Homeಕರ್ನಾಟಕಅಗ್ನಿಪಥ್‌‌: ಬೆಳಗಾವಿಯಲ್ಲಿ ಆಂದೋಲನ ತಡೆಯಲು ಬಿಗಿ ಭದ್ರತೆ; ವಿದ್ಯಾರ್ಥಿ ನಾಯಕರು ವಶಕ್ಕೆ

ಅಗ್ನಿಪಥ್‌‌: ಬೆಳಗಾವಿಯಲ್ಲಿ ಆಂದೋಲನ ತಡೆಯಲು ಬಿಗಿ ಭದ್ರತೆ; ವಿದ್ಯಾರ್ಥಿ ನಾಯಕರು ವಶಕ್ಕೆ

- Advertisement -
- Advertisement -

ರಕ್ಷಣಾ ಪಡೆಗಳಲ್ಲಿ ಗುತ್ತಿಗೆ ಮಾದರಿಯ ನೇಮಕಾತಿ ಯೋಜನೆಯಾದ ಅಗ್ನಿಪಥ್ ಯೋಜನೆಯ ವಿರುದ್ಧ ಯಾವುದೇ ರೀತಿಯ ಆಂದೋಲನಗಳನ್ನು ತಡೆಯಲು ಬೆಳಗಾವಿ ಪೊಲೀಸರು ಭದ್ರತಾ ಕ್ರಮಗಳನ್ನು ಬಿಗಿಗೊಳಿಸಿದ್ದಾರೆ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ. ಈ ಮಧ್ಯೆ ‘ಅಗ್ನಿಪಥ್’ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಯುವಕರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪತ್ರಿಕೆ ಹೇಳಿದೆ.

ಪೊಲೀಸರು ಕೆಲವು ಯುವ ಮುಖಂಡರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವ ಸಂಘಟನೆ (AIDYO) ಮುಖಂಡ ಸಿದ್ದಲಿಂಗ ಬಾಗೇವಾಡಿ ಹಾಗೂ ರಾಜು ಗಾಣಗಿ ಅವರನ್ನು ಬಂಧಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬೆಳಗಾವಿಯಲ್ಲಿ ಸೋಮವಾರದ ಪ್ರತಿಭಟನೆಗೆ ಅನುಮತಿ ಪಡೆಯಲು ಭಾನುವಾರ ಖಡೇ ಬಜಾರ್ ಪೊಲೀಸ್ ಠಾಣೆಗೆ ತೆರಳಿದ್ದ ಇಬ್ಬರು ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ ಎಂದು  AIDYO ಕಾರ್ಯಕರ್ತರು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಹಾರ, ಯುಪಿಯಲ್ಲಿ ‘ಅಗ್ನಿಪಥ್‌ ಯೋಜನೆ’ ವಿರೋಧಿಸಿ ಸೇನಾ ಆಕಾಂಕ್ಷಿಗಳ ಬೃಹತ್‌‌ ಪ್ರತಿಭಟನೆ

ರಾಣಿ ಚನ್ನಮ್ಮ ವೃತ್ತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು ಬಸ್‌ಗಳಲ್ಲಿ ಕರೆದೊಯ್ದರು. ಕನಿಷ್ಠ ಎರಡು ಬಸ್‌ಗಳು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೋರಾಟಗಾರರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಭೇಟಿ ನೀಡುತ್ತಿರುವ ದಿನದಂದು ಎಐಡಿಎಸ್‌ಒ, ಎಐಡಿವೈಒ ಮುಂತಾದ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆಯನ್ನು ದಿ ಹಿಂದೂ ಉಲ್ಲೇಖಿಸಿದೆ.

ಆದರೆ ಇದನ್ನು ಎಐಡಿಎಸ್‌ಒ ಮುಖಂಡರು ನಿರಾಕರಿಸಿದ್ದು, “ಇದು ಅಖಿಲ ಭಾರತ ಕರೆಯಾಗಿತ್ತು. ಪ್ರಧಾನಿ ಭೇಟಿಗೂ ಇದಕ್ಕೂ ಸಂಬಂಧವಿಲ್ಲ. ಇದು ಸಂಪೂರ್ಣವಾಗಿ ಕಾಕತಾಳೀಯ’’ ಎಂದು ಸಂಚಾಲಕ ಮಹಾಂತೇಶ ಬಿ. ಹೇಳಿದ್ದಾರೆ.

ಇದನ್ನೂ ಓದಿ: ಅಗ್ನಿಪಥ್‌‌‌‌‌ ಯೋಜನೆ ವಿರೋಧಿಸಿ ಹಲವು ರಾಜ್ಯಗಳಲ್ಲಿ ಪ್ರತಿಭಟನೆ: ಬಿಹಾರ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿ ಧ್ವಂಸ

ಪೊಲೀಸರ ತಂಡವೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿತ್ತು. ಎಡಪಂಥೀಯ ಸಂಘಟನೆಗಳು ಸೋಮವಾರ ಪ್ರತಿಭಟನೆಗೆ ಕರೆ ನೀಡಿದ ವಿಚಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಯುವ ಇನ್ಸ್‌ಪೆಕ್ಟರ್  ಪತ್ತೆಹಚ್ಚಿದ್ದಾರೆ ಎಂದು ‘ದಿ ಹಿಂದೂ’ ಹೇಳಿದೆ.

ಹಲವು ವಿದ್ಯಾರ್ಥಿ ನಾಯಕರ ವಾಟ್ಸಾಪ್ ಮತ್ತು ಇತರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪೊಲೀಸರು ನಿರ್ಬಂಧಿಸಿದ್ದಾರೆ ಎಂದು ಹೋರಾಟಗಾರರು ದೂರಿದ್ದಾರೆ. ಜನರು ಗುಂಪು ಸೇರಿರುವ ವೀಡಿಯೊಗಳನ್ನು ಸೆರೆಹಿಡಿಯಲು ಪೊಲೀಸರು ಡ್ರೋನ್‌ಗಳನ್ನು ಬಳಸಿದ್ದಾರೆ. ಯುವಕರನ್ನು ಬೀದಿಗಿಳಿಸಲು ಪ್ರೇರೇಪಿಸುತ್ತಿದ್ದಾರೆಯೇ ಎಂಬುವುದನ್ನು ಗಮನಿಸಲು ಸೈನಿಕರ ಪರೀಕ್ಷಾ ತರಬೇತಿ ಕೇಂದ್ರಗಳ ನಿಗಾ ವಹಿಸಿದ್ದಾರೆ.

ಕೆಲವು ತುರ್ತು ಸ್ಪಂದನಾ ಘಟಕದ ವ್ಯಾನ್‌ಗಳು ಮತ್ತು ಚನ್ನಮ್ಮ ಪಡೆ ವಾಹನಗಳು ಕಾಲೇಜುಗಳ ಬಳಿ ನಿಂತಿದ್ದವು ಎಂದು ವರದಿ ಉಲ್ಲೇಖಿಸಿದೆ. ಬೆಳಗಾವಿಯ ಹಲವು ಪಟ್ಟಣಗಳ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಪೊಲೀಸರು ಬೀಡುಬಿಟ್ಟು, ವಿದ್ಯಾರ್ಥಿಗಳು ಪ್ರತಿಭಟನೆಗೆ ಸೇರುತ್ತಿದ್ದಾರೆಯೇ ಎಂದು ತಿಳಿಯಲು ಕಾನ್ಸ್‌ಟೇಬಲ್‌ಗಳು ವಿದ್ಯಾರ್ಥಿಗಳ ಗುರುತಿನ ಚೀಟಿಗಳನ್ನು ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಅಗ್ನಿಪಥ್‌ ಯೋಜನೆ: ಯುವಕರಿಗೆ 4 ವರ್ಷಗಳಲ್ಲ, ಪೂರ್ಣಾವಧಿಯ ಉದ್ಯೋಗ ನೀಡಿ- ಕೇಜ್ರಿವಾಲ್ ಒತ್ತಾಯ

ರಾಪಿಡ್ ಆಕ್ಷನ್ ಫೋರ್ಸ್ (RAF) ತುಕಡಿಯು ನಗರದ ಸೂಕ್ಷ್ಮ ಪ್ರದೇಶಗಳ ಮಾರ್ಗದಲ್ಲಿ ಪಥಸಂಚಲನ ನಡೆಸಿದೆ. ಆರ್‌ಎಎಫ್ ಸಿಬ್ಬಂದಿ ರಾಣಿ ಚನ್ನಮ್ಮ ವೃತ್ತದಲ್ಲಿ ತಮ್ಮ ಟ್ರಕ್‌ನಲ್ಲಿ ಅಳವಡಿಸಲಾದ ನೀರಿನ ಫಿರಂಗಿಗಳನ್ನು ಪರೀಕ್ಷಿಸಿ, ಸಂಜೆವರೆಗೂ ವೃತ್ತದಲ್ಲಿ ನಿಲ್ಲಿಸಲಾಗಿತ್ತು ಎಂದು ವರದಿಯು ಉಲ್ಲೇಖಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ನಡುಗಿದೆಯಂತಲ್ಲಾ

0
ಮುಂದೆ ಎದುರಿಸಲಿರುವ ಚುನಾವಣೆಯ ವಿಷಯವಾಗಿ, ಜನರ ಬಳಿಗೆ ತೆಗೆದುಕೊಂಡು ಹೋಗಲು ಗುರುತರದಾದ ಯಾವುದೇ ಸಾಧನೆಯಿಲ್ಲದಿರುವುದನ್ನು ಮನಗಂಡ ಬಿಜೆಪಿಗಳು ರಾಷ್ಟ್ರದಾದ್ಯಂತ ಮುಸ್ಲಿಂ ಸಂಘಟನೆಯ ಮೇಲೆ ದಾಳಿ ಮಾಡಿ ಬೀಗ ಜಡಿದದ್ದೂ ಅಲ್ಲದೆ ಕೆಲವು ಸಂಘಟನೆಗಳ...