Homeಮುಖಪುಟಬಾಲಿವುಡ್ ನಟಿ ಸ್ವರ ಭಾಸ್ಕರ್‌ಗೆ ಜೀವ ಬೆದರಿಕೆ ಪತ್ರ: ಮುಂಬೈನಲ್ಲಿ ದೂರು ದಾಖಲು

ಬಾಲಿವುಡ್ ನಟಿ ಸ್ವರ ಭಾಸ್ಕರ್‌ಗೆ ಜೀವ ಬೆದರಿಕೆ ಪತ್ರ: ಮುಂಬೈನಲ್ಲಿ ದೂರು ದಾಖಲು

- Advertisement -
- Advertisement -

ಖ್ಯಾತ ಬಾಲಿವುಡ್ ನಟಿ ಸ್ವರ ಭಾಸ್ಕರ್‌ರವರ ಮುಂಬೈ ನಿವಾಸಕ್ಕೆ ಅನಾಮಧೇಯ ಜೀವ ಬೆದರಿಕೆ ಪತ್ರವೊಂದು ಬಂದ ಹಿನ್ನೆಲೆಯಲ್ಲಿ ಅವರು ವೆರ್ಸೊವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಆಧಾರದಲ್ಲಿ ಅಪರಿಚಿತ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಬೆದರಿಕೆ ಪತ್ರದಲ್ಲಿ “ವೀರ್‌ ಸಾವರ್ಕರ್‌ಗೆ ಅವಮಾನ ಮಾಡುವುದನ್ನು ಈ ದೇಶದ ಯುವಜನರು ಸಹಿಸುವುದಿಲ್ಲ” ಎಂದು ಹಿಂದಿಯಲ್ಲಿ ಬರೆಯಲಾಗಿದೆ ಎಂದು ವರದಿಯಾಗಿದೆ.

‘ವೀರೆ ದಿ ವೆಡ್ಡಿಂಗ್’ ಚಿತ್ರದ ಮೂಲಕ ಗಮನ ಸೆಳೆದ ಸ್ವರ ಭಾಸ್ಕರ್ ಬಾಲಿವುಡ್‌ನ ಖ್ಯಾತ ನಟಿಯಾಗಿದ್ದಾರೆ. ಜೊತೆ ಜೊತೆಗೆ ಅವರು ಸಮಾಜದ ಆಗುಹೋಗುಗಳಿಗೆ ಸಕ್ರಿಯವಾಗಿ ಪ್ರತಿಕ್ರಿಯಿಸುತ್ತಿರುತ್ತಾರೆ. ಸಿಎಎ, ಎನ್‌ಆರ್‌ಸಿ ವಿರುದ್ಧ ಗಟ್ಟಿ ದನಿಯೆತ್ತಿದವರಲ್ಲಿ ಅವರು ಒಬ್ಬರು. ಲಾಕ್‌ಡೌನ್ ಸಂದರ್ಭದಲ್ಲಿ ಸಾವಿರಾರು ವಲಸೆ ಕಾರ್ಮಿಕರಿಗೆ ಅವರು ಸಹಾಯ ಮಾಡಿದ್ದಾರೆ. 1300ಕ್ಕೂ ಹೆಚ್ಚು ಜನರಿಗೆ ರೈಲು ಟಿಕೆಟ್ ಬುಕ್ ಮಾಡಿಕೊಟ್ಟು, ಮತ್ತಷ್ಟು ಜನರಿಗೆ ಅಗತ್ಯ ವಸ್ತುಗಳನ್ನು ಒದಗಿಸಿದ್ದರು.

ಕೃಷಿ ಕಾಯ್ದೆಗಳ ವಿರುದ್ಧ ನಡೆದ ಹೋರಾಟದಲ್ಲಿ ಅವರು ರೈತರ ಪರ ನಿಂತಿದ್ದರು. ಸರ್ಕಾರದ ನೀತಿಗಳ ವಿಮರ್ಶಕರಲ್ಲಿ ಅವರು ಒಬ್ಬರಾಗಿದ್ದಾರೆ. ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಟೀಕಿಸುವ ಮತ್ತು ಸರ್ಕಾರವನ್ನು ಖಂಡಿಸುವ ಹೇಳಿಕೆ ನೀಡಿದ್ದಕ್ಕಾಗಿ ಸ್ವರ ವಿರುದ್ಧ ವಿಚಾರಣೆ ನಡೆಸುವಂತೆ ಮಾನನಷ್ಟ ಮೊಕದ್ದಮೆಯಡಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅದನ್ನು ಅಟಾರ್ನಿ ಜನರಲ್ ಆಫ್ ಇಂಡಿಯಾ ತಿರಸ್ಕರಿದ್ದರು.

ಭಾರತದ ಖ್ಯಾತ ವಿಶ್ವವಿದ್ಯಾಲಯ ಜೆಎನ್‌ಯುನಲ್ಲಿ ಓದಿರುವ ಸ್ವರ ಭಾಸ್ಕರ್‌ರವರು ಅಲ್ಲಿನ ವಿದ್ಯಾರ್ಥಿಗಳ ನ್ಯಾಯಯುತ ಹೋರಾಟಗಳಿಗೆ ಬೆಂಬಲ ಸೂಚಿಸಿದ್ದಾರೆ. ಸಮಾನ ಮತ್ತು ಉಚಿತ ಶಿಕ್ಷಣಕ್ಕೆ ಒತ್ತಾಯಿಸಿದ್ದ ಅವರು, “ನಾನು ತೆರಿಗೆ ಪಾವತಿಸುವವಳು. ಉನ್ನತ ಶಿಕ್ಷಣವನ್ನು ಸಬ್ಸಿಡಿಯಾಗಿ ನೀಡಲು ನನ್ನ ತೆರಿಗೆಗಳನ್ನು ಬಳಸುವುದಕ್ಕೆ ನನಗೆ ಸಂಪೂರ್ಣ ಒಪ್ಪಿಗೆಯಿದೆ. ಏಕೆಂದರೆ ಶಿಕ್ಷಣವು ಹಣವುಳ್ಳ ಕೆಲವೇ ಜನರಿಗೆ ಮಾತ್ರ ಕೈಗೆಟುವಂಥ ಸರಕು ಆಗಬಾರದು ಎಂದು ನಾನು ದೃಢವಾಗಿ ನಂಬುತ್ತೇನೆ. ಇದು ಎಲ್ಲಾ ಜನರಿಗೂ ಸಿಗಬೇಕೆ ಹೊರತು ಕೆಲವೇ ಜನರ ಸ್ವತ್ತಾಗಬಾರದು” ಎಂದಿದ್ದರು.

ಇದನ್ನೂ ಓದಿ: ಶಿಕ್ಷಣವು ಸಾಂವಿಧಾನಿಕ ಹಕ್ಕು: JNU ಹೋರಾಟಕ್ಕೆ ಬೆಂಬಲ ಸೂಚಿಸಿದ ಬಾಲಿವುಡ್‌ ನಟಿ ಸ್ವರ ಭಾಸ್ಕರ್

ಈ ಹಿಂದೆಯು ಸಹ ಸ್ವರ ಭಾಸ್ಕರ್‌ ಹಲವು ವಿಷಯಗಳ ಪರವಾಗಿ ಮಾತಾಡಿದ್ದಲ್ಲದೇ ಕಳೆದ ಲೋಕಸಭೆ ಚುನಾವಣೆ ವೇಳೆ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ್ತು ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್‌ ಪರವಾಗಿ ಪ್ರಚಾರ ನಡೆಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

LEAVE A REPLY

Please enter your comment!
Please enter your name here

- Advertisment -

Must Read

ಹುಬ್ಬಳ್ಳಿ : ಕೈ ಕೈ ಮಿಲಾಯಿಸಿಕೊಂಡ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು

0
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಖಾಸಗಿ ಹೋಟೆಲ್ ಮುಂಭಾಗ ಇಂದು (ಏ.30) ಮಧ್ಯಾಹ್ನ ನಡೆದಿದೆ. ಜೆಡಿಎಸ್‌ ಪಕ್ಷ ಖಾಸಗಿ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕದ 14...