Homeರಾಷ್ಟ್ರೀಯಅತ್ಯುತ್ತಮ ಸಂಸ್ಥೆ-2022: ಐಐಟಿ ಮದ್ರಾಸ್‌‌‌ಗೆ ಅಗ್ರಸ್ಥಾನ; ಟಾಪ್‌10 ಪಟ್ಟಿಯಲ್ಲಿ JNU

ಅತ್ಯುತ್ತಮ ಸಂಸ್ಥೆ-2022: ಐಐಟಿ ಮದ್ರಾಸ್‌‌‌ಗೆ ಅಗ್ರಸ್ಥಾನ; ಟಾಪ್‌10 ಪಟ್ಟಿಯಲ್ಲಿ JNU

- Advertisement -
- Advertisement -

ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನ (NIRF) ಶ್ರೇಯಾಂಕಗಳು 2022 ರ ಏಳನೇ ಆವೃತ್ತಿಯನ್ನು, ಒಕ್ಕೂಟ ಸರ್ಕಾರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶುಕ್ರವಾರ (ಇಂದು) ಬಿಡುಗಡೆ ಮಾಡಿದ್ದಾರೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್ ಅನ್ನು ಈ ವರ್ಷ ಒಟ್ಟಾರೆ ವಿಭಾಗದಲ್ಲಿ ಅತ್ಯುತ್ತಮ ವಿಶ್ವವಿದ್ಯಾಲಯವೆಂದು ಘೋಷಿಸಲಾಗಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಬೆಂಗಳೂರು ಎರಡನೇ ಸ್ಥಾನದಲ್ಲಿದ್ದರೆ, ಐಐಟಿ ಬಾಂಬೆ, ಐಐಟಿ ದೆಹಲಿ ಮತ್ತು ಐಐಟಿ ಕಾನ್ಪುರ ಒಟ್ಟಾರೆ ವಿಭಾಗದ ಅಗ್ರ ಐದು ಸಂಸ್ಥೆಗಳಾಗಿ ಹೊರಹೊಮ್ಮಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ವರ್ಷವೂ, ಐಐಟಿ ಖರಗ್‌ಪುರ, ಐಐಟಿ ರೂರ್ಕಿ ಮತ್ತು ಐಐಟಿ ಗುವಾಹಟಿ, ಐಐಟಿ ಕಾನ್ಪುರಗಳು ಅಗ್ರ 8 ರ್‍ಯಾಂಕ್‌ಗಳಲ್ಲಿ ಇರುವುದರಿಂದ ಐಐಟಿಗಳು ಈ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿವೆ. ಏಮ್ಸ್‌ ದೆಹಲಿ ಒಂಬತ್ತನೇ ರ್‍ಯಾಂಕ್‌ ಗಳಿಸಿದ್ದು, ಜೆಎನ್‌ಯು ಹತ್ತನೇ ಸ್ಥಾನದಲ್ಲಿದೆ.

ಈ ವರ್ಷ, ಐಐಟಿ ಮದ್ರಾಸ್ ದೇಶದ ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜು ಎಂದು ಎರಡನೇ ವರ್ಷಕ್ಕೆ ಸ್ಥಾನ ಪಡೆದಿದೆ.

2021 ರಲ್ಲಿ ಕೂಡಾ IIT ಮದ್ರಾಸ್ ಒಟ್ಟಾರೆ ವಿಭಾಗದಲ್ಲಿ ಮೊದಲನೇ ಸ್ಥಾನದಲ್ಲಿ ಮತ್ತು IISc ಬೆಂಗಳೂರು 2 ನೇ ಸ್ಥಾನದಲ್ಲಿತ್ತು. IIT-ಬಾಂಬೆ 3 ನೇ ಸ್ಥಾನದಲ್ಲಿ ಹಾಗೂ IIT ದೆಹಲಿ ಮತ್ತು IIT ಕಾನ್ಪುರ್ ಕ್ರಮವಾಗಿ ನಾಲ್ಕನೇ ಮತ್ತು 5 ರ್‍ಯಾಂಕ್‌ನಲ್ಲಿತ್ತು.

ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿಗೆ ಕಿರುಕುಳ: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಿಂದ ಎಬಿವಿಪಿ ಕಾರ್ಯಕರ್ತ ಅಮಾನತು

ಸಂಸ್ಥೆಗಳ ಮೌಲ್ಯ ಮಾಪನವನ್ನು ಐದು ಮುಖ್ಯ ನಿಯತಾಂಕಗಳ ಮೇಲೆ ಮಾಡಲಾಗುತ್ತದೆ. ಬೋಧನೆ, ಕಲಿಕೆ ಮತ್ತು ಸಂಪನ್ಮೂಲಗಳು, ಸಂಶೋಧನೆ ಮತ್ತು ವೃತ್ತಿಪರ ಅಭ್ಯಾಸಗಳು, ಪದವಿ ಫಲಿತಾಂಶಗಳು, ಪ್ರಭಾವ ಮತ್ತು ಒಳಗೊಳ್ಳುವಿಕೆ ಮತ್ತು ಗ್ರಹಿಕೆ ಇತ್ಯಾದಿಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...