Homeರಾಷ್ಟ್ರೀಯಉದಯಪುರ ಟೈಲರ್‌ ಹತ್ಯೆ: BJP-RSS ಅಂಗಸಂಸ್ಥೆ ಎಂಆರ್‌ಎಂ ನಾಯಕನ ಸಂಪರ್ಕದಲ್ಲಿದ್ದ ಕೊಲೆ ಆರೋಪಿ?

ಉದಯಪುರ ಟೈಲರ್‌ ಹತ್ಯೆ: BJP-RSS ಅಂಗಸಂಸ್ಥೆ ಎಂಆರ್‌ಎಂ ನಾಯಕನ ಸಂಪರ್ಕದಲ್ಲಿದ್ದ ಕೊಲೆ ಆರೋಪಿ?

- Advertisement -
- Advertisement -

ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ರಿಯಾಜ್ ಅತ್ತಾರಿ ಮತ್ತು ಮೊಹಮ್ಮದ್ ಗೌಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಹತ್ಯೆ ಆರೋಪಿಯೊಬ್ಬ ಬಿಜೆಪಿ ಜೊತೆಗೆ ಸಂಪರ್ಕದಲ್ಲಿದ್ದ ಎಂದು ಇಂಡಿಯಾ ಟುಡೆ ಮಾಡಿರುವ ತನಿಖಾ ವರದಿ ಶುಕ್ರವಾರ ಬಹಿರಂಗಪಡಿಸಿದೆ. ಜೊತೆಗೆ RSS ಅಂಗಸಂಸ್ಥೆ ಎಂಆರ್‌ಎಂ ನಾಯಕ ಎಂದು ಪ್ರತಿಪಾದಿಸಲಾಗಿರುವ ವ್ಯಕ್ತಿಯ ಜೊತೆಗೆ ಆರೋಪಿ ಇದ್ದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಹತ್ಯೆ ಆರೋಪಿಗಳಲ್ಲಿ ಒಬ್ಬನಾಗಿರುವ ರಿಯಾಜ್‌ ಅತ್ತಾರಿ ಉದಯಪುರದ ಬಿಜೆಪಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದನು ಎಂದು ಇಂಡಿಯಾ ಟುಡೆ ವರದಿ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕಳೆದ ಹತ್ತು ವರ್ಷಗಳಿಂದ ರಾಜಸ್ಥಾನದ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯರಾಗಿರುವ ಇರ್ಷಾದ್ ಚೈನ್‌ವಾಲಾ ಅವರು, ಆರೋಪಿ ರಿಯಾಜ್‌ ಅತ್ತಾರಿ 2019 ರಲ್ಲಿ ತೀರ್ಥಯಾತ್ರೆಗೆ ತೆರಳಿ ಹಿಂದಿರುಗಿದಾಗ ಸ್ವಾಗತಿಸಿದ್ದರು. ಈ ಚಿತ್ರವನ್ನು ಇಂಡಿಯಾ ಟುಡೆ ತನ್ನ ತನಿಖಾ ವರದಿಯಲ್ಲಿ ಬಹಿರಂಗ ಪಡಿಸಿದೆ.

ಹತ್ಯೆ ಆರೋಪಿ ರಿಯಾಜ್‌ ಅತ್ತಾರಿಗೆ ಹಾರ ಹಾಕಿ ಸ್ವಾಗತಿಸುತ್ತಿರುವ ಚೈನ್‌ವಾಲಾ

ಈ ಬಗ್ಗೆ ಇಂಡಿಯಾ ಟುಡೆ ಇರ್ಷಾದ್‌ ಚೈನ್‌ವಾಲಾ ಅವರನ್ನು ಮಾತನಾಡಿಸಿದ್ದು, ಆರೋಪಿ ರಿಯಾಜ್ ಅತ್ತಾರಿ ಉದಯಪುರದಲ್ಲಿ ನಡೆಯುತ್ತಿದ್ದ ಬಿಜೆಪಿ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದ ಎಂದು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ತಾಲಿಬಾನೀಕರಣ ಸಹಿಸುವುದಿಲ್ಲ: ಉದಯ್‌ಪುರ್‌ ಘಟನೆಗೆ ರಾಜಕಾರಣಿಗಳು, ಧಾರ್ಮಿಕ ಮುಖಂಡರ ತೀವ್ರ ವಿರೋಧ

ಆರೋಪಿ ರಿಯಾಜ್‌ ಅತ್ತಾರಿಗೆ ಹಾರ ಹಾಕಿ ಸ್ವಾಗತಿಸುತ್ತಿರುವ ಚಿತ್ರದ ಬಗ್ಗೆ ಮಾತನಾಡಿರುವ ಚೈನ್‌ವಾಲಾ, “ಈ ಚಿತ್ರ ನನ್ನದು. ತೀರ್ಥ ಯಾತ್ರೆಗೆ ತೆರಳಿ ವಾಪಾಸಾದಾಗ ನಾನು ಅವರಿಗೆ ಹಾರ ಹಾಕಿ ಸ್ವಾಗತಿಸಿದ್ದೆ” ಎಂದು ಹೇಳಿದ್ದಾರೆ.

ಆರೋಪಿ ಬಿಜೆಪಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರೆ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಚೈನ್‌ವಾಲಾ, “ಬಿಜೆಪಿ ನಾಯಕ ಗುಲಾಬ್ ಚಂದ್ ಕಟಾರಿಯಾ ಅವರ ಅನೇಕ ಕಾರ್ಯಕ್ರಮಗಳಲ್ಲಿ ಆರೋಪಿ ಭಾಗವಹಿಸಿದ್ದನು” ಎಂದು ಹೇಳಿದ್ದಾರೆ.

ಆರೋಪಿ ರಿಯಾಜ್ ಬಿಜೆಪಿ ಕಾರ್ಯಕ್ರಮಗಳಲ್ಲಿ ಆಹ್ವಾನಿಸದೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದನು ಎಂದು ಚೈನ್‌ವಾಲಾ ಹೇಳಿದ್ದಾರೆ. “ಅವನು ತಾನಾಗಿಯೆ ಬರುತ್ತಿದ್ದ, ಅವನು ಪಕ್ಷದಲ್ಲಿ ಕೆಲಸ ಮಾಡಲು ಬಯಸಿದ್ದನು. ಆದರೆ ಖಾಸಗಿಯಾಗಿ ರಿಯಾಜ್‌ ಬಿಜೆಪಿಯ ಕಟುಟೀಕಾಕರರಾಗಿದ್ದನು” ಎಂದು ಚೈನ್‌ವಾಲಾ ವಿವರಿಸಿದ್ದಾರೆ.

ಆರೋಪಿ ರಿಯಾಜ್ ಅತ್ತಾರಿ, ಬಿಜೆಪಿ ಕಾರ್ಯಕರ್ತ ಮೊಹಮ್ಮದ್ ತಾಹಿರ್ ಎಂಬ ವ್ಯಕ್ತಿಯ ಮೂಲಕ ಬಿಜೆಪಿ ಕಾರ್ಯಕ್ರಮಗಳಿಗೆ ಆಗಮಿಸುತ್ತಿದ್ದನು ಎಂದು ಚೈನ್‌ವಾಲಾ ಹೇಳಿದ್ದಾರೆ. “ತಾಹಿರ್ ನಮ್ಮ ಕಾರ್ಯಕರ್ತನಾಗಿದ್ದು. ತಾಹಿರ್‌ ಅವರಿಗೆ ಆರೋಪಿ ರಿಯಾಜ್ ಅತ್ತಾರಿ ಆಪ್ತನಾಗಿದ್ದ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಾಮಾಜಿಕ ಮಾಧ್ಯಮಗಳಲ್ಲಿ ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ರಾಜಸ್ಥಾನದ ಉದಯಪುರದಲ್ಲಿ ಭೀಕರ ಹತ್ಯೆ; ಆರೋಪಿಗಳ ಬಂಧನ

ತಾಹಿರ್ ಮತ್ತು ರಿಯಾಜ್ ಇಬ್ಬರೂ ಒಟ್ಟಿಗೆ ಇರುವ ಫೋಟೋಗಳು ಬಹಿರಂಗವಾಗಿದೆ. ತಾಹಿರ್‌ ರಾಜಸ್ಥಾನದ ಸವೀನಾ ಎಂಬ ಪ್ರದೇಶದಲ್ಲಿ ವಾಸಿಸುತ್ತಿದ್ದು, ಆದರೆ ಅವರು ಇದೀಗ ನಾಪತ್ತೆಯಾಗಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ತಾಹಿತ್‌ ತನ್ನ ಬಾಡಿಗೆ ಮನೆ ಖಾಲಿ ಮಾಡಿದ್ದಾರೆ ಎಂದು ನೆರೆಹೊರೆಯವರು ತಿಳಿಸಿದ್ದು, ತನ್ನ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಮಾಡಿದ್ದಾರೆ ಎಂದು ವರದಿ ಹೇಳಿದೆ.

ಮೊಹಮ್ಮದ್‌ ತಾಹಿರ್‌‌ ಅವರು ತನ್ನ ಫೇಸ್‌ಬುಕ್ ಪೋಸ್ಟ್‌ಗಳಲ್ಲಿ ಇರ್ಷಾದ್ ಚೈನ್‌ವಾಲಾ ಅವರನ್ನು ಎಂಆರ್‌ಎಂ (ಮುಸ್ಲಿಂ ರಾಷ್ಟ್ರೀಯ ಮಂಚ್‌) ಪ್ರಾಂತ ಸಂಯೋಜಕ ಎಂದು ಉಲ್ಲೇಖಿಸುತ್ತಾರೆ. ಎಂಆರ್‌ಎಂ ಎಂಬುವುದು ಆರೆಸ್ಸೆಸ್ಸಿನ ಅಂಗ ಸಂಸ್ಥೆಯಾಗಿದೆ. ಈ ಪೋಸ್ಟ್‌ನಲ್ಲಿ ಹತ್ಯೆಯ ಆರೋಪಿ ರಿಯಾಜ್ ಅತ್ತಾರಿಯನ್ನು ಬಿಜೆಪಿ ಕಾರ್ಯಕರ್ತ ಎಂದು ಉಲ್ಲೇಖಿಸಿದ್ದಾರೆ.

ಮೊಹಮ್ಮದ್‌ ತಾಹಿರ್‌‌ ಆರೋಪಿಯನ್ನು ಬಿಜೆಪಿ ಕಾರ್ಯಕರ್ತ ಎಂದು ಉಲ್ಲೇಖಿಸಿರುವ ಪೋಸ್ಟ್‌
ಬಿಜೆಪಿ ಜಿಲ್ಲಾ ಅಧ್ಯಕ್ಷ ಭಾಯಿ ಸಾಬ್ ರವೀಂದ್ರ ಶ್ರೀಮಾಲಿ ಜೊತೆಯಲ್ಲಿ ಹತ್ಯೆಯ ಆರೋಪಿ ರಿಯಾಜ್ ಅತ್ತಾರಿ
ಎಂಆರ್‌ಎಂ ಕಾರ್ಯಕ್ರಮದಲ್ಲಿ ಇರ್ಷಾದ್‌ ಚೈನ್‌ವಾಲಾ(ಕೊಲೆ ಆರೋಪಿ ರಿಯಾಜ್ ಅತ್ತಾರಿಯ ಆಪ್ತ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯ ಮೊಹಮ್ಮದ್ ತಾಹಿರ್‌ ಅವರ ಫೇಸ್‌ಬುಕ್ ಪೋಸ್ಟ್‌)
ಮೊಮ್ಮದ್ ತಾಹಿರ್‌(1) , ಇರ್ಷಾದ್ ಚೈನ್‌ವಾಲಾ(2) ಮತ್ತು ಕೊಲೆ ಆರೋಪಿ ರಿಯಾಜ್ ಅತ್ತಾರಿ(3) ಜೊತೆಯಲ್ಲಿ ಬಿಜೆಪಿ ನಾಯಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಉದಯಪುರ ಹತ್ಯೇ ಮಾಡಿದವನು ನಿಮ್ಮ ಮಸೀದಿಯಲ್ಲೇ ವಾಸವಿದ್ದು ಅಲ್ಲೇ ಮಸೀದಿ ಕೆಲಸ ಮಾಡ್ತಿದ್ದ ಅಲ್ವೋ ಚೀನಾಗೆ ಹುಟ್ಟಿದ ಹೈ ಬ್ರೀಡ್ ಗಳಾ,ಅಂಗೈ ಹುಣ್ಣಿಗೆ ಯಾವೋನೋ ನಿನ್ನಂತವನು ಕನ್ನಡಿ ಹಿಡಿದನಂತೆ …..

  2. ಲೇ ರಾಜು ಅಡ್ಡ ಕಸುಬಿ ಬ್ಲೂ ಜೇಪೀ ಹ ಸೂ ಮಗನೇ….ಅವನು ಬ್ಲೂ ಜೇಪೀ ಕಾರ್ಯಕರ್ತ ಅಂತ ಗೊತ್ತಾದ ಮೇಲೂ ಈ ಹತ್ಯೆ ಹಿಂದೆ ಯಾರ ಕೈವಾಡ ಇದೆ ಅಂತ ಗೊತ್ತಾಗ್ತಾ ಇಲ್ವಾ.. ಥೂ ನಿಮ್ಮ ಜನ್ಮಕ್ಕೆ ಹೊಟ್ಟೆಗೆ ಅನ್ನ ತಿನ್ನಲ್ಲ ನೀವು….ದೇಶಕ್ಕೆ ಬೆಂಕಿ ಹಚ್ಚಲಿಕ್ಕೆ ಹುಟ್ಟಿರುವ ಹ ಸೂ ಮಕ್ಕಳು ನೀವು…

  3. 👏👏👏👏👏👏👏ಸಕ್ಕತ್ ಆಗಿ ನಿಜವಾದ ಮಾತು ಹೇಳದ್ರಿ. ಈ ಹಲ್ಕಟ್ ಯಾವಾಗ್ಲೂ ಅಷ್ಟೇ ಬರಿ ಒಂದು ಧರ್ಮದ ವಿರುದ್ಧ ಹೊಯ್ಕೋತಾನೆ. ಮೋಸ್ಟ್ಲಿ 2 ರೂಪಾಯಿ ಬೆಗ್ಗೆರ್ ಅನ್ಸುತ್ತೆ ಅವನು. ಧನ್ಯವಾದಗಳು ನಿಮಗೆ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಹಿಂಸೆಗೆ ಪ್ರಚೋದಿಸುವ, ಮುಸ್ಲಿಮರ ವಿರುದ್ಧದ ಜಾಹೀರಾತುಗಳನ್ನು ಅನುಮೋದಿಸಿದ್ದ ಮೆಟಾ: ವರದಿ

0
ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ, ಈ ಮಧ್ಯೆ ತಪ್ಪು ಮಾಹಿತಿಯನ್ನು ಹರಡುವ ಸುದ್ದಿಗಳು,  ವೀಡಿಯೊಗಳು ದೇಶದ ಸಾಮರಸ್ಯಕ್ಕೆ ಪ್ರಮುಖ ಬೆದರಿಕೆಯಾಗಿ ಹೊರಹೊಮ್ಮಿವೆ. 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ತಪ್ಪು ಮಾಹಿತಿಯನ್ನು ಹರಡುವ ಹಲವಾರು...