Homeಮುಖಪುಟಪತ್ರಕರ್ತ ಜುಬೇರ್ ಮೇಲೆ ಕ್ರಿಮಿನಲ್ ಪಿತೂರಿ, ಸಾಕ್ಷ್ಯ ನಾಶದಂತಹ ಹೊಸ ಪ್ರಕರಣಗಳನ್ನು ಹೇರಿದ ದೆಹಲಿ ಪೊಲೀಸ್

ಪತ್ರಕರ್ತ ಜುಬೇರ್ ಮೇಲೆ ಕ್ರಿಮಿನಲ್ ಪಿತೂರಿ, ಸಾಕ್ಷ್ಯ ನಾಶದಂತಹ ಹೊಸ ಪ್ರಕರಣಗಳನ್ನು ಹೇರಿದ ದೆಹಲಿ ಪೊಲೀಸ್

- Advertisement -
- Advertisement -

2018ರ ಹಳೆಯ ಟ್ವೀಟ್ ಒಂದಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಮೊಹಮ್ಮದ್ ಜುಬೇರ್‌ರವರನ್ನು ಬಂಧಿಸಿದ್ದ ದೆಹಲಿ ಪೊಲೀಸರು ಇಂದು ಅವರ ಮೇಲೆ ಕ್ರಿಮಿನಲ್ ಪಿತೂರಿ, ಸಾಕ್ಷ್ಯ ನಾಶದಂತಹ ಹೊಸ ಪ್ರಕರಣಗಳನ್ನು ಹೇರಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ನಿನ್ನೆ ಜುಬೇರ್‌ರವರನ್ನು ಬೆಂಗಳೂರಿನ ನಿವಾಸಕ್ಕೆ ಕರೆತಂದಿದ್ದ ದೆಹಲಿ ಪೊಲೀಸ್ ಮತ್ತು ಇಡಿ ಅಧಿಕಾರಿಗಳು ಅವರ ಲ್ಯಾಪ್‌ಟ್ಯಾಪ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಆ ಬೆನ್ನಲ್ಲೆ ಇಂದು ಅವರ ಮೇಲೆ ಹೊಸ ಪ್ರಕರಣಗಳನ್ನು ಹೇರಲಾಗಿದೆ.

ಸುಳ್ಳು ಸುದ್ದಿ, ದ್ವೇಷ ಭಾಷಣಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಿದ್ದ ಆಲ್‌ನ್ಯೂಸ್‌ ಸಹ ಸಂಪಾದಕ ಜುಬೇರ್‌ರವರನ್ನು ಜೂನ್ 27 ರಂದು ದೆಹಲಿ ಪೊಲೀಸರು ಬಂಧಿಸಿದ್ದರು. ಒಂದು ದಿನದ ಪೊಲೀಸ್ ಕಸ್ಟಡಿಗೆ ನೀಡಿದ್ದ ನ್ಯಾಯಾಲಯ ನಂತರ ನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇಂದು ಅವರ ಜಾಮೀನು ಅರ್ಜಿ ವಿಚಾರಣೆ ನಡೆಯುವ ಮುನ್ನವೇ ದೆಹಲಿ ಪೊಲೀಸರು ಹೊಸ ಪ್ರಕರಣಗಳನ್ನು ಸೇರಿಸುವ ಮೂಲಕ ಅವರು ಮತ್ತಷ್ಟು ದಿನ ಜೈಲಿನಲ್ಲಿ ಇರುವಂತೆ ಮಾಡಿದ್ದಾರೆ.

ಜುಬೇರ್ ಅವರನ್ನು ಬಂಧಿಸಲು ಕಾರಣವಾಗಿರುವ ಅವರು ಟ್ವೀಟ್ ಮಾಡಿದ ಆ ’ಚಿತ್ರ’ ಎಡಿಟ್ ಮಾಡಿರುವ ಚಿತ್ರವಲ್ಲ, ಬದಲಾಗಿ ಅದು 1983ರ ಹಿಂದಿ ಚಲನಚಿತ್ರವಾದ ’ಕಿಸ್ಸಿ ಸೆ ನಾ ಕೆಹನಾ’ದ (ಯಾರಿಗೂ ಹೇಳ್ಬೇಡಿ) ದೃಶ್ಯವಾಗಿದೆ. ಈ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರವನ್ನು ಹೃಷಿಕೇಶ್ ಮುಖರ್ಜಿ ನಿರ್ದೇಶಿಸಿದ್ದು, ಚಲನಚಿತ್ರ ಮಂಡಳಿಯೂ ಅದಕ್ಕೆ ’ಯು’ (ಯೂವಿವರ್ಸಲ್-ಎಲ್ಲರೂ ನೋಡಬಹುದಾದ) ಪ್ರಮಾಣಪತ್ರ ನೀಡಿದೆ. ಅಲ್ಲದೆ ಈ ಚಿತ್ರ ಮತ್ತು ದೃಶ್ಯ ಇನ್ನೂ ಯೂಟ್ಯೂಬ್‌ನಲ್ಲಿ ಇವೆ. ಆ ಪೋಸ್ಟ್‌ನ ಚಿತ್ರದಲ್ಲಿ, ’ಹನಿಮೂನ್ ಹೋಟೆಲ್’ ಎಂಬ ಬೋರ್ಡಿಗೆ ಬಣ್ಣ ಬಳಿದು, ’ಹನುಮಾನ್ ಹೋಟೆಲ್’ ಎಂದು ಹಿಂದಿಯಲ್ಲಿ ಬರೆದಂತೆ ತೋರಿಸಲಾಗಿದೆ. ಅದರೊಟ್ಟಿಗೆ ’2014ಕ್ಕೆ ಮುಂಚೆ ಹನಿಮೂನ್ ಹೋಟೆಲ್ ಇದ್ದಿದ್ದು, 2014ರ ನಂತರ ಹನುಮಾನ್ ಹೋಟೆಲ್’ ಆಗಿ ಬದಲಾಗಲಿದೆ. ಸಂಸ್ಕಾರಿ ಹೋಟೆಲ್ ಎಂದು ಜುಬೇರ್ ಟ್ವೀಟ್ ಮಾಡಿದ್ದರು. ಪ್ರೇಮಿಗಳ ದಿನಕ್ಕೆ ತಡೆಯೊಡ್ಡುತ್ತಿದ್ದ ಬಲಪಂಥೀಯ ಕಾರ್ಯಕರ್ತರ ಧೋರಣೆ ಖಂಡಿಸಿ ವ್ಯಂಗ್ಯವಾಗಿ ಮಾಡಿದ್ದ ಪೋಸ್ಟ್ ಅದಾಗಿತ್ತು.

ಇನ್ನು ಜುಬೇರ್‌ ವಿರುದ್ಧ ದೂರು ನೀಡಿದ್ದು ನಕಲಿ ಟ್ವಿಟರ್ ಖಾತೆ ಆಗಿತ್ತು. ಅದನ್ನು ಕೆಲ ದಿನಗಳ ಹಿಂದೆ ಡಿಲೀಟ್ ಮಾಡಲಾಗಿದೆ. ಅವರ ಬಂಧನದ ಐದು ದಿನಗಳ ನಂತರ ದೆಹಲಿ ಪೊಲೀಸರು ದೂರುದಾರರನ್ನು ಹುಡುಕುತ್ತಿದ್ದಾರೆ. ಇಂತಹ ಸಂದರ್ಭದ್ಲಿ ಹೊಸ ಪ್ರಕರಣ ಹೇರಿರುವುದು ಅನುಮಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ದ್ವೇಷ ಪ್ರಚಾರಕರ, ನಕಲಿ ಸುದ್ದಿ ಸೃಷ್ಟಿಕರ್ತರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಜುಬೇರ್

ಇಷ್ಟಕ್ಕೆ ಅವರನ್ನು ಬಂಧಿಸಿದ ಪೊಲೀಸರು ಈಗ 50 ಲಕ್ಷ ರೂ ಅವರ ಖಾತೆಗೆ ವರ್ಗಾವಣೆಯಾಗಿದೆ ಎಂದೆಲ್ಲಾ ಆರೋಪಿಸಿ ತನಿಖೆ ನಡೆಸುತ್ತಿದ್ದಾರೆ. ಈಗ ಕ್ರಿಮಿನಲ್ ಪಿತೂರಿ, ಸಾಕ್ಷ್ಯ ನಾಶದಂತಹ ಹೊಸ ಪ್ರಕರಣಗಳನ್ನು ಹೇರಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಹಲವರು ಆರೋಪಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇವನು ಪತ್ರಕರ್ತ ಅಲ್ಲಾ ಅಂತ ಈ ಅಯೋಗ್ಯನೇ ಹೇಳಿಕೊಂಡಿದ್ದಾನೇ, ಆದರೂ ಈ ಮೂರ್ಖರು ಅವನನ್ನ ಪತ್ರಕರ್ತ ಅಂತಿರೋದು ನೋಡಿದರೆ ,ಎಂಥ ಬೇವರ್ಸಿಗಳು ಅನ್ನೋದು ತಿಳಿಯುತ್ತೇ

LEAVE A REPLY

Please enter your comment!
Please enter your name here

- Advertisment -

Must Read