ಒಂದು ಸಮುದಾಯದ ವಿರುದ್ಧ ಸದಾ ದ್ವೇಷದ ಹೇಳಿಕೆಗಳನ್ನು ನೀಡುವ ರಿಷಿಕುಮಾರ ಸ್ವಾಮೀಜಿ ಅಲಿಯಾಸ್ ಕಾಳಿ ಸ್ವಾಮೀಜಿ ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರ ಅವರ ಕೊಲೆಗೆ ಪ್ರಚೋದನೆ ನೀಡಿದ್ದಾರೆ.
ಅತ್ಯಂತ ಅವಹೇಳನಕಾರಿಯಾಗಿ, ಸಮುದಾಯಗಳ ನಡುವೆ ದ್ವೇಷ ಬಿತ್ತುವಂತೆ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಅಣಕಿಸುವಂತೆ ಮಾತನಾಡಿರುವ ಕಾಳಿ ಸ್ವಾಮೀಜಿ, “ಇನ್ನೂ 9 ಜನ ಮುಸ್ಲಿಮರ ತಲೆ ಕಡಿಯಬೇಕು” ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸುರತ್ಕಲ್‌ನಲ್ಲಿ ಫಾಝಿಲ್ ಎಂಬ ವ್ಯಕ್ತಿಯನ್ನು ಕೊಂದಿರುವ ಕುರಿತು ಮಾತನಾಡಿರುವ ಕಾಳಿ ಸ್ವಾಮೀಜಿ, “ನಮ್ಮವರೇ ಏನಾದರೂ ಹೊಡೆದಿದ್ದರೆ ನಾನು ಅವರಿಗೆ ಅಭಿನಂದನೆ ಸಲ್ಲಿಸುವೆ. ಇನ್ನು ಒಬ್ಬರನ್ನೇ ಕೊಂದಿರುವುದೆಂದು ಹೇಳುತ್ತಿದ್ದೀರಿ. ಇನ್ನು 9 ತಲೆ ಬೇಕು. ಅವರವರೇ ಹೊಡೆದುಕೊಂಡು ಸತ್ತು ಹೋಗಿದ್ದರೆ ನಮ್ಮವರಿಗೆ ಇನ್ನೂ ಮನಸ್ಥಿತಿ ಗಟ್ಟಿಯಾಗಿಲ್ಲ ಎಂದಷ್ಟೇ. ತುರುಕರೇ ನಿಮ್ಮ ಒಂದೊಂದು ಕತ್ತು ತಗಿಯಲಿಲ್ಲ ಎಂದರೆ ದೇವರಾಣೆಯೂ ಸುಧಾರಿಸಿಕೊಳ್ಳುವುದಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.
“ನೀವು ನನ್ನನ್ನು ಎತ್ತಿ. ಎಸ್‌ಡಿಪಿಐ, ಪಿಎಫ್‌ಐ ………. ನನ್ನನ್ನು ಎತ್ತಿ. ನಿಮ್ಮ ಕೈಲಾದ್ರೆ ನಳಿನ್ ಕುಮಾರ್ ಕಟೀಲ್‌ರನ್ನು ಎತ್ತಿ. ನಿಮ್ಮ ಕೈಲಾದರೆ ಬೊಮ್ಮಾಯಿ, ಹೋಮ್‌ಮಿನಿಸ್ಟರ್‌ರನ್ನು ಎತ್ತಿ….” ಎಂದು ಹೇಳಿಕೆ ನೀಡಿದ್ದಾರೆ.
ಅತ್ಯಂತ ಕೆಟ್ಟ ಪದಗಳನ್ನು ಮುಸ್ಲಿಂ ಸಮುದಾಯದ ವಿರುದ್ಧ ಕಾಳಿ ಸ್ವಾಮೀಜಿ ಬಳಸಿದ್ದಾರೆ. “ನೀವು ನನ್ನನ್ನು ಹೊಡೆದ ತಕ್ಷಣ ಗೋದ್ರಾ ಹತ್ಯಾಕಾಂಡ ಶುರುವಾಗುತ್ತದೆ. ಗೋರಿಪಾಳ್ಯ, ಕಲಾಸಿಪಾಳ್ಯಕ್ಕೆ ನುಗ್ಗಿ ಬೆಂಕಿ ಹಚ್ಚಲಾಗುತ್ತದೆ. ನಮ್ಮ ತಾಕತ್ತು ಏನೆಂಬುದು ತೋರಿಸುತ್ತೇವೆ. ಹೊಡೆಯುವುದಾದರೆ ದೊಡ್ಡದನ್ನು ಹೊಡೆಯಿರಿ…. ಯಾವ ಶಾಂತಿ ಕಾಪಾಡಬೇಕು ಮುಖ್ಯಮಂತ್ರಿಗಳೇ…” ಎಂದು ಬಾಯಿಗೆ ಬಂದಂತೆ ಮಾತನಾಡಿರುವ ಅವರು ಸಿಕ್ಕಸಿಕ್ಕವರನ್ನು ಗುಂಡಿಕ್ಕಿ ಕೊಲ್ಲಲು ಪ್ರಚೋದಿಸಿದ್ದಾರೆ.
“ಮೂರು ದಿನದೊಳಗೆ ಎನ್‌ಕೌಂಟರ್ ಮಾಡಿ. ಇಲ್ಲವಾದರೆ ಪಾದಯಾತ್ರೆ ಮಾಡ್ತೀವಿ. ಒಂದು ಕತ್ತಿಗೆ ಹತ್ತು ಕತ್ತು ಉದುರಿಸಬೇಕು” ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿರಿ: ಕೋಮುದ್ವೇಷ: ಕಾಳಿ ಸ್ವಾಮೀಜಿ ಮಾಡಿದ ಅವಾಂತರಗಳಿವು!
ಸರಣಿ ಕೊಲೆಗಳಿಂದ ಕರಾವಳಿ ಜನರು ಆತಂಕಿತರಾಗಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಉರಿಯೋ ಬೆಂಕಿಗೆ ಪೆಟ್ರೋಲ್ ಸುರಿಯುವಂತೆ ಸ್ವಾಮೀಜಿ ಮಾತನಾಡಿದ್ದಾರೆ. ಎಲ್ಲ ಸಮುದಾಯಗಳನ್ನು ಪ್ರೀತಿಯಿಂದ ನೋಡಬೇಕಾದ ಸ್ವಾಮೀಜಿ ಪಟ್ಟಕ್ಕೆ ಅಗೌರವ ತೋರಿದ್ದಾರೆಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಲೆ ಪ್ರಕರಣಗಳ ತನಿಖೆ ನಡೆಯುತ್ತಿದ್ದು, ನಿಜ ಆರೋಪಿಗಳು ಯಾರೆಂಬುದು ಇನ್ನೂ ಬಯಲಾಗಿಲ್ಲ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರು, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ನ್ಯಾಯಾಂಗ ವ್ಯವಸ್ಥೆ ಇರುವಾಗ- ಫ್ರಿಂಜ್ ಎಲಿಮೆಂಟ್‌ಗಳೇ ಎಲ್ಲ ತೀರ್ಪುಗಳನ್ನು ನೀಡುತ್ತಿವೆ. ಸಮುದಾಯಗಳ ನಡುವೆ ಬೆಂಕಿ ಹಚ್ಚಲು ಪ್ರಚೋದಿಸಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಾಳಿ ಸ್ವಾಮೀಜಿಯಂತಹ ಕೋಮುದ್ವೇಷಿಗಳ ಮೇಲೆ ಸಾಂವಿಧಾನಿಕವಾಗಿ ಕ್ರಮ ಜರುಗಿಸುತ್ತಾರೋ ಎಂಬುದೇ ಸದ್ಯದ ಪ್ರಶ್ನೆ.



ರಾಜ್ಯ ಸರ್ಕಾರ ಮೊದಲು ಈ ಕಾಳಿ ಸ್ವಾಮೀಜಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
Can’t because the name is not Arabic