Homeಮುಖಪುಟನಿತೀಶ್ ಕುಮಾರ್ ಸಂಪುಟ ಸೇರುವುದಿಲ್ಲ: ಮಾಜಿ ಸಿಎಂ ಜಿತಾನ್ ರಾಮ್ ಮಾಂಜಿ

ನಿತೀಶ್ ಕುಮಾರ್ ಸಂಪುಟ ಸೇರುವುದಿಲ್ಲ: ಮಾಜಿ ಸಿಎಂ ಜಿತಾನ್ ರಾಮ್ ಮಾಂಜಿ

ಜೆಡಿಯು ಕೋಟಾದ 07 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಹಿಂದುಸ್ಥಾನಿ ಅವಾಮ್ ಮೋರ್ಚಾ ಪಕ್ಷವು 04 ಸ್ಥಾನಗಳಲ್ಲಿ ಜಯಗಳಿಸಿ ಎನ್‌ಡಿಎ ಸರಳ ಬಹುಮತ ಮುಟ್ಟಲು ಸಹಕಾರಿಯಾಗಿದೆ.

- Advertisement -
- Advertisement -

ಮಾಜಿ ಸಿಎಂ ಜಿತಾನ್ ರಾಮ್ ಮಾಂಜಿಯವರು ಹಿಂದುಸ್ಥಾನಿ ಅವಾಮ್ ಮೋರ್ಚಾ (ಎಚ್‌ಎಎಂ) ಪಕ್ಷದ ಶಾಸಕಾಂಗ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು ತಾವು ನಿತೀಶ್ ಕುಮಾರ್ ಸಂಪುಟ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಂಜಿ ಸೇರಿ ಅವರ ಪಕ್ಷದಿಂದ ನೂತನವಾಗಿ ಆಯ್ಕೆಯಾದ ಇತರ ಮೂವರು ಮಾಂಜಿಯವರ ನಿವಾಸದಲ್ಲಿ ಸಭೆ ಸೇರಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಮೊದಲು ಪಕ್ಷದಿಂದ ಮಾಂಜಿ ಮಾತ್ರ ಶಾಸಕರಾಗಿದ್ದರು. ಈ ಚುನಾವಣೆಯಲ್ಲಿ ಅವರೊಂದಿಗೆ ಇತರ ಮೂವರು ಸೇರ್ಪಡೆಯಾಗಿದ್ದಾರೆ.

“ನಾನು ಈಗಾಗಲೇ ಒಮ್ಮೆ ಮುಖ್ಯಮಂತ್ರಿಯಾಗಿದ್ದವನು. ಹಾಗಾಗಿ ಸಚಿವನಾಗಲು ಬಯಸುವುದಿಲ್ಲ. ಹಾಗಾಗಿ ನಾನು ನಿತೀಶ್ ಸಂಪುಟ ಸೇರುವುದಿಲ್ಲ. ಆದರೆ ಈ ಸರ್ಕಾರದಿಂದ ಬಿಹಾರದ ಅಭಿವೃದ್ದಿಯಾಗುತ್ತದೆ. ಹಾಗಾಗಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಶಾಸಕರು ಸಹ ಎನ್‌ಡಿಎ ಸೇರಿ ಎಂದು ಮನವಿ ಮಾಡುತ್ತೇನೆ” ಎಂದಿದ್ದಾರೆ.

ನಿತೀಶ್ ಕುಮಾರ್‌ರವರ ಅಭಿವೃದ್ದಿ ಯೋಜನೆಗಳು ಕಾಂಗ್ರೆಸ್‌ಗಿಂತ ಭಿನ್ನವಾಗಿಲ್ಲ. ಆದರೂ ರಾಜ್ಯದ ಹಿತಾಸಕ್ತಿ ವಿಷಯದಲ್ಲಿ ಅವರು ಕೆಲವು ವಿಷಯಗಳಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಹಾಗಾಗಿ ನೀವು ಎನ್‌ಡಿಎ ಸೇರಿ ರಾಜ್ಯದ ಅಭಿವೃದ್ದಿಗೆ ಸಹಕರಿಸಿ ಮಾಂಜಿ ಮನವಿ ಮಾಡಿದ್ದಾರೆ. 

ಮಾಂಜಿಯವರ ರಾಜಕೀಯ ಪಯಣ

ದಲಿತ ನಾಯಕ ಜತಿನ್ ರಾಮ್ ಮಾಂಜಿ 1980ರಲ್ಲಿ ಕಾಂಗ್ರೆಸ್ ಸೇರುವುದರೊಂದಿಗೆ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಆದರೆ ನಂತರ ಅವರು ಆರ್‌ಜೆಡಿ ಸೇರಿದರು. ಅಲ್ಲಿಂದಲೂ ಬಿಟ್ಟು ಜೆಡಿಯು ಸೇರಿದರು. ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಅವರಿಗೆ ಮುಖ್ಯಮಂತ್ರಿ ಆಗುವ ಅದೃಷ್ಟ ಒಲಿದು ಬಂತು.

2014 ರಲ್ಲಿ ಅವರು ನಿತೀಶ್ ಕುಮಾರ್‌ರವರ ಜೆಡಿಯು ಪಕ್ಷದಲ್ಲಿದ್ದರು. ಆಗ ನಿತೀಶ್‌ ನರೇಂದ್ರ ಮೋದಿಯವರು ಕಟ್ಟಾ ವಿರೋಧಿಯಾಗಿದ್ದರು. ಅಂತಹ ಸಂದರ್ಭದಲ್ಲಿ 2014ರ ಲೋಕಸಭಾ ಚುನಾವಣೆಯನ್ನು ನಿತೀಶ್ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದರು. ಆದರೆ ಅವರ ಪಕ್ಷದಿಂದ ಕೇವಲ 02 ಅಭ್ಯರ್ಥಿಗಳು ಮಾತ್ರ ಗೆದ್ದು ಜೆಡಿಯು ಸೋಲನ್ನು ಅನುಭವಿಸಿತ್ತು. ಸೋಲಿನ ನೈತಿಕ ಹೊಣೆ ಹೊತ್ತ ನಿತೀಶ್ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾಂಜಿಯವರನ್ನು ಸಿಎಂ ಕುರ್ಚಿಯಲ್ಲಿ ಕುಳ್ಳಿರಿಸಿದರು.

ಆದರೆ ಸ್ವಲ್ಪ ಸಮಯದಲ್ಲಿ ನಿತೀಶ್ ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ವಾಪಸ್ ಬಯಸಿದಾಗ ಆರಂಭದಲ್ಲಿ ಮಾಂಜಿ ನಿರಾಕರಿಸಿದರು. ನಂತರ ಬಲವಂತವಾಗಿ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟರು. ಆಗ ಮಾಂಜಿ ಜೆಡಿಯು ತೊರೆದು ಹಿಂದುಸ್ಥಾನಿ ಅವಾಮ್ ಮೋರ್ಚಾ ಪಕ್ಷ ಕಟ್ಟಿದರು.

2015ರ ಬಿಹಾರ ವಿಧಾನಸಭಾ ಚುನಾವಣೆಯ ನಂತರ ಮಹಾಘಟಬಂಧನ್‌ ಮೈತ್ರಿಯಲ್ಲಿದ್ದ ಮಾಂಜಿ ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಾಗಿ ಮಹಾಘಟಬಂಧನ್ ತೊರೆದರು. ಇತ್ತ ಎನ್‌ಡಿಎ ಮೈತ್ರಿಕೂಟದಿಂದ ಮತ್ತೊಬ್ಬ ದಲಿತ ನಾಯಕ ಚಿರಾಗ್ ಪಾಸ್ವಾನ್ ಹೊರನಡೆದ ಕೂಡಲೇ ನಿತೀಶ್ ಕುಮಾರ್‌ರವರು ಮಾಂಜಿಯವರೊಡನೆ ಮಾತುಕತೆ ನಡೆಸಿ ಜೆಡಿಯು ಕೋಟಾದ 07 ಸ್ಥಾನಗಳನ್ನು ಹಿಂದುಸ್ಥಾನಿ ಅವಾಮ್ ಮೋರ್ಚಾಗೆ ಬಿಟ್ಟುಕೊಟ್ಟರು. ಅದರಲ್ಲಿ ಪಕ್ಷ 04 ಸ್ಥಾನಗಳಲ್ಲಿ ಜಯಗಳಿಸಿ ಎನ್‌ಡಿಎ ಸರಳ ಬಹುಮತ ಮುಟ್ಟಲು ಸಹಕಾರಿಯಾಗಿದೆ.


ಇದನ್ನೂ ಓದಿ: ಬಿಹಾರ ಫಲಿತಾಂಶ ವಿಶ್ಲೇಷಣೆ: ನಿತೀಶ್ ಕಳೆದುಕೊಂಡದ್ದೇನು? ತೇಜಸ್ವಿ ಗಳಿಸಿದ್ದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...