Homeಚಳವಳಿರಾಜಸ್ಥಾನ: ಮದ್ಯಪಾನ ಮಾಡಲು ನಿರಾಕರಿಸಿದ ಬುಡಕಟ್ಟು ಯುವಕನ ಮೇಲೆ ಅಮಾನುಷ ಹಲ್ಲೆ

ರಾಜಸ್ಥಾನ: ಮದ್ಯಪಾನ ಮಾಡಲು ನಿರಾಕರಿಸಿದ ಬುಡಕಟ್ಟು ಯುವಕನ ಮೇಲೆ ಅಮಾನುಷ ಹಲ್ಲೆ

- Advertisement -
- Advertisement -

ರಾಜಸ್ಥಾನದ ಉದಯಪುರದಲ್ಲಿ ಮದ್ಯಪಾನ ಮಾಡಲು ನಿರಾಕರಿಸಿದ ಬುಡಕಟ್ಟು ಸಮುದಾಯದ ಯುವಕನ ಮೇಲೆ ನಾಲ್ವರು ಸವರ್ಣಿಯ ಸಮುದಾಯದ ಯುವಕರು ಅಮಾನುಷವಾಗಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ವೈರಲ್ ವಿಡಿಯೋದಲ್ಲಿ ನಾಲ್ವರು ಯುವಕರು ಸಂತ್ರಸ್ತ ಪ್ರಕಾಶ್ ಲೋಗಾರ್ (30) ಎಂಬಾತನ ಮೇಲೆ ಮನಬಂದಂತೆ ಹಲ್ಲೆ ನಡೆಸುತ್ತಿದ್ದಾರೆ. ಶೂ ಧರಿಸಿದ ಕಾಲುಗಳಿಂದ ಒದೆಯುತ್ತಿರುವುದು, ಕೋಲು ಮುರಿದರೂ ಬಿಡದೆ ಥಳಿಸುತ್ತಿರುವುದು ಕಾಣಿಸಿದೆ. ಇಷ್ಟು ಹಲ್ಲೆ ನಡೆಯುತ್ತಿದ್ದರೂ ಎದೆಗುಂದದ ಯುವಕ ಧೈರ್ಯದಿಂದ ನನ್ನನ್ನು ಮುಟ್ಟಬೇಡಿ ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ಈ ಘಟನೆ ಜೂನ್ 3 ರಂದು ನಡೆದಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಲ್ಲೆಯ ವಿಡಿಯೋ ವೈರಲ್ ಆಗಿ ದಲಿತಪರ ಸಂಘಟನೆಗಲು, ನಾಯಕರು ಸೇರಿದಂತೆ ಹಲವು ಮಂದಿ ಆಕ್ರೋಶ ವ್ಯಕ್ತಪಡಿಸಿದ ನಂತರ ಹಲ್ಲೆ ನಡೆಸಿದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿಜಯ್ ಸಿಂಗ್, ರಘುನಾಥ್ ಸಿಂಗ್ ಮತ್ತು ಯಶಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ನಾಲ್ಕನೇ ಆರೋಪಿಗಾಗಿ ಶೋಧ ನಡೆಯುತ್ತಿದೆ.

ಇದನ್ನೂ ಓದಿ: ಮೈಸೂರು: ದಲಿತ ಹುಡುಗನನ್ನು ಪ್ರೀತಿಸಿದ್ದಕ್ಕೆ ಮಗಳನ್ನೆ ಕತ್ತುಹಿಸುಕಿ ಕೊಂದ ತಂದೆ

ಘಟನೆ ವಿವರ:

ಜೂನ್ 3 ರಂದು ಕೂಲಿ ಕೆಲಸ ಮಾಡುವ ಪ್ರಕಾಶ್ ಲೋಗಾರ್ (30) ಕೆಲಸ ಮುಗಿಸಿ ಸಪೇಟಿಯಾದಿಂದ ತಮ್ಮ ಮನೆಗೆ ಹೋಗುತ್ತಿದ್ದರು. ಆಗ ಗುಡಾ ರಸ್ತೆ ಬಳಿಯ ಜಿತೇಂದ್ರ ಸಿಂಗ್ ಝಾಲಾ ಅವರ ಮದ್ಯದಂಗಡಿಯಲ್ಲಿ ಕುಳಿತಿದ್ದ ವಿಜಯ್ ಸಿಂಗ್ ಅಲಿಯಾಸ್ ವಿಜೇಂದ್ರ ಸಿಂಗ್ ಝಾಲಾ (26) ಮತ್ತು ರಘುನಾಥ್ ಸಿಂಗ್ ಚೌಹಾಣ್ (25) ಅವರನ್ನು ತಡೆದು,ಅಂಗಡಿಯೊಳಗೆ ಕರೆದಿದ್ದಾರೆ. ಅಂಗಡಿಯಲ್ಲಿ ಜಿತೇಂದ್ರ ಸಿಂಗ್ ಝಾಲಾ ಮತ್ತು ಯಶಪಾಲ್ ಸಿಂಗ್ (25) ಕೂಡ ಇದ್ದರು. ಈ ನಾಲ್ವರು ಪ್ರಕಾಶ್‌ಗೆ ಮದ್ಯಪಾನ ಮಾಡಲು ಒತ್ತಾಯಿಸಿದ್ದಾರೆ. ಪ್ರಕಾಶ್ ಮದ್ಯ ಸೇವಿಸಲು ನಿರಾಕರಿಸಿದಾಗ ಆತನ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ.

Image
ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪಿಗಳು

ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋ ಶೇರ್ ಆದ ನಂತರ ಸಂತ್ರಸ್ತರ ಸಂಬಂಧಿಕರು ಮತ್ತು ಗ್ರಾಮಸ್ಥರ ಒತ್ತಾಯದ ಮೇರೆಗೆ ಪೊಲೀಸ್ ಠಾಣೆಗೆ ಬಮದು ದೂರು ನೀಡಿದ್ದಾರೆ. ವಿಷಯದ ಗಂಭೀರತೆಯನ್ನು ಕಂಡ ಪೊಲೀಸರು ಕೇವಲ ಎರಡು ಗಂಟೆಗಳಲ್ಲಿ ಮೂವರು ಆರೋಪಿಗಳಾದ ವಿಜಯ್ ಸಿಂಗ್, ರಘುನಾಥ್ ಸಿಂಗ್ ಮತ್ತು ಯಶಪಾಲ್ ಸಿಂಗ್ ಅವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಮದ್ಯದ ಅಮಲಿನಲ್ಲಿ ಹಲ್ಲೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ.

ಘಟನೆಗೆ ಸಾಮಾಜಿಕ ಕಾರ್ಯಕರ್ತ ಸೂರಜ್ ಕುಮಾರ್‌ ಬೌದ್ಧ, ಸುಧೀಂದ್ರ ಭದೋರಿಯಾ ಸೇರಿದಂತೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಅಧ್ಯಕ್ಷ ವಿಜಯಸ ಸಂಪ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಮಾತು ಮರೆತ ಭಾರತ; ದಲಿತ್ ಫೈಲ್ಸ್: ಸ್ವಾತಂತ್ರ್ಯದ ಹೊಸ್ತಿಲಲ್ಲಿ ಸಾಸನೂರು ಹತ್ಯಾಕಾಂಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇಂತಹ ಹಲ್ಕಟ್ ಮುಂಡೆ ಮಕ್ಕಳಿಗೆ ಲಾಠಿಗೆ ಖಾರದ ಪುಡಿ ಹಚ್ಚಿ ಒಳ್ಳೆ ಜಾಗಕ್ಕೆ ಏರಸಬೇಕು ಆವಾಗ್ಲೇ ಗೊತ್ತಾಗುತ್ತೆ ಇನ್ನೊಬ್ಬರ ನೋವು ಏನಂತ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ವಿರುದ್ಧದ ದೂರುಗಳ ಪರಿಶೀಲನೆ ಆರಂಭಿಸಿದ ಚುನಾವಣಾ ಆಯೋಗ

0
ಪ್ರತಿಪಕ್ಷಗಳು ಮತ್ತು ದೇಶದ ಜನರ ಒತ್ತಡದ ಹೆಚ್ಚಾದ ನಂತರ, 'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಜನರ ಸಂಪತ್ತನ್ನು ಮರುಹಂಚಿಕೆ ಮಾಡುತ್ತದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದಲ್ಲಿ ಮಾಡಿದ ದ್ವೇಷ ಭಾಷಣದ...