Homeಮುಖಪುಟಸಿಬಿಎಸ್‌ಇ ಪ್ರಶ್ನೆಪತ್ರಿಕೆಯಲ್ಲಿ ಸ್ತ್ರೀದ್ವೇಷ: ಸಂಸತ್ತಿನಲ್ಲಿ ಸೋನಿಯಾ ಗಾಂಧಿ ಕಿಡಿ

ಸಿಬಿಎಸ್‌ಇ ಪ್ರಶ್ನೆಪತ್ರಿಕೆಯಲ್ಲಿ ಸ್ತ್ರೀದ್ವೇಷ: ಸಂಸತ್ತಿನಲ್ಲಿ ಸೋನಿಯಾ ಗಾಂಧಿ ಕಿಡಿ

ಸೋನಿಯಾ ಗಾಂಧಿಯವರ ವಾಗ್ದಾಳಿ ಬಳಿಕ ವಿವಾದಾತ್ಮಕ ಪ್ರಶ್ನೆಯನ್ನು ಕೈಬಿಟ್ಟ ಸಿಬಿಎಸ್‌ಇ

- Advertisement -
- Advertisement -

ಸ್ತ್ರಿ ದ್ವೇಷದಿಂದ ಕೂಡಿದ ಪ್ರಶ್ನೆಯನ್ನು 10ನೇ ತರಗತಿ ಇಂಗ್ಲಿಷ್ ಪರೀಕ್ಷೆಯಲ್ಲಿ ಸಿಬಿಎಸ್‌ಇ (ಸೆಂಟ್ರಲ್‌ ಬೋರ್ಡ್ ಆಫ್‌ ಸೆಕೆಂಡರಿ ಎಜುಕೇಷನ್‌) ಕೇಳಿದ್ದು ವಿವಾದಕ್ಕೆ ಕಾರಣವಾಗಿದೆ. ವಿವಾದವು ಸಂಸತ್ತಿನಲ್ಲಿ ಮಾರ್ಧನಿಸಿದ್ದು ಸಿಬಿಎಸ್‌ಇ ಪ್ರಮಾದವನ್ನು ಒಪ್ಪಿಕೊಂಡಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಸಂಸತ್ತಿನಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಬಳಿಕ, “ಪ್ರಶ್ನೆ ಪತ್ರಿಕೆಯಲ್ಲಿ ನೀಡಲಾಗಿದ್ದ ಪ್ಯಾಸೇಜ್‌ ಮಾರ್ಗಸೂಚಿಗಳಿಗೆ ಅನುಗುಣವಾಗಿಲ್ಲ. ಹೀಗಾಗಿ ಈ ಪ್ಯಾಸೇಜ್ ಕೈಬಿಡಲಾಗಿದೆ. ಈ ಪ್ರಶ್ನೆಗೆ ಉತ್ತರಿಸಿದ ವಿದ್ಯಾರ್ಥಿಗಳಿಗೆ ಪೂರ್ಣ ಅಂಕಗಳನ್ನು ನೀಡಲಾಗುತ್ತದೆ” ಎಂದು ಸಿಬಿಎಸ್‌ಇ ಹೇಳಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಾಕ್ಯದಲ್ಲಿ ‘ಹೆಂಡತಿಯ ವಿಮೋಚನೆ ಮಕ್ಕಳ ಮೇಲಿನ ಪೋಷಕರ ಅಧಿಕಾರವನ್ನು ನಾಶಪಡಿಸಿತು’, ‘ಗಂಡನ ಮಾರ್ಗವನ್ನು ಒಪ್ಪಿಕೊಂಡರೆ ಮಾತ್ರ ತಾಯಿ, ಕಿರಿಯರ ಮೇಲೆ ವಿಧೇಯತೆಯನ್ನು ಹೊಂದಬಹುದು’ ಎಂಬ ವಾಕ್ಯಗಳನ್ನು ಪ್ಯಾಸೇಜ್‌ ಒಳಗೊಂಡಿತ್ತು.

“ಪುರುಷನನ್ನು ಆತನ ಸ್ಥಾನದಿಂದ ಕೆಳಗಿಳಿಸಿ ಹೆಂಡತಿ ಮತ್ತು ತಾಯಿ ತನ್ನನ್ನು ತಾನೇ ವಂಚನೆ ಮಾಡಿಕೊಂಡರು”, ಇನ್ನೊಂದು ಭಾಗದಲ್ಲಿ, “ಸ್ವಾತಂತ್ರ್ಯವನ್ನು ಗಳಿಸುವುದು ವಿವಿಧ ರೀತಿಯ ಸಾಮಾಜಿಕ ಮತ್ತು ಕೌಟುಂಬಿಕ ಸಮಸ್ಯೆಗಳಿಗೆ ಮುಖ್ಯ ಕಾರಣ”, “ಹೆಂಡತಿಯರು ತಮ್ಮ ಗಂಡನನ್ನು ಅನುಸರಿಸುವುದನ್ನು ನಿಲ್ಲಿಸಿದರು. ಹೀಗಾಗಿ ಮಕ್ಕಳು ಮತ್ತು ಸೇವಕರು ಅಶಿಸ್ತು ಪಾಲಿಸುತ್ತಿದ್ದಾರೆ” ಎಂಬ ಸಾಲುಗಳನ್ನು ಪ್ಯಾಸೇಜ್‌ ಒಳಗೊಂಡಿತ್ತು.

ಈ ರೀತಿಯ ವಾಕ್ಯಗಳನ್ನು ಸಂಸತ್ತಿನಲ್ಲಿ ವಿವಿಧ ಪಕ್ಷಗಳು ಪ್ರಶ್ನಿಸಿದ್ದು, “ಇದು ಕಠಿಣ ಸ್ತ್ರೀದ್ವೇಷ” ಮತ್ತು “ಅಸಹ್ಯ” ಎಂದು ಪ್ರತಿಪಾದಿಸಿದವು.

ಕಾಂಗ್ರೆಸ್ ನೇತೃತ್ವದಲ್ಲಿ, ಡಿಎಂಕೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ನ್ಯಾಷನಲ್ ಕಾನ್ಫರೆನ್ಸ್ ಸದಸ್ಯರು ಲೋಕಸಭೆಯಲ್ಲಿ ಈ ವಿಷಯವಾಗಿ ಸಭಾ ತ್ಯಾಗ ಮಾಡಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ವಿಷಯವನ್ನು ಪ್ರಸ್ತಾಪಿಸಿ, “ಪ್ರಚಂಡ ಸ್ತ್ರೀದ್ವೇಷ” ಎಂದು ಬಣ್ಣಿಸಿದರು. “ನರೇಂದ್ರ ಮೋದಿ ಸರ್ಕಾರ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದರು.

ಆಕ್ಷೇಪಾರ್ಹ ಪ್ರಶ್ನೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು, ಗಂಭೀರ ಲೋಪಕ್ಕೆ ಕಾರಣವಾದವರ ಮೇಲೆ ಪರಿಶೀಲನೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವೀಟ್‌ ಮಾಡಿದ್ದು ಸಿಬಿಎಸ್‌ಇ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ಘಟನೆಯನ್ನು “ಅಸಹ್ಯಕರ” ಎಂದು ಬಣ್ಣಿಸಿರುವ ಅವರು “ಯುವಜನರ ನೈತಿಕತೆ ಮತ್ತು ಭವಿಷ್ಯವನ್ನು ಹತ್ತಿಕ್ಕುವ ಆರ್‌ಎಸ್‌ಎಸ್-ಬಿಜೆಪಿ ತಂತ್ರವಿದು” ಎಂದು ಆರೋಪಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಈ ಬೆಳವಣಿಗೆಯನ್ನು ಪ್ರಶ್ನಿಸಿದ್ದಾರೆ. “ನಂಬಲಾಗುತ್ತಿಲ್ಲ! ನಾವು ನಿಜವಾಗಿಯೂ ಮಕ್ಕಳಿಗೆ ಈ ಪ್ರೇರಣೆಯನ್ನು ಕಲಿಸುತ್ತಿದ್ದೇವೆಯೇ? ಸ್ಪಷ್ಟವಾಗಿ ಬಿಜೆಪಿ ಸರ್ಕಾರವು ಮಹಿಳೆಯರ ಮೇಲಿನ ಈ ಹಿಮ್ಮುಖ ದೃಷ್ಟಿಕೋನಗಳನ್ನು ಅನುಮೋದಿಸುತ್ತದೆ, ಇಲ್ಲದಿದ್ದರೆ ಅವರು CBSE ಪಠ್ಯಕ್ರಮದಲ್ಲಿ ಏಕೆ ಕಾಣಿಸಿಕೊಳ್ಳುತ್ತಾರೆ” ಎಂದು ಪ್ರಶ್ನಿಸಿದ್ದಾರೆ.


ಇದನ್ನೂ ಓದಿರಿ: ಮುಂಬೈನಲ್ಲಿ ಬಾರ್‌ ಮೇಲೆ ದಾಳಿ: 17 ಮಹಿಳೆಯರ ರಕ್ಷಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...