Homeಮುಖಪುಟನಾಯಿ ಕೂಡಾ ತಿನ್ನದ ಆಹಾರವನ್ನು ನಮಗೆ ನೀಡಲಾಗುತ್ತಿದೆ: ಯುಪಿ ಪೊಲೀಸ್ ಸಿಬ್ಬಂದಿ ಪ್ರತಿಭಟನೆ

ನಾಯಿ ಕೂಡಾ ತಿನ್ನದ ಆಹಾರವನ್ನು ನಮಗೆ ನೀಡಲಾಗುತ್ತಿದೆ: ಯುಪಿ ಪೊಲೀಸ್ ಸಿಬ್ಬಂದಿ ಪ್ರತಿಭಟನೆ

- Advertisement -
- Advertisement -

ಉತ್ತರ ಪ್ರದೇಶ ಪೊಲೀಸ್ ಪೇದೆಯೊಬ್ಬರು ಫಿರೋಜಾಬಾದ್‌ನ ಪೊಲೀಸ್ ಲೈನ್ಸ್‌ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದಾಗಿ ಪ್ರತಿಭಟಿಸಿದ್ದು ಸಾರ್ವಜನಿಕವಾಗಿ ಅಳಲು ತೋಡಿಕೊಂಡಿದ್ದಾರೆ. ಕಣ್ಣೀರು ಹಾಕುತ್ತಲೆ ಮಾತನಾಡಿರುವ ಕಾನ್‌ಸ್ಟೆಬಲ್ ಮನೋಜ್ ಕುಮಾರ್ ಅವರು ಪೊಲೀಸ್ ಸಿಬ್ಬಂದಿಗೆ ಮೆಸ್‌ನಲ್ಲಿ ನೀರು ನೀರಾಗಿರುವ ಬೇಳೆ ಮತ್ತು ಬೇಯಿಸದ ರೊಟ್ಟಿಗಳನ್ನು ನೀಡಲಾಗುತ್ತದೆ ಎಂದು ಆರೋಪಿಸಿದ್ದು, ಈ ಬಗ್ಗೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಕೈಯಲ್ಲಿ ರೊಟ್ಟಿ, ಅನ್ನ ಮತ್ತು ದಾಲ್‌ನ ಬಟ್ಟಲಿನೊಂದಿಗೆ ಪ್ರತಿಭಟನೆ ನಡೆಸಿದ ಕಾನ್‌ಸ್ಟೆಬಲ್ ಮನೋಜ್ ಕುಮಾರ್‌, “ಪೊಲೀಸರು 12 ಗಂಟೆಗಳ ಕರ್ತವ್ಯ ನಿರ್ವಹಿಸಿದ ನಂತರ ಈ ಆಹಾರವನ್ನು ತಿನ್ನುತ್ತಿದ್ದಾರೆ. ನಾಯಿ ಕೂಡ ಇದನ್ನು ತಿನ್ನುವುದಿಲ್ಲ. ನಾವು ಈ ಆಹಾರವನ್ನು ತಿನ್ನಲು ಸಾಧ್ಯವಿಲ್ಲ. ನಮ್ಮ ಹೊಟ್ಟೆಗೆ ಏನೂ ಇಲ್ಲದಿದ್ದರೆ ನಾವು ನಮ್ಮ ಕರ್ತವ್ಯಗಳನ್ನು ಹೇಗೆ ನಿರ್ವಹಿಸುವುದು?” ಎಂದು ಅವರು ಪ್ರಶ್ನಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪೋಲಿಸ್ ಸಿಬ್ಬಂದಿಗೆ ಪೌಷ್ಠಿಕಾಂಶದ ಆಹಾರ ನೀಡುವುದನ್ನು ಖಚಿತಪಡಿಸಿಕೊಳ್ಳಲು ಅವರಿಗೆ ನೀಡಲಾಗುವ ಭತ್ಯೆಯನ್ನು ಹೆಚ್ಚಿಸಲಾಗುವುದು ಎಂದು ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ಭರವಸೆ ನೀಡಿದ್ದರೂ, ಅವರಿಗೆ ಇನ್ನೂ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಯುಪಿ: ಮಹಿಳೆ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಬಿಜೆಪಿ ಮುಖಂಡ ಕೊನೆಗೂ ಅರೆಸ್ಟ್‌

“ಇದೆಲ್ಲವೂ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಡಿಸಿಪಿಯವರ ಹಗರಣ. ಈ ಜನರ ಮೂಲಕ ಪೊಲೀಸ್ ಸಿಬ್ಬಂದಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತದೆ” ಎಂದು ಅವರು ಆರೋಪಿಸಿದ್ದಾರೆ.

ಫಿರೋಜಾಬಾದ್‌ನಲ್ಲಿ ನಿಯೋಜನೆಗೊಂಡಿರುವ ಅಲಿಗಢ ನಿವಾಸಿ ಮನೋಜ್‌ ಕುಮಾರ್, ತನಗೆ ಮತ್ತು ಇತರ ಕೆಳ ದರ್ಜೆಯ ಸಿಬ್ಬಂದಿಗೆ ನೀಡಲಾದ ಆಹಾರದ ಗುಣಮಟ್ಟದ ಬಗ್ಗೆ ಹೇಳಿಕೊಂಡಿದ್ದಕ್ಕೆ ಮೆಸ್ ಮ್ಯಾನೇಜರ್ ತನ್ನನ್ನು ವಜಾ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಆಹಾರದೊಂದಿಗೆ ಅವರ ಪ್ರತಿಭಟನೆಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲು ನಿರ್ಧರಿಸಿದ್ದಾರೆ.

“ಈ ಇಲಾಖೆಯಲ್ಲಿ (ಪೊಲೀಸ್) ಕೇಳುವವರು ಯಾರೂ ಇಲ್ಲ. ಕ್ಯಾಪ್ಟನ್ ಸರ್ ನನ್ನ ಸಮಸ್ಯೆಗಳನ್ನು ಕೇಳುತ್ತಿಲ್ಲ, ಅದಕ್ಕಾಗಿಯೇ ನಾನು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದೇನೆ. ನಿಮ್ಮ ಸಿಬ್ಬಂದಿ ಯಾವ ರೀತಿಯ ಆಹಾರವನ್ನು ತಿನ್ನುತ್ತಾರೆ ಎಂದು ತಿಳಿಯಲು ನೀವು ಈ ತಟ್ಟೆಯಲ್ಲಿರುವ ರೊಟ್ಟಿಗಳನ್ನು ತಿನ್ನಬೇಕು ಎಂದು ಕ್ಯಾಪ್ಟನ್ ಸರ್ ಇಲ್ಲಿಂದ ಹಾದುಹೋದಾಗ ಈ ಬಗ್ಗೆ ನಾನು ಅವರಿಗೆ ಹೇಳಿದ್ದೇನೆ. ಅವರ ಮಕ್ಕಳು ಅಂತಹ ಆಹಾರವನ್ನು ತಿನ್ನಲು ಸಾಧ್ಯವೆ? ಇದನ್ನು ನಾನು ಅವರಿಗೆ ಕೇಳಲು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಪರಾಧಿ ಎಂದು ತೀರ್ಪು ಬರುತ್ತಿದ್ದಂತೆ ಕೋರ್ಟ್‌ನಿಂದ ಯುಪಿ ಸಚಿವ ಪರಾರಿ: 35 ವರ್ಷಗಳ ಹಿಂದೆ ರೈಲ್ವೆ ಸಲಕರಣೆ ಕಳ್ಳತನ ಮಾಡಿದ್ದ ಸಚಿವ

ಅಂತಿಮವಾಗಿ ಕಾನ್ಸ್ಟೇಬಲ್ ಮನೋಜ್ ಕುಮಾರ್ ಅವರನ್ನು ಇತರ ಪೊಲೀಸ್ ಸಿಬ್ಬಂದಿ ಅವರನ್ನು ಪ್ರತಿಭಟನೆಯ ಸ್ಥಳದಿಂದ ಕರೆದೊಯ್ದಿದ್ದಾರೆ. ಮೆಸ್‌ನಲ್ಲಿ ಗುಣಮಟ್ಟವಿಲ್ಲದ ಆಹಾರದ ಬಗ್ಗೆ ದೂರು ನೀಡಿದ ಅವರ ವೀಡಿಯೊ ಹೊರಬಂದ ನಂತರ, ಫಿರೋಜಾಬಾದ್ ಪೊಲೀಸರು ಈ ವಿಷಯವನ್ನು ಪರಿಶೀಲಿಸುವಂತೆ ಸಿಒ ಸಿಟಿಗೆ ಕೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...