Homeಮುಖಪುಟ2014 ರಲ್ಲಿ ಗೆದ್ದಂತೆ 2024 ಗೆಲ್ಲುತ್ತಾರೆಯೆ?: ಮೋದಿಗೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಸವಾಲು

2014 ರಲ್ಲಿ ಗೆದ್ದಂತೆ 2024 ಗೆಲ್ಲುತ್ತಾರೆಯೆ?: ಮೋದಿಗೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಸವಾಲು

- Advertisement -
- Advertisement -

ಎಂಟನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ನಿತೀಶ್‌ ಕುಮಾರ್‌ ಮುಂದಿನ ಲೋಕಸಭೆ ಚುನಾವಣೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ,“ಅವರು 2014 ರಲ್ಲಿ ಗೆದ್ದರು, ಆದರೆ ಅವರು 2024 ಗೆಲ್ಲುತ್ತಾರೆಯೆ?” ಎಂದು ಪ್ರಶ್ನಿಸಿದ್ದಾರೆ.

ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರತಿಪಕ್ಷಗಳು ಒಗ್ಗಟ್ಟಿನತ್ತ ಕೆಲಸ ಮಾಡುವ ಬಗ್ಗೆ ನಿತೀಶ್ ಕುಮಾರ್ ಪದೇ ಪದೇ ಮಾತನಾಡುತ್ತಿದ್ದರೂ, ನೀವು ಪ್ರಧಾನಿ ಅಭ್ಯರ್ಥಿಯಾಗಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, “ನಾನು ಯಾವುದಕ್ಕೂ ಸ್ಪರ್ಧಿಯಲ್ಲ” ಎಂದು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಕೇಳಲೇ ಬೇಕಾದ ಪ್ರಶ್ನೆಯೇನೆಂದರೆ, 2014 ರಲ್ಲಿ ಗೆದ್ದವರು 2024 ರಲ್ಲಿ ಮತ್ತೆ ಗೆಲ್ಲುತ್ತಾರೆಯೆ ಎಂದಾಗಿದೆ” ಎಂದು ಅವರು ಹೇಳಿದ್ದಾರೆ. ಬಿಹಾರದಲ್ಲಿ ಚುನಾವಣೆಗಳು ಕೇವಲ 2025 ರಲ್ಲಿ, ಲೋಕಸಭೆ ಸ್ಪರ್ಧೆಯ ನಂತರ ಒಂದು ವರ್ಷದ ನಂತರ ನಡೆಯಲಿದೆ.

ಇದನ್ನೂ ಓದಿ: ‘ಬಿಜೆಪಿ ಭಾರತ ಬಿಟ್ಟು ತೊಲಗು’ ಅಭಿಯಾನ ಬಿಹಾರದಲ್ಲಿ ಉತ್ತಮ ಆರಂಭ ಕಂಡಿದೆ: ಅಖಿಲೇಶ್ ಯಾದವ್

2024 ರಲ್ಲಿ ಕಾಂಗ್ರೆಸ್‌ ನಾಯಕತ್ವವನ್ನು ಪಡೆಯದಿದ್ದರೆ ನಿತೀಶ್ ಕುಮಾರ್‌ ಅವರು 2024 ರಲ್ಲಿ ಪ್ರಧಾನಿ ಮೋದಿ ವಿರುದ್ಧ ಪ್ರತಿಪಕ್ಷದ ಅಭ್ಯರ್ಥಿಯಾಗಬಹುದು ಎಂಬ ವಿಚಾರವನ್ನು ರಾಜಕೀಯ ವಿಶ್ಲೇಷಕರು ವರ್ಷಗಳಿಂದ ತೇಲಿ ಬಿಡುತ್ತಿದ್ದಾರೆ. ಆದರೆ ಅವರು ಮೈತ್ರಿ ಪಕ್ಷಗಳನ್ನು ಬಿಟ್ಟು ಹಲವು ಭಾರಿ ಮೈತ್ರಿ ತೊರೆದ್ದು ಕೂಡಾ 2024 ರ ಚುನಾವಣೆಯ ಮೈತ್ರಿಕೂಟದ ರಚನೆಯಲ್ಲಿ ಗಣನೆಗೆ ಬರಲಿದೆ.

ಜೆಡಿಯು-ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಯ ಮೊದಲ ‘ಮಹಾಘಟಬಂಧನ್’ 2015 ರಲ್ಲಿ ಅಧಿಕಾರವನ್ನು ಗೆದ್ದಿತ್ತು. ಆದರೆ ನಂತರ ಈ ಮೈತ್ರಿಯನ್ನು ತೊರೆದು, ಬಿಜೆಪಿಯೊಂದಿಗೆ ಅಧಿಕಾರಕ್ಕೆ ಏರಿದ್ದರು. ಇದೀಗ ಮತ್ತ ಬಿಜೆಪಿ ಮೈತ್ರಿಯೊಂದಿಗೆ ಚುನಾವಣೆ ಸ್ಪರ್ಧಿಸಿ ಎರಡು ವರ್ಷಗಳ ನಂತರ ಬಿಜೆಪಿಯ ಮೈತ್ರಿಯನ್ನು ತೊರೆದಿದ್ದಾರೆ.

ನಿತೀಶ್ ಕುಮಾರ್‌ ಅವರು ಬಿಜೆಪಿ ನೇತೃತ್ವದ ಎನ್‌ಡಿಎ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ ನಂತರ ವಿಶೇಷವಾಗಿ 2002 ರ ಗುಜರಾತ್ ಗಲಭೆಗಳ ವಿಚಾರಕ್ಕೆ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿದ್ದರು. ಆದರೆ ನಂತರ ಅವರು 2017 ರಲ್ಲಿ ಮತ್ತೆ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಿಹಾರದ ಮುಖ್ಯಮಂತ್ರಿಯಾದರು.

ಇದನ್ನೂ ಓದಿ: ಬಿಹಾರ: ನಿತೀಶ್-ತೇಜಸ್ವಿ ನಡುವೆ ಒಪ್ಪಂದ; ಹೊಸ ಸರ್ಕಾರದಲ್ಲಿ ಯಾರಿಗೆ ಯಾವ ಸ್ಥಾನ?

2020 ರಲ್ಲಿ ಬಿಜೆಪಿ ಮೈತ್ರಿಯೊಂದಿಗೆ ಗೆದ್ದ ನಂತರ ತಾನು ಮುಖ್ಯಮಂತ್ರಿಯಾಗಲು ಬಯಸಿರಲಿಲ್ಲ ಎಂದು ಅವರು ಹೇಳಿದ್ದಾರೆ. “ಪಕ್ಷದ (ಜೆಡಿಯು) ಜನರೊಂದಿಗೆ ಕೇಳಿ, ಅವರು ನಮಗೆ ಏನು ಮಾಡಿದ್ದಾರೆ ಎಂದು. ನನಗೆ ಸಿಎಂ ಆಗಲು ಇಷ್ಟವಿರಲಿಲ್ಲ. ಆದರೆ ನನ್ನ ಮೇಲೆ ಒತ್ತಡ ಹೇರಲಾಯಿತು. ನಂತರ ಏನಾಯಿತು ಎಂದು ನೀವೇ ನೋಡಿ. ನಾನು ಪತ್ರಕರ್ತರೊಂದಿಗೆ ಮಾತನಾಡದೆ ಎರಡು ತಿಂಗಳಾಯಿತು” ಎಂದು ಅವರು ಹೇಳಿದ್ದಾರೆ.

ಅಷ್ಟೆ ಅಲ್ಲದೆ, ಜೆಡಿಯು ಶಾಸಕರ ಸಂಖ್ಯಾಬಲ ಕುಸಿತದತ್ತ ಕೂಡಾ ಅವರು ಬೊಟ್ಟು ಮಾಡಿದ್ದಾರೆ. “2015ರಲ್ಲಿ ನಾವು ಎಷ್ಟು ಸೀಟು ಗೆದ್ದಿದ್ದೆವು? ಆಮೇಲೆ ನಾವು ಬಿಜೆಪಿ ಜೊತೆಗೆ ಚುನಾವಣೆಗೆ ಹೋಗಿದ್ದೆವು. ಆದರೆ ನಮ್ಮ ಸಂಖ್ಯಾಬಲ ಯಾವ ಮಟ್ಟಕ್ಕೆ ಇಳಿಯಿತು ನೋಡಿ” ಜೆಡಿಯುನಲ್ಲಿರುವವರಲ್ಲದೆ, ತೇಜಸ್ವಿ ಯಾದವ್ ಕೂಡ ಬಿಜೆಪಿ “ತನ್ನ ಪಾಲುದಾರರನ್ನು ಕಸಿದುಕೊಳ್ಳುತ್ತದೆ” ಎಂದು ಹೇಳಿದ್ದಾರೆ.

243 ಸಂಖ್ಯಾ ಬಲವಿರುವ ಬಿಹಾರ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ಅವರ ಪಕ್ಷವಾದ ಜೆಡಿಯು 71 ಸ್ಥಾನಗಳನ್ನು 2015 ರಲ್ಲಿ ಗೆದ್ದಿತ್ತು. ಆರ್‌ಜೆಡಿ 80 ಸ್ಥಾನದೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಒಪ್ಪಂದದ ಭಾಗವಾಗಿ ನಿತೀಶ್ ಕುಮಾರ್‌ ಅವರೇ ರಾಜ್ಯದ ಮುಖ್ಯಮಂತ್ರಿಯಾದರು.

ಇದನ್ನೂ ಓದಿ: ಬಿಹಾರ: ಬಿಜೆಪಿ ಜೊತೆಗಿನ ಮೈತ್ರಿ ಮುರಿದ ನಿತೀಶ್‌; ಸರ್ಕಾರ ಪತನ

ಸದ್ಯಕ್ಕೆ ಜೆಡಿಯು 45 ಸ್ಥಾನಗಳನ್ನು ಹೊಂದಿದ್ದು, 77 ಸ್ಥಾನಗಳನ್ನು ಹೊಂದಿರುವ ಬಿಜೆಪಿ 2020 ರಲ್ಲಿ ನಿತೀಶ್ ಕುಮಾರ್‌‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಷ್ಟ್ರಪತಿಗೆ ಸ್ವಾಗತ ಕೋರುವ ಬ್ಯಾನರ್‌ನಲ್ಲಿ ತಪ್ಪು ಮಾಹಿತಿ: BJP ಶಾಸಕರ ಯಡವಟ್ಟು | Naanu Gauri

ರಾಷ್ಟ್ರಪತಿಗೆ ಸ್ವಾಗತ ಕೋರುವ ಬ್ಯಾನರ್‌ನಲ್ಲಿ ತಪ್ಪು ಮಾಹಿತಿ: BJP ಶಾಸಕರ ಯಡವಟ್ಟು

1
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನಲೆ, ಅವರಿಗೆ ಸ್ವಾಗತ ಕೋರಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಹಾಕಿರುವ ಬ್ಯಾನರ್‌ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಬ್ಯಾನರ್‌ನಲ್ಲಿ ಮುರ್ಮು ಅವರನ್ನು ‘ದೇಶದ...