ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಿಜೆಪಿ ವತಿಯಿಂದ ನಡೆಸಲಾಗಿದ್ದ ‘ತಿರಂಗ ಯಾತ್ರೆ’ಯಲ್ಲಿ ಕಾಯಕರ್ತರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ. ಯುಪಿ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರನ್ನು ಸ್ವಾಗತಿಸಲು ಮೋತಿಝೀಲ್ ಪ್ರದೇಶದಲ್ಲಿ ಜಮಾಯಿಸಿದ್ದ ಸಂದಂರ್ಭದಲ್ಲಿ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ.
ಉಪಮುಖ್ಯಮಂತ್ರಿ ಭಾಗವಹಿಸಲಿದ್ದ ಯಾತ್ರೆಯಲ್ಲಿ ಎರಡು ಗುಂಪುಗಳ ವಾಹನಗಳಲ್ಲಿದ್ದ ಜನರ ನಡುವೆ ಉಂಟಾದ ವಿವಾದದಿಂದ ಘರ್ಷಣೆ ಆರಂಭವಾಯಿತು. ಆದರೆ ಹಿರಿಯ ನಾಯಕರು ಪರಿಸ್ಥಿತಿಯನ್ನು ಶೀಘ್ರದಲ್ಲೇ ಹತೋಟಿಗೆ ತಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬಿಜೆಪಿ ಕಾನ್ಪುರ ಘಟಕದ ಮುಖ್ಯಸ್ಥ ಸುನಿಲ್ ಬಜಾಜ್ ಅವರು ಬೈಕ್ ಅಪಘಾತಕ್ಕೆ ಸಂಬಂಧಿಸಿದಂತೆ ಇದು ಮಕ್ಕಳ ನಡುವಿನ ಸಣ್ಣ ಜಗಳ ಎಂದು ಹೇಳಿದ್ದು, “ಇವರು ಬಿಜೆಪಿ ಕಾರ್ಯಕರ್ತರು, ಅವರು ಶಿಸ್ತುಬದ್ಧರಾಗಿದ್ದು, ಯಾತ್ರೆಯು ಶಾಂತಿಯುತವಾಗಿ ಮುಂದುವರೆಯಿತು” ಎಂದು ಹೇಳಿದ್ದಾರೆ.
भाजपाइयों से अनुरोध है ‘तिरंगा यात्रा’ को ‘दंगा यात्रा’ न बनाएं। pic.twitter.com/Ugaz0yxDoS
— Akhilesh Yadav (@yadavakhilesh) August 10, 2022
ಇದನ್ನೂ ಓದಿ: ನಾಯಿ ಕೂಡಾ ತಿನ್ನದ ಆಹಾರವನ್ನು ನಮಗೆ ನೀಡಲಾಗುತ್ತಿದೆ: ಯುಪಿ ಪೊಲೀಸ್ ಸಿಬ್ಬಂದಿ ಪ್ರತಿಭಟನೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ವಿರೋಧ ಪಕ್ಷದ ನಾಯಕ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, “ತಿರಂಗ ಯಾತ್ರೆಯನ್ನು ‘ಗಲಭೆ ಯಾತ್ರೆ’ ಆಗಿ ಪರಿವರ್ತಿಸಬೇಡಿ ಎಂದು ಬಿಜೆಪಿ ಪಕ್ಷಕ್ಕೆ ಮನವಿ ಮಾಡುತ್ತಿದ್ದೇನೆ” ಎಂದು ಹೇಳಿದ್ದಾರೆ.


