Homeಕರ್ನಾಟಕಸಂದರ್ಶನ: ಕಾಂಗ್ರೆಸ್ ತತ್ವ ಸಿದ್ಧಾಂತ ಇಷ್ಟ, ಅದಕ್ಕಾಗಿ ಕಾಂಗ್ರೆಸ್ ಸೇರುತ್ತಿದ್ದೇನೆ- ಪೂರ್ವಜ್ ವಿಶ್ವನಾಥ್‌

ಸಂದರ್ಶನ: ಕಾಂಗ್ರೆಸ್ ತತ್ವ ಸಿದ್ಧಾಂತ ಇಷ್ಟ, ಅದಕ್ಕಾಗಿ ಕಾಂಗ್ರೆಸ್ ಸೇರುತ್ತಿದ್ದೇನೆ- ಪೂರ್ವಜ್ ವಿಶ್ವನಾಥ್‌

ಅಪ್ಪ ಬಿಜೆಪಿಯಲ್ಲಿದ್ದು, ಮಗ ಕಾಂಗ್ರೆಸ್‌ ಸೇರುತ್ತಿರುವುದು ಸ್ವಾರಸ್ಯಕರ. ಈ ಹಿನ್ನೆಲೆಯಲ್ಲಿ ಪೂರ್ವಜ್ ಅವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ್ದಾರೆ.

- Advertisement -
- Advertisement -

‘ಶೀಘ್ರದಲ್ಲೇ ಕಾಂಗ್ರೆಸ್ ಸೇರಲಿದ್ದೇನೆ’ ಎಂದು ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಅವರ ಪುತ್ರ ಪೂರ್ವಜ್ ವಿಶ್ವನಾಥ್ ಹೇಳಿದ್ದಾರೆ.

ನಂಜನಗೂಡು ತಾಲ್ಲೂಕು ತಗಡೂರಿನಲ್ಲಿ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ‘ಸ್ವಾತಂತ್ರ್ಯ ನಡಿಗೆ’ ಕಾರ್ಯಕ್ರಮದಲ್ಲಿ ಸೋಮವಾರ ಪಾಲ್ಗೊಂಡಿದ್ದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿರುವ ಅವರು ಕಾಂಗ್ರೆಸ್‌ ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವಿಶ್ವನಾಥ್‌ ಅವರು ಬಿಜೆಪಿಯಲ್ಲಿದ್ದು, ಅವರ ಪುತ್ರ ಕಾಂಗ್ರೆಸ್ ಸೇರುತ್ತಿರುವುದು ಸ್ವಾರಸ್ಯಕರ. ಈ ಹಿನ್ನೆಲೆಯಲ್ಲಿ ‘ನಾನುಗೌರಿ.ಕಾಂ’ ಜೊತೆ ಪೂರ್ವಜ್ ಮಾತನಾಡಿದ್ದಾರೆ.

* ಕಾಂಗ್ರೆಸ್ ಸೇರುವುದಾಗಿ ಹೇಳುತ್ತಿದ್ದೀರಿ. ಇದಕ್ಕೆ ಪ್ರೇರಣೆ ಏನು?

ಪೂರ್ವಜ್‌: ನಾನು ಹುಟ್ಟಿದಾಗಿನಿಂದ ಬುದ್ಧಿ ಬರುವತನಕ ಕಾಂಗ್ರೆಸ್ ನೋಡಿಕೊಂಡೇ ಬೆಳೆದವನು. ಕಾಂಗ್ರೆಸ್ ತತ್ವ ಸಿದ್ಧಾಂತಗಳು ನನಗಿಷ್ಟ. ನನ್ನ ಅಚ್ಚುಮೆಚ್ಚಿನ ಪಕ್ಷ ಕಾಂಗ್ರೆಸ್. ಎಸ್.ಎಂ.ಕೃಷ್ಣ, ಧರಂಸಿಂಗ್‌, ಸಿದ್ದರಾಮಯ್ಯನವರ ಆಡಳಿತ ವೈಖರಿ ನನಗೆ ಪ್ರಿಯವಾದದ್ದು. ಕಾಂಗ್ರೆಸ್‌ನಲ್ಲಿರುವ ನಾಯಕರು ನನಗೆ ತುಂಬಾ ಇಷ್ಟ. ವಿಶೇಷವಾಗಿ ಸಿದ್ದರಾಮಯ್ಯನವರ ಮೇಲೆ ಅಪಾರ ಪ್ರೀತಿ. ನನ್ನ ತಂದೆ ಮತ್ತು ಸಿದ್ದರಾಮಯ್ಯನವರು ಒಳ್ಳೆಯ ಸ್ನೇಹಿತರಾಗಿದ್ದರು. ಈ ಭಾರಿ ಸಿದ್ದರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಈ ಪಯಣದಲ್ಲಿ ನಾನು ಕೂಡ ಕಾಂಗ್ರೆಸ್ ಜೊತೆಗಿರುತ್ತೇನೆ ಎಂಬ ಖುಷಿ ನನ್ನದಾಗುತ್ತಿದೆ.

* ನಿಮ್ಮ ತಂದೆಯವರು ಬಿಜೆಪಿಯಲ್ಲಿ ಎಂಎಲ್‌ಸಿಯಾಗಿದ್ದಾರೆ. ನೀವು ಕಾಂಗ್ರೆಸ್‌ ಸೇರುತ್ತಿದ್ದೀರಿ…

ಪೂರ್ವಜ್‌: ನನ್ನ ತಂದೆಯವರು ಬಿಜೆಪಿಯಲ್ಲಿದ್ದು ಮಾಡಬೇಕಿರುವ ಕೆಲಸವನ್ನು ಮಾಡುತ್ತಿದ್ದಾರೆ. ನಾನು ಕಾಂಗ್ರೆಸ್‌ನಲ್ಲಿ ಸಾಗಬೇಕೆಂಬುದು ನನ್ನ ವೈಯಕ್ತಿಕ ನಿರ್ಧಾರ. ಅವರು ಬಿಜೆಪಿಯಲ್ಲಿರುವ ಕಾರಣ, ನಾನು ಕೂಡ ಬಿಜೆಪಿಯಲ್ಲಿರಬೇಕೆಂಬ ಕಟ್ಟುಪಾಡುಗಳು ನಮ್ಮ ಮನೆಯಲ್ಲಿ ಇಲ್ಲ. ನನ್ನ ತಂದೆಯವರಿಗೆ ವಿಚಾರವನ್ನು ತಿಳಿಸಿಯೇ ಕಾಂಗ್ರೆಸ್‌ಗೆ ಸೇರುತ್ತಿದ್ದೇನೆ. ನಿನ್ನ ಬೆಳವಣಿಗೆಗೆ ಎಲ್ಲಿ ಅನುಕೂಲವಿದೆಯೋ ಅಲ್ಲಿಗೆಯೇ ಹೋಗಪ್ಪ ಎಂದರು. ನನ್ನ ವೈಯಕ್ತಿಕ ಆಯ್ಕೆಗೆ ಮೊದಲಿನಿಂದಲೂ ಸ್ವತಂತ್ರವನ್ನು ನನ್ನ ತಂದೆಯವರು ನೀಡಿದ್ದಾರೆ.

* ನಿಮ್ಮ ನಿರ್ಧಾರಕ್ಕೆ ಸಿದ್ದರಾಮಯ್ಯನವರ ಪ್ರತಿಕ್ರಿಯೆ ಏನಿದೆ?

ಸಿದ್ದರಾಮಯ್ಯನವರು ಈಗ ಬ್ಯುಸಿಯಾಗಿದ್ದಾರೆ. ಪ್ರತಿದಿನ ಒಂದೊಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ನೇರವಾಗಿಯೇ ಅವರನ್ನು ಭೇಟಿಯಾಗಿ ಅವರೊಂದಿಗೆ ಕುಳಿತು ಮಾತನಾಡಿಲ್ಲ. ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯನವರಿಗೆ ವಿಷಯ ತಿಳಿಸಿದೆ. ಯತೀಂದ್ರ ಅವರು ಸಿದ್ದರಾಮಯ್ಯನವರಲ್ಲಿ ಪ್ರಸ್ತಾಪಿಸಿದಾಗ, ನನ್ನ ನಿರ್ಧಾರಕ್ಕೆ ಖುಷಿ ಪಟ್ಟಿದ್ದಾರೆಂದು ತಿಳಿಯಿತು. ಈ ಸಕಾರಾತ್ಮಕವಾದ ಪ್ರತಿಕ್ರಿಯೆ ಸಿಕ್ಕ ಮೇಲೆಯೇ ನಾನು ಕಾಂಗ್ರೆಸ್‌ ಸೇರುವ ನಿರ್ಧಾರ ಪ್ರಕಟಿಸಿದೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನವರ ಬಿಡುವು ನೋಡಿಕೊಂಡು ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಏರ್ಪಡಿಸಲಿದ್ದೇನೆ. ನನ್ನ ಜೊತೆಯಲ್ಲಿರುವ ಅನೇಕರನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಹೋಗುತ್ತೇನೆ.

* ಅಪ್ಪ ಒಂದು ಕಡೆ, ಮಗ ಒಂದು ಕಡೆ ಎಂಬುದು ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲವೇ?

ಪೂರ್ವಜ್‌: ಒಂದು ಕ್ಷೇತ್ರವೆಂದ ಮೇಲೆ ಒಬ್ಬ ವ್ಯಕ್ತಿಯನ್ನು ಪ್ರೀತಿ ಮಾಡುವ ಜನ, ಒಂದು ಪಕ್ಷವನ್ನು ಪ್ರೀತಿ ಮಾಡುವ ಜನ ಇದ್ದೇ ಇರುತ್ತಾರೆ. ನನ್ನನ್ನು ಇಷ್ಟಪಡುವ ಜನರು, ನಮ್ಮ ಪಕ್ಷವನ್ನು ಪ್ರೀತಿ ಮಾಡುವವರು ನಮ್ಮ ಬೆನ್ನ ಹಿಂದೆ ಇದ್ದಾರೆ. ನನ್ನ ನಿರ್ಧಾರದಿಂದ ಅಂತಹ ವ್ಯತ್ಯಾಸವೇನೂ ಆಗುವುದಿಲ್ಲ.

* ಹುಣಸೂರು ಕ್ಷೇತ್ರವನ್ನು ನಿಮ್ಮ ತಂದೆಯವರು ಪ್ರತಿನಿಧಿಸಿದ್ದರು. ಈಗ ಕಾಂಗ್ರೆಸ್ ಶಾಸಕರೇ ಅಲ್ಲಿದ್ದಾರೆ. ಕ್ಷೇತ್ರದಲ್ಲಿ ಏನೆಲ್ಲ ಕೆಲಸಗಳು ಆಗಬೇಕಿದೆ?

ಪೂರ್ವಜ್‌: ಹುಣಸೂರು ಕ್ಷೇತ್ರದಲ್ಲಿ ಎಚ್.ಪಿ.ಮಂಜುನಾಥ್‌ ಶಾಸಕರಾಗಿದ್ದಾರೆ. ಒಳ್ಳೆಯ ಆಡಳಿತವನ್ನು ನಡೆಸುತ್ತಿದ್ದಾರೆ. ಮಂಜುನಾಥ್ ಅವರು ಮುಂದಿನ ಚುನಾವಣೆಯಲ್ಲಿಯೂ ಗೆಲ್ಲುವ ಎಲ್ಲ ಸಾಧ್ಯತೆಗಳನ್ನು ನಾನು ನೋಡಿದ್ದೇನೆ. ನನ್ನ ತಂದೆಯವರು ಇಲ್ಲಿ ಗೆದ್ದಿದ್ದರು. ಅವರು ಹೆಚ್ಚು ಕಾಲ ಅಧಿಕಾರದಲ್ಲಿರಲು ಸಾಧ್ಯವಾಗಲಿಲ್ಲ ಎಂಬ ಬೇಜಾರಿದೆ ಬಿಟ್ಟರೆ, ಕ್ಷೇತ್ರದ ಅಭಿವೃದ್ಧಿ ಚೆನ್ನಾಗಿಯೇ ಆಗಿದೆ. ಹುಣಸೂರು ತಾಲ್ಲೂಕು ಮುಂದೆ ಜಿಲ್ಲೆಯಾಗಬೇಕೆಂಬುದು ನನ್ನ ಆಶಯವೂ ಹೌದು.

* ಪಕ್ಷ ಸಂಘಟನೆ ಮಾಡುವ ಕುರಿತು ಮಾತನಾಡಿದ್ದೀರಿ. ಏನೆಲ್ಲ ಆಲೋಚನೆಗಳನ್ನು ಮಾಡಿದ್ದೀರಿ.

ಪೂರ್ವಜ್‌: ಕಾಂಗ್ರೆಸ್ ಯುವ ಘಟಕವನ್ನು ಬಲಗೊಳಿಸುವುದು ನಮ್ಮ ಗುರಿ. ಮೈಸೂರು ಭಾಗವನ್ನೇ ಗಮನಿಸುವುದಾದರೆ ಸುನೀಲ್ ಬೋಸ್‌, ಯತೀಂದ್ರ ಸಿದ್ದರಾಮಯ್ಯ, ರವೀಶ್‌, ಅನಿಲ್‌ ಚಿಕ್ಕಮಾದು- ಇವರೆಲ್ಲ ಕಾಂಗ್ರೆಸ್‌ ಯುವಮುಖವಾಗಿ ಹೊಮ್ಮಿದ್ದಾರೆ. ಇವರ ಜೊತೆ ನಾನೂ ಸೇರಿಕೊಂಡು ಮತ್ತಷ್ಟು ಯುವಕರನ್ನು ಪಕ್ಷಕ್ಕೆ ಕರೆತರುತ್ತೇವೆ.

* ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಈಗಲೇ ನೀವೆಲ್ಲ ಮಾತನಾಡುತ್ತಿರುವುದರಿಂದ ಪಕ್ಷದಲ್ಲಿ ಒಡಕು ಉಂಟಾಗುವುದಿಲ್ಲವೇ?

ಪೂರ್ವಜ್‌: ದಾವಣಗೆರೆ ಕಾರ್ಯಕ್ರಮವನ್ನು ನೋಡಿದ್ದೀರಿ. ಕಾಂಗ್ರೆಸ್ ಒಗ್ಗಟ್ಟಿನಿಂದ ಮುನ್ನುಗ್ಗುತ್ತಿರುವ ಸೂಚನೆ ಸಿಕ್ಕಿದೆ. ಇಲ್ಲಿ ಬಣಗಳ ಪ್ರಶ್ನೆಯೇ ಬರುವುದಿಲ್ಲ. ಸಿದ್ದರಾಮಯ್ಯನವರ ಅಭಿಮಾನಿಯಾಗಿರುವ ನನಗೆ ಅವರು ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇದೆ. ಅಂದ ಮಾತ್ರಕ್ಕೆ ಅವರಷ್ಟೇ ಮುಖ್ಯಮಂತ್ರಿಯಾಗಬೇಕೆಂಬ ಧೋರಣೆ ಇಲ್ಲ. ಮೈಸೂರು ಭಾಗದವರಾದ ಸಿದ್ದರಾಮಯ್ಯನವರು ಸಿಎಂ ಆದರೆ ಇಲ್ಲಿನ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಇಡೀ ಕರ್ನಾಟಕ್ಕೆ ಅನುಕೂಲವಾಗುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ 2024: ರಾಹುಲ್ ಗಾಂಧಿ ಸ್ಪರ್ಧೆಗೆ ಒತ್ತಾಯಿಸಿ ಅಮೇಠಿ ಕಾಂಗ್ರೆಸ್ ಕಾರ್ಯಕರ್ತರಿಂದ ಧರಣಿ

0
ಅಮೇಠಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಇಲ್ಲಿನ ಪಕ್ಷದ ಜಿಲ್ಲಾ ಸಮಿತಿ ಕಚೇರಿ ಎದುರು ಧರಣಿ ನಡೆಸಿ, ರಾಹುಲ್ ಗಾಂಧಿ ಅವರನ್ನು ಕಣಕ್ಕಿಳಿಸಬೇಕು...