ಬಂಡಾಯ ನಾಯಕ ಏಕನಾಥ್ ಶಿಂಧೆ ಅವರೊಂದಿಗೆ ಬೀಡುಬಿಟ್ಟಿರುವ ಕನಿಷ್ಠ 20 ಶಾಸಕರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಲವು ಬಂಡಾಯಗಾರರು ಬಿಜೆಪಿಯೊಂದಿಗೆ ವಿಲೀನವಾಗುವುದಕ್ಕೆ ವಿರುದ್ಧವಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಸಚಿವ ಏಕನಾಥ್ ಶಿಂಧೆ ಹಾಗೂ ಇತರ ಬಂಡಾಯ ಸಚಿವ ವಿರುದ್ಧ ಕ್ರಮ ಕೈಗೊಳ್ಳಲು ಶಿವಸೇನೆ ಮುಂದಾಗಿದೆ. ಮೂಲಗಳ ಪ್ರಕಾರ, ಸಚಿವರಾದ ಏಕನಾಥ್ ಶಿಂಧೆ, ಗುಲಾಬ್ರಾವ್ ಪಾಟೀಲ್, ದಾದಾ ಭೂಸೆ ಅವರು ತಮ್ಮ ಖಾತೆಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಅಬ್ದುಲ್ ಸತ್ತಾರ್ ಮತ್ತು ಶಂಬುರಾಜೇ ದೇಸಾಯಿ ಇಬ್ಬರೂ ರಾಜ್ಯ ಸಚಿವರ ವಿರುದ್ಧವೂ ಕ್ರಮ ಜರುಗಿಸುವ ಸಾಧ್ಯತೆಯಿದೆ.
ಬಂಡಾಯಗಾರರಿಗೆ ಬಹಿರಂಗ ಸವಾಲೆಸೆದಿರುವ ಆದಿತ್ಯ ಠಾಕ್ರೆ ಅವರು ಚುನಾವಣೆಯಲ್ಲಿ “ಪಕ್ಷಾಂತರ ಮಾಡಿ ಹೋರಾಡುವಂತೆ” ಹೇಳಿದ್ದಾರೆ. “ನಿಮಗೆ ಧೈರ್ಯವಿದ್ದರೆ ಶಿವಸೇನೆ ಬಿಟ್ಟು ಪಕ್ಷಾಂತರ ಮಾಡಿ ಹೋರಾಡಿ. ನಾವು ಮಾಡಿದ್ದು ತಪ್ಪು, ಉದ್ಧವ್ (ಠಾಕ್ರೆ) ನಾಯಕತ್ವ ತಪ್ಪು ಮತ್ತು ನಾವೆಲ್ಲರೂ ತಪ್ಪು ಎಂದು ನೀವು ಭಾವಿಸಿದರೆ, ರಾಜೀನಾಮೆ ನೀಡಿ ಚುನಾವಣೆ ಎದುರಿಸಿ. ನಾವು ಸಿದ್ಧರಿದ್ದೇವೆ,” ಎಂದು ಸವಾಲೆಸೆದಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: ಪಕ್ಷದ ಬಂಡಾಯಗಾರರ ವಿರುದ್ಧ ಬೀದಿಗಿಳಿದ ಶಿವಸೇನಾ ಕಾರ್ಯಕರ್ತರು
ಸಚಿವ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಯೋಜನೆಯ ಬಗ್ಗೆಯೂ ಭಿನ್ನಾಭಿಪ್ರಾಯ ಹೊರಹಾಕಿದ್ದಾರೆ. ಶಿಂಧೆ ಪ್ರಹಾರ್ ಜನಶಕ್ತಿ ಪಕ್ಷದೊಂದಿಗೆ ವಿಲೀನಗೊಳ್ಳುವ ಆಯ್ಕೆಯನ್ನು ಹೊಂದಿದ್ದು, ಅದರ ಮುಖ್ಯಸ್ಥ, ಬಚ್ಚು ಕಡು ಅವರು ಈಗಾಗಲೇ ಗುವಾಹಟಿಯಲ್ಲಿ ಬೀಡುಬಿಟ್ಟಿದ್ದಾರೆ.
ಇನ್ನೂ ಠಾಕ್ರೆಗಳಿಗೆ ನಿಷ್ಠರಾಗಿರುವ ಕಾರ್ಯಕರ್ತರು ರಾಜ್ಯದ ವಿವಿಧ ಭಾಗಗಳಲ್ಲಿ ಕೆಲವು ಬಂಡಾಯ ಶಾಸಕರ ಕಚೇರಿಗಳನ್ನು ಧ್ವಂಸಗೊಳಿಸಿ ಪ್ರತಿಭಟನೆಯನ್ನು ನಡೆಸಿದ ನಂತರ ಕೇಂದ್ರ ಸರ್ಕಾರವು 15 ಬಂಡಾಯ ಶಿವಸೇನೆ ಶಾಸಕರಿಗೆ ವೈ ಪ್ಲಸ್ ಭದ್ರತೆಯನ್ನು ಹೆಚ್ಚಿಸಿದೆ.
ಇಂದು ಬೆಳಗ್ಗೆ ಸಂಸದ ಸಂಜಯ್ ರಾವತ್ “ನೀವು ಎಷ್ಟು ದಿನ ಗುವಾಹಟಿಯಲ್ಲಿ ಅಡಗಿಕೊಳ್ಳುತ್ತೀರಿ? ನೀವು ಹಿಂತಿರುಗಲೇಬೇಕು” ಎಂದು ಮಹಾರಾಷ್ಟ್ರ ಅಸೆಂಬ್ಲಿ ಡೆಪ್ಯುಟಿ ಸ್ಪೀಕರ್ ನರಹರಿ ಝಿರ್ವಾಲ್ ಅವರ ಚಿತ್ರದೊಂದಿಗೆ ಟ್ವೀಟ್ ಮಾಡಿದ್ದಾರೆ. ನರಹರಿ ಝಿರ್ವಾಲ್, ಶಿವಸೇನೆ ಸಲ್ಲಿಸಿರುವ ಅನರ್ಹತೆಯ ಮನವಿಯ ಮೇಲೆ 16 ಬಂಡಾಯ ಶಾಸಕರಿಗೆ ನೋಟಿಸ್ ನೀಡಿದ್ದಾರೆ.
ಇತ್ತ, ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರು ಕಳೆದ ರಾತ್ರಿ ಗುಜರಾತ್‌ನಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಸಾಧ್ಯತೆಯ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರ ಅತಂತ್ರ: ಇಲ್ಲಿವರೆಗೆ ಏನಾಯಿತು? ಸಂಕ್ಷಿಪ್ತ ವರದಿ ಇಲ್ಲಿದೆ



ಹಿಂದೂ ವಿರೋಧಿ ಠಾಕ್ರೆ ಬಟ್ಟೆ ಚಿಂದಿ ಆಗಿದೆ ,ಇನ್ನೇನಿದ್ದರೂ ಚಿಂದಿ ಆಯೋ ಕೆಲಸ ಮಾಡಬೇಕಿದೆ ಠಾಕ್ರೇ ,ಹಿಂದೂ ವಿರೋಧಿ ಯಾವೋನೆ ಆದರೂ ಅವರಿಗೆಲ್ಲಾ ಇದೆ ಗತಿ ,20 MLA ಗಳಿರಲಿ ,ಇರೋ ಬರೋ MLA ಗಳೆಲ್ಲಾರೂ ಸಿಗದೆ ಹಿಂದೆ ಹೋಗ್ತಿದ್ದಾರೆ,ಕಮ್ಯೂನಿಸ್ಟ್ ಚೇಲಾಗಳು ಮಾತ್ರ ಇನ್ನೂ ಭ್ರಮೆಯಿಂದ ಹೊರಬಂದಿಲ್ಲಾ
ಬಿಜೆಪಿಯ ನಾಲಾಯಕ್ ಗಳು ಹಿಂದೂ ಹಿಂದೂ ಎಂದು ಬೊಗಳಿಕೊಂಡರೂ ಚುನಾವಣೆಯಲ್ಲಿ ಬಹುಮತ ಪಡೆಯದೇ ಶಾಸಕರ ಖರೀದಿಯಂತಹ ಅನಾಚಾರ ಮಾಡಿ ಅಧಿಕಾರ ಹಿಡಿಯುತ್ತಿರುವುದು ನಾಚಿಕೆಗೇಡು.