Homeಮುಖಪುಟಬಿಜೆಪಿ ಬೆಂಬಲಿತ ಸಂಘಟನೆಯಾದ ಬಜರಂಗದಳದ ದುಷ್ಕರ್ಮಿಗಳ ಬೆದರಿಕೆ: ಮಸೀದಿ ವೀಕ್ಷಣೆ ಪ್ರವಾಸ ರದ್ದು ಮಾಡಿದ ಶಿಶುವಿಹಾರ

ಬಿಜೆಪಿ ಬೆಂಬಲಿತ ಸಂಘಟನೆಯಾದ ಬಜರಂಗದಳದ ದುಷ್ಕರ್ಮಿಗಳ ಬೆದರಿಕೆ: ಮಸೀದಿ ವೀಕ್ಷಣೆ ಪ್ರವಾಸ ರದ್ದು ಮಾಡಿದ ಶಿಶುವಿಹಾರ

- Advertisement -
- Advertisement -

ಗುಜರಾತಿನ ವಡೋದರದ ಖಾಸಗಿ ಶಾಲೆಯು ಶಿಶುವಿಹಾರದ ಮಕ್ಕಳಿಗೆ ನಗರದ ಮಸೀದಿಗೆ ಪ್ರವಾಸವನ್ನು ಯೋಜಿಸಿತ್ತು. ಆದರೆ ಬಿಜೆಪಿ ಬೆಂಬಲಿತ ಭಜರಂಗದಳದ ದುಷ್ಕರ್ಮಿಗಳ ಪ್ರತಿಭಟನೆಯ ಕಾರಣಕ್ಕೆ ಈ ಪ್ರವಾಸವನ್ನು ಮಂಗಳವಾರ ರದ್ದುಗೊಳಿಸಲಾಗಿದೆ. ಮಸೀದಿ ಪ್ರವಾಸದ ಬಗ್ಗೆ ಪೋಷಕರು “ದೂರು ನೀಡಿದ್ದಾರೆ” ಎಂದು ಪ್ರತಿಪಾದಿಸಿರುವ ಬಜರಂಗದಳದ ದುಷ್ಕರ್ಮಿಗಳು ಶಾಲೆಗೆ ತೆರಳಿ ಮಕ್ಕಳನ್ನು ಮಸೀದಿಗೆ ಕರೆದೊಯ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಶಾಲಾ ಆಡಳಿತ ಮಂಡಳಿಗೆ ಬೆದರಿಕೆ ಹಾಕಿದ್ದಾರೆ.

ವಡೋದರದ ಕಲಾಲಿಯಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್, ಈ ಹಿಂದೆ ನಗರದ ದೇವಸ್ಥಾನಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿತ್ತು. ಈ ವಾರ ಮೌಲ್ಯ ಶಿಕ್ಷಣಕ್ಕಾಗಿ ಕ್ಷೇತ್ರ ಭೇಟಿಯ ಭಾಗವಾಗಿ ಶಿಶುವಿಹಾರದ ಮಕ್ಕಳನ್ನು ಮಸೀದಿಗೆ ಕರೆದೊಯ್ಯಲು ಯೋಜಿಸಿತ್ತು. ಆದರೆ, ಮಂಗಳವಾರ ಬಜರಂಗದಳದ ದುಷ್ಕರ್ಮಿಗಳು ಶಾಲಾ ಆವರಣಕ್ಕೆ ತೆರಳಿ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಇದರ ನಂತರ ಅವರು ಶಾಲೆಯ ಪ್ರಾಂಶುಪಾಲರನ್ನು ಭೇಟಿ ಮಾಡಿ, ಮಸೀದಿಗೆ ಕ್ಷೇತ್ರ ಪ್ರವಾಸವನ್ನು ರದ್ದುಗೊಳಿಸದಿದ್ದರೆ ಆಂದೋಲನ ನಡೆಸುವುದಾಗಿ ‘ಎಚ್ಚರಿಕೆ’ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವಡೋದರಾದ ಬಜರಂಗದಳದ ಅಧ್ಯಕ್ಷ ಕೇತನ್ ತ್ರಿವೇದಿ, “ಮಸೀದಿಗೆ ಕ್ಷೇತ್ರ ಪ್ರವಾಸವನ್ನು ರದ್ದುಗೊಳಿಸಬೇಕು ಎಂದು ನಾವು ಶಾಲೆಯ ಪ್ರಾಂಶುಪಾಲರಿಗೆ ಹೇಳಿದ್ದೇವೆ…ಶಿಕ್ಷಣದೊಂದಿಗೆ ಧರ್ಮವನ್ನು ಬೆರೆಸುವ ಅಗತ್ಯವಿಲ್ಲ. ಅವರು ಚಿಕ್ಕ ಮಕ್ಕಳನ್ನು ಮಸೀದಿಗಳಿಗೆ ಕರೆದೊಯ್ಯುವ ಬದಲು ಪೂಜಾ ಸ್ಥಳಗಳನ್ನು ತೋರಿಸಲು ವರ್ಚುವಲ್ ತಂತ್ರಜ್ಞಾನವನ್ನು ಬಳಸಬಹುದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಸೀದಿ-ಮಂದಿರ ವಿವಾದಗಳಲ್ಲಿ ನ್ಯಾಯಾಲಯಗಳು ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತಿವೆಯೇ?

“ಧರ್ಮದ ಹೆಸರಿನಲ್ಲಿ ತನ್ನ ಶಾಲೆಗೆ ಕೆಟ್ಟ ಹೆಸರು ಬರಬಾರದು. ಇದನ್ನು ಪರಿಗಣಿಸುವ ಬಗ್ಗೆ ನಾವು ಪ್ರಾಂಶುಪಾಲರಿಗೆ ಬಿಟ್ಟಿದ್ದೇವೆ… ಈ ಬಗ್ಗೆ ಪೋಷಕರು ನಮಗೆ ದೂರಿಕೊಂಡಿದ್ದು, ಹೀಗಾಗಿ ನಾವು ಇಲ್ಲಿಗೆ ಬಂದಿದ್ದೇವೆ. ಅವರು ಮಕ್ಕಳನ್ನು ಮಸೀದಿಗೆ ಕರೆದೊಯ್ಯಬೇಕಾಗಿದ್ದ ಗೊತ್ತುಪಡಿಸಿದ ದಿನದಂದು ನಾವು ಮತ್ತೆ ಶಾಲೆಗೆ ಬರಲಿದ್ದು, ಒಂದು ವೇಳೆ ನಮ್ಮ ಎಚ್ಚರಿಕೆ ಪಾಲಿಸದಿದ್ದರೆ, ನಾವು ಆಂದೋಲನ ಪ್ರಾರಂಭಿಸುತ್ತೇವೆ” ಎಂದು ಹೇಳಿದ್ದಾರೆ.

ಶಾಲೆಯು ಕಳೆದ ವಾರ ಪೋಷಕರಿಗೆ ಒಪ್ಪಿಗೆ ಪತ್ರವನ್ನು ನೀಡಿ, ತಮ್ಮ ಮಗುವನ್ನು ನಗರದ ಮಸೀದಿಗೆ ಭೇಟಿ ನೀಡಲು ಸ್ವಯಂಪ್ರೇರಿತ ಅನುಮತಿಯನ್ನು ಕೋರಿತ್ತು. ಫೀಲ್ಡ್ ಟ್ರಿಪ್‌ಗೆ ತಮ್ಮ ಮಕ್ಕಳನ್ನು ಕಳುಹಿಸಲು ಬಯಸುವ ಎಲ್ಲಾ ಪೋಷಕರು ಒಪ್ಪಿಗೆಯಲ್ಲಿ ಫಾರ್ಮ್ ಅನ್ನು ಹಿಂತಿರುಗಿಸಿದ್ದಾರೆ ಎಂದು ಶಾಲೆ ತಿಳಿಸಿದೆ.

ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸಬೇಕೆ ಅಥವಾ ಬೇಡವೆ ಎಂಬುದು ಪೋಷಕರ ಆಯ್ಕೆಯಾಗಿರುವುದರಿಂದ ಯಾವುದೇ ಪೋಷಕರಿಂದ ಯಾವುದೇ ದೂರು ಅಥವಾ ಆಕ್ಷೇಪಣೆ ಬಂದಿಲ್ಲ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ. ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗಾಗಿ ಯೋಜಿಸಲಾದ ಕ್ಷೇತ್ರ ಭೇಟಿಗಳ ಪಟ್ಟಿಯನ್ನು ಶಾಲೆಯು ಎಲ್ಲಾ ಪೋಷಕರಿಗೆ ಮುಂಚಿತವಾಗಿ ಹಸ್ತಾಂತರಿಸಿದೆ. ಈ ಧಾರ್ಮಿಕ ಪೂಜಾ ಸ್ಥಳಗಳ ಭೇಟಿಯಲ್ಲಿ ಚರ್ಚ್‌ಗೆ ಭೇಟಿ ನೀಡುವುದು ಕೂಡಾ ಒಳಗೊಂಡಿದೆ. ಇತರ ಕ್ಷೇತ್ರ ಪ್ರವಾಸಗಳ ಅಂಗವಾಗಿ ಬ್ಯಾಂಕ್, ಬೇಕರಿ ಮತ್ತು ಕಿರಾಣಿ ಅಂಗಡಿಗೆ ಭೇಟಿ ನೀಡುತ್ತವೆ ಎಂದು ಶಾಲೆ ಹೇಳಿದೆ.

ಇದನ್ನೂ ಓದಿ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ; ಇತಿಹಾಸ ಏನು ಹೇಳುತ್ತದೆ?

“ನಮ್ಮ ಗುಂಪುಗಳಲ್ಲಿ ನಮಗೆ ತಿಳಿದಿರುವ ಬಹುತೇಕ ಎಲ್ಲಾ ಪೋಷಕರು ಒಪ್ಪಿಗೆಯ ನಮೂನೆಗಳಿಗೆ ಸ್ವಇಚ್ಛೆಯಿಂದ ಸಹಿ ಮಾಡಿದ್ದಾರೆ. ನಾವೆಲ್ಲರೂ ನಮ್ಮ ಮಕ್ಕಳು ಜಗತ್ತನ್ನು ಅನ್ವೇಷಿಸಲು ಮತ್ತು ಕಲಿಯಲು ಎದುರು ನೋಡುತ್ತಿದ್ದೇವೆ. ಪೂಜಾಸ್ಥಳದ ಭೇಟಿ ನೀಡುವ ಶಾಲೆಯ ಯೋಜನೆಯ ಬಗ್ಗೆ ಯಾವುದೇ ತಪ್ಪು ಇಲ್ಲ” ಎಂದು ಶಿಶುವಿಹಾರದ ವಿದ್ಯಾರ್ಥಿಯ ಪೋಷಕರೊಬ್ಬರು ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ಈ ಹಿಂದೆ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಮಕ್ಕಳು ಸಂತೋಷಪಟ್ಟರು. ಅದೇ ರೀತಿ ಈ ಪ್ರವಾಸದಲ್ಲಿ ಅವರು ಇನ್ನೊಂದು ಪೂಜಾ ಸ್ಥಳದ ಬಗ್ಗೆ ತಿಳಿದುಕೊಳ್ಳಬಹುದು. ಇದು ತುಂಬಾ ನಿರಾಶಾದಾಯಕವಾಗಿದ್ದು, ಕೆಲವು ಫ್ರಿಂಜ್ ಗುಂಪುಗಳು ಪೋಷಕರು ಮತ್ತು ಶಾಲೆಯ ನಡುವೆ ಮಾತ್ರ ಇರಬೇಕಾದ ವಿಷಯಗಳ ಬಗ್ಗೆ ಪ್ರತಿಭಟಿಸುತ್ತಿವೆ” ಎಂದು ಅವರು ಹೇಳಿದ್ದಾರೆ.

ಶಿಶುವಿಹಾರದ ವಿದ್ಯಾರ್ಥಿಯ ಮತ್ತೊಬ್ಬ ಪೋಷಕರೊಬ್ಬರು, “ನನ್ನ ಮಗಳು ಈ ಪ್ರವಾಸಕ್ಕಾಗಿ ತುಂಬಾ ಉತ್ಸುಕಳಾಗಿದ್ದಳು. ನಾವು ಮಸೀದಿಯ ಬಗ್ಗೆ ಅವಳಿಗೆ ಹೇಳುತ್ತಿದ್ದೆವು. ಇದು ಕೇವಲ ಕ್ಷೇತ್ರ ಪ್ರವಾಸವಾಗಿದೆ ಮತ್ತು ಪೋಷಕರಾಗಿ ಅದನ್ನು ನಾವು ಬೆಂಬಲಿಸಿದ್ದೇವೆ. ಮಕ್ಕಳಿಗೆ ಸಾಮರಸ್ಯ ಮತ್ತು ಏಕತೆಯ ಮೌಲ್ಯಗಳನ್ನು ಕಲಿಸಲು ಶಾಲೆ ಪ್ರಯತ್ನಿಸುತ್ತಿದೆ. ಯಾವುದೇ ಚಟುವಟಿಕೆ ಅಥವಾ ಕ್ಷೇತ್ರ ಪ್ರವಾಸಕ್ಕೆ ಮಕ್ಕಳನ್ನು ಕಳುಹಿಸುವಂತೆ ಪೋಷಕರ ಮೇಲೆ ಯಾವುದೇ ಒತ್ತಡ ಇರಲಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬುಲ್ಡೋಜರ್‌‌, ಹಿಜಾಬ್‌, ಬಾಬ್ರಿ ಮಸೀದಿ ಪ್ರಕರಣ: ಲಂಡನ್‌ನಲ್ಲಿ ಜಸ್ಟೀಸ್ ಚಂದ್ರಚೂಡ್‌ ಹೇಳಿದ್ದೇನು?

ಈ ಬಗ್ಗೆ ಶಾಲೆಯ ಪ್ರಿನ್ಸಿಪಾಲ್ ಎ.ಕೆ.ಸಿನ್ಹಾ ಅವರು ಮಾತನಾಡಿ, “ಪ್ರತಿಭಟನಾ ಗುಂಪಿನ ಕಾರ್ಯಕರ್ತರನ್ನು ಭೇಟಿಯಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆಯು ಶಾಲೆಯ ಪ್ರಮುಖ ಆದ್ಯತೆಯಾಗಿದೆ. ಈಗಿನಿಂದಲೆ ಆಗಸ್ಟ್ ತಿಂಗಳಲ್ಲಿ ಶಾಲೆಯು ಆಯೋಜಿಸಿದ ಎಲ್ಲಾ ಕ್ಷೇತ್ರ ಪ್ರವಾಸಗಳನ್ನು ರದ್ದುಗೊಳಿಸಲಾಗಿದೆ” ಎಂದು ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...