Homeಮುಖಪುಟಕೇರಳದ IAS ಅಧಿಕಾರಿ ಶ್ರೀರಾಮ್ ವಿರುದ್ಧದ ಶಾಂತಿಯುತ ಪ್ರತಿಭಟನೆಗಳಿಗೆ ಕೋಮು ಬಣ್ಣ ಹಚ್ಚಿದ ಬಲಪಂಥೀಯರು

ಕೇರಳದ IAS ಅಧಿಕಾರಿ ಶ್ರೀರಾಮ್ ವಿರುದ್ಧದ ಶಾಂತಿಯುತ ಪ್ರತಿಭಟನೆಗಳಿಗೆ ಕೋಮು ಬಣ್ಣ ಹಚ್ಚಿದ ಬಲಪಂಥೀಯರು

- Advertisement -
- Advertisement -

ಪತ್ರಕರ್ತ ಪಿ.ಕೆ.ಬಶೀರ್ ಸಾವಿನ ಪ್ರಕರಣದ ಆರೋಪಿ ಶ್ರೀರಾಮ್ ವೆಂಕಟರಾಮನ್ ಅವರನ್ನು ಆಲಪ್ಪುಳ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿರುವುದನ್ನು ವಿರೋಧಿಸಿ, ಇತ್ತೀಚೆಕಗೆ ಕೇರಳದ ಕೆಲವು ಮುಸ್ಲಿಂ ಧಾರ್ಮಿಕ ಸಂಘಟನೆಗಳು ರಾಜ್ಯದಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಸಿದ್ದವು. ಆದರೆ ಬಿಜೆಪಿ ಬೆಂಬಲಿತ ಹಾಗೂ ಇತರ ಹಿಂದೂ ಮತ್ತು ಕ್ರಿಶ್ಚಿಯನ್ ಬಲಪಂಥೀಯ ಸಾಮಾಜಿಕ ಮಾಧ್ಯಮಗಳ ಹ್ಯಾಂಡಲ್‌ಗಳು ಈ ಪ್ರತಿಭಟನೆಗೆ ಕೋಮು ಬಣ್ಣವನ್ನು ನೀಡಿ ಅಪಪ್ರಚಾರ ಮಾಡುತ್ತಿವೆ.

ಜುಲೈ 30 ರಂದು ನಡೆದ ಈ ಪ್ರತಿಭಟನೆಯು ರಾಜಕೀಯೇತರ ಸಂಘಟನೆಯಾದ ‘ಕೇರಳ ಮುಸ್ಲಿಂ ಜಮಾತ್‌’ ಆಶ್ರಯದಲ್ಲಿ ನಡೆದಿತ್ತು. ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಡಳಿತ ಕಚೇರಿಗಳಿಗೆ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಲಾಗಿತ್ತು. ಈ ಪ್ರತಿಭಟನೆಯಲ್ಲಿ ‘ಕೇರಳ ಮುಸ್ಲಿಂ ಜಮಾತ್‌’‌ನ ಅಂಗ ಸಂಘಟನೆಗಳಾದ ಸುನ್ನಿ ಯುವಜನ ಸಂಘ (SYS) ಮತ್ತು ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (SSF) ನಂತಹ ಸುನ್ನಿ ಮುಸ್ಲಿಂ ಸಂಘಟನೆಗಳು ಭಾಗವಹಿಸಿದ್ದವು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆದರೆ ಸಾಮಾಜಿಕ ಮಾಧ್ಯಮಗಳ ಬಲಪಂಥೀಯ ಹ್ಯಾಂಡಲ್‌ಗಳು ಈ ಪ್ರತಿಭಟನೆಗೆ ಕೋಮು ಆಯಾಮವನ್ನು ನೀಡಿ ಅಪಪ್ರಚಾರ ನಡೆಸುತ್ತಿದೆ. ಈ ಹ್ಯಾಂಡಲ್‌ಗಳು, “ಹೊಸದಾಗಿ ನೇಮಕಗೊಂಡ ಬ್ರಾಹ್ಮಣ ಐಎಎಸ್‌ ಜಿಲ್ಲಾಧಿಕಾರಿಯನ್ನು ವಿರೋಧಿಸಿ ಕೇರಳದ ಮಲಪ್ಪುರಂನಲ್ಲಿ ಮುಸ್ಲಿಮರು ಮೆರವಣಿಗೆ ಮಾಡಿದ್ದಾರೆ. MSM ಇದನ್ನು ಕುತಂತ್ರದಿಂದ ತಪ್ಪಿಸಿದ್ದು, ಕರ್ನಾಟಕದಲ್ಲಿ ABVP ಯನ್ನು ಎತ್ತಿ ತೋರಿಸಿತು. ಅವರ ಘೋಷಣೆಗಳನ್ನು ಆಲಿಸಿ” ಎಂದು ಹಿಂದೂ ಮಕ್ಕಳ್ ಕಚ್ಚಿಯ ಅರ್ಜುನ್ ಸಂಪತ್ ಟ್ವೀಟ್ ಮಾಡಿದ್ದಾರೆ.

ಅರ್ಜುನ್ ಸಂಪತ್‌ ಅವರ ಟ್ವೀಟ್‌ನಂತೆಯೆ ಸತ್ಯವನ್ನು ತಿರುಚಿ ಹಲವಾರು ಟ್ವೀಟ್‌ಗಳನ್ನು ಟ್ವಿಟರ್‌ನಲ್ಲಿ ಮಾಡಲಾಗಿವೆ. ಆದರೆ ವಾಸ್ತವದಲ್ಲಿ ಪತ್ರಕರ್ತ ಕೆ.ಎಂ.ಬಶೀರ್‌ ಸಾವಿನ ಪ್ರಕರಣದ ಆರೋಪಿ ಶ್ರೀರಾಮ್‌ ಅವರನ್ನು ಜಿಲ್ಲಾಧಿಕಾರಿಯನ್ನಾಗಿ ನೇಮಿಸಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿತ್ತು.

ಇದನ್ನೂ ಓದಿ: ಮುಸ್ಲಿಂ ಪ್ರಧಾನ ಕಥೆ ಹೊಂದಿದೆ ಎಂದು ನಾಟಕಕ್ಕೆ ಅಡ್ಡಿಪಡಿಸಿದ RSS-ಬಜರಂಗದಳದ ದುಷ್ಕರ್ಮಿಗಳು

ಪತ್ರಕರ್ತ ಬಶೀರ್ ಅವರು ಅಖಿಲ ಭಾರತ ಸುನ್ನಿ ಜಮಿಯ್ಯತುಲ್ ಉಲಮಾ ಒಡೆತನದ ಸಿರಾಜ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 4 ರಂದು ರಾತ್ರಿ ಬಶೀರ್ ಅವರು ತನ್ನ ಬೈಕ್ ಅನ್ನು ರಸ್ತೆಯಲ್ಲಿ ನಿಲ್ಲಿಸಿದ್ದಾಗ ಶ್ರೀರಾಮ್ ಅವರ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದರು.

“ಅಪಘಾತದ ವೇಳೆ ಶ್ರೀರಾಮ್ ಅವರು ಕುಡಿದು ವಾಹನ ಚಲಾಯಿಸುತ್ತಿದ್ದರು. ಅಪಘಾತದ ನಂತರ ಅವರು ಸ್ಥಳದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು ಮತ್ತು ಗಂಟೆಗಳ ಕಾಲ ರಕ್ತ ಪರೀಕ್ಷೆಯನ್ನು ನೀಡಲು ಒಪ್ಪಲಿಲ್ಲ” ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಕೇರಳದ ಸುನ್ನಿ ಸಂಘಟನೆಗಳು ಅವರನ್ನು ಜಿಲ್ಲಾಧಿಕಾರಿಯಾಗಿ ನೇಮಿಸಿದ್ದರ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಬದಲಾಗಿ ಅವರು ಬ್ರಾಹ್ಮಣ ಎಂಬ ಕಾರಣಕ್ಕೆ ಪ್ರತಿಭಟನೆ ನಡೆದಿರಲಿಲ್ಲ.

ಬಲಪಂಥೀಯ ನಾಯಕ ಅರ್ಜುನ್ ಸಂಪತ್ ಹಂಚಿಕೊಂಡಿರುವ ವಿಡಿಯೋದಲ್ಲಿ ‘‘ಕಲೆಕ್ಟರ್ ನೇಮಕದ ಆದೇಶವನ್ನು ಹಿಂಪಡೆಯಿರಿ. ಸರಕಾರವೇ, ಕೊಲೆಗಡುಕನಾದ ಕುಡುಕನಿಗೆ ಅಧಿಕಾರವನ್ನು ಒಪ್ಪಿಸಲು ನಿಮಗೆ ನಾಚಿಕೆಯಾಗುವುದಿಲ್ಲವೇ?” ಎಂಬ ಘೋಷಣೆಗಳನ್ನು ಕೂಗಲಾಗಿತ್ತು.

ಇದನ್ನೂ ಓದಿ: ಮುಸ್ಲಿಂ ಮಹಿಳೆಯರನ್ನು ರೇಪ್‌ ಮಾಡಲು ಕರೆ ನೀಡಿದ್ದ ‘ಬಜರಂಗಮುನಿ’ಯನ್ನು ‘ಗೌರವಾನ್ವಿತ’ ಎಂದ ಸರ್ಕಾರ!

ಜಿಲ್ಲಾಧಿಕಾರಿಯನ್ನು ನೇಮಕಾತಿ ಆದೇಶ ಬಂದಾಗಿನಿಂದ ಕೇರಳ ಮುಸ್ಲಿಂ ಜಮಾತ್ ಮಾತ್ರವಲ್ಲದೆ ರಾಜ್ಯದ ಪತ್ರಕರ್ತರು ಸೇರಿದಂತೆ ಹಲವು ಸಂಘಟನೆಗಳು ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವು. ಆದರೆ ರಾಜಕಿಯೇತರ ಮುಸ್ಲಿಂ ಸಂಘಟನೆಗಳು ಇದನ್ನು ವಿರೋಧಿಸಿ ಬೃಹತ್‌ ಪ್ರತಿಭಟನೆ ನಡೆಸಿದ ನಂತರ ಬಲಪಂಥೀಯರು ಪ್ರತಿಭಟನೆಗೆ ಕೋಮು ಬಣ್ಣ ಹಚ್ಚಿದ್ದಾರೆ.

ಜುಲೈ 26 ರಂದು ಐಎಎಸ್ ಅಧಿಕಾರಿ ಅಧಿಕಾರ ಸ್ವೀಕರಿಸಲು ಕಲೆಕ್ಟರೇಟ್ ತಲುಪಿದಾಗ ಯುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ್ದರು. ಪ್ರತಿಭಟನಾಕಾರರನ್ನು ಪೊಲೀಸರು ಬಲವಂತವಾಗಿ ಹೊರಹಾಕಿದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಮತ್ತು ಅಲಪ್ಪುಳದ ಮಾಜಿ ಸಂಸದ ಕೆ.ಸಿ. ವೇಣುಗೋಪಾಲ್ ಅವರು, ಜಿಲ್ಲಾಧಿಕಾರಿಯನ್ನು ‘ಕಳಂಕಿತ ಅಧಿಕಾರಿ’ ಎಂದು ಕರೆದಿದ್ದಾರೆ.

ಹರಿಪಾದ್ ಶಾಸಕ, ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಕೂಡ ನೇಮಕಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಯ ನೇಮಕಾತಿಯನ್ನು ವಿರೋಧಿಸಿ ಆಲಪ್ಪುಳದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೂಡ ನೇಮಕಾತಿಯನ್ನು ವಿರೋಧಿಸಿದೆ. ಸಾರ್ವಜನಿಕರೊಂದಿಗೆ ನಿರಂತರವಾಗಿ ಸಂವಹನ ನಡೆಸಬೇಕಾದ ಹುದ್ದೆಯಲ್ಲಿ ಕೊಲೆ ಆರೋಪಿ ಶ್ರೀರಾಮ್ ಅವರನ್ನು ಏಕೆ ನೇಮಿಸಲಾಗಿದೆ ಎಂದು ಎರಡೂ ಪಕ್ಷಗಳು ಸರ್ಕಾರವನ್ನು ಪ್ರಶ್ನಿಸಿದ್ದರು.

ಇದನ್ನೂ ಓದಿ: ಹಿಂದೂ-ಮುಸ್ಲಿಂ ಕ್ರಿಶ್ಚಿಯನ್ ಯಾರೇ ಆಗಿರಲಿ, ಯಾವ ತಂದೆ ತಾಯಿಗೂ ನಮಗೆ ಬಂದ ಕಷ್ಟ ಬಾರದಿರಲಿ – ಫಾಝಿಲ್ ತಂದೆಯ ಮನದಾಳದ ಮಾತು

ಜುಲೈ 27 ರಂದು ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ (ಕೆಯುಡಬ್ಲ್ಯೂಜೆ) ಕಲೆಕ್ಟರೇಟ್ ಹೊರಗೆ ಅಲಪ್ಪುಳದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು. ಕೇರಳದ ವಿವಿಧ ಜಿಲ್ಲೆಗಳಲ್ಲಿ ಇದೇ ರೀತಿಯ ಪ್ರತಿಭಟನೆಗಳನ್ನು ಪತ್ರಕರ್ತರು ನಡೆಸಿದ್ದರು.

ಆದಾಗ್ಯೂ ಕೆಲವು ಗುಂಪುಗಳು ಪ್ರತಿಭಟನೆಗಳಿಗೆ ಕೋಮು ಬಣ್ಣ ನೀಡಿದ್ದಾರೆ. ಕ್ರಿಶ್ಚಿಯನ್ ಮೂಲಭೂತವಾದಿ ಸಂಘಟನೆಯಾದ ಡೆಮಾಕ್ರಟಿಕ್ ಕ್ರಿಶ್ಚಿಯನ್ ಫೆಡರೇಶನ್ ಕೇರಳ, ಪ್ರತಿಭಟನೆಯನ್ನು ಫೇಸ್‌ಬುಕ್‌ನಲ್ಲಿ ಟೀಕಿಸುತ್ತಾ,“ಸಾವಿಗೀಡಾದವರಿಗಿಂತ ಜಿಲ್ಲಾಧಿಕಾರಿಗೆ ಹೆಚ್ಚು ಸಹಾನುಭೂತಿ ವ್ಯಕ್ತಪಡಿಸುತ್ತೇವೆ. ಅದಕ್ಕೆ ಕಾರಣ ಅವರ ಧಾರ್ಮಿಕ ಉಗ್ರವಾದ. ಪತ್ರಕರ್ತರೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿರುವುದು ಇದೇ ಮೊದಲಲ್ಲ. ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿರುವುದು ಇದೇ ಮೊದಲಲ್ಲ. ನಾಗರಿಕ ಸೇವಾ ಅಧಿಕಾರಿಯೊಬ್ಬರು ವಿಚಾರಣೆ ಎದುರಿಸುತ್ತಿರುವುದು ಇದೇ ಮೊದಲಲ್ಲ”

“ಹಾಗಾದರೆ ಈ ಪ್ರತಿಭಟನೆಗಳು ಏಕೆ ನಡೆಯುತ್ತಿವೆ? ಏಕೆಂದರೆ ಇದು ಕೇವಲ ಪ್ರತಿಭಟನೆಯಲ್ಲ. ಇದು ವೆಂಕಟರಾಮನ್‌ಗೆ ಮಾತ್ರವಲ್ಲ, ಅಧಿಕಾರಶಾಹಿ ಮತ್ತು ಸರ್ಕಾರಕ್ಕೆ ಬೆದರಿಕೆಯಾಗಿದೆ. ಒಬ್ಬ ಮುಸಲ್ಮಾನನನ್ನು ಕೊಂದ ಮಾತ್ರಕ್ಕೆ ಅವರು ಬೀದಿಪಾಲಾಗಿದ್ದಾರೆ. ಸತ್ತವರು ರಾಮನ್, ಕೃಷ್ಣನ್ ಅಥವಾ ವರ್ಗೀಸ್ ಆಗಿದ್ದರೆ ಮತ್ತು ಕಾರು ಓಡಿಸಿದವರು ಸಲಾಂ ಅಥವಾ ರಹೀಮ್ ಆಗಿದ್ದರೆ, ಬೀದಿಗಳು ಖಾಲಿಯಾಗಿ ಇರುತ್ತಿದ್ದವು” ಎಂದು ಅದು ಹೇಳಿದೆ.

ಇದನ್ನೂ ಓದಿ: ಮುಖ್ಯಮಂತ್ರಿಯ ಇಬ್ಬಗೆ ನೀತಿ; ಕಾನೂನುಬಾಹಿರ ಶಾಂತಿಸಭೆಗೆ ವಿರೋಧ: ಮುಸ್ಲಿಂ ಸೆಂಟ್ರಲ್ ಕಮಿಟಿ

ಮತ್ತೊಂದು ಕ್ರಿಶ್ಚಿಯನ್ ಮೂಲಭೂತವಾದಿ ಗುಂಪು CASA ತಮ್ಮ ಎಫ್‌ಬಿ ಪೋಸ್ಟ್‌ನಲ್ಲಿ, “ಅವರ ಮುಂದಿರುವ ಸಮಸ್ಯೆ ಶ್ರೀರಾಮ್ ವೆಂಕಟರಾಮನ್ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿ ಯಾರನ್ನಾದರೂ ಕೊಂದದ್ದಲ್ಲ. ಸತ್ತವರು ತಮ್ಮ ಸಮುದಾಯದ ಸದಸ್ಯರಾಗಿದ್ದಾರೆ ಎಂಬ ಕಾರಣ ಮಾತ್ರ” ಎಂದು ಹೇಳಿತ್ತು.

ಇದೇ ರೀತಿಯ ಸಂದೇಶಗಳು ಅನೇಕ ವಾಟ್ಸಾಪ್ ಗುಂಪುಗಳಲ್ಲಿ ಕಾಣಿಸಿಕೊಂಡಿವೆ. “ಮೃತ ವ್ಯಕ್ತಿ ಮುಸ್ಲಿಂ ಆಗಿರುವುದರಿಂದ ಭಯೋತ್ಪಾದಕ ಗುಂಪುಗಳ ಸಹಾನುಭೂತಿ. ಶ್ರೀರಾಮ್ ಒಬ್ಬ ಬ್ರಾಹ್ಮಣ, ಹಿಂದೂ ವ್ಯಕ್ತಿ. ಹಾಗಾಗಿ ಇಲ್ಲಿ ಪ್ರತಿಭಟನೆ ಧರ್ಮದ ವಿರುದ್ಧವಾಗಿದೆ. ಅವರು ತಮ್ಮ ಶಕ್ತಿ ತೋರಿಸಿ ಬೆದರಿಕೆ ಹಾಕುತ್ತಿದ್ದಾರೆ, ಇದು ಸಾಮಾಜಿಕ ಕಾರಣಕ್ಕಾಗಿ ನಡೆದ ಪ್ರತಿಭಟನೆಯಲ್ಲ” ಎಂದು ಪ್ರತಿಪಾದಿಸಿದ್ದವು.

ಪ್ರತಿಭಟನೆಗಳು ಹೆಚ್ಚಾಗುತ್ತಿದ್ದಂತೆ, ಕೇರಳ ಸರ್ಕಾರವು ಆಗಸ್ಟ್ 1 ರಂದು ಶ್ರೀರಾಮ್ ಅವರನ್ನು ವರ್ಗಾವಣೆ ಮಾಡಿದೆ. ಅವರನ್ನು ಕೇರಳ ರಾಜ್ಯ ಸರಬರಾಜು ಕಾರ್ಪೊರೇಷನ್ ಲಿಮಿಟೆಡ್‌ನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...