ಒಕ್ಕೂಟ ಸರ್ಕಾರದ ಹೊಸ ವಿವಾದಿತ ಯೋಜನೆ ‘ಅಗ್ನಿಪಥ್’ನಿಂದ ಕಡ್ಡಾಯ ನಿವೃತ್ತಿ ಹೊಂದುವ ತರಬೇತಿ ಪಡೆದ ಸಮರ್ಥ ಯುವಕರನ್ನು ನೇಮಿಸುವುದಾಗಿ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಹೇಳಿದ್ದಾರೆ. ಮಹೀಂದ್ರಾ ಅವರು ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳನ್ನು ಹುಟ್ಟು ಹಾಕಿದ್ದು, ಸೇನೆಯ ಮಾಜಿ ಅಧಿಕಾರಿಗಳು ಸೇರಿದಂತೆ ಹಲವಾರು ಜನರು, ಮಹೀಂದ್ರಾ ಗ್ರೂಪ್ ಈ ಹಿಂದೆ ತನ್ನ ಪ್ರಮುಖ ಹುದ್ದೆಗಳಲ್ಲಿ ಮಾಜಿ ಸೈನಿಕರನ್ನು ನೇಮಿಸಿಕೊಂಡಿದೆಯೆ ಎಂದು ಪ್ರಶ್ನಿಸಿದ್ದಾರೆ.
‘ಅಗ್ನಿಪಥ್’ ವಿರುದ್ಧ ದೇಶದಾದ್ಯಂತ ಭಾರಿ ಪ್ರತಿಭಟನೆಗಳು ನಡೆಯುತ್ತಿರುವ ನಡುವೆ, ಈ ಯೋಜನೆಯಡಿಯಲ್ಲಿ ತರಬೇತಿ ಪಡೆದ ಸಮರ್ಥ ಯುವಕರನ್ನು ನೇಮಿಸಿಕೊಳ್ಳುತ್ತೇವೆ ಎಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಸೋಮವಾರ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಅಗ್ನೀಪಥ್ ವಿಚಾರವಾಗಿ ನಡೆಯುವ ಹಿಂಸಾಚಾರದಿಂದ ದುಃಖಿತನಾಗಿದ್ದೇನೆ. ಕಳೆದ ವರ್ಷ ಈ ಯೋಜನೆಯನ್ನು ಪ್ರಸ್ತಾಪಿಸಿದಾಗ ನಾನು ಹೇಳಿದ್ದೇನೆ, ಈಗ ನಾನು ಪುನಃ ಹೇಳುತ್ತೇನೆ. ಅಗ್ನಿವೀರ್‌ಗಳ ಶಿಸ್ತು ಮತ್ತು ಕೌಶಲ್ಯಗಳ ಲಾಭವು ಅವರನ್ನು ಅತ್ಯುತ್ತಮವಾಗಿ ಉದ್ಯೋಗಿಗಳನ್ನಾಗಿ ಮಾಡುತ್ತದೆ. ಅಂತಹ ತರಬೇತಿ ಪಡೆದ, ಸಮರ್ಥ ಯುವ ಜನರನ್ನು ನೇಮಿಸಿಕೊಳ್ಳುವ ಅವಕಾಶವನ್ನು ಮಹೀಂದ್ರಾ ಗ್ರೂಪ್ ಸ್ವಾಗತಿಸುತ್ತದೆ” ಎಂದು ಮಹೀಂದ್ರಾ ಟ್ವೀಟ್ ಮಾಡಿದ್ದರು.
Saddened by the violence around the #Agneepath program. When the scheme was mooted last year I stated-& I repeat-the discipline & skills Agniveers gain will make them eminently employable. The Mahindra Group welcomes the opportunity to recruit such trained, capable young people
— anand mahindra (@anandmahindra) June 20, 2022
ಮಹೀಂದ್ರಾ ಅವರ ಘೋಷಣೆಯನ್ನು ಕೆಲವರು ಶ್ಲಾಘಿಸಿದರೆ, ಸೇನೆಯ ಮಾಜಿ ಉನ್ನತ ಅಧಿಕಾರಿಗಳು ಸೇರಿದಂತೆ ಇನ್ನೂ ಕೆಲವರು ಮಹೀಂದ್ರಾ ಗ್ರೂಪ್ ಈ ಹಿಂದೆ ಎಷ್ಟು ಮಾಜಿ ಅಧಿಕಾರಿಗಳನ್ನು ನೇಮಿಸಿಕೊಂಡಿದೆ ಎಂದು ಗಂಭೀರ ಪ್ರಶ್ನೆಯನ್ನು ಕೇಳಿದ್ದಾರೆ.
ಇದನ್ನೂ ಓದಿ: ಅಗ್ನಿಪಥ ಯೋಜನೆ: ‘ಮೋದಿ ಹಿಟ್ಲರ್ ಮಾರ್ಗವನ್ನು ಅನುಸರಿಸಿದರೆ ಹಿಟ್ಲರ್‌ನಂತೆ ಸಾಯುತ್ತಾರೆ’- ಕಾಂಗ್ರೆಸ್ ನಾಯಕ
“ಈ ಹೊಸ ಯೋಜನೆಗಾಗಿ ಏಕೆ ಕಾಯಬೇಕು? ಇಲ್ಲಿಯವರೆಗೆ ಸಾವಿರಾರು ಹೆಚ್ಚು ನುರಿತ ಮತ್ತು ಶಿಸ್ತಿನ ಮಾಜಿ ಸೈನಿಕರು (ಜವಾನರು ಮತ್ತು ಅಧಿಕಾರಿಗಳು) ಪ್ರತಿ ವರ್ಷ ನಿವೃತ್ತಿ ಹೊಂದುತ್ತಿದ್ದು, 2 ನೇ ವೃತ್ತಿಜೀವನವನ್ನು ನಡೆಸಲು ತೀವ್ರವಾಗಿ ಬಯಸುತ್ತಿದ್ದಾರೆ. ಅವರನ್ನು ಮಹೇಂದ್ರ ಗ್ರೂಪ್ ತಲುಪಿದೆಯೆ. ನಿಮ್ಮ ಗ್ರೂಪ್‌ನಿಂದ ಅಂಕಿ ಅಂಶಗಳನ್ನು ಪಡೆಯುವುದು ಒಳ್ಳೆಯದು” ಎಂದು ಭಾರತೀಯ ನೌಕಾಪಡೆಯ ಮಾಜಿ ಮುಖ್ಯಸ್ಥ ಮತ್ತು ಚೀಫ್ಸ್ ಆಫ್ ಸ್ಟಾಫ್ ಕಮಿಟಿಯ ಮಾಜಿ ಅಧ್ಯಕ್ಷರಾಗಿರುವ ಅರುಣ್ ಪ್ರಕಾಶ್ ಪ್ರಶ್ನಿಸಿದ್ದಾರೆ.
Why await this new scheme? Has the Mahendra Group, so far, reached out to thousands of highly skilled & disciplined ex-Servicemen (Jawans & Officers), retiring every year & desperately seeking a 2nd career. It would be nice to get some statistics from your Group.
— Arun Prakash (@arunp2810) June 20, 2022
“ಆನಂದ್ ಮಹೀಂದ್ರಾ ಸರ್, ಮಾಜಿ ನೌಕಾಪಡೆಯ ಮುಖ್ಯಸ್ಥರು ಕೋರಿರುವಂತೆ, ನಮಗೆ ಕೆಲವು ಅಂಕಿಅಂಶಗಳನ್ನು ನೀಡಬಹುದೇ? ಅಂತಹ ಭರವಸೆಗಳನ್ನು ಕೇಳಿ ನಾನು ನಲವತ್ತು ವರ್ಷಗಳ ಸೇವೆಯ ನಂತರ ನಿವೃತ್ತಿ ಹೊಂದಿದ್ದೇನೆ” ಎಂದು ಭಾರತೀಯ ವಾಯುಪಡೆಯ ಮಾಜಿ ಏರ್ ವೈಸ್ ಮಾರ್ಷಲ್ ಮನಮೋಹನ್ ಬಹದ್ದೂರ್ ಬರೆದಿದ್ದಾರೆ.
. @anandmahindra Sir, could we have some stats as requested by the ex Naval Chief?
I have retired after forty years in service listening to such promises. #AgnipathScheme #Agniveers #Agnipath pic.twitter.com/3ltmMMFK7V
— Manmohan Bahadur (@BahadurManmohan) June 20, 2022
ಇದನ್ನೂ ಓದಿ: ಅಗ್ನಿಪಥ್: ಬೆಳಗಾವಿಯಲ್ಲಿ ಆಂದೋಲನ ತಡೆಯಲು ಬಿಗಿ ಭದ್ರತೆ; ವಿದ್ಯಾರ್ಥಿ ನಾಯಕರು ವಶಕ್ಕೆ
ಆನಂದ್ ಮಹೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಕಾರ್ಯಕರ್ತ, ಟಿಎಂಸಿ ನಾಯಕ ಸಾಕೇತ್ ಗೋಖಲೆ, “ಆನಂದ ಮಹೀಂದ್ರ ಅವರಿಗೆ ಎರಡು ಪ್ರಮುಖ ಪ್ರಶ್ನೆಗಳು. ಒಂದನೇಯದಾಗಿ, ಮಹೀಂದ್ರಾ ಗ್ರೂಪ್ ಪ್ರಸ್ತುತ ಎಷ್ಟು ಮಾಜಿ ಸೈನಿಕರನ್ನು ನೇಮಿಸಿಕೊಂಡಿದೆ? ನಿಮ್ಮ ಒಟ್ಟು ಉದ್ಯೋಗಿಗಳಲ್ಲಿ ಎಷ್ಟು ಶೇಖಡ ಜನರು ಮಾಜಿ ಸೈನಿಕರಾಗಿದ್ದಾರೆ? ಎರಡನೆಯದಾಗಿ, ನಿಮ್ಮ ಹೇಳಿಕೆಯ ಹಿನ್ನಲೆಯಲ್ಲಿ ಹೇಳುವುದಾದರೆ, ಮಹೀಂದ್ರಾ ಗ್ರೂಪ್ ಸ್ಟೆಪ್ ಅಗ್ನಿವೀರರಿಗೆ ಶೇಖಡವಾರು ಉದ್ಯೋಗಗಳನ್ನು ಕಾಯ್ದಿರಿಸುತ್ತದೆಯೇ?” ಎಂದು ಪ್ರಶ್ನಿಸಿದ್ದಾರೆ.
2 earnest questions, Mr. @anandmahindra:
1. How many ex-servicemen does the Mahindra Group currently employ? What % of your total workforce consists of ex-servicemen?
2. Will the Mahindra Group step up & reserve a % of jobs for Agniveers to back up your statement here? https://t.co/b2d7ELz9Z9
— Saket Gokhale (@SaketGokhale) June 20, 2022
ಆನಂದ್ ಮಹೀಂದ್ರ ಅವರ ಟ್ವೀಟ್ ಅನ್ನು ಉಲ್ಲೇಖಿಸಿ RPG ಗ್ರೂಪ್ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಕೂಡಾ ಅಗ್ನಿವೀರರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಾರೆ. “ಆರ್‌ಪಿಜಿ ಗ್ರೂಪ್ ಕೂಡ ಅಗ್ನಿವೀರ್‌ಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಸ್ವಾಗತಿಸುತ್ತದೆ. ಈ ಪ್ರತಿಜ್ಞೆಯನ್ನು ತೆಗೆದುಕೊಳ್ಳಲು ಮತ್ತು ನಮ್ಮ ಯುವಕರಿಗೆ ಭವಿಷ್ಯದ ಭರವಸೆ ನೀಡಲು ಇತರ ಕಾರ್ಪೊರೇಟ್‌ಗಳು ಸಹ ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
The RPG group too welcomes the opportunity to employ the Agniveers. I do hope other corporates will also join us to take this pledge and assure our youths of a future. https://t.co/PE7Hc1y1W9
— Harsh Goenka (@hvgoenka) June 20, 2022
17.5 ರಿಂದ 21 ವಯಸ್ಸಿನೊಳಗಿನ ಸೇನಾ ಉದ್ಯೋಗಾಕಾಂಕ್ಷಿಗಳನ್ನು ನಾಲ್ಕು ವರ್ಷಗಳವರೆಗೆ ನೇಮಕ ಮಾಡಿಕೊಳ್ಳುವ ‘ಅಗ್ನಿಪಥ್’ ಯೋಜನೆಯನ್ನು ಒಕ್ಕೂಟ ಸರ್ಕಾರವು ಘೋಷಿಸಿದ ನಂತರ ದೇಶದಾದ್ಯಂತ ಭಾರಿ ಪ್ರತಿಭಟನೆಗಳು ಭುಗಿಲೆದ್ದಿವೆ.
ಇದನ್ನೂ ಓದಿ: ಅಗ್ನಿಪಥ ಯೋಜನೆ: ನಿರ್ಧಾರ ಕೈಗೊಳ್ಳುವ ಮೊದಲು ನಮ್ಮ ಮಾತನ್ನೂ ಕೇಳಿ- ಸುಪ್ರೀಂಗೆ ಕೇಂದ್ರದ ಮನವಿ
ಈ ಯೋಜನೆಯ ಅನ್ವಯ, ನಾಲ್ಕು ವರ್ಷಗಳು ಪೂರ್ಣಗೊಂಡ ನಂತರ, ಅಗ್ನಿಪಥ್‌ಗೆ ಹೊಸದಾಗಿ ನೇಮಕಗೊಂಡವರಲ್ಲಿ 75% ದಷ್ಟು ಜನರು 12 ಲಕ್ಷ ರೂ. ನೊಂದಿಗೆ ಅವರ ಕಡ್ಡಾಯ ನಿವೃತ್ತಿ ಪಡೆಯಬೇಕಾಗುತ್ತದೆ. ಆದರೆ ಅವರು ಯಾವುದೇ ಪಿಂಚಣಿಗೆ ಅರ್ಹರಾಗಿರುವುದಿಲ್ಲ. ಉಳಿದ 25% ಜನರು ಸಶಸ್ತ್ರ ಪಡೆಗಳಲ್ಲಿ 15 ವರ್ಷಗಳ ಅಧಿಕಾರಾವಧಿಯನ್ನು ಪೂರೈಸಬಹುದಾಗಿದೆ.
ಯೋಜನೆಯ ವಿರುದ್ಧ ಭಾರೀ ಪ್ರತಿಭಟನೆಗಳು ನಡೆದಿದ್ದರೂ, ಮೋದಿ ನೇತೃತ್ವದ ಸರ್ಕಾರವು ಅದನ್ನು ಹಿಂತೆಗೆದುಕೊಳ್ಳಲು ಸ್ಪಷ್ಟವಾಗಿ ನಿರಾಕರಿಸಿದೆ.


