Homeಮುಖಪುಟಅಪರಾಧಿ ಎಂದು ತೀರ್ಪು ಬರುತ್ತಿದ್ದಂತೆ ಕೋರ್ಟ್‌ನಿಂದ ಯುಪಿ ಸಚಿವ ಪರಾರಿ: 35 ವರ್ಷಗಳ ಹಿಂದೆ ರೈಲ್ವೆ...

ಅಪರಾಧಿ ಎಂದು ತೀರ್ಪು ಬರುತ್ತಿದ್ದಂತೆ ಕೋರ್ಟ್‌ನಿಂದ ಯುಪಿ ಸಚಿವ ಪರಾರಿ: 35 ವರ್ಷಗಳ ಹಿಂದೆ ರೈಲ್ವೆ ಸಲಕರಣೆ ಕಳ್ಳತನ ಮಾಡಿದ್ದ ಸಚಿವ?

- Advertisement -
- Advertisement -

ಬಿಜೆಪಿಯ ಆದಿತ್ಯನಾಥ್‌ ಅವರ ಉತ್ತರ ಪ್ರದೇಶ ಸರ್ಕಾರದ ಸಚಿವ ರಾಕೇಶ್ ಸಚನ್‌‌ 1991 ರ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ನೀಡಿದ ನಂತರ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸುವ ಮೊದಲು ಕಾನ್ಪುರದ ನ್ಯಾಯಾಲಯದಿಂದ ಪಲಾಯನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇತ್ತೀಚೆಗೆ ನಡೆದ ರಾಜ್ಯ ಚುನಾವಣೆಗೆ ಮುನ್ನವೇ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ ಸಚನ್, ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ ಪ್ರಕರಣದಲ್ಲಿ ಶನಿವಾರ ದೋಷಿ ಎಂದು ಸಾಬೀತಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ವಿಪಕ್ಷ ನಾಯಕರು ಸಚನ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳುವ ಮತ್ತು ಶಿಕ್ಷೆಯ ಬಗ್ಗೆ ವಾದಗಳು ಪ್ರಾರಂಭವಾಗುವ ಮೊದಲು ನ್ಯಾಯಾಲಯದಿಂದ ಓಡಿಹೋದರು ಎಂದು ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಉತ್ತರ ಪ್ರದೇಶ ಸರ್ಕಾರದಲ್ಲಿ ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳು ಮತ್ತು ಖಾದಿ ಇಲಾಖೆಗಳ ಸಚಿವರಾಗಿರುವ ರಾಕೇಶ್ ಸಚನ್ ವಿರುದ್ಧ ನ್ಯಾಯಾಲಯದ ಅಧಿಕಾರಿಗಳಿಂದ ದೂರು ಸ್ವೀಕರಿಸಲಾಗಿದೆ ಎಂದು ಕಾನ್ಪುರ ಪೊಲೀಸರು ಶನಿವಾರ ತಡರಾತ್ರಿ ದೃಢಪಡಿಸಿದ್ದು, ಆದರೆ ದೂರಿನ ಮೇರೆಗೆ ಸಚಿವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆಯೆ ಎಂದು ಹೇಳಲಿಲ್ಲ.

ಇದನ್ನೂ ಓದಿ: ಯುಪಿ: ಮತಾಂತರ ಆರೋಪ ಮಾಡಿದ ವಿಎಚ್‌ಪಿ; ಆರು ಮಂದಿ ದಲಿತ-ಕ್ರಿಶ್ಚಿಯನ್‌ ಮಹಿಳೆಯರ ಮೇಲೆ ಎಫ್‌ಐಆರ್‌

“ಪರಿಶೀಲಿಸಬೇಕಾದ ವಿಷಯ ಬಹಳಷ್ಟು ಇದೆ. ನಾವು ಎಲ್ಲರೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಿದ್ದು, ನಮ್ಮ ವಿಚಾರಣೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ. ವಿಚಾರಣೆ ಪೂರ್ಣಗೊಂಡ ನಂತರ ನಾವು ಕಾನೂನಿನ ಪ್ರಕಾರ ಮುಂದುವರಿಯುತ್ತೇವೆ” ಎಂದು ಕಾನ್ಪುರದ ಹಿರಿಯ ಪೊಲೀಸ್ ಅಧಿಕಾರಿ ಎಪಿ ತಿವಾರಿ ಹೇಳಿದ್ದಾರೆ.

ಈ ವಿವಾದದ ನಡುವೆ ಸಚನ್ ಸರ್ಕಾರಿ ಸಭೆಯಲ್ಲಿ ಭಾಗವಹಿಸಿದ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.  ತಮ್ಮ ವಿರುದ್ಧದ ಆರೋಪಗಳು ಸುಳ್ಳು ಮತ್ತು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ.

“ನಾನು ನನ್ನ ಜೀವನದಲ್ಲಿ ಎಂದಿಗೂ ಓಡಿಹೋಗಿಲ್ಲ, ಇವೆಲ್ಲವೂ ನನ್ನ ವಿರುದ್ಧದ ಆಧಾರರಹಿತ ಪ್ರಕರಣಗಳು. ನಾನು ಬೆಳಿಗ್ಗೆ 11 ಗಂಟೆಗೆ ಸ್ವಲ್ಪ ಮುಂಚಿತವಾಗಿ ನ್ಯಾಯಾಲಯವನ್ನು ತಲುಪಿದೆ ಮತ್ತು ನನಗೆ ಬೇರೆ ಕಾರ್ಯಕ್ರಮ ಇರುವುದರಿಂದ ಪ್ರಕರಣವನ್ನು ತ್ವರಿತಗೊಳಿಸುವಂತೆ ವಿನಂತಿಸಿದೆ. ವಿನಾಯತಿ ಅರ್ಜಿಯನ್ನು ಹಾಕುವಂತೆ ವಕೀಲರಲ್ಲಿ ವಿನಂತಿಸಿದೆ. ನಂತರ ನಾನು ಅಲ್ಲಿಂದ ಹೊರಟೆ. ನಾನು ನಾಲ್ಕು ಗಂಟೆಗಳ ಕಾಲ ಸಮಾರಂಭದಲ್ಲಿದ್ದೆ ಮತ್ತು ಇತರ ಕಾರ್ಯಕ್ರಮದಕಲ್ಲಿ ಭಾಗವಹಿಸಿದ್ದೆ. ಇದರ ನಂತರ ನನ್ನ ವಿರುದ್ಧ ಆರೋಪಗಳನ್ನು ಮಾಡಲು ಪ್ರಾರಂಭಿಸಲಾಗಿದೆ” ಎಂದು ಸಚನ್ ತಿಳಿಸಿದ್ದಾರೆ.

“ಬೇಕಿದ್ದರೆ ಕೋರ್ಟ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಿ. ನಾನು ನಾಳೆ ನ್ಯಾಯಾಲಯಕ್ಕೆ ಹೋಗುತ್ತೇನೆ, ನನ್ನ ವಕೀಲರ ಮೂಲಕ ನನ್ನ ಕಡೆಯ ವಾದವನ್ನು ಪ್ರಸ್ತುತಪಡಿಸುತ್ತೇನೆ” ಎಂದು ಸಚನ್ ಹೇಳಿದ್ದಾರೆ.

ಇದನ್ನೂ ಓದಿ: ಸಂದರ್ಶನ: ಕಾಂಗ್ರೆಸ್ ತತ್ವ ಸಿದ್ಧಾಂತ ಇಷ್ಟ, ಅದಕ್ಕಾಗಿ ಕಾಂಗ್ರೆಸ್ ಸೇರುತ್ತಿದ್ದೇನೆ- ಪೂರ್ವಜ್ ವಿಶ್ವನಾಥ್‌

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷ ರಾಕೇಶ್ ಸಚನ್ ಅವರಿಗೆ 35 ವರ್ಷಗಳ ಹಿಂದಿನ ಕಳ್ಳತನ ಪ್ರಕರಣದಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಶಿಕ್ಷೆಯನ್ನು ಕೇಳಿದ ಸಚಿವರು ನ್ಯಾಯಾಲಯದಿಂದ ತಪ್ಪಿಸಿಕೊಂಡರು. ಇದು ಬಿಜೆಪಿ ಜನರ ನಿಜವಾದ ಗುಣ ಎಂದು ಹೇಳಿದೆ.

ಸಚಿವ ರಾಕೇಶ್ ಸಚನ್ ವಿರುದ್ಧ ಐಪಿಸಿ ಸೆಕ್ಷನ್ 389 ಮತ್ತು 411 ರ ಅಡಿಯಲ್ಲಿ ರೈಲ್ವೆ ಗುತ್ತಿಗೆ ಪಡೆದಿದ್ದಾಗ ರೈಲ್ವೇ ಸಲಕರಣೆಯನ್ನು ಕಳ್ಳತನ ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿತ್ತು ಎಂದು ಇಟಿವಿ ಹಿಂದಿ ವರದಿ ಮಾಡಿದೆ. ಕಳ್ಳತನ ಮಾಡಲಾಗಿದ್ದ ಬ್ಯಾಲೆಸ್ಟ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇತ್ತು. ಕಳೆದ ಶನಿವಾರ ನ್ಯಾಯಾಲಯವು ತೀರ್ಪಿನ ದಿನವನ್ನು ನಿಗದಿಪಡಿಸಿತು. ತಾನು ತಪ್ಪಿತಸ್ಥ ಎಂದು ತಿಳಿದ ನಂತರ ರಾಕೇಶ್ ಸಚನ್ ನ್ಯಾಯಾಲಯದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಇಟಿವಿ ವರದಿ ಮಾಡಿದೆ.

“ಯುಪಿಯಲ್ಲಿ ಬಿಜೆಪಿ ಗಂಟಲಿನ ತನಕ ಭ್ರಷ್ಟಾಚಾರದಲ್ಲಿ ಮುಳುಗಿದೆ. ಯೋಗಿ ಸರ್ಕಾರದ ಕ್ಯಾಬಿನೆಟ್ ಸಚಿವ ರಾಕೇಶ್ ಸಚನ್ ಅವರಿಗೆ 35 ವರ್ಷಗಳ ಹಿಂದಿನ ಕಳ್ಳತನ ಪ್ರಕರಣದಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಶಿಕ್ಷೆಯನ್ನು ಕೇಳಿದ ಸಚಿವರು ನ್ಯಾಯಾಲಯದಿಂದ ತಪ್ಪಿಸಿಕೊಂಡರು. ಎಷ್ಟೊಂದು ಮುಜುಗರ! ಇದು ಬಿಜೆಪಿ ಜನರ ನಿಜವಾದ ಗುಣ. ಮುಖ್ಯಮಂತ್ರಿ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕು” ಎಂದು ಸಮಾಜವಾದಿ ಪಕ್ಷ ಹೇಳಿದ್ದು, ಪತ್ರಿಕಾ ವರದಿಯನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ | Naanu Gauri

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

0
ಗುಜರಾತ್‌ನಾದ್ಯಂತ ನಡೆದ ಹೈನುಗಾರಿಕೆ ನಡೆಸುವ ಸಮುದಾಯದ ಪ್ರತಿಭಟನೆಯ ನಂತರ ರಾಜ್ಯ ವಿಧಾನಸಭೆಯು ಗೋವು ನಿಯಂತ್ರಣ ಮಸೂದೆಯನ್ನು ಸರ್ವಾನುಮತದಿಂದ ಹಿಂಪಡೆದಿದೆ. ಸುಮಾರು ಐದು ತಿಂಗಳ ಹಿಂದೆ ರಾಜ್ಯದ ನಗರ ಪ್ರದೇಶಗಳ ರಸ್ತೆಗಳು ಮತ್ತು ಸಾರ್ವಜನಿಕ...