Homeಮುಖಪುಟನಿತೀಶ್‌ಕುಮಾರ್‌ v/s ಬಿಜೆಪಿ: ಬಿಹಾರದ ಸಿಎಂ ಮುಂದಿವೆ ಮೂರು ಆಯ್ಕೆ!

ನಿತೀಶ್‌ಕುಮಾರ್‌ v/s ಬಿಜೆಪಿ: ಬಿಹಾರದ ಸಿಎಂ ಮುಂದಿವೆ ಮೂರು ಆಯ್ಕೆ!

- Advertisement -
- Advertisement -

ಬಿಜೆಪಿ ಮತ್ತು ಜೆಡಿಯು ನಡುವಿನ ಮೈತ್ರಿಯಲ್ಲಿ ಬಿರುಕುಬಿಟ್ಟಿದ್ದು ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಅವರು ಮತ್ತೊಮ್ಮೆ ಮಗ್ಗಲು ಬದಲಿಸುತ್ತಾರೆಯೇ? ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ.

ನಿತೀಶ್ ಕುಮಾರ್ ಅವರು ದುಡುಕಿನ ರಾಜಕಾರಣಿಯೇನೂ ಅಲ್ಲ. ಹೀಗಾಗಿ ಅವರ ಮುಂದಿರುವ ಆಯ್ಕೆಗಳನ್ನು ಅವರು ಅವಲಂಬಿಸಬಹುದು. ವಿಶೇಷವಾಗಿ ಬಿಜೆಪಿ, ಆರ್‌ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳು ನಿತೀಶ್‌ ಅವರನ್ನು ಹೇಗೆ ನೋಡುತ್ತವೆ ಎಂಬುದು ನಿತೀಶ್ ಅವರ ಮುಂದಿನ ನಡೆಯನ್ನು ನಿರ್ಧರಿಸಬಹುದು.

ನಿತೀಶ್ ಅವರ ಮುಂದಿರುವ ಮೂರು ಆಯ್ಕೆಗಳ ಕುರಿತು ‘ದಿ ಕ್ವಿಂಟ್‌’ ಜಾಲತಾಣ ವಿಸ್ತೃತವಾಗಿ ವಿಶ್ಲೇಷಣೆ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆಯ್ಕೆ 1: ಎನ್‌ಡಿಎ ತೊರೆದು ಮಹಾಘಟಬಂಧನ್‌ಗೆ ಹಿಂತಿರುಗಿ ಸಿಎಂ ಆಗಬಹುದು

ಇದರರ್ಥ ರಾಷ್ಟ್ರೀಯ ಜನತಾ ದಳ ಮತ್ತು ಕಾಂಗ್ರೆಸ್ ಜೊತೆಗಿನ 2015-2017ರ ವ್ಯವಸ್ಥೆಗೆ ಹಿಂತಿರುಗುವುದಾಗಿದೆ. ಎಡಪಕ್ಷಗಳಾದ ಸಿಪಿಐ-ಎಂಎಲ್, ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳು ಕೂಡ ಈ ಮೈತ್ರಿಕೂಟದ ಭಾಗವಾಗಿವೆ.

ಆದಾಗ್ಯೂ, 2015-17 ಅವಧಿಗಿಂತ ಈಗ ಸಾಕಷ್ಟು ಬದಲಾವಣೆಗಳು ಆಗಿರುವುದರಿಂದ ನಿತೀಶ್ ಕುಮಾರ್ ಅವರು ಮಹಾಘಟಬಂಧನ್‌ಗೆ ಹಿಂತಿರುಗುವುದು ಅಷ್ಟು ಸುಲಭವಲ್ಲ. ನಿತೀಶ್ ಅವರೇ ಈ ಸಮಸ್ಯೆಯನ್ನು ಸೃಷ್ಟಿಸಿಕೊಂಡಿದ್ದಾರೆ.

2017ರಲ್ಲಿ ಅವರು ಎನ್‌ಡಿಎಗೆ ನಿಷ್ಠೆ ತೋರಿದ ರೀತಿಯನ್ನು ಗಮನಿಸಿದರೆ, ಮಹಾಘಟಬಂಧನ್ ಘಟಕಗಳಲ್ಲಿ ನಿತೀಶ್ ಕುಮಾರ್ ಅವರ ಬಗ್ಗೆ ಹೆಚ್ಚಿನ ನಂಬಿಕೆಯೂ ಇಲ್ಲ.

ಇದನ್ನೂ ಓದಿರಿ: ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದು ಮಹಿಳೆಯರು; ಪ್ರಮಾಣ ವಚನ ಸ್ವೀಕರಿಸಿದ್ದು ಅವರ ಗಂಡಂದಿರು!

ಜೆಡಿಯು 2017ರಲ್ಲಿದ್ದ ಸ್ಥಿತಿಗಿಂತ ಈಗ ಹೆಚ್ಚು ದುರ್ಬಲವಾಗಿ ಕಾಣುತ್ತಿದೆ. ಆಗ 71 ಸ್ಥಾನಗಳನ್ನು ಹೊಂದಿತ್ತು, ಈಗ ಕೇವಲ 45 ಸ್ಥಾನಗಳನ್ನು ಹೊಂದಿದೆ. ಮತ್ತೊಂದೆಡೆ, ಆರ್‌ಜೆಡಿ ಬಲಶಾಲಿಯಾಗಿದೆ. ಈಗ 80 ಸ್ಥಾನಗಳನ್ನು ಹೊಂದಿದೆ.

ನಿತೀಶ್ ಕುಮಾರ್ ವಿರುದ್ಧದ ಆಡಳಿತ ವಿರೋಧಿ ನಿಲುವು ಈಗ ಹೆಚ್ಚಾಗಿ ಕಾಣುತ್ತಿದೆ. ಈ ಹಿಂದೆ ಇಷ್ಟು ಪ್ರಮಾಣದ ವಿರೋಧ ಇರಲಿಲ್ಲ. ಆದ್ದರಿಂದ, ನಿತೀಶ್ ಕುಮಾರ್ ನೇತೃತ್ವದ ಸರ್ಕಾರವನ್ನು ಆರ್‌ಜೆಡಿ ಬೆಂಬಲಿಸಿದರೆ ಆರ್‌ಜೆಡಿಗೆ ತೊಂದರೆಯಾಗಬಹುದು. ಏಕೆಂದರೆ ಆಡಳಿತ ವಿರೋಧಿ ಹೊರೆಯನ್ನು ಆರ್‌ಜೆಡಿಯೂ ಹೊರಬೇಕಾದೀತು.

ಆಯ್ಕೆ 2: ಕೆಲವು ರಿಯಾಯಿತಿಗಳಿಗಾಗಿ ಬಿಜೆಪಿಯೊಂದಿಗೆ ಉಳಿಯುವುದು

ಬಿಜೆಪಿಯು ನಿತೀಶ್ ಕುಮಾರ್ ಅವರನ್ನು ಚುನಾವಣಾ ಕಣಕ್ಕಿಳಿಸಲು ಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ರಾಜ್ಯದ ಉಳಿದ ಭಾಗಗಳಲ್ಲಿ ಬಿಜೆಪಿಗೆ ಬೆಂಬಲ ನೀಡುತ್ತಿರುವ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ, ವಿಧಾನಸಭಾ ಚುನಾವಣೆಯ ಸಮಯದಲ್ಲಿ ಜೆಡಿಯು ಪಕ್ಷವನ್ನು ಸೋಲಿಸಲು ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ರೀತಿ ಕಾಣುತ್ತಿದೆ. ಇದು ಬಿಜೆಪಿಯ ಯೋಜನೆಯಂತೆ ಸ್ಪಷ್ಟವಾಗಿ ಕಾಣುತ್ತಿದೆ.

ಜೆಡಿಯು ಪಕ್ಷವನ್ನು ಸ್ವಾಧೀನಪಡಿಸಿಕೊಳ್ಳಲು ಬಿಜೆಪಿಯು ‘ಏಕನಾಥ್ ಶಿಂಧೆ’ ರೀತಿಯ ಮುಖವನ್ನು ಹುಡುಕುತ್ತಿದೆ ಎಂದು ಜೆಡಿಯು ಒಳಗಿನವರು ಆರೋಪಿಸುತ್ತಾರೆ. ಆದರೆ ಜೆಡಿಯುವಿನಲ್ಲಿದ್ದು ಬಿಜೆಪಿಯ ಪರವಿದ್ದ ಆರ್‌ಸಿಪಿ ಸಿಂಗ್ ವಿರುದ್ಧ ನಿತೀಶ್ ಕುಮಾರ್ ಸಮಯೋಚಿತ ಕ್ರಮ ಜರುಗಿಸಿ, ತಂತ್ರಗಾರಿಕೆಯನ್ನು ವಿಫಲಗೊಳಿಸಿದರು.

“ಶಿವಸೇನೆ ನಮಗೆ ಪಾಠ ಕಲಿಸುವ ಅಗತ್ಯವಿಲ್ಲ. ಜೆಡಿಯು ಅನ್ನು ನಾಶಪಡಿಸುವುದು ಅವರ ಅಂತಿಮ ಯೋಜನೆ ಎಂದು ನಮಗೆ ಯಾವಾಗಲೂ ತಿಳಿದಿತ್ತು. ಆದರೆ ಅವರು ನಿತೀಶ್ ಕುಮಾರ್ ಅವರನ್ನು ಸರಿಯಾಗಿ ಗ್ರಹಿಸಿಲ್ಲ. ನಿತೀಶ್‌ ಕುಮಾರ್‌ ಉದ್ಧವ್ ಠಾಕ್ರೆಯಂತಲ್ಲ” ಎಂದು ಜೆಡಿಯು ಹಿರಿಯ ನಾಯಕರೊಬ್ಬರು ಎಂದು ‘ದಿ ಕ್ವಿಂಟ್‌’ಗೆ ತಿಳಿಸಿದ್ದಾರೆ.

ಆದರೆ, 2024ರ ಲೋಕಸಭೆ ಚುನಾವಣೆಗೂ ಮುನ್ನ ನಿತೀಶ್ ಕುಮಾರ್ ಅವರನ್ನು ಚುನಾವಣಾ ಕಣಕ್ಕಿಳಿಸುವುದು ಬಿಜೆಪಿಗೆ ತೊಂದರೆಯೂ ಆಗಬಹುದು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಎನ್‌ಡಿಎಗೆ ಭಾರಿ ಜಯ ದೊರೆತ್ತಿತ್ತು. ಮೈತ್ರಿಕೂಟವು 40 ರಲ್ಲಿ 39 ಸ್ಥಾನಗಳನ್ನು ಗೆದ್ದಿತ್ತು.

ಆರ್‌ಜೆಡಿಯ ಮುಸ್ಲಿಂ-ಯಾದವ್ ಓಟ್‌ಬ್ಯಾಂಕ್‌, ಜೆಡಿಯುಗೆ ಮಹಾದಲಿತ್‌, ಎಂಬಿಸಿಗಳು, ಕುರ್ಮಿಗಳ ಬೆಂಬಲ, ಕಾಂಗ್ರೆಸ್‌, ಸಿಪಿಐ-ಎಂಎಲ್‌ ಪ್ರಭಾವ ಮಹಾಘಟಬಂಧನ್‌ ಮೈತ್ರಿಯನ್ನು ಗಟ್ಟಿಗೊಳಿಸುತ್ತದೆ. ಇದು ಎನ್‌ಡಿಎಗೆ ನಷ್ಟ ಉಂಟು ಮಾಡಬಹುದು. ಹೀಗಾಗಿ ಈ ಮೈತ್ರಿಯಾಗದಂತೆ ಬಯಸುವ ಬಿಜೆಪಿಯ ಮೇಲೆ 2024ರವರೆಗೆ ನಿತೀಶ್ ಹಿಡಿತ ಸಾಧಿಸಲೂಬಹುದು. 2024ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಬಿಹಾರದಲ್ಲಿ ತನ್ನ ಪಕ್ಷದ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ಬಯಸಬಹುದು. 2025ರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್, ಆಡಳಿತ ವಿರೋಧಿ ಆಡಳಿತಕ್ಕೆ ಸಿಲುಕಿಕೊಳ್ಳಬಾರದು. ಈಗಲೇ ಬಿಜೆಪಿಯೊಂದಿಗೆ ಸಮಾಧಾನ ಮಾಡಿಕೊಂಡರೆ ನಿತೀಶ್ ಕುಮಾರ್ ಅವರು ಇನ್ನೂ ಎರಡು ವರ್ಷ ಸಿಎಂ ಆಗಬಹುದು.

ಆಯ್ಕೆ 3: ಬಿಹಾರವನ್ನು ತೇಜಸ್ವಿ ಯಾದವ್‌ಗೆ ನೀಡಿ, ರಾಷ್ಟ್ರೀಯ ರಾಜಕೀಯಕ್ಕೆ ತೆರಳುವುದು

ಈ ಚಿಂತನೆಗೆ ಸ್ವಲ್ಪ ಧೈರ್ಯವೂ ಬೇಕಾಗುತ್ತದೆ. ಆದರೆ ಈ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ನಿತೀಶ್ ಕುಮಾರ್ ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ತ್ಯಜಿಸಿ, ಬಿಹಾರದ ಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ಅವರನ್ನು ಬೆಂಬಲಿಸಿ, ಎನ್‌ಡಿಎಯೇತರ ಪಕ್ಷಗಳ ಪ್ರಮುಖ ನಾಯಕರಾಗಿ ರಾಷ್ಟ್ರೀಯ ರಾಜಕೀಯಕ್ಕೆ ನಿತೀಶ್ ಕಾಲಿಡಬಹುದು.

ಒಂದು ರೀತಿಯಲ್ಲಿ ಇದು ನಿತೀಶ್ ಕುಮಾರ್‌ ಅವರಿಗೆ ಆಸಕ್ತಿದಾಯಕ ಆಯ್ಕೆಯಾಗಿದೆ. ಬಿಜೆಪಿ, ಆರ್‌ಜೆಡಿ ಪ್ರಾಬಲ್ಯಕ್ಕೆ ಹೋಲಿಸಿದರೆ ನಿತಿಶ್‌ಕುಮಾರ್‌ ಅವರ ಹಿಡಿತ ದುರ್ಬಲಗೊಂಡಿದೆ. ಮತ್ತೊಂದೆಡೆ ಬಿಜೆಪಿ ಮತ್ತು ಆರ್‌ಜೆಡಿ ಬಲಗೊಂಡಿವೆ.

ಇದನ್ನೂ ಓದಿರಿ: ಬಿಹಾರ ಬಿಕ್ಕಟ್ಟು: ಬಿಜೆಪಿ ವಿರುದ್ಧ ನಿತೀಶ್‌ ಬಂಡೇಳಲು ಕಾರಣವಾದ ಐದು ಈ ಅಂಶಗಳು…

2025ರ ವಿಧಾನಸಭಾ ಚುನಾವಣೆಯ ವೇಳೆಗೆ, ನಿತೀಶ್ ಕುಮಾರ್ ಅವರು 75ನೇ ವರ್ಷಕ್ಕೆ ಕಾಲಿಡುತ್ತಾರೆ. ಐದನೇ ಅವಧಿಗೆ ಅಧಿಕಾರಕ್ಕಾಗಿ ಹೋರಾಡುವುದು ಅವರಿಗೆ ಹೆಚ್ಚು ಆಕರ್ಷಕವಾದ ನಿರೀಕ್ಷೆಯಲ್ಲ. ಹಾಗಾಗಿ ರಾಷ್ಟ್ರ ರಾಜಕಾರಣ ಅವರಿಗೆ ಗೌರವವನ್ನು ತಂದುಕೊಡಬಹುದು.

ಪ್ರಸ್ತುತ, ನಿತೀಶ್ ಕುಮಾರ್ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಗೌರವಾನ್ವಿತ ಉತ್ತೇಜನ ನೀಡಬಲ್ಲ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್. 2017ರ ಸಮಯದಲ್ಲಿ ಕೆಲವು ಮಾತುಗಳು ಕೇಳಿಬಂದಿದ್ದವು. ನಿತೀಶ್ ಕುಮಾರ್ ಅವರು ಜೆಡಿ(ಯು) ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುತ್ತಾರೆ, ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್‌ಗೆ ನೀಡಿ ಅಂತಿಮವಾಗಿ ಕಾಂಗ್ರೆಸ್ ನಾಯಕರಾಗಿ ಹೊಮ್ಮಿ ರಾಷ್ಟ್ರ ರಾಜಕಾರಣಕ್ಕೆ ತೆರಳುತ್ತಾರೆ ಎಂಬ ಮಾತುಗಳು ಹರಿದಾಡಿದ್ದವು. ಅಂತಿಮ ಹಂತದಲ್ಲಿ ಮಾತುಕತೆಗಳು ಮುರಿದುಬಿದ್ದಿದ್ದವು. ಆದರೆ ಈ ಹಾದಿ ಮತ್ತೆ ತೆರೆದುಕೊಂಡರೆ ಆಶ್ಚರ್ಯಪಡಬೇಕಾಗಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕ್ವಿಂಟ್ ನ್ನ ರಾಘವ ಬೆಹ್ಲ್ ಅದಾನಿ ಗುಂಪಿಗೆ ಮೂರು ತಿಂಗಳ ಹಿಂದೆ ಮಾರಿದ್ದಾರೆ ಆದ್ದರಿಂದ ಅದು ತನ್ನ ದನಿಯನ್ನ ಬದಲಿಸಿ ಮೋದಿ ರಾಗ ಹಾಡುತ್ತಿದೆ ಅಂತ ಕೆಲವರು ಹೇಳುತ್ತಿದ್ದಾರೆ.ನನಗೂ ಅನುಮಾನ ಶುರುವಾಗಿದೆ.
    ನಿಜ ಏನು ಎಂಬುದನ್ನ ತಿಳಿಸಬಲ್ಲಿರಾ?

LEAVE A REPLY

Please enter your comment!
Please enter your name here

- Advertisment -

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...