Homeಕರ್ನಾಟಕಆರ್‌ಎಸ್‌ಎಸ್‌ ಅಜೆಂಡಾಗಳನ್ನು ಬಯಲುಗೊಳಿಸುವ ಕನ್ನಡ ಕೃತಿಗಳು

ಆರ್‌ಎಸ್‌ಎಸ್‌ ಅಜೆಂಡಾಗಳನ್ನು ಬಯಲುಗೊಳಿಸುವ ಕನ್ನಡ ಕೃತಿಗಳು

- Advertisement -
- Advertisement -

ನಾಡಿನ ಖ್ಯಾತ ಹಿರಿಯ ಸಾಹಿತಿ, ಸಾಕ್ಷಿಪ್ರಜ್ಞೆ ದೇವನೂರ ಮಹಾದೇವರ ನೂತನ ಪುಸ್ತಕ ಆರ್‌ಎಸ್‌ಎಸ್‌ ಆಳ ಮತ್ತು ಅಗಲ ರಾಜ್ಯದಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಪ್ರಕಟಗೊಂಡ ಎರಡು ವಾರಗಳಲ್ಲಿಯೇ 86,000 ಪ್ರತಿಗಳು ಮಾರಾಟವಾಗಿವೆ. ಕನ್ನಡ ಪುಸ್ತಕ ಪ್ರಕಟಣೆಯ ಇತಿಹಾಸದಲ್ಲಿ ಇದೊಂದು ದಾಖಲೆಯೆ ಸರಿ. ಸಾಂಸ್ಕೃತಿಕ ಸಂಘಟನೆ ಎಂದು ಹೇಳಿಕೊಳ್ಳುವ ಆರ್‌ಎಸ್‌ಎಸ್‌ ಸಮಾಜದಲ್ಲಿ ಉಂಟು ಮಾಡುತ್ತಿರುವ ದುಷ್ಪರಿಣಾಮಗಳು ಮತ್ತು ಅದು ಸಾರುವ ವರ್ಣಾಶ್ರಮ ಸಿದ್ದಾಂತವನ್ನು ದೇವನೂರು ತಮ್ಮ ಕೃತಿಯಲ್ಲಿ ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ರಾಜ್ಯದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ಕುರಿತು ಪ್ರಕಟಗೊಂಡಿರುವ ಇತರ ಕೃತಿಗಳ ಕುರಿತು ತಿಳಿಯೋಣ.

ಆರ್‌ಎಸ್‌ಎಸ್‌ ಅಂತರಂಗ

ಆರ್‌ಎಸ್‌ಎಸ್‌ನ ಕಾರ್ಯಕರ್ತರು ಮತ್ತು ಕರ್ನಾಟಕ ಬಿಜೆಪಿಯ ಪ್ರಥಮ ರಾಜ್ಯಾಧ್ಯಕ್ಷರಾಗಿದ್ದ ಹಿರಿಯ ಹೋರಾಟಗಾರ ಎ.ಕೆ ಸುಬ್ಬಯ್ಯನವರು ಬರೆದಿರುವ ಆರ್‌ಎಸ್‌ಎಸ್‌ ಅಂತರಂಗ ಕೃತಿಯನ್ನು ಲಂಕೇಶ್ ಪ್ರಕಾಶನ ಪ್ರಕಟಿಸಿದೆ. ಇದರ ಬೆಲೆ 80 ರೂ ಇದ್ದು, ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಆರ್ ಎಸ್ ಎಸ್ ಬಚ್ಚಿಟ್ಟ ಸತ್ಯಗಳು

ಹಿರಿಯ ಸಂಶೋಧಕ ಡಾ.ಶಂಶುಲ್ ಇಸ್ಲಾಂರವರು ಆರ್‌ಎಸ್‌ಎಸ್‌ ಮುಚ್ಚಿಡುತ್ತಿರುವ ಸತ್ಯಗಳನ್ನು ಅನಾವರಣಗೊಳಿಸಿದ್ದಾರೆ. ಈ ಪುಸ್ತಕವನ್ನು ಮಾ ವರದರಾಜುರವರು ಕನ್ನಡಕರಿಸಿದ್ದು, ಸಮೈಕ್ಯ ಪ್ರಕಾಶನ ಪ್ರಕಟಿಸಿದೆ. ಬೆಲೆ 130 ರೂಗಳಾಗಿವೆ.

ನರಕದ ಗರ್ಭಗುಡಿಯೊಳಗೆ

ಆರ್‌ಎಸ್‌ಎಸ್‌ನಲ್ಲಿದ್ದು ಬೇಸೆತ್ತು ಹೊರಗೆ ಬಂದಿದ್ದ ಸುಧೀಶ್ ಮಿನ್ನಿಯವರು ಬರೆದಿರುವ ನರಕದ ಗರ್ಭ ಗುಡಿಯೊಳಗೆ ಪುಸ್ತಕವನ್ನು ಪಿ.ಕೆ.ಇ ಕೃಷ್ಣನ್‌ರವರ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಕ್ರಿಯಾ ಪ್ರಕಾಶನ ಮುದ್ರಿಸಿದೆ. ಬೆಲೆ 120 ರೂಗಳು.

ಆರ್‌ಎಸ್‌ಎಸ್‌ ಮತ್ತು ಬಿಜೆಪಿ – ಒಂದೇ ಹಾದಿ ಭಿನ್ನ ಶ್ರಮ

ಹಲವಾರು ಕಡೆ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಬೇರೆ ಬೇರೆ ಎಂದು ಅದರ ಮುಖಂಡರು ಹೇಳುತ್ತಾರೆ. ಆದರೆ ಒಟ್ಟಿಗೆ ಕೆಲಸ ಮಾಡುತ್ತಾರೆ. ಈ ಕುರಿತು ಎ.ಜೆ ನೂರಾನಿಯವರು ಸವಿಸ್ತಾರವಾಗಿ ಬರೆದಿರುವ ಪುಸ್ತಕ ಆರ್‌ಎಸ್‌ಎಸ್‌ ಮತ್ತು ಬಿಜೆಪಿ – ಒಂದೇ ಹಾದಿ ಭಿನ್ನ ಶ್ರಮ. ಸುರೇಶ್ ಭಟ್ ಭಾಕ್ರಬೈಲುರವರು ಕನ್ನಡಕ್ಕೆ ಅನುವಾದ ಮಾಡಿದ್ದು, ಇದನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ. ಇದರ ಬೆಲೆ 150 ರೂಗಳು.

ಹಿಂದುತ್ವ ಮತ್ತು ದಲಿತರು

ಖ್ಯಾತ ಅಂಬೇಡ್ಕರ್‌ವಾದಿ ಚಿಂತಕ ಡಾ. ಆನಂದ್ ತೇಲ್ತುಂಬ್ಡೆಯವರು ರಚಿಸಿರುವ ಹಿಂದುತ್ವ ಮತ್ತು ದಲಿತರು ಪುಸ್ತಕವನ್ನು ಪ್ರೊ.ಬಿ.ಗಂಗಾಧರ ಮೂರ್ತಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ದಲಿತರನ್ನು ಆರ್‌ಎಸ್‌ಎಸ್ ಹೇಗೆ ಪರಿಭಾವಿಸುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಈ ಪುಸ್ತಕವನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ. ಇದರ ಬೆಲೆ 160 ರೂಗಳು.

ಕೋಮುವಾದಿ ಕಾರ್ಯಾಚರಣೆ ಮತ್ತು ದಲಿತ ಪ್ರತಿಸ್ಪಂದನೆ

ಆನಂದ್‌ ತೆಲ್ತುಂಬ್ಡೆಯವರ ಮತ್ತೊಂದು ಮಹತ್ವದ ಪುಸ್ತಕವಿದೆ. ಕೋಮುವಾದದ ಮೂಲಕ ಅಧಿಕಾರ ಹಿಡಿಯುವ ಆರ್‌ಎಸ್‌ಎಸ್‌ ಬಿಜೆಪಿಗೆ ದಲಿತ ಹೋರಾಟ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಪ್ರೊ.ಬಿ.ಗಂಗಾಧರ ಮೂರ್ತಿ ಮತ್ತು ಶಿವಸುಂದರ್‌ರವರು ಅನುವಾದಿಸಿದ್ದಾರೆ. ಪುಸ್ತಕದ ಬೆಲೆ 140 ರೂಗಳು.

ಹಿಂದೂಗಳ ಬೇರೊಂದು ಚರಿತ್ರೆ

ಖ್ಯಾತ ಲೇಖಕ ವೆಂಡಿ ಡೊನಿಗರ್‌ರವರ ಈ ಮಹತ್ವದ ಪುಸ್ತಕವನ್ನು ಡಾ. ಬಂಜಗೆರೆ ಜಯಪ್ರಕಾಶ್‌ರವರು ಕನ್ನಡೀಕರಿಸಿದ್ದಾರೆ. ಸಿರಿವರ ಪ್ರಕಾಶನ ಪ್ರಕಟಿಸಿದ್ದು, ಪುಸ್ತಕದ ಬೆಲೆ 500 ರೂಗಳು.

ನಾನು ಹಿಂದೂ ಆಗಿ ಸಾಯಲಾರೆ

ಡಾ.ಬಿ.ಆರ್ ಅಂಬೇಡ್ಕರ್‌ರವರು ಏಕೆ ನಾನು ಹಿಂದೂ ಆಗಿ ಸಾಯಲಾರೆ ಎಂದು ವಿವರಿಸಿದರು ಎಂಬುದನ್ನು ಈ ಪುಸ್ತಕದಲ್ಲಿ ಬರೆಯಲಾಗಿದೆ. ಇದನ್ನು ಸದಾಶಿವ ಮರ್ಜಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪುಸ್ತಕದ ಬೆಲೆ 60/- ರೂಗಳು.

ಸಾವರ್ಕರ್ ಗೋಡ್ಸೆ ನಂಟು ಮತ್ತು ಆತನ ಹಿಂದುತ್ವ ಸಿದ್ಧಾಂತ

ಗಾಂಧಿ ಹಂತಕ ನಾಥೂರಾಮ್ ಗೂಡ್ಸೆಗೂ, ಸಾವರ್ಕರ್‌ಗೂ ಸಂಬಂಧವೇನು ಇಲ್ಲ ಎಂದು ಹೇಳುತ್ತಾರೆ. ಆದರೆ ಸಾವರ್ಕರ್ ಕೂಡ ಗಾಂಧಿ ಕೊಲೆ ಆರೋಪಿಗಳಲ್ಲಿ ಒಬ್ಬರು ಎಂದು ಆರೋಪಿಸಲಾಗಿದೆ. ಈ ಕುರಿತು ವಿವರಿಸುವ ಪುಸ್ತಕವನ್ನು ಎ.ಜಿ ನೂರಾನಿಯವರು ಬರೆದಿದ್ದಾರೆ. ಸುರೇಶ್ ಭಟ್ ಭಾಕ್ರಬೈಲುರವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ಕೇಸರಿ ಭಯೋತ್ಪಾದನೆ

ಆರ್‌ಎಸ್‌ಎಸ್‌ ಸಂಘಟನೆ ಹೇಳುವುದೇನು, ಮಾಡುವುದೇನು ಎಂಬುದನ್ನು ವಿವರಿಸುವ ಸುರೇಶ ಭಟ್ ಭಾಕ್ರಬೈಲು ಅಂಕಣಗಳ ಸಂಗ್ರಹವೇ ಕೇಸರಿ ಭಯೋತ್ಪಾದನೆ. ಭಾರತದಲ್ಲಿ ಹಿಂದುತ್ವದ ಹೆಸರಿನಲ್ಲಿ ನಡೆದ ಭಯೋತ್ಪಾದನಾ ಚಟುವಟಿಕೆಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಲಂಕೇಶ್ ಪ್ರಕಾಶನ ಇದನ್ನು ಮುದ್ರಿಸಿದ್ದು, 135 ರೂ ಬೆಲೆ ಹೊಂದಿದೆ.

ಬಹುಸಂಖ್ಯಾತವಾದ- ಚಿಂತಕರು ಕಂಡಂತೆ, ಹಿಂದುತ್ವ ರಾಜಕಾರಣ

ಸಂಘ ಪರಿವಾರದ ಹಿಡನ್‌ ಅಜೆಂಡಾಗಳ ಕುರಿತು ನಿರಂತರ ಬರೆಯುತ್ತಿರುವ ಬಿ.ಶ್ರೀಪಾದ ಭಟ್ ಅವರ ಎರಡು ಕೃತಿಗಳು ಹಿಂದುತ್ವ ರಾಜಕಾರಣದ ಆಳ ಅಗಲಗಳನ್ನು ಬಿಚ್ಚಿಡುತ್ತವೆ. ‘ಹಿಂದುತ್ವ ರಾಜಕಾರಣದ- ಅಂದು ಮತ್ತು ಮುಂದು’, ‘ಬಹುಸಂಖ್ಯಾತವಾದ- ಚಿಂತಕರು ಕಂಡಂತೆ’ ಕೃತಿಗಳು ಸಂಘಪರಿವಾರದ ಕುರಿತು ವಿಶಿಷ್ಟ ಒಳನೋಟಗಳನ್ನು ನೀಡುತ್ತವೆ.

ಆರ್ ಎಸ್ ಎಸ್ ಆಳ ಮತ್ತು ಅಗಲ 

ದೇವನೂರು ಮಹಾದೇವರವರ ಇತ್ತೀಚಿನ ಪುಸ್ತಕ. ಆರ್‌ಎಸ್‌ಎಸ್‌ನ ಪ್ರಾಣ ಎಲ್ಲಿದೆ ಎಂಬುದರಿಂದ ಅರಂಭವಾಗಿ ಕರ್ನಾಟಕದ ವರ್ತಮಾನದ ಸವಾಲುಗಳವರೆಗೂ ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಗೌರಿ ಮೀಡಿಯಾ ಟ್ರಸ್ಟ್ ಸೇರಿದಂತೆ ಸುಮಾರು 20 ಪ್ರಕಾಶನ ಸಂಸ್ಥೆಗಳು ಮುದ್ರಿಸಿವೆ. ಬೆಲೆ 40 ರೂ. ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: ’ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಪುಸ್ತಕ ಪ್ರಕಟಣೆ ಮತ್ತು ಹಂಚಿಕೆ ಕರ್ನಾಟಕದ ಉದ್ದಗಲಕ್ಕೆ ಆಂದೋಲನವಾಗಿದ್ದರ ಕುರಿತು..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. RSS ಬಗ್ಗೆ ಮಾತಾಡೋ ಅಯೋಗ್ಯರು ,ಅದೇ ಭಯೋತ್ಪಾದನೆಗೆ ಕಾರಣವಾಗಿ ಪ್ರಪಂಚದಲ್ಲಿ ಹಿಂಸೆಯನ್ನು,ಕೊಲೆ ಮಾಡೋದನ್ನೇ ಮೂಲ ಕಸಬು ಮಾಡಿಕೊಂಡಿರುವ ನರ ರಾಕ್ಷಸ ಕಲಬೆರಕೆ SDPI ,PFI ಮೂಲಭೂತವಾದಿಗಳ ಬಗ್ಗೆ ಮಾತಾಡ್ರೋ ಅಯೋಗ್ಯರ ,RSS ಬಗ್ಗೆ ಅರಿವೇ ಇಲ್ಲದ ರೋಲ್ ಕಾಲ್ ಲದ್ದಿ ಜೀವಿಗಳ ಬಂಡವಾಳ ದೇಶದ ಪ್ರತಿ ವ್ಯಕ್ತಿಗೆ ತಿಳಿದಿದೆ

  2. RSS = SDPI = PFI ಈ ಮೂವರು ಮಾಡುವುದು ದೇಶವನ್ನು ಒಡೆಯುವ ಕೆಲಸ , ಇವರಿಂದ ಈ ದೇಶ ಶುಚಿಯಾಗಬೇಕಿದೆ , ಮೂವರೂ ಭಯವನ್ನ ಉತ್ಪಾದಿಸುವವರು …..!

  3. ಅತ್ಯತ್ತಮವಾದ ಕೆಲಸ. ಈ ಪುಸ್ತಕಗಳು “ರಾಕ್ಷಸ ಸಂತತಿಯ ಸಂಘ” ಹಾಗೂ ಬ್ಲೂ ಜೋಕರ್ಸ್ ಪಾರ್ಟಿಯ ನಿಜ ಬಣ್ಣ ಬಯಲು ಮಾಡುವ ಕನ್ನಡಿಗಳಾಗಿವೆ. ಅದ್ಯಾವುದೋ ರಾಕ್ಷಸಕುಲದ ನಾಯಿಯೊಂದು ಮೇಲೆ ಈ ಪುಸ್ತಕಗಳ ಲೇಖಕರನ್ನ ಕಲಬೆರಕೆಗಳೆಂದು ಹೇಳಿ ತನ್ನ ಪೂರ್ವಾಗ್ರಹ ಪೀಡಿತ ಮನಸ್ಥಿತಿಯನ್ನು ತೋರಪಡಿಸಿದ್ದನೆ, ಇಂತಹ ಹರಾಮಿ ಕಲಬೆರಕೆಗಳನ್ನ ಮಟ್ಟ ಹಾಕಬೇಕಿದೆ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...