ಪ್ರವಾದಿ ನಿಂದನೆ ಮಾಡಿದ ನೂಪರ್ ಶರ್ಮಾ ಬೆಂಬಲಿಸಿದ್ದಾಕ್ಕಿ ರಾಜಸ್ಥಾನದ ಉದಯಪುರದಲ್ಲಿ ಕನ್ನಯ್ಯ ಎಂಬ ವ್ಯಕ್ತಿಯೊಬ್ಬನನ್ನು ಇಬ್ಬರು ಮುಸ್ಲಿಂ ಮತಾಂಧರು ಹತ್ಯೆ ಮಾಡಿರುವ ಅಮಾನವೀಯ ಘಟನೆಯ ನಡುವೆಯೆ ಆ ಆರೋಪಿಗಳನ್ನು ರಾಹುಲ್ ಗಾಂಧಿ ಕ್ಷಮಿಸಿದ್ದಾರೆ ಎಂದು ಝೀ ನ್ಯೂಸ್ ವರದಿ ಮಾಡಿದೆ.
ಝೀ ನ್ಯೂಸ್ ನ ಡಿಎನ್‌ಎ ಎನ್ನುವ ಕಾರ್ಯಕ್ರಮದಲ್ಲಿ ನಿರೂಪಕ “ರಾಹುಲ್ ಗಾಂಧಿಯ ಪೂರ್ವಗ್ರಹವನ್ನು ಮತ್ತೊಮ್ಮೆ ನೋಡಿ. ಉದಯಪುರದ ಆರೋಪಿಗಳನ್ನು ಅವರು ಮಕ್ಕಳು ಎಂದು ಕರೆದಿದ್ದಾರೆ. ಅವರು ಮಕ್ಕಳೊ ಅಥವಾ ಆತಂಕವಾದಿಗಳೊ” ಎಂದು ಪ್ರಶ್ನಿಸಿದ್ದಾನೆ.
ಆದರೆ ವಾಸ್ತವದಲ್ಲಿ ರಾಹುಲ್ ಗಾಂಧಿ ಉದಯಪುರದ ಹಂತಕರನ್ನು ಎಲ್ಲಿಯೂ ಮಕ್ಕಳು ಎಂದು ಕರೆದಿಲ್ಲ ಮತ್ತು ಅವರನ್ನು ಕ್ಷಮಿಸಿಲ್ಲ. ಬದಲಿಗೆ “ಉದಯಪುರದಲ್ಲಿ ನಡೆದ ಭೀಕರ ಹತ್ಯೆಯಿಂದ ನಾನು ತೀವ್ರ ಆಘಾತಕ್ಕೊಳಗಾಗಿದ್ದೇನೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ಈ ಕ್ರೌರ್ಯದಿಂದ ಭಯೋತ್ಪಾದನೆಯನ್ನು ಹರಡುವವರಿಗೆ ತಕ್ಷಣ ಶಿಕ್ಷೆಯಾಗಬೇಕು.ನಾವೆಲ್ಲರೂ ಒಟ್ಟಾಗಿ ದ್ವೇಷವನ್ನು ಸೋಲಿಸಬೇಕು. ನಾನು ಎಲ್ಲರಿಗೂ ಮನವಿ ಮಾಡುತ್ತೇನೆ, ದಯವಿಟ್ಟು ಶಾಂತಿ ಮತ್ತು ಸಹೋದರತ್ವವನ್ನು ಕಾಪಾಡಿಕೊಳ್ಳಿ” ಎಂದು ರಾಹುಲ್ ಗಾಂಧಿ ಹೇಳಿದ್ದರು.
उदयपुर में हुई जघन्य हत्या से मैं बेहद स्तब्ध हूं।
धर्म के नाम पर बर्बरता बर्दाश्त नहीं की जा सकती। इस हैवानियत से आतंक फैलाने वालों को तुरंत सख़्त सज़ा मिले।
हम सभी को साथ मिलकर नफ़रत को हराना है। मेरी सभी से अपील है, कृपया शांति और भाईचारा बनाए रखें।
— Rahul Gandhi (@RahulGandhi) June 28, 2022
ಆ ನಂತರ ಅವರು ಕೇರಳದ ತಮ್ಮ ಸಂಸತ್ ಕ್ಷೇತ್ರ ವಯನಾಡಿಗೆ ಭೇಟಿ ನೀಡಿದ್ದರು. ಆ ವೇಳೆ ಅವರ ಕಚೇರಿ ಮೇಲೆ ಎಸ್‌ಎಫ್‌ಐ ಕಾರ್ಯಕರ್ತರು ದಾಳಿ ಮಾಡಿದ ಕುರಿತು ಪತ್ರಕರ್ತರು ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, “ಇದು ನನ್ನ ಕಚೇರಿ. ಆದರೆ ಅದಕ್ಕೂ ಮುನ್ನ ಇದು ವಯನಾಡಿನ ಜನರ ಕಚೇರಿ. ಇದು ವಯನಾಡಿನ ಜನರ ಧ್ವನಿ. ದುರಾದೃಷ್ಟವಶಾತ್ ಕೆಲವು ಜನರು ಹಿಂಸೆಗಿಳಿದಿದ್ದಾರೆ. ಆದರೆ ಯಾವುದೇ ಸಮಸ್ಯೆಗೆ ಪರಿಹಾರವಾಗುವುದಿಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಈ ರೀತಿ ಮಾಡಿದ ಮಕ್ಕಳು ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಆದರೆ ಅವರ ಬಗ್ಗೆ ನನಗೆ ಯಾವುದೇ ಕೋಪ ಅಥವಾ ದ್ವೇಷವಿಲ್ಲ. ಅವರನ್ನು ಕ್ಷಮಿಸಿದ್ದೇನೆ’ ಎಂದು ಹೇಳಿದ್ದಾರೆ.
'ഇത് എന്റെ ഓഫീസാണ്. പക്ഷേ അതിനും മുൻപ് ഇത് വയനാട്ടിലെ ജനങ്ങളുടെ ഓഫീസ് ആണ്. വയനാട്ടിലെ ജനങ്ങളുടെ ശബ്ദമാണ്. അക്രമം ഒരു പ്രശ്നവും പരിഹരിക്കില്ല. ഇത് ചെയ്ത കുട്ടികൾ നിരുത്തരവാദപരമായാണ് പെറുമാറിയതെങ്കിലും എനിക്കവരോട് വെറുപ്പോ ശത്രുതയോ ഇല്ല.' pic.twitter.com/GXT636LjXl
— Rahul Gandhi – Wayanad (@RGWayanadOffice) July 1, 2022
ವಯನಾಡಿನ ಎಸ್‌ಎಫ್‌ಐ ಕಾರ್ಯಕರ್ತರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದ್ದನ್ನು ಝೀ ನ್ಯೂಸ್ ಉದಯಪುರದ ಹಂತಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂದು ತಿರುಚಿ ಸುದ್ದಿ ಪ್ರಸಾರ ಮಾಡಿದೆ.
ಈ ಕುರಿತು ಕಾಂಗ್ರೆಸ್ ಜಾಲತಾಣದ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಟೆ ಆಕ್ರೋಶ ವ್ಯಕ್ತಪಡಿಸಿದ್ದು, ಎರಡೂ ವಿಡಿಯೋ ತುಣುಕುಗಳನ್ನು ಟ್ವೀಟ್ ಮಾಡಿದ್ದಾರೆ. ಸುಳ್ಳು ಸುದ್ದಿ ಪ್ರಕಟಿಸಿದ ಝಿ ನ್ಯೂಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
1. @RahulGandhi की केरल में अपने दफ़्तर पर SFI कार्यकर्ताओं द्वारा हमला करने वालों को माफ़ करने की बात को Zee News उदयपुर हत्याकांड के दोषियों को माफ़ी के रुप में दिखाता है
2. इस फ़ेक न्यूज़ को भाजपा नेता सोशल मीडिया पर फैला रहे हैं
3. क़ानूनी कार्यवाही होगी, पर पहले सच देखिए pic.twitter.com/g3ZsXyu001
— Supriya Shrinate (@SupriyaShrinate) July 2, 2022
ಇದನ್ನೂ ಓದಿ: ಪತ್ರಕರ್ತ ಜುಬೇರ್ ಮೇಲೆ ಕ್ರಿಮಿನಲ್ ಪಿತೂರಿ, ಸಾಕ್ಷ್ಯ ನಾಶದಂತಹ ಹೊಸ ಪ್ರಕರಣಗಳನ್ನು ಹೇರಿದ ದೆಹಲಿ ಪೊಲೀಸ್


