Homeಮುಖಪುಟತೀಸ್ತಾ, ಜುಬೇರ್‌‌ ಬಂಧನ ಆತಂಕಕಾರಿ: ನೊಬೆಲ್‌ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆ ಮಾರಿಯಾ ಪ್ರತಿಕ್ರಿಯೆ

ತೀಸ್ತಾ, ಜುಬೇರ್‌‌ ಬಂಧನ ಆತಂಕಕಾರಿ: ನೊಬೆಲ್‌ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆ ಮಾರಿಯಾ ಪ್ರತಿಕ್ರಿಯೆ

- Advertisement -
- Advertisement -

ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮತ್ತು ಫ್ಯಾಕ್ಟ್‌ ಚೆಕ್‌ ಪತ್ರಕರ್ತ ಮೊಹಮ್ಮದ್ ಜುಬೇರ್ ಅವರನ್ನು ಭಾರತದಲ್ಲಿ ಬಂಧಿಸಿರುವುದು ಆಘಾತಕಾರಿ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ, ಫಿಲಿಪೈನ್ಸ್‌ ಪತ್ರಕರ್ತೆ ಮಾರಿಯಾ ರೆಸ್ಸಾ ಹೇಳಿದ್ದಾರೆ.

ಹವಾಯಿಯ ಈಸ್ಟ್-ವೆಸ್ಟ್ ಸೆಂಟರ್‌ನಲ್ಲಿ ನಡೆದ ಮೀಡಿಯಾ ಕಾನ್ಫರೆನ್ಸ್‌ ವೇಳೆಯಲ್ಲಿ ‘ದಿ ವೈರ್‌’ಗೆ ಪ್ರತಿಕ್ರಿಯೆ ನೀಡಿರುವ ರೆಸ್ಸಾ, “ಘಟನೆಯನ್ನು ವಿರೋಧಿಸಲು ಎಲ್ಲಾ ಪತ್ರಕರ್ತರು ಒಗ್ಗೂಡಬೇಕು” ಎಂದು ಆಗ್ರಹಿಸಿದ್ದಾರೆ. “ಭಾರತೀಯ ಪತ್ರಕರ್ತರು, ಪ್ರತಿಯೊಬ್ಬರೂ ಘಟನೆ ಬಗ್ಗೆ ಮಾತನಾಡಬೇಕು, ಪ್ರತಿಯೊಬ್ಬರೂ ಇದರ ಬಗ್ಗೆ ಬರೆಯಬೇಕು ಎಂದು ನಾನು ಭಾವಿಸುತ್ತೇನೆ” ಎಂದು ತಿಳಿಸಿದ್ದಾರೆ.

“ಘಟನೆ ಆಘಾತಕಾರಿ. ನನ್ನ ಪ್ರಕಾರ ಭಾರತೀಯ ಪತ್ರಕರ್ತರೆಲ್ಲರೂ ಇದರ ಬಗ್ಗೆ ಮಾತನಾಡುತ್ತಿರಬೇಕು, ಎಲ್ಲರೂ ಇದರ ಬಗ್ಗೆ ಬರೆಯುತ್ತಿರಬೇಕು. ನಿಮಗೆ ಗೊತ್ತೆ? ನನ್ನ ಅನುಭವದ ಹಿನ್ನೆಲೆಯಲ್ಲಿ ಈ ವಿಷಯಗಳ ಕುರಿತು ಹೇಳುತ್ತೇನೆ. ನನ್ನನ್ನು ಬಂಧಿಸಿದಾಗ, ಪತ್ರಕರ್ತರು, ಜನರು ಹೋರಾಟದಲ್ಲಿ ಜಿಗಿಯಲು ಬಯಸುವುದಿಲ್ಲ. ಸ್ವಯಂ ಹಿತಾಸಕ್ತಿ ಇದಕ್ಕೆ ಕಾರಣವಾಗಬಹುದು. ಆದರೆ ನೀವು ಎಲ್ಲರನ್ನು ಹೇಗೆ ಒಟ್ಟಿಗೆ ಸೇರಿಸುತ್ತೀರಿ? ನೀವು ಎಲ್ಲರೊಂದಿಗೆ ಮಾತನಾಡಿ. ಜನರನ್ನು ಒಟ್ಟಿಗೆ ಕರೆತನ್ನಿ” ಎಂದಿದ್ದಾರೆ.

ವಿಶ್ವಸಂಸ್ಥೆ ಪ್ರತಿಕ್ರಿಯೆ

ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್‌ ಅವರ ಬಂಧನಕ್ಕೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆ ವಕ್ತಾರರೊಬ್ಬರು, “ಪತ್ರಕರ್ತರು ಏನು ಬರೆಯುತ್ತಾರೆ, ಏನು ಟ್ವೀಟ್ ಮಾಡುತ್ತಾರೆ ಮತ್ತು ಏನು ಹೇಳುತ್ತಾರೆಂಬುದರ ಮೇಲೆ ಜೈಲಿಗೆ ಹಾಕಬಾರದು” ಎಂದಿದ್ದಾರೆ.

ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ (Antonio Guterres) ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಮಂಗಳವಾರ ಪ್ರತಿಕ್ರಿಯಿಸಿ, ’ಯಾವುದೇ ಕಿರುಕುಳದ ಬೆದರಿಕೆಯಿಲ್ಲದೆ ಜನರು ಮುಕ್ತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡುವುದು ಮುಖ್ಯ’ ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿರಿ: ತಾಲಿಬಾನೀಕರಣ ಸಹಿಸುವುದಿಲ್ಲ: ಉದಯ್‌ಪುರ್‌ ಘಟನೆಗೆ ರಾಜಕಾರಣಿಗಳು, ಧಾರ್ಮಿಕ ಮುಖಂಡರ ತೀವ್ರ ವಿರೋಧ

2018ರ ಟ್ವೀಟ್ ಒಂದಕ್ಕೆ ಸಂಬಂಧಿಸಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪದ ಮೇಲೆ ಜುಬೇರ್‌ರನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಅವರನ್ನು ಕಳುಹಿಸಲಾಗಿದೆ.

ಜುಬೇರ್ ಬಂಧನಕ್ಕೆ ಪ್ರತಿಕ್ರಿಯಿಸಿದ ಸ್ಟೀಫನ್ ಡುಜಾರಿಕ್ “ಪ್ರಪಂಚದಾದ್ಯಂತ ಯಾವುದೇ ಸ್ಥಳವಿರಲಿ, ಜನರು ತಮ್ಮನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ನೀಡುವುದು ಬಹಳ ಮುಖ್ಯ, ಪತ್ರಕರ್ತರು ತಮ್ಮನ್ನು ಮುಕ್ತವಾಗಿ ಮತ್ತು ಯಾವುದೇ ಕಿರುಕುಳದ ಬೆದರಿಕೆಯಿಲ್ಲದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಬೇಕು” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

 1. Dear Naanugauri.com Admin,

  I am Maria, Marketing Specialist from PubFuture – The Leading Full Stack Advertising Technology Platform for Banner and Video Ads.

  Naanugauri.com has a great deal of good traffic from IN, US, UK, BR,… perfectly matching our premium Banner and Video ad campaigns. We would like to offer a good deal to take your ad yield to the next level.

  PubFuture has helped many publishers enjoy an increase in revenue between 15 – 100% via our superior optimization solution Header Bidding across world-class demands such as Pubmatic, Google, Amazon, Sovrn, Adform, RhythmOne, Appnexus, Unruly, FreeWheel, Index Exchange, Criteo…

  Our ads are of good quality (no pops, adult, or any intrusive ads). I can offer you a higher CPM than your current ad providers to run a test and show our excellent performance.

  You can check our ads on some similar websites for references: olevod.com, turkish123.com, galaxyaudiobook.com, potteraudio.com, freewebnovel.com, novelfull.com

  Please send my message to the relevant person to discuss further. Hope to build a great partnership with you.

  Best Regards,
  Maria

LEAVE A REPLY

Please enter your comment!
Please enter your name here

- Advertisment -

Must Read

ಮ್ಯಾನೇಜ್‌ಮೆಂಟ್‌ ಸರ್ಕಾರ| ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ

0
ರಾಜ್ಯದ ಕಾನೂನು ಸಚಿವ ಮಾಧುಸ್ವಾಮಿ ಅವರ ಆಡಿಯೊವೊಂದು ಸೋರಿಕೆಯಾಗಿರುವ ಪರಿಣಾಮ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದ್ದು ಸರ್ಕಾರದೊಳಗೆ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ನಾಯಕರು ಮಾಧುಸ್ವಾಮಿ ಹೇಳಿಕೆಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಾಧುಸ್ವಾಮಿಯವರೂ ಪ್ರಕರಣಕ್ಕೆ ಸಂಬಂಧಿಸಿದಂತೆ...