Homeಕರ್ನಾಟಕದೇವನೂರ ಮಹದೇವ ಅವರ ಕಿರುಹೊತ್ತಿಗೆ ’ಆರ್‌ಎಸ್‌ಎಸ್- ಆಳ ಮತ್ತು ಅಗಲ’ದಿಂದ ಆಯ್ದ ಅಧ್ಯಾಯ; ಇಂದು, ವರ್ತಮಾನದಲ್ಲಿ...

ದೇವನೂರ ಮಹದೇವ ಅವರ ಕಿರುಹೊತ್ತಿಗೆ ’ಆರ್‌ಎಸ್‌ಎಸ್- ಆಳ ಮತ್ತು ಅಗಲ’ದಿಂದ ಆಯ್ದ ಅಧ್ಯಾಯ; ಇಂದು, ವರ್ತಮಾನದಲ್ಲಿ…

- Advertisement -
- Advertisement -

ಇಂದು, ವರ್ತಮಾನದಲ್ಲಿ ಆರ್‌ಎಸ್‌ಎಸ್ ಸಂತಾನಗಳಲ್ಲಿ ಒಂದಾದ ಬಿಜೆಪಿಯು ಕೇಂದ್ರದಲ್ಲೂ, ಕೆಲವು ರಾಜ್ಯಗಳಲ್ಲೂ ಅಧಿಕಾರದ ಚುಕ್ಕಾಣಿ ಹಿಡಿದಿದೆ. ನಮ್ಮ ಕರ್ನಾಟಕದಲ್ಲೂ ಅಂತು ಇಂತು ಎಂತೊ ಒಟ್ಟಿನಲ್ಲಿ ಅಧಿಕಾರ ಹಿಡಿದಿದೆ. 1975ರ ತುರ್ತು ಪರಿಸ್ಥಿತಿ ಕಾಲದಲ್ಲಿ ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಆಡಳಿತವನ್ನು ವಿರೋಧಿಸುವ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದ ಆಂದೋಲನದೊಳಗೆ ಜನಸಂಘ (ಬಿಜೆಪಿ) ನುಸುಳಿಕೊಂಡಿತು. ಅಂದಿನಿಂದ ಅದರ ಜಾಯಮಾನ ಬೇರೆಯೇ ಆಗಿಬಿಟ್ಟಿತು. ಸಮಾಜದಿಂದ ನಿರಾಕರಣೆಗೆ ಒಳಗಾಗಿದ್ದ ಬಿಜೆಪಿಯು ಸಮಾಜದಲ್ಲಿ ಒಪ್ಪಿತವಾಗತೊಡಗಿತು. ಆ ಸಮಯದಲ್ಲಿ ನೂತನವಾಗಿ ರೂಪಿತವಾಗುವ ಜನತಾ ಪಕ್ಷದಲ್ಲಿ ಸೇರ್ಪಡೆಯಾಗುವ ಮೊದಲು, ಜಯಪ್ರಕಾಶ್ ನಾರಾಯಣ್ ಅವರಿಗೆ ಅಂದಿನ ಆರ್‌ಎಸ್‌ಎಸ್ ಮುಖ್ಯಸ್ಥರೂ ಒಪ್ಪಿಗೆ ನೀಡಿ ಇಂದಿನ ಬಿಜೆಪಿಯಾಗಿರುವ ಅಂದಿನ ಜನಸಂಘವು, ತಾನು ದ್ವಿಸದಸ್ಯತ್ವ ತೊರೆಯುವುದಾಗಿ ವಚನ ನೀಡಿದ್ದವು. ಈ ಮಾತು ಕೊಟ್ಟವರಲ್ಲಿ ಎ.ಬಿ.ವಾಜಪೇಯಿ, ಎಲ್.ಕೆ. ಅದ್ವಾನಿಯವರೂ ಜೊತೆಗೆ ಆರ್‌ಎಸ್‌ಎಸ್ ಮುಖ್ಯಸ್ಥ ಬಾಳಾ ಸಾಹೇಬ ದೇವರಸ್ ಪ್ರಮುಖರು. ಇವರು ಎತ್ತರದ ನಾಯಕರು ಎಂದು ವಿಶ್ವಾಸವಿಟ್ಟಿದ್ದ ಜೆಪಿಯವರು ಅವರ ಮಾತುಗಳನ್ನು ನಂಬಿದ್ದರು. ಆದರೆ ಆರ್‌ಎಸ್‌ಎಸ್ ಮೂಲದವರು ಜನತಾಪಕ್ಷವಾಗಿ ಎಲ್ಲರ ಜೊತೆಯಾದರೂ ಆರ್‌ಎಸ್‌ಎಸ್‌ನೊಡನೆ ತನ್ನ ದ್ವಿಸದಸ್ಯತ್ವ ತೊರೆದುಕೊಳ್ಳಲಿಲ್ಲ. ವಚನಭ್ರಷ್ಟವಾಯ್ತು. ಜೆಪಿಯವರನ್ನು ನಂಬಿಸಿ ದ್ರೋಹ ಮಾಡಿತು. ಜಯಪ್ರಕಾಶ್ ನಾರಾಯಣ್ ಅವರು ತಮ್ಮ ಇಳಿಗಾಲದಲ್ಲಿ ಆರ್‌ಎಸ್‌ಎಸ್ ಮೂಲದವರ ದ್ರೋಹವನ್ನು ನೆನಪಿಸಿಕೊಂಡು ’ನನಗೆ ವಿಶ್ವಾಸದ್ರೋಹ ಬಗೆದರು’ ಎನ್ನುತ್ತ ಪರಿತಪಿಸುತ್ತಾರೆ. (1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣರನ್ನು ಚಂಡಿಗಢದಲ್ಲಿ ಗೃಹಬಂಧನದಲ್ಲಿಟ್ಟಿದ್ದಾಗ ಜೆಪಿಯವರನ್ನು ಗಮನಿಸುವ ಉಸ್ತುವಾರಿಯಾಗಿ ಅಲ್ಲಿನ ಜಿಲ್ಲಾಧಿಕಾರಿಗಳಾದ ಎಂ.ಜಿ.ದೇವಸಹಾಯಂ ಅವರನ್ನು ನೇಮಿಸಿರುತ್ತದೆ. ದಿನನಿತ್ಯದ ಒಡನಾಟದಲ್ಲಿ ಅವರು ಜೆಪಿಯವರ ಆತ್ಮೀಯರಾಗಿಬಿಡುತ್ತಾರೆ. ಬಿಡುಗಡೆಯಾದ ಮೇಲೂ ಅವರ ಒಡನಾಟ ಮುಂದುವರಿಯುತ್ತದೆ. ಶ್ರೀ ಎಂ.ಜಿ.ದೇವಸಹಾಯಂ ಅವರು ಅಜಾಜ್ ಅಶ್ರಫ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮೇಲ್ಕಂಡ ಉಲ್ಲೇಖಿತ ಮಾತುಗಳು ಬರುತ್ತವೆ. ಇದು ನ್ಯೂಸ್‌ಕ್ಲಿಕ್ ಅಂತರ್‌ಜಾಲ ಪತ್ರಿಕೆಯಲ್ಲಿ 26 ಜೂನ್, 2019ರಂದು ಪ್ರಕಟವಾಗಿದೆ.)

ಅಲ್ಲಿಂದ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಘಪರಿವಾರದ ವಂಚನಾ ಪರ್ವ ದೇಶದ ಉದ್ದಗಲಕ್ಕೂ ವ್ಯಾಪಿಸುತ್ತದೆ. ಪಾಕಿಸ್ತಾನವನ್ನು ಶಾಶ್ವತ ಶತ್ರುರಾಷ್ಟ್ರವಾಗಿ ಬಿಂಬಿಸುತ್ತ ಇಲ್ಲಿ ಸಣ್ಣಪುಟ್ಟ ಗಲಾಟೆಗಳಾದರೂ ಅದಕ್ಕೆಲ್ಲಾ ಪಾಕಿಸ್ತಾನವೇ ಕಾರಣವೆಂದು ಪ್ರಚಾರ ಮಾಡುತ್ತಾ, ಪರಸ್ಪರ ಎತ್ತಿಕಟ್ಟುತ್ತಾ, ಸಮಾಜದಲ್ಲಿ ಭೀತಿ ವಾತಾವರಣ ಉಂಟುಮಾಡುತ್ತಾ, ಕೆಲವು ಸಲ ತಾವೇ ಗಲಾಟೆ ಮಾಡಿ ಅದನ್ನು ಮುಸ್ಲಿಮರ ಮೇಲೆ ಆರೋಪಿಸುತ್ತಾ, ಒಟ್ಟಿನಲ್ಲಿ ಎಲ್ಲರ ನೆಮ್ಮದಿ ಕೆಡಿಸಿ ಉಂಟಾದ ಗೊಂದಲ, ಅನುಮಾನ, ದ್ವೇಷದ ವಾತಾವರಣದಲ್ಲಿ ಬಿಜೆಪಿ ಅಧಿಕಾರಕ್ಕೂ ಬಂದುಬಿಟ್ಟಿತು. ಈಗ, ನೂರಾರು ಪಂಥಗಳ, ನಾಕಾರು ಧರ್ಮಗಳ ವೈವಿಧ್ಯಮಯ ಸಮೃದ್ಧ ವಿಶಾಲ ಹಿಂದೂ ಧರ್ಮವೂ ಜಯಪ್ರಕಾಶ್ ನಾರಾಯಣ್‌ರಂತೆ ’ತಾನು ಮೋಸ ಹೋದೆ’ ಅಂತ ಪರಿತಪಿಸುವಂತಾಗಿದೆ.

ಜಯಪ್ರಕಾಶ್ ನಾರಾಯಣ್

ಬಿಜೆಪಿಯು ತಾನು ಅಧಿಕಾರಕ್ಕೆ ಬರುವ ಮೊದಲು, ಕೊಟ್ಟ ಮಾತುಗಳೆಷ್ಟು, ತೊಟ್ಟ ವೇಷಗಳೆಷ್ಟು? ಒಂದೇ? ಎರಡೆ? ವಿದೇಶಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣ ತಂದು ಎಲ್ಲಾ ಭಾರತೀಯರ ಅಕೌಂಟ್‌ಗೆ 15 ಲಕ್ಷ ಹಾಕುತ್ತೇವೆ ಅಂದರು. ಸ್ವತಃ ಪ್ರಧಾನಿ ಮೋದಿಯವರೇ ಅಂದರು. ಯಾರಿಗೆ ಬಂತು? ಬಂದಿದ್ದರೆ ಎಲ್ಲಿಗೆ ಹೋಯಿತು? ಆಮೇಲೆ ಮೋದಿಯವರೇ ವರ್ಷಕ್ಕೆ ಕೋಟಿಗಟ್ಟಲೆ ಉದ್ಯೋಗ ಸೃಷ್ಟಿಸುತ್ತೇವೆಂದರು. ಎಂದೂ ಇಲ್ಲದಷ್ಟು ನಿರುದ್ಯೋಗ ಹೆಚ್ಚಿಸಿಬಿಟ್ಟರು! ಹೇಳುವವರು ಯಾರು? ಕೇಳುವವರು ಯಾರು? ರೈತರ ಆದಾಯವನ್ನು ದುಪ್ಪಟ್ಟುಗೊಳಿಸುತ್ತೇವೆಂದರು. ಇರುವ ಆದಾಯವನ್ನಾದರೂ ಉಳಿಯಗೊಡಿಸಲಿಲ್ಲ. ನೆಲಕಚ್ಚಿಸಿಬಿಟ್ಟರು. ಇವರು ಯಾವುದನ್ನೂ ಉಳಿಯಗೊಳಿಸುತ್ತಿಲ್ಲ. ಸಾರ್ವಜನಿಕ ಸಂಪತ್ತನ್ನು ಖಾಸಗಿಗೆ ಮಾರುತ್ತ ಬದುಕುತ್ತಿದ್ದಾರೆ. ವಿದೇಶಿ ಸಾಲವನ್ನೂ ಎಂದೂ ಇಲ್ಲದಷ್ಟು ಹೆಚ್ಚು ಮಾಡಿದ್ದಾರೆ. ಇದನ್ನೆಲ್ಲಾ ನೋಡಿದಾಗ ಇವರು ಮರಳಲ್ಲೆ ಮನೆಕಟ್ಟುತ್ತ ಬಣ್ಣದ ಮಾತುಗಳನ್ನು ಆಡುತ್ತ ಭಾರತವನ್ನು ಪಾಪರ್ ಮಾಡಿಬಿಡುತ್ತಾರೇನೊ ಅನ್ನಿಸಿಬಿಡುತ್ತದೆ. ಇವರ ಆಳ್ವಿಕೆಯಲ್ಲಿ ನಿರುದ್ಯೋಗ ಹೆಚ್ಚಾದರೂ ಇವರಿಗೆ ಸಮಸ್ಯೆ ಅಲ್ಲ; ಬೆಲೆ ಏರಿಕೆ ಹೆಚ್ಚಾದರೂ ಇವರಿಗೆ ಸಮಸ್ಯೆ ಅಲ್ಲ. ಜನಸಮುದಾಯಗಳ ನಡುವೆ ದ್ವೇಷದ ಕಿಡಿ ಹಚ್ಚಿ ಅದರಲ್ಲಿ ಜನ ಕುದಿಯುವಂತೆ ಮಾಡಿ ಅವರ ಹೊಟ್ಟೆಗೆ ದ್ವೇಷದ ಆಹಾರ ನೀಡಿ ಮಲಗಿಸುತ್ತಿದೆ- ಹೀಗಿದೆ ಇವರ ಆಳ್ವಿಕೆ. ಬಿಜೆಪಿಗೆ ಮತ ನೀಡಿ ಅವರನ್ನು ಅಧಿಕಾರದ ಗದ್ದುಗೆ ಮೇಲೆ ಕೂರಿಸಿದ ಮತದಾರರೂ ಇಂದು ಪರಿತಪಿಸಬೇಕಾಗಿದೆ.

ಇದಕ್ಕೆಲ್ಲಾ ಕಾರಣ, ಇಂದು ಭಾರತದಲ್ಲಿ ಪ್ರಜೆಗಳ ಪ್ರಭುತ್ವದ ಸ್ಥಿತಿಯು ಗತಿಗೆಟ್ಟಿದೆ. ಪ್ರಜೆಗಳಿಂದ ಆಯ್ಕೆಯಾದ ಪ್ರಜಾಪ್ರತಿನಿಧಿಯು ತನ್ನನ್ನು ಆಯ್ಕೆ ಮಾಡಿದ ಪ್ರಜೆಗಳ ಕಷ್ಟಸುಖಕ್ಕೆ ಹಿತಾಸಕ್ತಿಗೆ ನಿಷ್ಠನಾಗಿಲ್ಲ. ಇದಕ್ಕೆ ಕಾರಣ ಭಾರತದ ರಾಜಕೀಯ ಪಕ್ಷಗಳ ಚಹರೆ ನೋಡಿದರೆ, (1) ಏಕವ್ಯಕ್ತಿ ನಿಯಂತ್ರಿತ ಪಕ್ಷ ರಾಜಕಾರಣ (2) ಕುಟುಂಬ ನಿಯಂತ್ರಿತ ಪಕ್ಷ ರಾಜಕಾರಣ (3) ಸಂವಿಧಾನೇತರ ಸಂಘ/ಸಂಘಟನೆ ನಿಯಂತ್ರಿತ ಪಕ್ಷ ರಾಜಕಾರಣ, ಈ ಮೂರು ಬಗೆಯ ಪಕ್ಷಗಳು ಭಾರತದಲ್ಲಿ ಒಂದಲ್ಲಾ ಒಂದು ಕಡೆ ಆಳ್ವಿಕೆ ನಡೆಸುತ್ತಿವೆ. ಈ ಮೂರೂ ಪ್ರಜಾಪ್ರಭುತ್ವಕ್ಕೆ ಮಾರಕವಾದವುಗಳು. ದೇಶದ ಚುಕ್ಕಾಣಿಯನ್ನು ಮೂರನೆಯ ಸಂವಿಧಾನೇತರ ಸಂಘ/ಸಂಘಟನೆ ನಿಯಂತ್ರಿತ ಪಕ್ಷ ಬಿಜೆಪಿ ಹಿಡಿದಿದೆ. ಈ ಮೂರೂ ಪಕ್ಷಗಳಿಂದ ಆಯ್ಕೆಯಾದವರ ನಿಷ್ಠೆಯು ತನ್ನನ್ನು ಆಯ್ಕೆ ಮಾಡಿದ ಮತದಾರರ ಹಿತಕ್ಕಿಂತಲೂ ಹೆಚ್ಚಾಗಿ ತನ್ನ ಪಕ್ಷವನ್ನು ನಿಯಂತ್ರಿಸುವ ವ್ಯಕ್ತಿಗೆ/ಕುಟುಂಬಕ್ಕೆ ಇರುವಂತೆ, ಸಂವಿಧಾನೇತರ ಸಂಘ/ಸಂಘಟನೆ ನಿಯಂತ್ರಿಸುವ ಪಕ್ಷದ ಪ್ರಜಾಪ್ರತಿನಿಧಿಗಳ ನಿಷ್ಠೆ ಆ ಸಂವಿಧಾನೇತರ ಸಂಘಕ್ಕೇನೆ ಹೆಚ್ಚು ಇರುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ಎಲ್ಲಕ್ಕಿಂತ ಹೆಚ್ಚು ಡೇಂಜರ್. ಇಂದು ಬಿಜೆಪಿಯ ಶಾಸಕ, ಸಂಸದ, ಸಚಿವರು ಅಥವಾ ಯಾವುದೇ ನಾಯಕನು ನಾ ಮುಂದು ತಾ ಮುಂದು ಎಂಬಂತೆ ತನ್ನ ಬಿಜೆಪಿಯ ರಾಜಕಾರಣವನ್ನು ನಿಯಂತ್ರಿಸುವ ಆರ್‌ಎಸ್‌ಎಸ್ ಮೆಚ್ಚಿಸಲು ಅಬ್ಬರಿಸುವುದಕ್ಕೆ ಇದಲ್ಲದೆ ಬೇರೆ ಕಾರಣ ಇರಲಾರದು!

ಇಲ್ಲಿ ಇನ್ನೊಂದು ಗಮನಿಸಬೇಕು. ಉದಾಹರಣೆಗೆ ಬಿಜೆಪಿಗೆ ಬಹುಮತ ತಂದು ಕೊಟ್ಟು ಪ್ರಧಾನಿಯಾದ ಮೋದಿಯವರು ಬಲಿಷ್ಠ ನಾಯಕರೆಂಬಂತೆ ಬಿಂಬಿತವಾಗುತ್ತಿದ್ದಾರೆ. ಆದರೆ ಇವರು ಉತ್ಸವಮೂರ್ತಿ ಅಷ್ಟೆ. ಆದರೆ ಮೂಲ ದೇವರಾದ ಆರ್.ಎಸ್.ಎಸ್ ನಾಗಪುರದ ಗುಡಿಯಲ್ಲಿ ಕೂತಿರುತ್ತಿತ್ತು. ಉತ್ಸವಮೂರ್ತಿ ದೇಶದ ಉದ್ದಗಲಕ್ಕೂ ವಿಜೃಂಭಿಸುತ್ತಿರುತ್ತದೆ. ಜೈ ಜೈ ಅನ್ನಿಸಿಕೊಳ್ಳುತ್ತಿರುತ್ತದೆ. ಉತ್ಸವಮೂರ್ತಿಗೆ ಬೇಕಾದ ಸಾಮರ್ಥ್ಯ ಎಂದರೆ ಪ್ರದರ್ಶನ ನೀಡುವ ಕಲೆಗಾರಿಕೆ ಹಾಗೂ ತನ್ನ ಆಳ್ವಿಕೆಯಲ್ಲಿ ಸಮಸ್ಯೆಗಳು ಉಲ್ಬಣವಾಗಿ ನಿಯಂತ್ರಣ ತಪ್ಪುತ್ತಿರುವಾಗ, ಅದನ್ನು ಭಾವನಾತ್ಮಕವಾಗಿ ತಿರುಗಿಸಿ ಮರೆಮಾಚುವ ಚಾಣಾಕ್ಷತನ ಹಾಗೂ ಜನರನ್ನು ಮರುಳು ಮಾಡುವ ಮೋಡಿ ವಿದ್ಯೆ ಹಾಗೂ ಗರ್ಭಗುಡಿ ದೇವರಿಗೆ ಪರಮ ನಿಷ್ಠೆ. ಇದಿಷ್ಟೆ ಬೇಕಾಗಿರುವುದು. ಇದಿಷ್ಟ ಅಲ್ಲವೇ ಇಂದು ಆಗುತ್ತಿರುವುದು? ಮತ್ತು ಇಂಥ ಕಡೆ ಪ್ರಜಾಪ್ರಭುತ್ವಕ್ಕೆ ಸಂಭವನೀಯ ಇನ್ನೊಂದು ದುರಂತವೆಂದರೆ, ಸಂವಿಧಾನೇತರ ಸಂಘ ನಿಯಂತ್ರಿತ ಪಕ್ಷದ ನಾಯಕತ್ವದ ಪಟ್ಟವು ಗರ್ಭಗುಡಿಯಲ್ಲಿರುವ ದೇವರು ಹೂ ಕೊಟ್ಟಂತೆ ನಿರ್ಧರಿಸಲ್ಪಡುತ್ತದೆ, ಎಲ್ಲವೂ ತೊಗಲುಗೊಂಬೆ ಆಟದಂತೆ! ಹಾಲಿ ನಾಟಕವಾಡುತ್ತಿರುವ ತೊಗಲುಗೊಂಬೆಗಿಂತಲೂ ಇನ್ನೊಂದು ಹೆಚ್ಚು ಬಣ್ಣದ, ಹೆಚ್ಚು ನಿಷ್ಠೆ ಅಥವಾ ರಾಜಕೀಯ ಬೇರಿಲ್ಲದ ಮತ್ತು ಕಡ್ಡಾಯವಾಗಿ ತಾಳಕ್ಕೆ ಕುಣಿಯುವ, ಹೆಚ್ಚು ಮರುಳು ಮಾಡುವ ಹೊಸ ತೊಗಲುಗೊಂಬೆ ಸಿಕ್ಕರೆ ಅದು ರಂಗಪ್ರವೇಶ ಮಾಡುತ್ತದೆ. ಅದು ನಾಯಕ ಆಗುತ್ತದೆ. ಮೊದಲು ನಾಯಕ ಆಟ ಆಡಿದ್ದು ಮೂಲೆಗೆ ಎಸೆಯಲ್ಪಡುತ್ತದೆ. ಪ್ರಜೆಗಳಿಂದ ಆಯ್ಕೆಯಾದವರ ಪರಿಸ್ಥಿತಿಯೆ ಹೀಗಾದರೆ? ಇದು ಘನಘೋರ. ಪ್ರಜಾಪ್ರಭುತ್ವಕ್ಕೆ ಇದೇ ಎಲ್ಲಕ್ಕಿಂತಲೂ ತುಂಬಾ ಅಪಾಯಕಾರಿ ಬೆಳವಣಿಗೆ.

ಕೊರೊನಾ ಉಲ್ಭಣ: ಗುರುವಾರ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿರುವ ಮೋದಿ? | naanu gauriಇವೆಲ್ಲಾ ಕೂಡಿಕೊಂಡು ಜನಜೀವನ ಘನಘೋರವಾಗಿದೆ. ಸಂವಿಧಾನೇತರ ಸಂಘ/ಸಂಘಟನೆ ನಿಯಂತ್ರಿತ ಪಕ್ಷವಾದ ಬಿಜೆಪಿಯ ನೇತಾರ, ದೇಶದ ಪ್ರಧಾನಿಗೆ ಸಾಮರ್ಥ್ಯ ಇದ್ದಿದ್ದರೆ ನಿರುದ್ಯೋಗ ಕಮ್ಮಿ ಆಗುತ್ತಿತ್ತು. ಬೆಲೆ ಏರಿಕೆ ನಿಯಂತ್ರಣದಲ್ಲಿರುತ್ತಿತ್ತು. ಸಾರ್ವಜನಿಕ ಸಂಪತ್ತನ್ನು ಮಾರುತ್ತ ನಡೆಸುತ್ತಿರಲಿಲ್ಲ. ವಿದೇಶಿ ಸಾಲ ಹೆಚ್ಚು ಮಾಡುತ್ತಿರಲಿಲ್ಲ. ಭಾರತದ ಸ್ವಾಯತ್ತ ಸಂಸ್ಥೆಗಳ ಹಲ್ಲು, ಉಗುರು ಕಿತ್ತು ನಿಸ್ತೇಜಗೊಳಿಸುತ್ತಿರಲಿಲ್ಲ. ಪ್ರಧಾನಿ ಮೋದಿ ದುನಿಯಾದಲ್ಲಿ ಕೊರೊನಾಕ್ಕೆ ಮೊದಲು 2020ರಲ್ಲಿ ಅಂಬಾನಿಯವರ ಒಟ್ಟು ಸಂಪತ್ತು 2.86 ಲಕ್ಷ ಕೋಟಿ ಇತ್ತು. ಕೇವಲ ಎರಡೇ ವರ್ಷಗಳಲ್ಲಿ (ಜೂನ್ 10, 2022) ಅದು 8,03 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ! ಹೀಗೆಯ ಅದಾನಿಯವರ ಒಟ್ಟು ಸಂಪತ್ತು ಕೊರೋನಾಕ್ಕೆ ಮೊದಲು 2020ರಲ್ಲಿ 65 ಸಾವಿರ ಕೋಟಿಗಳಷ್ಟು ಇತ್ತು, ಅಂದರೆ ಅಣ್ಣ ಅಂಬಾನಿಯ ಸಂಪತ್ತಿನ ಕಾಲುಭಾಗದಲ್ಲಿ ಕಾಲು ಭಾಗವೂ ಇರಲಿಲ್ಲ! ಹೀಗಿದ್ದ ಅದಾನಿಯವರ ಸಂಪತ್ತು ಕೇವಲ ಎರಡು ವರ್ಷಗಳಲ್ಲಿ (ಜೂನ್ 10, 2022) 7.80 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ. (ಉಲ್ಲೇಖ: FORBES Magazine) ಒಂದೇ ಎರಡೆ? ಭಾರತವು ಭೀಕರ ಅಸಮಾನತೆ, ಅಸಮತೋಲನಗಳಿಂದ ಸೂತ್ರ ಕಿತ್ತ ಪಟದಂತೆ ಗೋತ ಹೊಡೆಯುತ್ತಾ ಹಾರಾಡುತ್ತಿದೆ! ಆದರೂ ಸಂಪತ್ತು ಉಳ್ಳವರಿಗೆ ಸರ್ಕಾರದ ಎಲ್ಲಾ ರಿಯಾಯಿತಿ, ತೆರಿಗೆಯಲ್ಲೂ ಕಡಿತ, ಅವರ ಹಿಂತಿರುಗಿಸದ ಸಹಸ್ರಾರು ಕೋಟಿ ಸಾಲವನ್ನು Write off ಮಾಡಿ, ಅಂದರೆ ಅದು ಮುಂದೊಂದು ದಿನ ಬರುತ್ತದೆಂದು ಅದರ ಲೆಕ್ಕಾಚಾರವನ್ನು ಪಕ್ಕಕ್ಕಿಟ್ಟು ಮತ್ತೆ ಅವರಿಗೆ ಸಾಲಕ್ಕೆ ಅವಕಾಶ ಕಲ್ಪಿಸುವುದೇ ಮುಂತಾದವಕ್ಕೆ ಮಾತ್ರ ಈ ಸರ್ಕಾರ ಇದೆಯೇನೋ ಅನಿಸುತ್ತದೆ. ಈ ಸರ್ಕಾರ ಯಾರಿಗಾಗಿ ಇದೆ? ಇಡೀ ಭಾರತದ ಜನತೆ ಈಗ ತಲೆ ಮೇಲೆ ಕೈ ಹೊತ್ತು ಚಿಂತಿಸಬೇಕಾಗಿದೆ.

ಆದರೆ ಶತಾಯಗತಾಯ ಏನೇ ಆಗಲಿ, ಪ್ರಜೆಗಳು ಸಮಸ್ಯೆಗಳಿಂದ ತತ್ತರಿಸುತ್ತಿರಲಿ, ಏನೇ ಬರಲಿ, ಅಥವಾ ಏನೇ ಆಗಲಿ, ದೇಶ ಧೂಳೀಪಟವಾದರೂ ಸರಿಯೇ, ಸಂವಿಧಾನೇತರ ಸಂಘ ನಿಯಂತ್ರಿತ ಪಕ್ಷ ಬಿಜೆಪಿಯು ದೇಶಪ್ರೇಮ ಜಪಿಸುತ್ತ ತರುತ್ತಿರುವ ಕಾನೂನುಗಳೊ ತಿದ್ದುಪಡಿಗಳೊ ಅದರಲ್ಲಿ ಮಾತ್ರ ಚಾತುರ್ವರ್ಣ ಪದ್ಧತಿ, ಮನುಧರ್ಮಶಾಸ್ತ್ರ ನುಸುಳುವಿಕೆ, ಭಾರತ ಸಂವಿಧಾನದ ಧ್ವಂಸ, ಇಸ್ಲಾಂ, ಕ್ರಿಶ್ಚಿಯನ್ ಅಸಹನೆ, ಜೊತೆಗೆ ಆರ್ಯನ್ ಶ್ರೇಷ್ಠತೆ ಇವು ಇದ್ದಿರಲೇಬೇಕು. ಇವು ಹುಡುಕಿದರೆ ಸಿಗುತ್ತಾ ಹೋಗುತ್ತವೆ. ಈಗಾಗಲೇ, ಕರ್ನಾಟಕದಲ್ಲಿ ತಂದಿರುವ ’ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣೆ ಕಾಯ್ದೆ’ ಮೇಲ್ನೋಟಕ್ಕೆ ಇದು ಏನೋ ಒಂದು ಕಾಯ್ದೆ ಎಂಬಂತಿದೆ.ಇದರ ಹೊಟ್ಟೆ ಒಳಗೆ ಭಾರತ ಸಂವಿಧಾನದ ಧ್ವಂಸ ಹಾಗೂ ಮನುಧರ್ಮ ಶಾಸ್ತ್ರದ ಪ್ರತಿಷ್ಠಾಪನೆ ಇದೆ. ಸಂವಿಧಾನದ ಪ್ರಕಾರ ಇರುವ ಸ್ವಾತಂತ್ರ್ಯದ ಬಗ್ಗೆ ನಾವೆಲ್ಲರೂ ಮಾತಾಡುತ್ತೇವೆ. ಆದರೆ ಆರ್‌ಎಸ್‌ಎಸ್‌ಗೆ
’ಸ್ವಾತಂತ್ರ್ಯ’ದ ಅರ್ಥವೇ ಬೇರೆ. ಆರ್‌ಎಸ್‌ಎಸ್‌ನ ಗುರೂಜಿ ಗೋಲ್ವಾಲ್ಕರ್ ಅವರು ’ನಮ್ಮ ರಾಷ್ಟ್ರೀಯ ಜೀವನ ಮೌಲ್ಯ’ವನ್ನು, ಎಂದರೆ ನಮ್ಮ ’ಧರ್ಮ’ ಮತ್ತು ’ಸಂಸ್ಕೃತಿ’ಯನ್ನು ರಕ್ಷಿಸಿ ಪ್ರಸಾರ ಮಾಡುವುದೇ ’ಸ್ವತಂತ್ರ’ತೆಯ ಅಸ್ತಿತ್ವಕ್ಕೆ ’ಮೂಲ ಸ್ಫೂರ್ತಿ’ ಎಂಬುದು ನಮ್ಮ ಚಾರಿತ್ರಿಕ ಸಂಪ್ರದಾಯದ ದೃಷ್ಟಿ’ ಎಂದು ತಮ್ಮ ’ಚಿಂತನಗಂಗಾ’ ಕೃತಿಯಲ್ಲಿ ಹೇಳುತ್ತಾರೆ. ಆರ್‌ಎಸ್‌ಎಸ್ ಸಂತಾನ ಬಿಜೆಪಿಗೆ ಅವರ ಗುರು ಗೋಲ್ವಾಲ್ಕರ್ ಅವರ ಮಾತೇ ಸಂವಿಧಾನವಾಗಿದೆ.

ಗೌರಿ ಮೀಡಿಯಾ ಟ್ರಸ್ಟ್ ಪ್ರಕಟಿಸಿರುವ
ದೇವನೂರ ಮಹಾದೇವರವರ ಹೊಸ ಪುಸ್ತಕ
ಆರ್ ಎಸ್ ಎಸ್ – ಆಳ ಮತ್ತು ಅಗಲ
ಬೆಲೆ-40

ಪುಸ್ತಕ ಕೊಳ್ಳಲು ಲಿಂಕ್ ಮೇಲೆ ಕ್ಲಿಕ್ ಮಾಡಿ.

ಒಂದು ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

10 ಪ್ರತಿಗಳ ಗುಚ್ಚ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

20 ಪ್ರತಿಗಳನ್ನು ಕೊಂಡು ಪ್ರೋತ್ಸಾಹಿಸಲು ಈ ಲಿಂಕ್ ಫಾಲೋ ಮಾಡಿ..

ದೇವನೂರ ಮಹದೇವ

ದೇವನೂರ ಮಹದೇವ
ಕನ್ನಡದ ಖ್ಯಾತ ಸಾಹಿತಿ. ’ಕುಸುಮಬಾಲೆ’, ’ಒಡಲಾಳ ಮತ್ತು ಇತರ ಕಥೆಗಳು’, ’ಎದೆಗೆ ಬಿದ್ದ ಅಕ್ಷರ’ ಪುಸ್ತಕಗಳ ಮೂಲಕ ಮನೆಮಾತಾಗಿದ್ದಾರೆ.


ಇದನ್ನೂ ಓದಿ: ಚೀನಾವೂ ಭಾರತಕ್ಕೆ ಸೇರಿತ್ತು; ಪಠ್ಯಕ್ಕೆ ನುಸುಳಿದೆ ‘ಆರ್‌ಎಸ್‌ಎಸ್‌ ಅಖಂಡ ಭಾರತ!’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...