Homeಮುಖಪುಟಒಂದೇ ಖಾತೆಗೆ ಐದು ಪ್ರೊಫೈಲ್‌: ಫೇಸ್‌ಬುಕ್‌ನಿಂದ ಹೊಸ ಪ್ರಯೋಗ

ಒಂದೇ ಖಾತೆಗೆ ಐದು ಪ್ರೊಫೈಲ್‌: ಫೇಸ್‌ಬುಕ್‌ನಿಂದ ಹೊಸ ಪ್ರಯೋಗ

- Advertisement -
- Advertisement -

ಔಪಚಾರಿಕವಾಗಿ ಫೇಸ್‌ಬುಕ್ ಎಂದು ಕರೆಯಲ್ಪಡುವ ಮೆಟಾ ಪ್ಲಾಟ್‌ಫಾರ್ಮ್‌ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಒಂದು ಫೇಸ್‌ಬುಕ್ ಖಾತೆಯು ಒಂದಕ್ಕಿಂತ ಹೆಚ್ಚು ಪ್ರೊಫೈಲ್ ಹೊಂದುವ ಹೊಸ ಅವಕಾಶ ಕಲ್ಪಿಸುವ ಪ್ರಯೋಗ ಈಗ ನಡೆಯುತ್ತಿದೆ.

ತನ್ನ ಬಳಕೆದಾರರನ್ನು ಸಕ್ರಿಯಗೊಳಿಸಲು ದೈತ್ಯ ಫೇಸ್‌ಬುಕ್ ಸಂಸ್ಥೆ, ಬಳಕೆದಾರರ ಆಸಕ್ತಿಗಳು ಮತ್ತು ಸಂಬಂಧಗಳ ಆಧಾರದ ಮೇಲೆ ಒಂದಕ್ಕಿಂತ ಹೆಚ್ಚು ಪ್ರೊಫೈಲ್‌ ಹೊಂದುವ ಅವಕಾಶ ಕಲ್ಪಿಸಲು ಹೊರಟಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವಿಭಿನ್ನ ಗುಂಪಿನ ಜನರಿಗಾಗಿ ವಿಭಿನ್ನ ಪ್ರೊಫೈಲ್‌ಗಳನ್ನು ಹೊಂದಲು ಅವಕಾಶ ಮಾಡಿಕೊಡಲಾಗುತ್ತಿದೆ. ಉದಾಹರಣೆಗೆ, ಒಬ್ಬ ವ್ಯಕ್ತಿ ತನ್ನ ವೈಯಕ್ತಿಕ ಸ್ನೇಹಿತರಿಗಾಗಿ ಪ್ರೊಫೈಲ್ ಹೊಂದಬಹುದು, ಮತ್ತೊಂದು ಪ್ರೊಫೈಲ್‌ಅನ್ನು ತಾನು ಕೆಲಸ ಮಾಡುತ್ತಿರುವ ಸಂಸ್ಥೆಯ ಜನರಿಗಾಗಿ, ಕುಟುಂಬವರ್ಗಕ್ಕಾಗಿ- ಹೀಗೆ ವಿಭಿನ್ನ ಗುಂಪಿನ ಜನರಿಗಾಗಿ ರೂಪಿಸಬಹುದು.

ಬಳಕೆದಾರರು ಒಂದೇ ಖಾತೆಯ ಅಡಿಯಲ್ಲಿ ಐದು ವಿಭಿನ್ನ ಪ್ರೊಫೈಲ್‌ಗಳನ್ನು ರಚಿಸಲು ಅವಕಾಶ ನೀಡಲಾಗುತ್ತಿದೆ. ಯಾವುದೇ ನಂಬರ್‌‌, ವಿಶೇಷ ಅಕ್ಷರ, ನಿಜವಾದ ಹೆಸರು ಯಾವುದೇ ಅಂಶವನ್ನು ಈ  ಹೆಚ್ಚುವರಿ ಪ್ರೊಫೈಲ್‌ಗಳಿಗೆ ಸೇರಿಸುವ ಅಗತ್ಯವಿಲ್ಲ. ಆದರೆ ಬಳಕೆದಾರರ ಮುಖ್ಯ ಪ್ರೊಫೈಲ್ ವ್ಯಕ್ತಿಯ ನಿಜವಾದ ಹೆಸರನ್ನು ಹೊಂದಿರಬೇಕು ಎಂದು ಮೆಟಾ ಸಂಸ್ಥೆಯು ಸ್ಪಷ್ಟಪಡಿಸಿರುವುದಾಗಿ ‘TechCrunch’ ಸಂಸ್ಥೆ ವರದಿ ಮಾಡಿದೆ.

ಈ ಹೊಸ ಪ್ರಯೋಗವನ್ನು ಆಯ್ದ ಫೇಸ್‌ಬುಕ್ ಬಳಕೆದಾರರ ಮೇಲೆ ಪರೀಕ್ಷಿಸಲಾಗುತ್ತಿದೆ. ಬಹು ಪ್ರೊಫೈಲ್‌ಗಳನ್ನು ಕೆಲವೇ ಟ್ಯಾಪ್‌ಗಳಲ್ಲಿ ಬದಲಾಯಿಸಿ ಉಪಯೋಗಿಸಬಹುದು ಎಂದು ವರದಿಯಾಗಿದೆ.

ಇದನ್ನೂ ಓದಿರಿ: ಫೇಸ್‌ಬುಕ್‌ನಿಂದ ‘ಪ್ರತಿಧ್ವನಿ.ಕಾಂ’ ವೆಬ್‌ಸೈಟ್‌‌ಗೆ ತಡೆ; ಕಾಣದ ಕೈಗಳ ಷಢ್ಯಂತ್ರ ಎಂದು ಆಕ್ರೋಶ

ಈ ಪ್ರಯೋಗವು ಫೇಸ್‌ಬುಕ್‌ನ ಈಗಿನ ನೀತಿಗೆ ಹೋಲಿಸಿದರೆ ಪ್ರಮುಖ ಬದಲಾವಣೆಯಾಗಿದೆ. ಸಾಮಾಜಿಕ ನೆಟ್‌ವರ್ಕ್‌ನಲ್ಲಿ ಒಂದಕ್ಕಿಂತ ಹೆಚ್ಚು ವೈಯಕ್ತಿಕ ಪ್ರೊಫೈಲ್  ರಚಿಸುವುದು ಫೇಸ್‌ಬುಕ್‌ನ ಮಾನದಂಡಗಳಿಗೆ ವಿರುದ್ಧ ಎಂದು ರಾಯಿಟರ್ಸ್ ವರದಿ ಮಾಡಿದೆ.

“ಇದು ಅನಗತ್ಯ ಗೌಪ್ಯತೆ ಸಮಸ್ಯೆಗಳನ್ನು ಸೃಷ್ಟಿಸಬಹುದಾದರೂ, ಹೆಚ್ಚುವರಿ ಪ್ರೊಫೈಲ್‌ಗಳು ಫೇಸ್‌ಬುಕ್‌ನ ನಿಯಮಗಳಿಗೆ ಒಳಪಟ್ಟಿರುತ್ತವೆ. ನಿಯಮಗಳನ್ನು ಮುರಿದರೆ ಸಂಪೂರ್ಣ ಖಾತೆಗೆ ದಂಡ ವಿಧಿಸಲಾಗುತ್ತದೆ” ಎಂದು ಫೇಸ್‌ಬುಕ್‌ ಹೇಳಿಕೊಂಡಿದೆ.

“ಒಂದಕ್ಕಿಂತ ಹೆಚ್ಚು ಪ್ರೊಫೈಲ್‌ ಹೊಂದಿರುವ ಬಳಕೆದಾರ ಫೇಸ್‌ಬುಕ್‌ ನಿಯಮಗಳು ಅಥವಾ ನೀತಿಯನ್ನು ಉಲ್ಲಂಘಿಸಿದರೆ ಆ ಬಳಕೆದಾರನ ಮುಖ್ಯ ಫೇಸ್‌ಬುಕ್ ಖಾತೆಯ ಮೇಲೆ ಕ್ರಮ ಜರುಗಿಸಲಾಗುತ್ತದೆ” ಎಂದು ಫೇಸ್‌ಬುಕ್‌ ಎಚ್ಚರಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಸುವ ಹಡಗಿಗೆ ಬಂದರಿನಲ್ಲಿ ನಿಲುಗಡೆ ನಿಷೇಧಿಸಿದ ಸ್ಪೇನ್

0
ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಹಡಗನ್ನು ಸ್ಪೇನ್ ಬಂದರಿನಲ್ಲಿ ನಿಲ್ಲಿಸಲು ಅನುಮತಿ ನಿರಾಕರಿಸಲಾಗಿದೆ ಎಂದು ಅಲ್ಲಿನ ವಿದೇಶಾಂಗ ಸಚಿವ ಜೋಸ್ ಮ್ಯಾನುಯೆಲ್ ಅಲ್ಬರೆಸ್ ಗುರುವಾರ ಹೇಳಿದ್ದಾರೆ. "ಇದೇ ಮೊದಲ ಬಾರಿಗೆ ನಾವು ಇಸ್ರೇಲ್‌ಗೆ ತೆರಳುತ್ತಿದ್ದ ಹಡಗಿಗೆ...