸಿಎಎ-ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಯಲ್ಲಿ ಅಫ್ರೀನ್‌ ಫಾತಿಮಾ ಸಕ್ರಿಯರಾಗಿದ್ದರು. ಅವರು ಮುಸ್ಲಿಂ ಮಹಿಳೆಯರನ್ನು ಸಂಘಟಿಸಿ, ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಫಾತಿಮಾ ಅವರು ಅಲಹಾಬಾದ್ ವಿಶ್ವವಿದ್ಯಾನಿಲಯದ ಪದವಿಪೂರ್ವ ವಿದ್ಯಾರ್ಥಿಯಾಗಿರುವ ತನ್ನ ಕಿರಿಯ ಸಹೋದರಿ ಸುಮಯ್ಯಾ ಫಾತಿಮಾ ಅವರೊಂದಿಗೆ ‘ಮುಸ್ಲಿಮ ಅಲಹಾಬಾದ್’ ಎಂಬ ಅಧ್ಯಯನ ವಲಯವನ್ನು ರಚಿಸಿದ್ದರು ಎಂದು ಓಟ್‌ ಲುಕ್ ವರದಿ ಮಾಡಿದೆ.  ಪ್ರಸ್ತುತ ಸ್ಟಡಿ ಸರ್ಕಲ್‌ನಲ್ಲಿ 70 ಹುಡುಗಿಯರು ಸದಸ್ಯರಾಗಿದ್ದು, ಅವರು ವಿವಿಧ ವಿಷಯಗಳ ಕುರಿತು ಕಾರ್ಯಾಗಾರಗಳನ್ನು ನಡೆಸಿದ್ದಾರೆ.

ದೆಹಲಿಯಲ್ಲಿ ಅವರು ಕ್ರಿಯಾಶೀಲರಾಗಿದ್ದು, ಪ್ರಯಾಗ್‌ರಾಜ್‌ನ ಖುಲ್ದಾಬಾದ್‌ನ ಮನ್ಸೂರ್ ಅಲಿ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಷಣ ಮಾಡಿ ಅಲ್ಲಿನ ಸಿಎಎ-ಎನ್‌ಆರ್‌ಸಿ ವಿರೋಧಿ ಆಂದೋಲನದಲ್ಲೂ ಭಾಗಿಯಾಗಿದ್ದರು.

ಇದನ್ನೂ ಓದಿ: ಸಿಎಎ ವಿರೋಧಿ ಹೋರಾಟದ ಕೇಂದ್ರ ಶಾಹೀನ್‌ಬಾಗ್‌ನಲ್ಲಿ ಬುಲ್ಡೋಜರ್‌ಗಳು: ದ್ವೇಷ ರಾಜಕಾರಣಕ್ಕೆ ಮುಂದಾದ ಬಿಜೆಪಿ

ಅವರ ಮೇಲಿನ ಆರೋಪಗಳೇನು?

ಪ್ರಯಾಗ್‌ರಾಜ್‌ನಲ್ಲಿ ಶುಕ್ರವಾರ ನಡೆದ ಹಿಂಸಾಚಾರವನ್ನು ಫಾತಿಮಾ ಅವರ ತಂದೆ ಜಾವೇದ್ ಅವರು ಸಂಘಟಿಸಿದ್ದಾರೆ ಎಂದು ಆರೋಪಿಸಲಾಗಿದೆ. ಜಾವೇದ್ ಅವರು ‘ಬಂದ್’ಗೆ ಕರೆ ನೀಡಿದ್ದರು ಮತ್ತು ವಾಟ್ಸಾಪ್ ಸಂದೇಶಗಳ ಮೂಲಕ ಘಟನೆಯ ಸ್ಥಳಕ್ಕೆ ತಲುಪಲು ಜನರನ್ನು ಕೇಳಿದ್ದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾವೇದ್‌  ಅವರನ್ನು ಬಂಧಿಸಲಾಗಿದ್ದು, ಅವರ ಪತ್ನಿ ಮತ್ತು ಮಗಳನ್ನು ಸಹ ಬಂಧಿಸಲಾಗಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ, ಆದರೆ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ದಿ ವೈರ್ ವರದಿ ಮಾಡಿದೆ.

ಫಾತಿಮಾ ಕೂಡ ತನ್ನ ತಂದೆ ಯೋಜಿಸಿದ್ದಾರೆ ಎಂದು ಆರೋಪಿಸಲಾಗಿರುವ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆಯೇ ಎಂದು ತನಿಖೆ ನಡೆಸಲಾಗುತ್ತಿದೆ ವರದಿಯಾಗಿದೆ. ಹಿಂಸಾಚಾರದಲ್ಲಿ ಅವರು ಭಾಗಿಯಾಗಿರುವುದು ತನಿಖೆಯಲ್ಲಿ ಕಂಡುಬಂದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಮಾಧ್ಯಮಗಳ ಬುಲ್ಡೋಜರ್ ಸಂಸ್ಕೃತಿ

ಮನೆ ನೆಲಸಮಗೊಳಿಸಿರುವ ಬಗ್ಗೆ ಅಧಿಕಾರಿಗಳ ವಾದವನ್ನು ತಿರಸ್ಕರಿಸಿದ ಕುಟುಂಬ

ಮನೆ ನೆಲಸಮಗೊಳಿಸಿರುವ ಬಗ್ಗೆ ಅಧಿಕಾರಿಗಳ ವಾದವನ್ನು ಫಾತಿಮಾ ಅವರ ಕುಟುಂಬ ತಿರಸ್ಕರಿಸಿದೆ. ಫಾತಿಮಾ ಅವರ ಸಹೋದರ ಮೊಹಮ್ಮದ್ ಉಮಾಮ್‌ ಅವರು, ಸಮಯಕ್ಕೆ ಸರಿಯಾಗಿ ನೋಟಿಸ್ ಸ್ವೀಕರಿಸಲಿಲ್ಲ ಎಂದು ಅವರು ಹೇಳಿದ್ದಾರೆ.

“ಪ್ರಯಾಗ್‌ರಾಜ್ ಅಭಿವೃದ್ಧಿ ಪ್ರಾಧಿಕಾರದ (ಪಿಡಿಎ)ದಿಂದ ಮನೆಯ ನಕ್ಷೆಯನ್ನು ಅಂಗೀಕರಿಸದೆ ನಿರ್ಮಿಸಲಾಗಿದೆ. ಇದಕ್ಕಾಗಿ, ಜಾವೇದ್ ಅವರಿಗೆ ಮೇ 10 ರಂದು ನೋಟಿಸ್ ನೀಡಲಾಯಿತು. ಅವರ ಸಮರ್ಥನೆಗಳನ್ನು ಪ್ರಸ್ತುತಪಡಿಸಲು ಮೇ 24ರಂದು ತಿಳಿಸುವಂತೆ ತಿಳಿಸಲಾಯಿತು. ಆದರೆ ಅವರಿಗೆ ಹೇಳಲಾಗಿರುವ ದಿನಾಂಕದಂದು ಜಾವೇದ್ ಅಥವಾ ಅವರ ವಕೀಲರು ಹಾಜರಾಗಲಿಲ್ಲ. ಈ ಬಗ್ಗೆ ಯಾವುದೇ ದಾಖಲೆಯನ್ನು ಹಾಜರುಪಡಿಸಲಾಗಿಲ್ಲ. ಮೇ 25 ರಂದು, ಕೆಡವಲು ಆದೇಶಗಳನ್ನು ನೀಡಲಾಯಿತು” ಎಂದು ಪಿಡಿಎ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಉಮಾಮ್‌ ಹೇಳುವ ಪ್ರಕಾರ ಅವರ ನಿಜವಾದ ಆಸ್ತಿ ಮಾಲಿಕರು ತಾಯಿಯಾಗಿದ್ದು, ಅವರ ಹೆಸರಿನಲ್ಲಿ ನೋಟಿಸ್ ನೀಡಲಾಗಿಲ್ಲ ಎಂದು ದಿ ವೈರ್‌ಗೆ ತಿಳಿಸಿದ್ದಾರೆ.

“ಇದಲ್ಲದೆ, ಜೂನ್ 10 ರಂದು ನೋಟಿಸ್‌ ನೀಡಲಾಗಿದೆ. ಆದರೆ ಜೂನ್ 10 ರಿಂದ ಪೊಲೀಸರು ನಿರಂತರವಾಗಿ ಮನೆಯಲ್ಲಿದ್ದರೂ ಜೂನ್ 11 ರಂದು ಶನಿವಾರ ತಡರಾತ್ರಿ ಅದನ್ನು ಅಂಟಿಸಲಾಗಿದೆ. ಶನಿವಾರದಂದು ನ್ಯಾಯಾಲಯ ಕಾನೂನು ನೆರವು ನೀಡುದಕ್ಕೆ ಸಾಧ್ಯವಿಲ್ಲ ಎಂದು ಖಚಿತಪಡಿಸಿ ನೋಟಿಸ್ ಅನ್ನು ತರಾತುರಿಯಲ್ಲಿ ನೀಡಲಾಗಿದೆ ಎಂಬುದು ಸ್ಪಷ್ಟ” ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಪ್ರವಾದಿ ನಿಂದನೆ: ಪ್ರತಿಭಟನಾಕಾರರ ಮೇಲೆ ’ಬುಲ್ಡೋಜರ್’ ಪ್ರಭಾವ ತೋರಿದ ಯೋಗಿ ಸರ್ಕಾರ

ಸಾಮಾಜಿಕ ಮಾಧ್ಯಮಗಳಲ್ಲಿ ಅಫ್ರೀನ್ ಫಾತಿಮಾಗೆ ಭಾರಿ ಬೆಂಬಲ

ಘಟನೆಯನ್ನು ಭಾರತದಾದ್ಯಂತ ವಿರೋಧಿಸಲಾಗಿದ್ದು,ಭಾರಿ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಗಣ್ಯ ವ್ಯಕ್ತಿಗಳು ಫಾತಿಮಾಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಲೇಖಕಿ ಮತ್ತು ಹೋರಾಟಗಾರ್ತಿ ಗುರ್ಮೆಹರ್ ಕೌರ್ ಅವರು ಫಾತಿಮಾ ಅವರ ಮನೆಯ ಧ್ವಂಸವನ್ನು “ಸ್ವಯಂ ನಾಗರಿಕರ ಮೇಲೆ ಪ್ರಭುತ್ವ ಪ್ರಾಯೋಜಿತ ದಾಳಿ” ಎಂದು ಕರೆದಿದ್ದಾರೆ.

ಹೋರಾಟಗಾರ ಮೊಹಮ್ಮದ್ ಇರ್ಷಾದ್, “ಫಾತಿಮಾ ನಮ್ಮ ನಡುವಿನ ಗಟ್ಟಿ ಧ್ವನಿಯಾಗಿದ್ದಾರೆ. ಸರ್ಕಾರವು ತಾನು ಬಹಿರಂಗಗೊಳ್ಳುವ ಭಯದಿಂದ ಭಿನ್ನ ಧ್ವನಿಗಳನ್ನು ಅಡಗಿಸುವಂತೆ ಮಾಡಿದೆ. ನೀವು ಎಷ್ಟು ಬಂಧನಗಳನ್ನು ಮಾಡುತ್ತೀರಿ? ಎಷ್ಟು ಮನೆಗಳನ್ನು ಧ್ವಂಸ ಮಾಡುತ್ತೀರಿ? ಏನೇ ಆಗಲಿ, ನಾವು ಬೇಷರತ್ತಾಗಿ ಒಬ್ಬರಿಗೊಬ್ಬರು ನಿಲ್ಲುತ್ತೇವೆ” ಎಂದು ಹೇಳಿದ್ದಾರೆ.

ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್‌ ಕೂಡ ಫಾತಿಮಾ ಅವರನ್ನು ಬೆಂಬಲಿಸಿದ್ದಾರೆ.

ಇದನ್ನೂ ಓದಿ: ಯುಪಿ: ಪ್ರತಿಭಟನಾಕಾರರ ಮನೆ ಮೇಲೆ 2ನೇ ದಿನವೂ ಮುಂದುವರೆದ ಬುಲ್ಡೋಜರ್‌ ದಾಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. JNU ನಲ್ಲಿ ವಿದ್ಯಾಭ್ಯಾಸವನ್ನು ಮಾಡಲಾಗಿದೆ ಅಂದರೆ ಮುಗೀತು ಬಿಡಿ ಅಲ್ಲಿ ಭಯೋತ್ಪಾದನೆ ಗೆ ಪೂರ್ವ ತಯಾರಿ ಆಗಿಯೇ ಬಂದಿರುವ ದೇಶದ್ರೋಹಿಗಳೇ ಮಗಳು ಹಾಗೂ ತಂದೆ ಕೂಡಾ ,ಮನೆಯ ಧ್ವಂಸದೊಂದಿಗೆ ,ಸರಕಾರ ದ ಸೌಲಭ್ಯಗಳು ಸಹ ಇವರಿಗೆ ಸಿಗದಂತೆ ಮಾಡಬೇಕು ,ಇವಳ ತಂದೆಗೆ ನರ ಕಟ್ ಮಾಡಿ ಬಿಕ್ಷಾ ಪಾತ್ರೆ ಕೈಗೆ ನೀಡಬೇಕು ಆಗ ಈ ಭಶೀರರಿಗೆ ಭಯ ಬರಲು ಸಾಧ್ಯ,ಯೋಗಿ ಸರ್ಕಾರಕ್ಕೆ ನಮ್ಮ ಪೂರ್ಣ ಬೆಂಬಲ ಇದೆ ಜೈ ಹಿಂದೂ ರಾಷ್ಟ್ರ

  2. ಇವರ ಮನೆ ದ್ವಂಸ ಮಾಡಿ, ಯೋಗಿ ತನ್ನ ಮನೆಯಲ್ಲಿ ಕೂರಿಸ್ತಾನೆಯೇ…..

  3. JNU ಒಂದು ಕೇಂದ್ರ ಸರ್ಕಾರದ ವಿಶ್ವವಿದ್ಯಾಲಯವಾಗಿದ್ದು, ಅದನ್ನು ಹೀಯಾಳಿಸಿ ಮಾತನಾಡಿದ್ದು ಕೇಂದ್ರ ಸರ್ಕಾರವನ್ನು ಹೀಯಾಳಿಸಿ ಮಾತನಾಡಿದಂತೆ, ಅಂದರೆ ನಮ್ಮ ಪ್ರಧಾನಿಗಳಾದ ಶ್ರೀ ಮೋದಿಯವರನ್ನೇ ಹೀಯಾಳಿಸಿದಂತೆ. ಹೀಗಾಗಿ ನಿಮ್ಮ ಮೇಲೆ ಪೊಲೀಸ್ ಕೇಸ್ ಕೂಡ ಹಾಕಬಹುದು.
    ಎರಡನೇದಾಗಿ ಅಲ್ಲಿ ಭಯೋತ್ಪಾದನೆಗೆ ಪೂರ್ವ ತಯಾರಿ ನಡೆದಿದೆ ಎಂದು ಹೇಳಿದರೆ ಕೇಂದ್ರ ಸರ್ಕಾರವೇ ಭಯೋತ್ಪಾದನೆಗೆ ಒತ್ತು ಕೊಟ್ಟಿದೆ ಎಂದು ಹೇಳಿದಂತೆ. ಹೀಗಾಗಿ ನಿಮ್ಮ ಮೇಲೆ ಎರಡನೇ ಕೇಸನ್ನು ಕೂಡ ಹಾಕಬಹುದು ಕೇವಲ ನೆಹರುರವರ ಹೆಸರು ಇದ್ದ ಮಾತ್ರಕ್ಕೆ ಅದು ಕಾಂಗ್ರೆಸ್ ಪಕ್ಷದ ವಿಶ್ವವಿದ್ಯಾಲಯವಾಗುವುದಿಲ್ಲ.
    JNU ವಿಶ್ವವಿದ್ಯಾಲಯವನ್ನು ಅತ್ಯುನ್ನತ ವಿಶ್ವವಿದ್ಯಾಲಯ ಎಂದು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ ಬೇಕಾದರೆ ಗೂಗಲ್ ಮಾಡಿ ನೋಡಿ.

LEAVE A REPLY

Please enter your comment!
Please enter your name here

- Advertisment -

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...