Homeಮುಖಪುಟಬಿಹಾರ: ಮತ್ತೊಮ್ಮೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ

ಬಿಹಾರ: ಮತ್ತೊಮ್ಮೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ

ಸಿಎಂ ನಿತೀಶ್ ಕುಮಾರ್, ಆರ್‌ಜೆಡಿಯೊಂದಿಗೆ ಹೆಚ್ಚು ಬೆರೆಯುತ್ತಿರುವುದು ಬಿಜೆಪಿಯನ್ನು ಆತಂಕಕ್ಕೆ ನೂಕಿದೆ.

- Advertisement -
- Advertisement -

ಬಿಹಾರದಲ್ಲಿ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂನ ನಾಲ್ವರು ಶಾಸಕರು ವಿರೋಧ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ತೇಜಸ್ವಿ ಯಾದವ್ ಅವರ ಆರ್‌ಜೆಡಿ ಮತ್ತೊಮ್ಮೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

243 ಸದಸ್ಯರ ವಿಧಾನಸಭೆಯಲ್ಲಿ ಆರ್‌ಜೆಡಿ ಈಗ 80 ಶಾಸಕರನ್ನು ಹೊಂದಿದೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್ 45 ಶಾಸಕರನ್ನು ಹೊಂದಿದೆ. ಅವರ ಮಿತ್ರ ಪಕ್ಷ ಬಿಜೆಪಿಗಿಂತ ಮೂರು ಹೆಚ್ಚು ಶಾಸಕರನ್ನು ಆರ್‌ಜೆಡಿ ಹೊಂದಿದೆ.

ಒಂದೆಡೆ ಆರ್‌ಜೆಡಿ ಪಕ್ಷ ಬಿಜೆಪಿಗೆ ಚಿಂತೆಯನ್ನು ನೀಡುತ್ತಿ‌ದರೇ, ಅದರ ಜೊತೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಮಿತ್ರ ಪಕ್ಷಕ್ಕಿಂತ ಹೆಚ್ಚಾಗಿ RJD ಯೊಂದಿಗೆ ಬೆರೆಯುತ್ತಿರುವುದು ಕೂಡ ಬಿಜೆಪಿಗೆ ಮತ್ತಷ್ಟು ಆತಂಕ ಉಂಟು ಮಾಡುತ್ತಿದೆ.

2020 ರ ಬಿಹಾರ ಚುನಾವಣೆಯಲ್ಲಿ, RJD ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು, ಆದರೆ ವಿರೋಧ ಪಕ್ಷವು ಬಹುಮತದ ಕೊರತೆಯನ್ನು ಅನುಭವಿಸಿತು. ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗೆ ಸೇರಿ ಅಧಿಕಾರ ಪಡೆದರು. ಆದರೆ ಅವರ ಪಕ್ಷವು ಮೂರನೇ ಸ್ಥಾನವನ್ನು ಗಳಿಸಿದ್ದರಿಂದ ಮೈತ್ರಿಯಲ್ಲಿ ಸ್ಥಾನಮಾನವನ್ನು ಕಡಿಮೆಗೊಳಿಸಿಕೊಂಡಿತ್ತು.

ಇದನ್ನೂ ಓದಿ: ಮಹಾರಾಷ್ಟ್ರ: ಹೊಸ ಸರ್ಕಾರ ರಚನೆಗೂ ಮುನ್ನವೇ ಸಚಿವ ಸ್ಥಾನಕ್ಕೆ ಒಳಜಗಳ, ಏಕನಾಥ್ ಶಿಂಧೆ ಸ್ಪಷ್ಟನೆ

ಕಳೆದ ಎರಡು ವರ್ಷಗಳಲ್ಲಿ, ನಿತೀಶ್ ಕುಮಾರ್ ಅವರ ಬಿಜೆಪಿಯೊಂದಿಗಿನ ಸಂಬಂಧವು ಜಟಿಲವಾಗಿದೆ. ಇದು ಆಗಾಗ್ಗೆ ಹೊರ ಬಂದಿದೆ ಕೂಡ. ಇನ್ನು, ಜಾತಿ ಗಣತಿಯಂತಹ ವಿಷಯಗಳಲ್ಲಿ ಮುಖ್ಯಮಂತ್ರಿ ಮತ್ತು ತೇಜಸ್ವಿ ಯಾದವ್ ಇಬ್ಬರು ಒಂದೇ ರೀತಿಯಲ್ಲಿದ್ದಾರೆ. ಈ ಎಲ್ಲಾ ಲಕ್ಷಣಗಳು ಮತ್ತೆ ಇಬ್ಬರು ಒಂದಾಗಬಹುದು ಎಂಬ ಊಹಾಪೋಹಕ್ಕೆ ಕಾರಣವಾಗಿದೆ.

ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ತಮ್ಮ ಪಕ್ಷಕ್ಕೆ ಎಐಎಂಐಎಂನ ನಾಲ್ವರು ಶಾಸಕರ ಸೇರ್ಪಡೆಯನ್ನು ರಾಜ್ಯದಲ್ಲಿ “ಜಾತ್ಯತೀತ ಶಕ್ತಿಗಳ ಬಲವರ್ಧನೆ” ಎಂದು ಕರೆದಿದ್ದಾರೆ.

ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ 2020 ರ ಬಿಹಾರ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಗೆದ್ದಿದೆ ಆದರೆ ಐವರು ಶಾಸಕರ ಪೈಕಿ ಒಬ್ಬರನ್ನು ಹೊರತುಪಡಿಸಿ ಎಲ್ಲರೂ ಆರ್‌ಜೆಡಿ ಸೇರಿದ್ದಾರೆ.

ಎಲ್ಲಾ ನಾಲ್ವರು ಶಾಸಕರು ಆರೋಗ್ಯ, ಶಿಕ್ಷಣ ಮತ್ತು ಇತರ ರೀತಿಯ ಸಾರ್ವಜನಿಕ ಕಲ್ಯಾಣದ ಬಗ್ಗೆ ಕಾಳಜಿ ವಹಿಸದ ಸರ್ಕಾರದ ನಿರಾಸಕ್ತಿಯಿಂದ ಬಳಲುತ್ತಿರುವ “ರಾಜ್ಯದ ಅತ್ಯಂತ ಬಡ, ಪ್ರವಾಹ ಪೀಡಿತ ಪ್ರದೇಶದಿಂದ ಬಂದವರು” ಎಂದು ತೇಜಸ್ವಿ ಯಾದವ್ ಒತ್ತಿ ಹೇಳಿದ್ದಾರೆ.

ಕಳೆದ ಚುನಾವಣೆಯಲ್ಲಿ ಆರ್‌ಜೆಡಿ 75 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಉಪಚುನಾವಣೆಯಲ್ಲಿ ಮತ್ತೊಂದು ಸ್ಥಾನ ಗೆದ್ದಿದೆ. ಈಗ ನಾಲ್ವರು ಶಾಸಕರು ಸೇರಿ ಒಟ್ಟು 80 ಶಾಸಕರನ್ನು ಹೊಂದಿದೆ.

“ಎಲ್ಲಾ ಜಾತ್ಯತೀತ ಶಕ್ತಿಗಳು ಒಗ್ಗೂಡಿ ಬಲಿಷ್ಠವಾಗಬೇಕೆಂದು ನಾವು ಬಯಸುತ್ತೇವೆ. ಕೋಮುವಾದದ ವಿರುದ್ಧದ ಹೋರಾಟದಲ್ಲಿ ಆರ್‌ಜೆಡಿ ಪಾತ್ರವನ್ನು ಅತಿಯಾಗಿ ಹೇಳಲಾಗುವುದಿಲ್ಲ. ಬಿಹಾರದಲ್ಲಿ ಬಿಜೆಪಿಯು ಸ್ವಂತವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯವನ್ನು ಎಂದಿಗೂ ತೋರಿಸಲಿಲ್ಲ. ಎನ್‌ಡಿಎಯು ಬಿಹಾರದಲ್ಲಿ ಅನೈತಿಕ ವಿಧಾನಗಳಿಂದ ಅಧಿಕಾರವನ್ನು ಪಡೆದಿರಬಹುದು. ಆದರೆ, ಸಂಖ್ಯಾಬಲದಲ್ಲಿ ಮೂರನೇ ಸ್ಥಾನದಲ್ಲಿರುವ ಮುಖ್ಯಮಂತ್ರಿಯನ್ನು ಸಹಿಸಿಕೊಳ್ಳುತ್ತಿದೆ” ಎಂದು ಆರ್‌ಜೆಡಿ ನಾಯಕ ವ್ಯಂಗ್ಯವಾಡಿದ್ದಾರೆ.


ಇದನ್ನೂ ಓದಿ: ಪತ್ರಕರ್ತ ಜುಬೇರ್‌ ವಿರುದ್ಧ ದೂರು ನೀಡಿದ್ದ ಟ್ವಿಟರ್‌ ಅಕೌಂಟ್‌ ಡಿಲೀಟ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...