ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ರಾಷ್ಟ್ರಾಧ್ಯಕ್ಷೆ ದ್ರೌಪದಿ ಮುರ್ಮು ಅವರನ್ನು “ರಾಷ್ಟ್ರಪತ್ನಿ” ಎಂದು ಕರೆದಿದ್ದಕ್ಕಾಗಿ ಗುರುವಾರ ಸಂಸತ್ತಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದೇ ವಿಚಾರವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಧಿವೇಶನ ಮುಂದೂಡಿದ ನಂತರ ಬಿಜೆಪಿ ಸಂಸದೆಯೊಬ್ಬರ ಜೊತೆಗೆ ಮಾತನಾಡುತ್ತಿದ್ದಾಗ ಮಧ್ಯೆ ಪ್ರವೇಶಿಸಿದ ಸಚಿವೆ ಸ್ಮೃತಿ ಇರಾನಿಯವರೊಂದಿಗೆ “ನನ್ನೊಂದಿಗೆ ನೀವು ಮಾತನಾಡಬೇಡಿ” ಎಂದು ಹೇಳಿದ್ದಾಗಿ ವರದಿಯಾಗಿದೆ.
ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಸಚಿವೆ ಸ್ಮೃತಿ ಇರಾನಿ ಮತ್ತು ಇತರ ಬಿಜೆಪಿ ಸಂಸದರು ಸೋನಿಯಾ ಗಾಂಧಿಯನ್ನು ಕೆಣಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ವಿರುದ್ಧ ಬಿಜೆಪಿ ಸಂಸದರು ಭಾರಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಲೋಕಸಭೆಯ ಅಧಿವೇಶನವನ್ನು ಮುಂದೂಡಲಾಗಿತ್ತು. ಈ ನಡುವೆ ಸ್ಮೃತಿ ಇರಾನಿ ಮತ್ತು ಬಿಜೆಪಿ ಸಂಸದರು ‘‘ಸೋನಿಯಾ ಗಾಂಧಿ ಕ್ಷಮೆಯಾಚಿಸಿ’’ ಎಂದು ಆಗ್ರಹಿಸಿದ್ದರು. “ಸೋನಿಯಾ ಗಾಂಧಿ ಅವರೇ ನೀವು ದ್ರೌಪದಿ ಮುರ್ಮು ಅವರಿಗೆ ಆಗಿರುವ ಅವಮಾನವನ್ನು ಅನುಮೋದಿಸಿದ್ದೀರಿ” ಎಂದು ಸ್ಮೃತಿ ಇರಾನಿ ಹೇಳಿದ್ದರು.
ಇದನ್ನೂ ಓದಿ: ವಿಚಾರಣೆಗೆ ಹಾಜರಾಗುವಂತೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ED ನೋಟಿಸ್
ಪ್ರತಿಭಟನೆಯ ಕಾರಣಕ್ಕೆ ಸದನವನ್ನು ಮುಂದೂಡಿದ ನಂತರ, ಸೋನಿಯಾ ಗಾಂಧಿ ಅವರು ಬಿಜೆಪಿ ಸಂಸದೆ ರಮಾ ದೇವಿ ಅವರೊಂದಿಗೆ ಮಾತನಾಡಲು ನಿರ್ಧರಿಸಿ, ಇಬ್ಬರು ಕಾಂಗ್ರೆಸ್ ಸಂಸದರು ತೆರಳಿದರು. ಸದನದ ಮಹಡಿಯನ್ನು ದಾಟಿ ಬಿಜೆಪಿ ಸಂಸದೆ ರಮಾ ದೇವಿ ಅವರೊಂದಿಗೆ, “ಅಧೀರ್ ರಂಜನ್ ಚೌಧರಿ ಈಗಾಗಲೇ ಕ್ಷಮೆಯಾಚಿಸಿದ್ದಾರೆ. ನನ್ನ ತಪ್ಪೇನು?” ಎಂದು ಕೇಳಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ಸಚಿವೆ ಸ್ಮೃತಿ ಇರಾನಿ, “ಮೇಡಂ, ನಾನು ನಿಮಗೆ ಸಹಾಯ ಮಾಡಬಹುದೇ? ನಿಮ್ಮ ಹೆಸರನ್ನು ತೆಗೆದುಕೊಂಡಿದ್ದು ನಾನು” ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ, “ನನ್ನೊಂದಿಗೆ ನೀವು ಮಾತನಾಡಬೇಡಿ” ಎಂದು ತಿರುಗೇಟು ನೀಡಿದ್ದಾರೆ.
ಸ್ಮೃತಿ ಇರಾನಿ ಅವರು ‘ಬೆರಳು’ ಮಾಡುತ್ತಾ ರಮಾದೇವಿ ಬಳಿ ಬಂದಾಗ ಸೋನಿಯಾ ಗಾಂಧಿ ಅವರು ಸಭ್ಯ ರೀತಿಯಲ್ಲಿ ಸಂಭಾಷಣೆ ನಡೆಸುತ್ತಿದ್ದರು ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಈ ವೇಳೆ ಸ್ಮೃತಿ ಇರಾನಿ ಅವರು, “ನಿಮಗೆ ಎಷ್ಟು ಧೈರ್ಯ, ಈ ರೀತಿ ವರ್ತಿಸಬೇಡಿ, ಇದು ನಿಮ್ಮ ಪಕ್ಷದ ಕಚೇರಿಯಲ್ಲ…” ಎಂದು ಹೇಳಿದ್ದಾರೆ ಎಂದು ಎನ್‌ಡಿಟಿವಿ ಕಾಂಗ್ರೆಸ್ ನಾಯಕರೊಬ್ಬರ ಮಾತನ್ನು ಉಲ್ಲೇಖಿಸಿ ವರದಿ ಮಾಡಿದೆ.
ಇದನ್ನೂ ಓದಿ: ಪ್ರಜಾಪ್ರಭುತ್ವ ದಮನಕ್ಕೆ ಫೇಸ್‌ಬುಕ್, ಟ್ವಿಟರ್ ಸಾಥ್: ಕ್ರಮಕ್ಕೆ ಸೋನಿಯಾ ಆಗ್ರಹ
“ಸೋನಿಯಾ ಗಾಂಧಿ ಅವರು ಸ್ಮೃತಿ ಇರಾನಿ ಅವರಿಗೆ ‘ನಾನು ನಿಮ್ಮೊಂದಿಗೆ ಮಾತನಾಡುವುದಿಲ್ಲ’ ಎಂದು ಎರಡು ಬಾರಿ ಹೇಳಿದ್ದಾರೆ. ಆದರೂ ಅವರು ಸೋನಿಯಾ ಗಾಂಧಿ ಅವರನ್ನು ಸುತ್ತುವರೆದಿದ್ದರು ಮತ್ತು ಅಲ್ಲಿನ ಪರಿಸ್ಥಿತಿ ಗಂಭೀರವಾಯಿತು” ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಂಸದರಾದ ಮಹುವಾ ಮೊಯಿತ್ರಾ ಮತ್ತು ಅಪರೂಪಾ ಪೊದ್ದಾರ್ ಮತ್ತು ಎನ್‌ಸಿಪಿಯ ಸುಪ್ರಿಯಾ ಸುಳೆ ಅವರು ಬೊಬ್ಬೆ ಹಾಕುತ್ತಿದ್ದ ಬಿಜೆಪಿ ಸದಸ್ಯರ ನಡುವಿನಿಂದ ಸೋನಿಯಾ ಗಾಂಧಿಯವರನ್ನು ದೂರ ಸೆಳೆದಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಇದರ ನಂತರ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಮುಂದಾದರು ಎಂದು ಅದು ಹೇಳಿದೆ.
ರಮಾ ದೇವಿ ಅವರು ತನಗೆ ತಿಳಿದಿರುವುದರಿಂದ ಅವರೊಂದಿಗೆ ಮಾತನಾಡುತ್ತಿದ್ದೆ ಎಂದು ಸೋನಿಯಾ ಗಾಂಧಿ ಅವರು ನಂತರ ಹೇಳಿದ್ದಾರೆ. ‘‘ನಾನು ಭಯ ಪಟ್ಟುಕೊಂಡಿಲ್ಲ. ನನಗೆ ರಮಾದೇವಿಯ ಪರಿಚಯವಿದೆ, ಹಾಗಾಗಿ ನಾನು ‘ಅಧೀರ್ ಕ್ಷಮೆಯಾಚಿಸಿದ್ದಾರೆ ಆದರೆ ನೀವು ಯಾಕೆ ನನ್ನ ಮೇಲೆ ದಾಳಿ ಮಾಡುತ್ತಿದ್ದೀರಿ?’ ಎಂದು ಅವರೊಂದಿಗೆ ಹೇಳಲು ಹೋದೆ” ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ಸಂಸದೆ ಮಹುವಾ ಮೊಯಿತ್ರಾ ಅವರು ಘಟನೆಯನ್ನು, “ಸೋನಿಯಾ ಗಾಂಧಿಯವರ ಮೇಲೆ ನಡೆದ ಸಂಯೋಜಿತ ದಾಳಿ” ಎಂದು ಕರೆದಿದ್ದಾರೆ.
Was in Lok Sabha when 75 year old lady senior leader encircled & heckled pack-wolf style when all she did was walk over & speak (masked) to another senior lady panel chairperson.
Disgusted to read BJP lies & false version in press.
— Mahua Moitra (@MahuaMoitra) July 28, 2022
ಸ್ಮೃತಿ ಇರಾನಿ ಅವರು ತಮ್ಮ ಪಕ್ಷದ ಮುಖ್ಯಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
“ಒಕ್ಕೂಟ ಸರ್ಕಾರದ ಸಚಿವೆ ಸ್ಮೃತಿ ಇರಾನಿ ಇಂದು ಲೋಕಸಭೆಯಲ್ಲಿ ಅಸಭ್ಯವಾಗಿ ಮತ್ತು ನಿಂದನಾತ್ಮಕವಾಗಿ ವರ್ತಿಸಿದ್ದಾರೆ! ಆದರೆ ಸ್ಪೀಕರ್ ಇದನ್ನು ಖಂಡಿಸುತ್ತಾರೆಯೇ? ನಿಯಮಗಳು ವಿರೋಧ ಪಕ್ಷಕ್ಕೆ ಮಾತ್ರ” ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
आज लोकसभा में केंद्रीय मंत्री स्मृति ईरानी ने अमर्यादित और अपमानजनक व्यवहार किया! लेकिन क्या स्पीकर इसकी निंदा करेंगे? क्या नियम सिर्फ विपक्ष के लिए होते हैं?
— Jairam Ramesh (@Jairam_Ramesh) July 28, 2022
ಇದನ್ನೂ ಓದಿ: ಸಿಬಿಎಸ್‌ಇ ಪ್ರಶ್ನೆಪತ್ರಿಕೆಯಲ್ಲಿ ಸ್ತ್ರೀದ್ವೇಷ: ಸಂಸತ್ತಿನಲ್ಲಿ ಸೋನಿಯಾ ಗಾಂಧಿ ಕಿಡಿ
ಆದರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘಟನೆಯ ಬಗ್ಗೆ ಸೋನಿಯಾ ಗಾಂಧಿ ಅವರನ್ನು ಕಟುವಾಗಿ ಟೀಕಿಸಿದ್ದಾರೆ, “ಸೋನಿಯಾ ಗಾಂಧಿ ನಮ್ಮ ಹಿರಿಯ ನಾಯಕಿ ರಮಾದೇವಿ ಬಳಿಗೆ ಬಂದಾಗ, ಅಲ್ಲಿ ಏನಾಗುತ್ತಿದೆ ಎಂದು ತಿಳಿಯಲು ನಮ್ಮ ಕೆಲವು ಸಂಸದರು ಹೋಗಿದ್ದರು. ಈ ವೇಳೆ ಸೋನಿಯಾ ಗಾಂಧಿ ಅವರು, ನೀವು ನನ್ನೊಂದಿಗೆ ಮಾತನಾಡಬೇಡಿ ಎಂದು ಬೆದರಿಕೆ ಹಾಕಿದ್ದಾರೆ” ಎಂದು ಹೇಳಿದ್ದಾರೆ.
#WATCH | Some of our Lok Sabha MPs felt threatened when Sonia Gandhi came up to our senior leader Rama Devi to find out what was happening during which, one of our members approached there & she (Sonia Gandhi) said "You don't talk to me": Union Finance Minister Nirmala Sitharaman pic.twitter.com/WxFnT2LTvk
— ANI (@ANI) July 28, 2022
ಸಚಿವೆ ಸ್ಮೃತಿ ಇರಾನಿ ಮತ್ತು ಕೆಲವು ಪುರುಷ ಬಿಜೆಪಿ ಸಂಸದರು ಸಹ ಸೋನಿಯಾ ಗಾಂಧಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದರಾದ ಗೀತಾ ಕೋರಾ ಮತ್ತು ಜ್ಯೋತ್ಸ್ನಾ ಮಹಂತ್ ಹೇಳಿದ್ದಾರೆ.


