ಅಂತಾರಾಷ್ಟ್ರೀಯ ಖ್ಯಾತಿಯ ಫ್ಯಾಕ್ಟ್‌ಚೆಕ್ಕರ್, ಪತ್ರಕರ್ತ ಮೊಹಮ್ಮದ್ ಜುಬೇರ್ ಅವರ ಟ್ವೀಟನ್ನು ಉಲ್ಲೇಖಿಸಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದ, ‘ಹನುಮಾನ್ ಭಕ್ತ್ @balajikijaiin’ ಎಂಬ ಹೆಸರಿನ ಟ್ವಿಟರ್ ಅಕೌಂಟ್ ಇದೀಗ ಡಿಲೀಟ್ ಮಾಡಲಾಗಿದೆ. ಈ ವಿಚಾರವನ್ನು ಸಾಮಾಜಿಕ ಹೋರಾಟಗಾರ, ಟಿಎಂಸಿ ನಾಯಕ ಸಾಕೇತ್ ಗೋಖಲೆ ಅವರು ಬಹಿರಂಗಪಡಿಸಿದ್ದಾರೆ.
ಸೋಮವಾರ ಸಂಜೆಯವರೆಗೆ ಟ್ವಿಟರ್‌ನಲ್ಲಿ ಕೇವಲ ಒಂದು ಸಂದೇಶವನ್ನು ಪೋಸ್ಟ್ ಮಾಡಿದ್ದ ಮತ್ತು ಕೇವಲ ಮೂರು ಅನುಯಾಯಿಗಳನ್ನು ಹೊಂದಿದ್ದ ಅನಾಮಧೇಯ ಟ್ವಿಟರ್ ಹ್ಯಾಂಡಲ್‌ನ ದೂರಿನ ಆಧಾರದ ಮೇಲೆ ಪತ್ರಕರ್ತ ಮೊಹಮ್ಮದ್ ಜುಬೇರ್ ಅವರನ್ನು ಸೋಮವಾರ ಸಂಜೆ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮೊಹಮ್ಮದ್ ಜುಬೇರ್ ಅವರು 2018 ರಲ್ಲಿ ಮಾಡಿದ್ದ ಪೋಸ್ಟ್ ಒಂದನ್ನು ಉಲ್ಲೇಖಿಸಿದ್ದ ಅನಾಮಧೇಯ ‘ಹನುಮಾನ್ ಭಕ್ತ್’ ಹ್ಯಾಂಡಲ್ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಆ ಪೋಸ್ಟ್‌ನ ಚಿತ್ರದಲ್ಲಿ, ‘ಹನಿಮೂನ್ ಹೋಟೆಲ್’ ಎಂಬ ಬೋರ್ಡಿಗೆ ಬಣ್ಣ ಬಳಿದು, ‘ಹನುಮಾನ್ ಹೋಟೆಲ್’ ಎಂದು ಹಿಂದಿಯಲ್ಲಿ ಬರೆದಂತೆ ತೋರಿಸಲಾಗಿದೆ.
ಇದನ್ನೂ ಓದಿ: ತೀಸ್ತಾ, ಜುಬೇರ್ ಬಂಧನ ಆತಂಕಕಾರಿ: ನೊಬೆಲ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆ ಮಾರಿಯಾ ಪ್ರತಿಕ್ರಿಯೆ
ಆದರೆ ಜುಬೇರ್ ಅವರನ್ನು ಬಂಧಿಸಲು ಕಾರಣವಾಗಿರುವ ಚಿತ್ರವೂ ಎಡಿಟ್ ಮಾಡಿರುವ ಚಿತ್ರವಲ್ಲ, ಬದಲಾಗಿ ಈ ಚಿತ್ರವು 1983ರ ಹಿಂದಿ ಚಲನಚಿತ್ರವಾದ ‘ಕಿಸ್ಸಿ ಸೆ ನಾ ಕೆಹನಾ’ ದೃಶ್ಯವಾಗಿದೆ. ‘ಕಿಸ್ಸಿ ಸೆ ನಾ ಕೆಹನಾ’ ಎಂದರೆ ಕನ್ನಡದಲ್ಲಿ ‘ಯಾರಿಗೂ ಹೇಳಬೇಡಿ’ ಎಂದರ್ಥವಿದೆ. ಈ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರವನ್ನು ಹೃಷಿಕೇಶ್ ಮುಖರ್ಜಿ ನಿರ್ದೇಶಿಸಿದ್ದು, ಚಲನಚಿತ್ರ ಮಂಡಳಿಯೂ ಅದಕ್ಕೆ ‘ಯು’ (ಎಲ್ಲರೂ ನೋಡಬಹುದಾದ) ಪ್ರಮಾಣಪತ್ರ ನೀಡಿದೆ. ಅಲ್ಲದೆ ಈ ಚಿತ್ರ ಮತ್ತು ದೃಶ್ಯ ಇನ್ನೂ ಯೂಟ್ಯೂಬ್‌ನಲ್ಲಿ ಲಭ್ಯವಿದೆ.
Update: Fake account @balajikijaiin of BJP IT cell which filed a complaint against @zoo_bear has been deleted after this thread was posted.
Funnily, I'd told BJP IT cell's Tek Fogg mastermind Devang Dave that the account has evidence of his party's fingerprints.
Hence deleted. https://t.co/Is3O0OHx0n
— Saket Gokhale (@SaketGokhale) June 29, 2022
ಜುಬೇರ್ ವಿರುದ್ಧ ದೆಹಲಿ ಪೊಲೀಸರು, “ಪೋಸ್ಟ್‌ನಲ್ಲಿನ ಪದಗಳು ಮತ್ತು ಚಿತ್ರವನ್ನು ಮೊಹಮ್ಮದ್ ಜುಬೇರ್ ಅವರು ನಿರ್ದಿಷ್ಟ ಧಾರ್ಮಿಕ ಸಮುದಾಯದ ವಿರುದ್ಧ ಬಳಸಿದ್ದಾರೆ. ಇದು ತೀವ್ರ ಪ್ರಚೋದನಕಾರಿ ಮತ್ತು ಜನರ ನಡುವೆ ದ್ವೇಷದ ಭಾವನೆಗಳನ್ನು ಹುಟ್ಟುಹಾಕಲು ಸಾಕಾಗುತ್ತದೆ. ಇದು ಸಮಾಜದಲ್ಲಿ ಸಾರ್ವಜನಿಕ ನೆಮ್ಮದಿಯನ್ನು ಕಾಪಾಡಿಕೊಳ್ಳಲು ಹಾನಿಕಾರಕವಾಗಿದೆ” ಎಂದು ಎಫ್‌ಐಆರ್‌ನಲ್ಲಿ ದಾಖಲಿಸಿದ್ದಾರೆ.
ಅದಾಗಿಯೂ ಜುಬೇರ್ ಅವರ ವಿರುದ್ಧ ದೂರು ನೀಡಿರುವ ಅನಾಮಧೇಯ ಟ್ವಿಟರ್ ಅಕೌಂಟ್ ಹನುಮಾನ್ ಭಕ್ತ್ ಬಿಜೆಪಿ ಐಟಿ ಸೆಲ್ಲಿನ ಅಕೌಂಟ್ ಆಗಿದೆ ಎಂದು ಸಾಮಾಜಿಕ ಹೋರಾಟಗಾರ ಸಾಕೇತ್ ಗೋಖಲೆ ಹೇಳಿದ್ದು, ಅದಕ್ಕೆ ಹಲವು ಆಧಾರಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ಜುಬೇರ್ ಬಂಧನ: ಬರವಣಿಗೆ, ಟ್ವೀಟ್ ಆಧಾರದಲ್ಲಿ ಪತ್ರಕರ್ತರನ್ನು ಜೈಲಿಗೆ ಹಾಕಬಾರದು- ವಿಶ್ವಸಂಸ್ಥೆ
ಈ ಬಗ್ಗೆ ಟ್ವಿಟರ್‌ನಲ್ಲಿ ಸಾಕ್ಷಿ ಸಮೇತ ದಾಖಲೆ ನೀಡಿರುವ ಸಾಕೇತ್ ಅವರು,“ದೆಹಲಿ ಪೊಲೀಸರನ್ನು ಬಳಸಿಕೊಂಡು ಬಿಜೆಪಿ ಹೇಗೆ ಜುಬೈರ್ ಅನ್ನು ಸಿಲುಕಿಸಿದ್ದಾರೆ ಎಂಬುವುದಕ್ಕೆ ಇದು ಸಾಕ್ಷಿ. ಜುಬೈರ್ ವಿರುದ್ಧ ದೂರು ದಾಖಲಿಸಿದ ಬಾಲಾಜಿಕಿಜೈನ್ ಖಾತೆಯನ್ನು ನಾನು ಪರಿಶೀಲಿಸಿದ್ದು, ಅದು ನಿನ್ನೆಯವರೆಗೆ 1 ಅನುಯಾಯಿಗಳನ್ನು ಹೊಂದಿತ್ತು” ಎಂದು ಅವರು ಮಂಗಳವಾರ ಹೇಳಿದ್ದಾರೆ.

ಬಾಲಾಜಿಕಿಜೈನ್ ಅಕೌಂಟ್ ಅನ್ನು ಅಕ್ಟೋಬರ್ 2021ರಲ್ಲಿ ರಚಿಸಲಾಗಿದೆ. ಅದು ತನ್ನ ಮೊದಲ ಸಂದೇಶವನ್ನು ಜೂನ್ 19 ರಂದು ಪೋಸ್ಟ್ ಮಾಡಿತ್ತು. ಈ ಪೋಸ್ಟ್‌ನಲ್ಲಿ ಅದು ಜುಬೈರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರನ್ನು ಕೇಳಿತ್ತು.
ಈ ಖಾತೆಯೂ ಫೆಬ್ರವರಿಯಲ್ಲಿ ‘ಸೈನ್‌ಪೋಸ್ಟ್ ಇಂಡಿಯಾ’ ಎಂಬ ಕಂಪನಿಯ ಕುರಿತ ಪೋಸ್ಟ್ ಅನ್ನು ‘ಲೈಕ್’ ಮಾಡಿದೆ ಎಂದು ಸಾಕೇತ್ ಗೋಖಲೆ ಸೂಚಿಸಿದ್ದಾರೆ.
ಇದನ್ನೂ ಓದಿ: ಪತ್ರಕರ್ತ ಮೊಹಮ್ಮದ್ ಜುಬೇರ್ ಮತ್ತೆ ನಾಲ್ಕು ದಿನ ಪೊಲೀಸ್ ವಶಕ್ಕೆ
“ಈಗ ಇದು ಆಸಕ್ತಿದಾಯಕವಾಗಿದೆ. ಸೈನ್‌ಪೋಸ್ಟ್ ಇಂಡಿಯಾ ಒಂದು ಸಾಮಾಜಿಕ ಮಾಧ್ಯಮ ಏಜೆನ್ಸಿಯಾಗಿದ್ದು. ಇದು ‘202-ಪ್ರೆಸ್‌ಮ್ಯಾನ್ ಹೌಸ್, ಮುಂಬೈ’ ಎಂಬ ವಿಳಾಸದಲ್ಲಿದ್ದು, ಇದು ತನ್ನ ಗ್ರಾಹಕನಾಗಿ ಬಿಜೆಪಿಯನ್ನು ಹೊಂದಿದೆ. ಬಿಜೆಪಿ ಯುವ ಘಟಕದ ಐಟಿ ಸೆಲ್ ಮುಖ್ಯಸ್ಥ ದೇವಾಂಗ್ ದವೆ ಅವರು ಸೈನ್‌ಪೋಸ್ಟ್ ಇಂಡಿಯಾ ಮತ್ತು ಅದೇ ವಿಳಾಸದಲ್ಲಿರುವ ಇನ್ನೊಂದು ಏಜೆನ್ಸಿಯನ್ನು ಹೊಂದಿದ್ದಾರೆ” ಎಂದು ಅವರು ಹೇಳಿದ್ದಾರೆ.
Now this is where it gets interesting.
Signpost India is a social media agency with BJP as a client with address as 202, Pressman House, Mumbai.
Guess what? BJP Youth Wing’s IT cell head Devang Dave owns Signpost India & another agency located at the SAME address.
(2/4) pic.twitter.com/qMDSqvn19S
— Saket Gokhale (@SaketGokhale) June 28, 2022
ದೇವಾಂಗ್ ದವೆ ಅವರು ಬಿಜೆಪಿಯ ‘ಟೆಕ್ ಫಾಗ್’ ಎಂಬ ಗುಂಪು ಟ್ರೋಲಿಂಗ್ ಆಪ್‌ನ ಹಿಂದೆ ಇರುವ ಪ್ರಮುಖ ವ್ಯಕ್ತಿಯಾಗಿದ್ದಾರೆ. ‘ಟೆಕ್ ಫಾಗ್’ ಎಂಬ ಈ ಆಪ್ ಬಿಜೆಪಿಯನ್ನು ವಿರೋಧಿಸುವ ಯಾವುದೇ ವ್ಯಕ್ತಿಯನ್ನು ಗುಂಪಾಗಿ ಗುರಿ ಮಾಡುವ ಒಂದು ಆಪ್ ಆಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ವಿರುದ್ಧ ಮಾತನಾಡುವ ಯಾವುದೇ ವ್ಯಕ್ತಿಯನ್ನು ಗುರಿ ಮಾಡಿ ಅವರಿಗೆ ಅಶ್ಲೀಲ ಮತ್ತು ಅವಾಚ್ಯ ಬೈಗಳಗಳನ್ನು ಹಲವು ಫೇಕ್ ಅಕೌಂಟ್ ಮೂಲಕ ಗುಂಪಾಗಿ ಕಳುಹಿಸಲಾಗುತ್ತದೆ. ಇದನ್ನು ದೇಶದ ಪ್ರಮುಖ ಸುದ್ದಿ ಜಾಲವಾದ ‘ವೈರ್.ಇನ್’ ಇತ್ತೀಚೆಗೆ ಬಹಿರಂಗಪಡಿಸಿತ್ತು. ಈ ಸುದ್ದಿಯನ್ನು ನೀಡುವ ಇಲ್ಲಿ ಓದಬಹುದಾಗಿದೆ.
ಇದನ್ನೂ ಓದಿ: ‘ಯಾರಿಗೂ ಹೇಳಬೇಡಿ’: ಖ್ಯಾತ ಪತ್ರಕರ್ತ ಮೊಹಮ್ಮದ್ ಜುಬೇರ್ ಬಂಧನಕ್ಕೆ ಕಾರಣ!
“ಬಿಜೆಪಿಯ ಐಟಿ ಸೆಲ್ ಮತ್ತು ಟೆಕ್ ಫಾಗ್‌ನ ಪ್ರಮುಖ ವ್ಯಕ್ತಿ ‘ಬಾಲಾಜಿಕಿಜೈನ್’ ಎಂಬ ನಕಲಿ ಖಾತೆಯನ್ನು ದೆಹಲಿ ಪೊಲೀಸರ ಸಹಕಾರದೊಂದಿಗೆ ಜುಬೈರ್‌ನನ್ನು ಗುರಿಯಾಗಿಸಲು ಮತ್ತು ಸಿಲುಕಿಸಲು ರಚಿಸಿದ್ದಾರೆ ಎಂಬುದು ಸ್ಫಟಿಕದಷ್ಟು ಸ್ಪಷ್ಟವಾಗಿದೆ. ದೆಹಲಿಯ ಸೈಬರ್ ಸೆಲ್ ಪೊಲೀಸರು ನಕಲಿ ಪ್ರಕರಣ ದಾಖಲಿಸಲು ಬಿಜೆಪಿಗೆ ಸಹಕರಿಸಿದ್ದಾರೆ. ಜುಬೇರ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಇದನ್ನು ನೋಡಬೇಕಾಗಿದೆ” ಎಂದು ಸಾಕೇತ್ ಹೇಳಿದ್ದಾರೆ.


