Homeಕರ್ನಾಟಕನೂತನ ಪಠ್ಯ: ಘಟನೋತ್ತರ ಆದೇಶ ಸಂವಿಧಾನಬದ್ಧ ಅವಕಾಶ- ವಿನಯ್‌ ಬಿದರೆ ಸಮರ್ಥನೆ

ನೂತನ ಪಠ್ಯ: ಘಟನೋತ್ತರ ಆದೇಶ ಸಂವಿಧಾನಬದ್ಧ ಅವಕಾಶ- ವಿನಯ್‌ ಬಿದರೆ ಸಮರ್ಥನೆ

- Advertisement -
- Advertisement -

‘ಪಠ್ಯಪುಸ್ತಕ ಮುದ್ರಣಕ್ಕೆ ಘಟನೋತ್ತರ ಆದೇಶ ಹೊರಡಿಸಿರುವುದು ಶಾಸನ ಸಭೆಗೆ ದೊರೆತಿರುವ ಸಂವಿಧಾನ ಬದ್ಧ ಅವಕಾಶ’ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ ಸಮರ್ಥಿಸಿದರು.

‘ಪಠ್ಯ ಪರಿಷ್ಕರಣೆ: ಸಾರ್ವಜನಿಕರ ಆಕ್ಷೇಪಕ್ಕೆ ಆಹ್ವಾನ ಬೇಕಾ?’ ಎಂಬ ವಿಷಯದ ಕುರಿತು ‘ಪ್ರಜಾವಾಣಿ’ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಘಟನೋತ್ತರ ಆದೇಶಕ್ಕೆ ಅವಕಾಶವಿದೆ. ಇದನ್ನು ಬಾಲಿಷ ನಿರ್ಧಾರ ಎನ್ನಬಾರದು” ಎಂದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಶಿಕ್ಷಣ ತಜ್ಞರಾದ ಡಾ.ವಿ.ಪಿ.ನಿರಂಜನಾರಾಧ್ಯ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿ, “ಘಟನೋತ್ತರ ಆದೇಶಗಳಿಗೆ ಅವಕಾಶವಿರುವ ಅನೇಕ ಸಂದರ್ಭಗಳಿರಬಹುದು. ಆದರೆ ಯಾವ ವಿಷಯಕ್ಕೆ ಘಟನೋತ್ತರ ಆದೇಶ ನೀಡುತ್ತಿದ್ದೇವೆ ಎಂಬುದನ್ನು ಗಮನಿಸಬೇಕು. ಇದು ಒಂದು ಕೋಟಿ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ವಿಷಯ. ಇದಕ್ಕೆಲ್ಲ ಘಟನೋತ್ತರ ಆದೇಶ ಸರಿಯಲ್ಲ” ಎಂದು ಪ್ರತಿಪಾದಿಸಿದರು.

“ಈವರೆಗೆ ರಚನೆಯಾದ ಪಠ್ಯಪುಸ್ತಕಗಳೆಲ್ಲ ಸರಿ ಇದ್ದವು, ಬರಗೂರರ ಸಮಿತಿ ಮಾಡಿದ್ದೆಲ್ಲವೂ ಸರಿ ಎಂದು ನಾವು ಪ್ರತಿಪಾದಿಸುತ್ತಿಲ್ಲ. ಆದರೆ ಪಠ್ಯಪುಸ್ತಕಗಳನ್ನು ತಜ್ಞರು ರೂಪಿಸುತ್ತಾರೆ. ಅದನ್ನು ಸಾರ್ವಜನಿಕ ಚರ್ಚೆಗೆ ತರುವುದು ಸರಿಯಾದ ನಡೆಯಲ್ಲ. ಪಠ್ಯಪುಸ್ತಕ ಪರಿಶೀಲನಾ ಸಮಿತಿಯು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಪೋಷಕರು, ಶಿಕ್ಷಕರ ಸಂಘಟನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಿತ್ತು” ಎಂದು ತಿಳಿಸಿದರು.

“ಪಠ್ಯಪುಸ್ತಕಗಳಿಗೆ ಸಂಬಂಧಿಸಿದಂತೆ ಸಿಆರ್‌ಸಿ, ಬಿಆರ್‌ಸಿ, ಡಯಟ್‌ಗಳಂತಹ ಸಂಸ್ಥೆಗಳಿಂದ ಅನುಮೋದನೆಯನ್ನು ಸಮಿತಿ ಪಡೆಯಬೇಕಿತ್ತು.  ಈ ಪ್ರಶ್ನೆಗಳನ್ನು ಎತ್ತಿದ ನಮ್ಮನ್ನು ಚಿಲ್ಲರೆ ಜನ ಎಂದು ಸಚಿವರು ಕರೆದರು. ಒಬ್ಬಾತ ಬಿಜೆಪಿ ನಾಯಕ- ಸರಿಯಾಗಿ ಮರ್ಮಾಂಗಕ್ಕೆ ಹೊಡೆದಿದ್ದೇವೆ. ವಿಲವಿಲ ಒದ್ದಾಡುತ್ತಿದ್ದಾರೆ- ಎಂದು ಹೇಳಿಕೆ ನೀಡಿದರು. ಇದು ಸರಿಯೇ?” ಎಂದು ವಿನಯ್‌ ಬಿದರೆಯವರನ್ನು ಪ್ರಶ್ನಿಸಿದರು.

ಇದನ್ನೂ ಓದಿರಿ: ‘ಭಕ್ತಿಪಂಥ’ ಪಾಠದಲ್ಲಿ ಶರೀಫ, ಕನಕ-ಪುರಂದರದಾಸರ ವ್ಯಕ್ತಿ ಚಿತ್ರಣ ತೆರವು

“ಬರಗೂರರ ಸಮಿತಿಯ ಕುರಿತು ಬಂದಿರುವ ಆಕ್ಷೇಪಗಳನ್ನು ಪರಿಶೀಲಿಸಲೆಂದು ರೂಪಿಸಲಾಗಿದ್ದ ಸಮಿತಿ ಪರಿಷ್ಕರಣೆಯನ್ನೇ ಮಾಡಿದೆ. ಮೌಖಿಕ ಆದೇಶದ ಮೂಲಕ ಪರಿಷ್ಕರಣೆ ನಡೆದಿದೆ. ಸರ್ಕಾರದ ಅಧಿಕೃತ ಆದೇಶವಿಲ್ಲದೆ ಪರಿಷ್ಕರಣೆ ಮಾಡಿದ್ದು ಹೇಗೆ? ಇದು ಸರಿಯಾದ ನಡೆಯೇ?” ಎಂದು ಕೇಳಿದರು.

ಹಿರಿಯ ಪತ್ರಕರ್ತರಾದ ವೈ.ಗ.ಜಗದೀಶ್ ಸಂವಾದವನ್ನು ನಡೆಸಿಕೊಟ್ಟರು. ಲೇಖಕಿ ಪಲ್ಲವಿ ಇಡೂರು, ಬಲಪಂಥೀಯ ಬರಹಗಾರ ಸುಧಾಕರ್‌ ಹೊಸಳ್ಳಿ ಪಾಲ್ಗೊಂಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸುಮಾರು ಒಂದು ಕೋಟಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವ ಈ ವಿದ್ಯಾ ಸಚಿವನಿಗೇನಾದರು ಜವಾಬ್ದಾರಿ ಇದೆಯೇ? ನೀನು ಮನಸ್ಸಿಗೆ ಬಂದಂತೆ ಒಂದು ಸಮುದಾಯದ ಅಶಯಗಳನ್ಳ ತಿರುಚು,ಉಳಿದ ಸಮುದಾಯಗಳ ಆಶಯ,ಸಂಸ್ಕೃತಿ, ನೈಜ ಇತಿಹಾಸ ನಾಶವಾದರು ಸರಿ,ಇಲ್ಲವೇ ಆ ಸಮುದಾಯಗಳ ಅಸ್ಮಿತೆಗಳಿಗೆ ಮಸಿ ಬಳಿದಾದರು ಪಠ್ಯ ಪರಿಸ್ಕರಿಸು ,ನಾವು ಘಟನೋತ್ತರ ಮಂಜೂರಾತಿ ನೀಡುತ್ತೇವೆ ಎಂಬಂತೆ ಇದೆ.ನಾಚಿಕೆಯಾಗಬೇಕು ಈ ಘಟನೋತ್ತರ ಅದೇಶವನ್ನ ಸಮರ್ಥನೆ ಮಾಡಿಕೊಳ್ಳುವವರಿಗೆ ಅದಕ್ಕೆ ಸಂವಿಧಾನದ ಉಲ್ಲಂಘನೆ ಯಾಗಿಲ್ಲವೆಂಬ ಸಬೂಬು ಬೇರೆ.ಹೋಗಲಿ, ನೀವು ಯಾವಾಗ ಸಂವಿಧಾನಕ್ಕೆ ಗೌರವ ನೀಡಿದ್ದೀರಾ?

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...