Homeನ್ಯಾಯ ಪಥ’ಉಚಿತ ಕೊಡುಗೆ’ ಒಂದು ರೋಗವೆ? ಸುಪ್ರೀಂ ಕೋರ್ಟಿನ ವಿಚಾರಣೆ ಮತ್ತು ಬಡ ಭಾರತದ ಪ್ರಜಾಪ್ರಭುತ್ವ

’ಉಚಿತ ಕೊಡುಗೆ’ ಒಂದು ರೋಗವೆ? ಸುಪ್ರೀಂ ಕೋರ್ಟಿನ ವಿಚಾರಣೆ ಮತ್ತು ಬಡ ಭಾರತದ ಪ್ರಜಾಪ್ರಭುತ್ವ

- Advertisement -
- Advertisement -

ಉಚಿತ ವಿದ್ಯುತ್ ನೀಡುವುದು ಒಂದು ಕೆಟ್ಟ ನೀತಿ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ,
ಸಾಮಾನ್ಯ ಜನರಿಗೆ ಈ ರೀತಿಯ ಉಡುಗೊರೆ ನೀಡುವುದರ ಕುರಿತು ನಾವೇಕೆ ಇಷ್ಟೊಂದು ಅಸಮಾಧಾನ ಹೊಂದುತ್ತೇವೆ? ಅತ್ಯಂತ ಶ್ರೀಮಂತರ ತೆರಿಗೆ ಕಡಿತ ಮತ್ತು ಸಾಲ ಮನ್ನಾ ಕುರಿತು ನಾವೇಕೆ ಚಿಂತೆಯನ್ನೇ ಮಾಡುವುದಿಲ್ಲ?

ನನಗೆ ಅಸ್ಸಾಮಿನ ಹಿರಿಯ ಗೆಳೆಯರೊಬ್ಬರ ಇ-ಮೇಲ್ ಬಂತು. “ಪ್ರತಿ ವರ್ಷವೂ ಅಸ್ಸಾಮಿನಲ್ಲಿ ನೆರೆಗಳು ಉಂಟುಮಾಡುವ ವಿನಾಶದ ಕುರಿತು ಮಧ್ಯಪ್ರವೇಶ ಮಾಡುವಂತೆ ನಾವು ನ್ಯಾಯಾಲಯಗಳ ಮೊರೆಹೋಗಬಹುದೆ?” ಎಂದು ಅವರು ಕೇಳಿದ್ದರು. ಈ ದೂರಿನ ವೇದಿಕೆಯ ಕುರಿತಾಗಲೀ, ಅದರ ಫಲಶ್ರುತಿಯ ಕುರಿತಾಗಲೀ ಸ್ಪಷ್ಟವಾಗಿ ತಿಳಿಯದೆ, ಅವರು ಸ್ವಲ್ಪ ಹಿಂಜರಿಕೆಯಿಂದಲೇ ಬರೆದಿದ್ದರು. ಆದರೆ, ದಿನನಿತ್ಯ ಎಂಬಂತೆ ನನ್ನನ್ನು ಸಂಪರ್ಕಿಸುವ ಇತರರಿಗೆ ಇಂತಾ ಸಂಶಯವಾಗಲೀ, ಹಿಂಜರಿಕೆಯಾಗಲೀ ಇಲ್ಲವೇ ಇಲ್ಲ. ಅಗ್ನಿಪಥ ಯೋಜನೆ, ಗೋದಿಯ ರಫ್ತು ಅಥವಾ ರಫ್ತಿನ ನಿಷೇಧ, ಅಥವಾ ಹೀಗೆ ಇನ್ನೂ ಹಲವು ವಿಷಯಗಳ ಕುರಿತು ವಕೀಲ ಪ್ರಶಾಂತ್ ಭೂಷಣ್ ಅವರು ನ್ಯಾಯಾಲಯದ ಮೊರೆಹೋದರೆ ಮಾತ್ರವೇ ದೇಶ ಉಳಿಯಬಹುದು ಎಂಬುದು ಅವರ ದೃಢ ನಂಬಿಕೆ. ಅವರು ಎತ್ತುವ ವಿಷಯಗಳು ನನ್ನ ಹೃದಯಕ್ಕೂ ಹತ್ತಿರವಾದವುಗಳೇ. ಆದರೆ, ಸಮಸ್ಯೆ ಅಥವಾ ಪರಿಹಾರ ಕಾನೂನಿನಲ್ಲಿ ಇದೆ ಎಂದು ಅವರೇಕೆ ಯೋಚಿಸುತ್ತಾರೆಂದು ನನಗೆ ಸ್ಪಷ್ಟವಾಗಿಲ್ಲ. ’ನೀನು ಪ್ರಶಾಂತ್ ಭೂಷಣ್ ಅವರ ಗೆಳೆಯನಾಗಿರುವುದಕ್ಕೆ ತೆರಬೇಕಾಗಿರುವ ಬೆಲೆಯಿದು’ ಎಂದು- ನಾನು ಪ್ರತೀ ವಾರವೂ ಇಂತಾ ಕೆಲವು ವಿನಂತಿಗಳನ್ನು ಅವರಿಗೆ ವರ್ಗಾಯಿಸುವಾಗ- ನನಗೆ ನಾನೇ ಹೇಳಿಕೊಳ್ಳುತ್ತೇನೆ. ಇಂತಹ ವಿನಂತಿಗಳ ವಿಶೇಷವಾದ ವಿಭಾಗವೊಂದನ್ನು ನಾನು ಗಮನಿಸಿದ್ದೇನೆ. ಕಾನೂನಿನ ಮಧ್ಯಪ್ರವೇಶದ ಮೂಲಕ ಭಾರತೀಯ ರಾಜಕಾರಣದಲ್ಲಿ ಸುಧಾರಣೆ ತರಲು ಬಯಸುವ ನನ್ನ ಗೆಳೆಯರಿವರು.

ಪ್ರಶಾಂತ್ ಭೂಷಣ್

1960ರಿಂದ 80ರ ದಶಕದವರೆಗೂ ಈ ವಿನಂತಿಗಳು- ’ಮೊದಲು ಬಂದವರು ವಿಜಯಿ’ ಎಂಬ ಚುನಾವಣಾ ವ್ಯವಸ್ಥೆಯಿಂದ, ಪ್ರಮಾಣಕ್ಕೆ ಅನುಗುಣವಾಗಿ ಪ್ರಾತಿನಿಧ್ಯ ನೀಡುವ ವ್ಯವಸ್ಥೆಗೆ ನಾವು ಬದಲಾಗಬೇಕು ಎಂಬಂತವುಗಳಾಗಿರುತ್ತಿದ್ದವು. ಚುನಾವಣಾ ಆಯೋಗವು ಟಿ.ಎನ್. ಶೇಷನ್ ಅವರ ನೇತೃತ್ವದಲ್ಲಿ ಮಾಡಿದ ಚುನಾವಣಾ ಸುಧಾರಣೆಗಳು ಮುನ್ನೆಲೆಗೆ ಬಂದುದರಿಂದ ಈ ಧ್ವನಿಗಳು ಇನ್ನಷ್ಟೂ ಜೋರಾದವು ಮತ್ತು ’ಗಂಭೀರವಲ್ಲದ ಆಭ್ಯರ್ಥಿಗಳು’ ಚುನಾವಣಾ ಕಣಕ್ಕೆ ಇಳಿಯಂತೆ ಮಾಡೋಣ, ಅತಂತ್ರ ಪರಿಸ್ಥಿತಿ ಉಂಟಾಗದಂತೆ ತಡೆಯೋಣ, ಕ್ರಿಮಿನಲ್‌ಗಳು ಮತ್ತು ಭ್ರಷ್ಟರು ಚುನಾಯಿತರಾಗದಂತೆ ತಡೆಯೋಣ ಮುಂತಾದ ಬೇಡಿಕೆಗಳು ಹೆಚ್ಚಾದವು. ಯಾವುದೇ ಜಾತಿ ಅಥವಾ ಕೋಮಿನ ಹೆಸರಿನಲ್ಲಿ ಮತ ಕೇಳುವುದನ್ನು ತಡೆಯೋಣ, ಪಕ್ಷಗಳು ತಾವು ನೀಡಿದ ಚುನಾವಣಾ ಭರವಸೆಗಳಿಗೆ ಕಾನೂನು ಪ್ರಕಾರ ಬದ್ಧವಾಗಿರುವಂತೆ ಮಾಡೋಣ- ಇತ್ಯಾದಿಯಾಗಿ ಈ ಪಟ್ಟಿಗೆ ಇನ್ನಷ್ಟು ವಿಷಯಗಳು ನಂತರದಲ್ಲಿ ಸೇರಿಕೊಂಡವು.

ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆಗೆ ಇಡಿ ಸಮನ್ಸ್‌: ‘ಮೋದಿಶಾಹಿ’ ಅಧೋಗತಿಗೆ ತಲುಪುತ್ತಿದೆ ಎಂದ ಕಾಂಗ್ರೆಸ್‌

ಪ್ರತೀ ಸಲ ನಾನು ಇಂತಹ ಪ್ರಸ್ತಾಪಗಳನ್ನು ಕೇಳಿದಾಗ ನನಗೆ ಬೀದಿ ದೀಪದ ಕೆಳಗೆ ತನ್ನ ಕಳೆದುಹೋದ ಬೀಗದ ಕೈ ಹುಡುಕುತ್ತಿದ್ದ ವ್ಯಕ್ತಿಯೊಬ್ಬನ ಕುರಿತ ಜೋಕೊಂದು ನೆನಪಾಗುತ್ತದೆ. “ಬೀಗದ ಕೈ ಕಳೆದು ಹೋದದ್ದು ಎಲ್ಲಿ?” ಎಂದು ಕೇಳಿದಾಗ, ಆತ ಕತ್ತಲಲ್ಲಿ ಇದ್ದ ದೂರದ ಸ್ಥಳವೊಂದನ್ನು ತೋರಿಸುತ್ತಾನೆ. “ಹಾಗಾದರೆ ನೀನದನ್ನು ಈ ಬೀದಿ ದೀಪದ ಕೆಳಗೆ ಯಾಕೆ ಹುಡುಕುತ್ತಿದ್ದೀಯ?” ಎಂದು ಕೇಳಿದಾಗ, ಆವನು ಮುಗ್ಧವಾಗಿ ಉತ್ತರಿಸುತ್ತಾನೆ: “ಇಲ್ಲಿ ಬೆಳಕು ಇದೆಯಲ್ಲ; ಅಲ್ಲಿ ಕತ್ತಲೆ!” ರಾಜಕೀಯದ ರೋಗಗಳನ್ನು ಗುಣಪಡಿಸಲು ಕಾನೂನು, ನ್ಯಾಯಾಂಗ ಮತ್ತು ಸಾಂಸ್ಥಿಕ ಪರಿಹಾರಗಳನ್ನು ಬಯಸುವವರು ಹೆಚ್ಚಾಗಿ ಆ ಮನುಷ್ಯನಷ್ಟೇ ಮುಗ್ಧರೋ, ಪೆದ್ದರೋ ಆಗಿರುತ್ತಾರೆ. ಇದಕ್ಕಿಂತಲೂ ಕೆಟ್ಟ ವಿಷಯವೆಂದರೆ, ಇಂತಾ ಹಸ್ತಕ್ಷೇಪಗಳು ಹಲವು ಬಾರಿ ಪ್ರಜಾಪ್ರಭುತ್ವವೊಂದರಲ್ಲಿ ಸಾಮಾನ್ಯ ಜನರ ಅಗತ್ಯ ಮತ್ತು ಆಶಯಗಳ ಬದಲಿಗೆ ಪ್ರತಿಷ್ಟಿತರ ಕಳವಳ-ಆತಂಕಗಳನ್ನು ಕೂರಿಸಬಯಸುತ್ತವೆ.

ಹಿಂದೆ1996ರಲ್ಲಿ, ಚುನಾವಣಾ ಸುಧಾರಣೆಗಳ ಮೇಲಿನ ಚಿಂತನೆಗಳ ಕುರಿತು ’ಬಿಯಾಂಡ್ ಮಿಡಲ್ ಕ್ಲಾಸ್ ಫ್ಯಾಂಟೆಸೀಸ್’ (ಮಧ್ಯಮ ವರ್ಗದ ಭ್ರಮೆಗಳ ಆಚೆ) ಎಂಬ ಕಟುವಾದ ಲೇಖನವೊಂದನ್ನು ನಾನು ಬರೆದೆ. (ಸೆಮಿನಾರ್, ನಂ. 440, ಎಪ್ರಿಲ್ 1996.) ಏನೂ ಬದಲಾಗಲಿಲ್ಲ- ನಾನು ಕೆಲವು ಗೆಳೆಯರ ಅನುಕಂಪ ಕಳೆದುಕೊಳ್ಳುವುದರ ಹೊರತಾಗಿ. ನಂತರದಲ್ಲಿ ರಾಜಕೀಯ ಸುಧಾರಣೆ ಏನು, ಏಕೆ, ಹೇಗೆ ಎಂಬ ಕುರಿತು ವಿವರಿಸುತ್ತಾ, ಹೆಚ್ಚು ಉದ್ದವಾದ, ಹೆಚ್ಚು ನಿರಾಳವಾದ ಆವೃತ್ತಿಯನ್ನು ಬರೆದೆ. ಆದರೆ, ದೇಶದ ಎಲ್ಲಾ ರಾಜಕೀಯ ರೋಗಗಳಿಗೆ ಯಾವುದಾದರೂ ಕಾನೂನು ಅಥವಾ ಇನ್ನಾವುದರ ಮೂಲಕವೇ ಅಂತಿಮ ಪರಿಹಾರ ಕಂಡುಕೊಳ್ಳಲು ಬಯಸುವವರ ಉತ್ಸಾಹವನ್ನು ಮಾತ್ರ ಇದ್ಯಾವುದೂ ಕುಂದಿಸಿಲ್ಲ.

ನಾವೊಂದು ಮಂತ್ರದ ಕಷಾಯ ಹುಡುಕುತ್ತಿರುವ ದೇಶವಾಗಿದ್ದೇವೆ. ನಾವು ಎಂತ ಅವಸರದಲ್ಲಿದ್ದೇವೆ ಎಂದರೆ, ನಿಜವಾಗಿಯೂ ರೋಗವಿದೆಯೇ ಅಥವಾ ಅದಕ್ಕೆ ನಾವು ಬಯಸುವಂತಾ ರೀತಿಯ ಮದ್ದಿನ ಅಗತ್ಯ ಇದೆಯೇ ಎಂದು ಯೋಚಿಸುವಷ್ಟೂ ನಮಗೆ ವ್ಯವಧಾನವಿಲ್ಲ. ನಾವು ಎಷ್ಟು ಹತಾಶರಾಗಿದ್ದೇವೆ ಎಂದರೆ, ವೈದ್ಯನ ಕುರಿತಾಗಲೀ ಮದ್ದಿನ ಕುರಿತಾಗಲೀ ವಿಚಾರಿಸಿ ನೋಡಲು ಸಮಯ ವ್ಯರ್ಥ ಮಾಡುವಂತಿಲ್ಲ. ನಮಗೆ ಪಕ್ಕಾ ಪರಿಹಾರ ಬೇಕು: ಇಲ್ಲೇ ಮತ್ತು ಈಗಿಂದೀಗಲೇ!

ರೋಗಕ್ಕಿಂತಲೂ ಕೆಟ್ಟ ಪರಿಹಾರ?

ಈ ಮಹಾ ಕಥಾನಕದಲ್ಲಿ ಇತ್ತೀಚಿನದ್ದು ಎಂದರೆ, ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದ ವೇಳೆ ’ವಿವೇಚನೆಯಿಲ್ಲದ ಉಚಿತ ಕೊಡುಗೆ’ಗಳ ಭರವಸೆ ನೀಡುವುದನ್ನು ತಡೆಯಬೇಕು, ಇಲ್ಲವಾದರೆ ಚುನಾವಣಾ ಆಯೋಗವು ಅಂತಾ ಪಕ್ಷಗಳ ಚುನಾವಣಾ ಚಿಹ್ನೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಸುಪ್ರೀಂಕೋರ್ಟನ್ನು ಕೋರುವ ಅರ್ಜಿ. ಅರ್ಜಿದಾರ, ವಕೀಲ ಮತ್ತು ಚಿಕ್ಕ ಮಟ್ಟದ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಎಂಬವರು ಕೋಮುದ್ವೇಷ ಹರಡುತ್ತಿರುವ ಆರೋಪಗಳ ಸಹಿತ ಹಲವಾರು ತಪ್ಪು ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾರೆ ಎಂದಷ್ಟೇ ಹೇಳಿದರೆ ಸಾಕಾಗುತ್ತದೆ. ಚುನಾವಣಾ ಸುಧಾರಣೆಗಳಿಗೆ ನೇರವಾಗಿ ಸಂಬಂಧ ಹೊಂದಿರುವ ಚುನಾವಣಾ ಬಾಂಡ್‌ಗಳ ಪ್ರಕರಣದ ವಿಚಾರಣೆಗೆ ಸಮಯ ಹೊಂದಿಸಲಾಗದ ಸುಪ್ರೀಂ ಕೋರ್ಟ್, ತನ್ನ ಅಮೂಲ್ಯವಾದ ಸಮಯವನ್ನು ಇಂತಹದ್ದೊಂದು ಅರ್ಜಿಯ ವಿಚಾರಣೆಗೆ ಕೊಡುತ್ತಿದೆ ಎಂಬುದರ ಕುರಿತೂ ನಾವು ಗಮನ ಕೇಂದ್ರೀಕರಿಸುವುದು ಬೇಡ. ವರದಿಗಳ ಪ್ರಕಾರ, ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರ ನೇತೃತ್ವದ ಪೀಠವು, ಈ ಉಚಿತ ಕೊಡುಗೆಗಳು ಮುಂದುವರಿಯಬೇಕೇ ಬೇಡವೇ ಎಂಬ ಕುರಿತು ನಿಲುವೊಂದನ್ನು ತಳೆಯಬೇಕು ಎಂದು ಕೇಂದ್ರ ಸರಕಾರವನ್ನು ಕೋರಿದ್ದು, ಮುಂದಿನ ವಿಚಾರಣೆಗೆ ಆಗಸ್ಟ್ 3ರ ದಿನಾಂಕ ನಿಗದಿಪಡಿಸಿದೆ.

ಅಶ್ವಿನಿ ಉಪಾಧ್ಯಾಯ

ಒಂದು ಕ್ಷಣ ನಾವು ’ಉಚಿತ ಕೊಡುಗೆ’ ಎಂಬ ವ್ಯಾಪಕವಾದ ರಾಜಕೀಯ ರೋಗ ಇದೆ ಎಂದೇ ಅಂದುಕೊಳ್ಳೋಣ. ಆದುದರಿಂದ, ಇದರ ಕುರಿತಾಗಿ ಆತಂಕ ಹೊಂದಿರುವ ಎಲ್ಲರೂ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು: ಈ ರೋಗ ಎಷ್ಟು ಗಂಭೀರವಾದದ್ದು? ಇದು ನನ್ನ ಆದ್ಯತೆಗಳ ಪಟ್ಟಿಯಲ್ಲಿ ಅತ್ಯಂತ ಮೇಲೆ ಇದೆಯೆ? ಇದು ಗುಣವಾಗಬಹುದೆ? ಚಿಕಿತ್ಸೆ ಕೈಗೆಟಕುವಂತದ್ದೆ? ಅಥವಾ ಆ ರೋಗಕ್ಕಿಂತ ಅದರ ಚಿಕಿತ್ಸೆಯೇ ಹೆಚ್ಚು ಖರ್ಚಿನದಾಗಿದ್ದರೆ, ರೋಗದೊಂದಿಗೆಯೇ ಬದುಕಲು ನಾನು ಕಲಿಯಬೇಕೆ? ಅದನ್ನು ಗುಣಪಡಿಸಬೇಕಾದರೆ, ಸರಿಯಾದ ವೈದ್ಯರು ಯಾರು? ಸರಿಯಾದ ಔಷಧಿ ಯಾವುದು?

ಈಗ ನೀವು ಒಂದು ನಿಮಿಷ ಯೋಚನೆ ಮಾಡಿದರೂ ಸಾಕು; ಯಾವುದೇ ರಾಜಕೀಯ ಪಕ್ಷದ ಚುನಾವಣಾ ಚಿಹ್ನೆಯನ್ನು ಕಿತ್ತುಕೊಳ್ಳುವುದು, ಅಥವಾ ಆ ಮೂಲಕ, ಚುನಾವಣಾ ಯಶಸ್ಸಿನ ಯಾವುದೇ ಅವಕಾಶವನ್ನು ಇಲ್ಲದಂತೆ ಮಾಡುವುದು ರೋಗಕ್ಕಿಂತಲೂ ಕೆಟ್ಟದಾದ ಚಿಕಿತ್ಸೆ ಎಂದು ತಿಳಿದುಬಿಡುತ್ತದೆ. ಒಂದು ಪ್ರಜಾಪ್ರಭುತ್ವದಲ್ಲಿ ಯಾರ ಕೈಗೂ ಇಂತಾ ಕೊಡಲಿಯನ್ನು ಕೊಡಬಾರದು; ಯಾಕೆಂದರೆ, ಅಂತಾ ಕೊಡಲಿ ಹೊಂದಿದ ವ್ಯಕ್ತಿ ಅಥವಾ ಸಂಸ್ಥೆ ಜನರಿಗಿಂತಲೂ ಹೆಚ್ಚು ಶಕ್ತಿಶಾಲಿ ಆಗುವ ಕಾರಣಕ್ಕಾಗಿ. ಚುನಾವಣಾ ಆಯೋಗವು ಈಗಾಗಲೇ ಕಳೆದುಕೊಂಡಿರುವುದಕ್ಕಿಂತಲೂ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಇನ್ನೂ ಕಳೆದುಕೊಳ್ಳಬಾರದು ಎಂದಾದರೆ, ಇಂತಾ ಅಧಿಕಾರವನ್ನು ಅದಕ್ಕೆ ಯಾವತ್ತೂ ನೀಡಬಾರದು. “ಇದು ಮತದಾರರೇ ನಿರ್ಧರಿಸಬೇಕಾದ ಪ್ರಶ್ನೆ” ಎಂದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಹೇಳಿರುವುದು ಸರಿಯಾಗಿದೆ.

ಈ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವಂತೆ ಹಣಕಾಸು ಆಯೋಗವನ್ನು ಕೇಳಬಹುದೇ ಎಂಬುದನ್ನು ಮುಖ್ಯ ನ್ಯಾಯಮೂರ್ತಿಯನ್ನೊಳಗೊಂಡ ಪೀಠವು ಪರಿಗಣಿಸಿದೆ ಎಂದು ವರದಿಗಳು ಹೇಳುತ್ತವೆ. ವಾಸ್ತವವೆಂದರೆ, ಯಾವುದೇ ಸಂಸ್ಥೆಯು ಇಂತಾ ಒಂದು ಅಧಿಕಾರವನ್ನು ಅನಿಯಂತ್ರಿತವಾಗಿ ಅಥವಾ ನಿರಂಕುಶವಾಗಿ ಚಲಾಯಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವವನ್ನು ಕೊಲ್ಲುವ ಅತ್ಯಂತ ಸಾಮಾನ್ಯ ಉಪಾಯ ಎಂದರೆ, ಒಂದಲ್ಲದಿದ್ದರೆ, ಇನ್ನೊಂದು ನೆಪ ಹೂಡಿ ಪ್ರತಿಸ್ಪರ್ಧಿಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸುವುದು ಎಂಬುದನ್ನು ನಾವು ಮರೆಯುವುದು ಬೇಡ. ಇಂತಾ ಒಂದು ಅವಕಾಶದ ಕಿಟಕಿ ನಮ್ಮ ದೇಶದಲ್ಲಿ ಈ ತನಕ ಇಲ್ಲ. ಇಂತಾ ಕಿಟಕಿಯೊಂದನ್ನು ಯಾವತ್ತೂ ತೆರೆಯಬಾರದು.

’ಉಚಿತ ಕೊಡುಗೆ’ ಒಂದು ರೋಗವೆ?

ಹಾಗಾದರೆ, ರೋಗವನ್ನು ಗುಣಪಡಿಸುವುದು ಹೇಗೆ? ಈ ಪ್ರಶ್ನೆಯನ್ನು ಮುಂದುವರಿಸಿ, ಇನ್ನೊಂದು ಪರಿಹಾರವನ್ನು ಹುಡುಕುವ ಮೊದಲು ಒಂದು ಚಿಂತನೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳೋಣ; ಪ್ರಜಾಪ್ರಭುತ್ವವೊಂದರಲ್ಲಿ ರಾಜಕೀಯವು ಸ್ವಯಂ ನಿಯಂತ್ರಿತ ಚಟುವಟಿಕೆಯಾಗಿರಬೇಕು. ನೀವು ಪ್ರಜಾಪ್ರಭುತ್ವವನ್ನು ಬಾಹ್ಯ ಬೆದರಿಕೆಗಳಿಂದ ರಕ್ಷಿಸಬಹುದು; ತಾತ್ಕಾಲಿಕ ತಪ್ಪುಗಳಿಂದ, ವೈಯಕ್ತಿಕ ತೆವಲುಗಳಿಂದ, ಬಹುಸಂಖ್ಯಾತವಾದಿ ಅತಿರೇಕಗಳಿಂದ ರಕ್ಷಿಸಿಕೊಳ್ಳಬಹುದು. ಆದರೆ, ನೀವು ಪ್ರಜಾಪ್ರಭುತ್ವವನ್ನು ಜನರಿಂದಲೇ ರಕ್ಷಿಸಿಕೊಳ್ಳಲು ಆಗದು.

ಒಂದು ವೇಳೆ ’ಉಚಿತ ಕೊಡುಗೆ’ಗಳು ಜನರನ್ನು ಆಕರ್ಷಿಸುತ್ತವೆ ಎಂದಾದರೆ, ನೀವು ಅವರಿಗೆ ಈ ಕುರಿತು ತಿಳುವಳಿಕೆ ನೀಡಬಹುದು. ಇಂತಾ ಭರವಸೆಗಳ ಪೊಳ್ಳುತನವನ್ನು ಬಹಿರಂಗಗೊಳಿಸಲು ಸಾಧ್ಯವಾಗುವಂತೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುವುದನ್ನು ಕಡ್ಡಾಯ ಮಾಡಬಹುದು. ಕಾರ್ಯಸಾಧ್ಯವಲ್ಲದ ಭರವಸೆಗಳನ್ನು ನೀಡುವ ಪಕ್ಷಗಳು ಮತ್ತು ನಾಯಕರನ್ನು ಈ ಕುರಿತು ಪ್ರಶ್ನಿಸಲು ಮಾಧ್ಯಮಗಳಿಗೆ ಹೆಚ್ಚಿನ ಅಧಿಕಾರ ನೀಡಬಹುದು. ಒಂದು ವೇಳೆ ಜನರು ಅತ್ಯಂತ ದೊಡ್ಡ ವರ್ಗ ಒಂದು ದೂರಕಾಲೀನ ಕಾರ್ಯಸೂಚಿಯನ್ನು ಬಯಸಿದರೆ, ಸ್ವತಃ ಪ್ರಜಾಪ್ರಭುತ್ವವನ್ನೇ ದಮನಿಸದೆ ನೀವೇನೂ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.

ಅಂತಿಮವಾಗಿ ’ಉಚಿತ ಕೊಡುಗೆ’ಗಳ ಬಗ್ಗೆ, ಅಂದರೆ, ’ರೋಗ’ದ ಬಗ್ಗೆಯೇ ಒಂದು ಚಿಂತನೆ. ’ಉಚಿತ ಕೊಡುಗೆ’ಗಳನ್ನು ನೀಡುವುದು ಒಂದು ಸಮಸ್ಯೆ ಎಂದು ನಾವೇಕೆ ಭಾವಿಸಬೇಕು? ಮೇಲ್ನೋಟಕ್ಕೇ ಇಂತಹ ನೀತಿಗಳು ಬೇಜವಾಬ್ದಾರಿಯುತ ಮತ್ತು ರಾಷ್ಟ್ರೀಯ ಆರ್ಥಿಕ ಸಂಪನ್ಮೂಲಗಳ ಪೋಲು ಎಂಬಂತೆ ಕಾಣುತ್ತವೆ. ನನ್ನನ್ನು ಕೇಳಿದರೆ, ಉಚಿತ ವಿದ್ಯುತ್ ಒಂದು ಕೆಟ್ಟ ನೀತಿ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ, ಸಾಮಾನ್ಯ ಜನರಿಗೆ ಈ ರೀತಿಯ ಉಡುಗೊರೆ ನೀಡುವ ಬೇಜವಾಬ್ದಾರಿ ಆರ್ಥಿಕ ನೀತಿಗಳನ್ನು ಕುರಿತು ಮಾತ್ರವೇ ನಾವೇಕೆ ಇಷ್ಟೊಂದು ಅಸಮಾಧಾನ ಹೊಂದುತ್ತೇವೆ? ಅತ್ಯಂತ ಶ್ರೀಮಂತರ ತೆರಿಗೆ ಕಡಿತ, ಲಾಭದ ಮಳೆ ಸುರಿಸುವ ಕಾರ್ಯಕ್ರಮಗಳು ಮತ್ತು ಸಾಲ ಮನ್ನಾ ಕುರಿತು ನಾವೇಕೆ ಚಿಂತೆಯನ್ನೇ ಮಾಡುವುದಿಲ್ಲ?

ಈ ರೀತಿಯ ತರ್ಕರಹಿತ ’ಉಚಿತ ಕೊಡುಗೆ’ಗಳ ಭರವಸೆಗಳಿಗೆ ಬಲಿಬೀಳುವ ಬಡ ಮತದಾರರು ಅಷ್ಟೊಂದು ತರ್ಕರಹಿತರಲ್ಲ ಎಂಬುದರಿಂದಾಗಿ ಆಗಿರಬಹುದೆ? ಬಹುಶಃ ಅವರಿಗೆ ಪ್ರಜಾಪ್ರಭುತ್ವದ ತರ್ಕ ಮತ್ತು ಮೇಲಿಂದ ಕೆಳಕ್ಕೆ ಇಳಿದುಬರುವ ಆರ್ಥಿಕತೆಯ ಅಸಾಧ್ಯತೆ ತಜ್ಞರಿಗಿಂತ ಹೆಚ್ಚಾಗಿ ಅರ್ಥವಾಗುತ್ತದೆ. ತಾರ್ಕಿಕ ವಿವೇಚನೆಯಿಂದ ಕೆಲಸ ಮಾಡುವ ನೀತಿಗಳು ಹೇಗಿದ್ದರೂ ತಮಗೆ ಹೆಚ್ಚಿನದೇನನ್ನೂ ನೀಡುವುದಿಲ್ಲ; ಈಗಲೇ, ಇಲ್ಲಿಯೇ ಎಷ್ಟನ್ನು ಬಾಚಿಕೊಳ್ಳಲು ಸಾಧ್ಯವೋ ಅಷ್ಟೇ ತಮಗೆ ಸಿಗುವುದು ಎಂದು ಬಹುಶಃ ಅವರಿಗೆ ಅರ್ಥವಾಗಿದೆ. ಕೆಲವು ನೇರ ಮತ್ತು ಕಣ್ಣಿಗೆ ಕಾಣುವ ಸರಕುಗಳು ಮತ್ತು ’ಉಚಿತ ಕೊಡುಗೆ’ಗಳು ಮಾತ್ರವೇ ವಾಸ್ತವದಲ್ಲಿ ತಮಗೆ ದಕ್ಕಲಿರುವುದು ಎಂದು ಅವರಿಗೆ ಗೊತ್ತಿರುವುದರಿಂದಲೇ ಅವರು ಅವುಗಳಿಗಾಗಿಯೇ ಮತ ಹಾಕುತ್ತಾರೆ. ಈ ’ಉಚಿತ ಕೊಡುಗೆ’ಗಳ ಬಗ್ಗೆ ಚಿಂತಿತರಾಗಿರುವವರು ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ಹಿಂದೊಮ್ಮೆ ಕರೆದಿದ್ದ ’ತಾರ್ಕಿಕ ಮೂರ್ಖ’ರೇ ಆಗಿರಬಹುದೆ?

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು ಮತ್ತು ಸ್ವರಾಜ್ ಇಂಡಿಯಾದ ರಾಷ್ಟಾಧ್ಯಕ್ಷರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.


ಇದನ್ನೂ ಓದಿ: ಮಸೀದಿ-ಮಂದಿರ ವಿವಾದಗಳಲ್ಲಿ ನ್ಯಾಯಾಲಯಗಳು ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತಿವೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...