Homeಮುಖಪುಟ'ಬಿಜೆಪಿ ಭಾರತ ಬಿಟ್ಟು ತೊಲಗು' ಅಭಿಯಾನ ಬಿಹಾರದಲ್ಲಿ ಉತ್ತಮ ಆರಂಭ ಕಂಡಿದೆ: ಅಖಿಲೇಶ್ ಯಾದವ್

‘ಬಿಜೆಪಿ ಭಾರತ ಬಿಟ್ಟು ತೊಲಗು’ ಅಭಿಯಾನ ಬಿಹಾರದಲ್ಲಿ ಉತ್ತಮ ಆರಂಭ ಕಂಡಿದೆ: ಅಖಿಲೇಶ್ ಯಾದವ್

- Advertisement -
- Advertisement -

ಬಿಹಾರದಲ್ಲಿ ಜೆಡಿಯು ಪಕ್ಷವು ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡು ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚಿಸಲು ಮುಂದಾಗಿರುವುದನ್ನು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಸ್ವಾಗತಿಸಿದ್ದಾರೆ.

ಬಿಹಾರದ ರಾಜಕೀಯ ಬೆಳವಣಿಗೆಗಳನ್ನು ಉತ್ತಮ ಆರಂಭ ಎಂದು ಕರೆದಿರುವ ಅವರು, ದೇಶದ ಹಲವು ಪಕ್ಷಗಳು ಜೆಡಿಯು ಹಾದಿ ತುಳಿಯಲಿವೆ ಮತ್ತು ಬಿಜೆಪಿಯನ್ನು ಭಾರತದಿಂದ ಕಿತ್ತೊಗೆಯಲಿವೆ ಎಂದಿದ್ದಾರೆ.

ಎಎನ್‌ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಅವರು, “ಬ್ರೀಟಿಷರೆ ಭಾರತ ಬಿಟ್ಟು ತೊಲಗಿ ಎಂದು 1942ರಲ್ಲಿ ಚಳವಳಿ ಆರಂಭಿಸಲಾಗಿತ್ತು. ಇಂದು ಬಿಹಾರದಿಂದ ‘ಬಿಜೆಪಿ ತೊಲಗಿಸಿ’ ಘೋಷಣೆ ಬರುತ್ತಿದೆ. ದೇಶದ ಜನರು ಮತ್ತು ರಾಜಕೀಯ ಪಕ್ಷಗಳು ಬಿಜೆಪಿ ವಿರುದ್ಧ ನಿಲುವು ತೆಗೆದುಕೊಳ್ಳುತ್ತವೆ ಎಂದು ನನಗನಿಸುತ್ತದೆ” ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ ನಿತೀಶ್ ಕುಮಾರ್‌ರವರು ಬಿಹಾರದ ರಾಜ್ಯಪಾಲ ಫಾಗು ಚೌಹಾಣ್ ಅವರಿಗೆ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನಂತರ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಜೊತೆ ಸಭೆ ನಡೆಸಿ 160 ಶಾಸಕರ ಬೆಂಬಲದೊಂದಿಗೆ ಹೊಸ ಸರ್ಕಾರ ರಚಿಸಲು ಹಕ್ಕು ಮಂಡಿಸಲು ರಾಜ್ಯಪಾಲರ ಭವನದತ್ತ ಸಾಗಿದ್ದಾರೆ.

ಮುಂದಿನ ಹೊಸ ಸರ್ಕಾರದಲ್ಲಿ ಜೆಡಿಯು ಪಕ್ಷದ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾಗಲಿದ್ದಾರೆ. ಆರ್‌ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಲಿದ್ದಾರೆ. ಎಲ್ಲಾ ಸಚಿವಾಲಯಗಳ ನಿಯೋಜನೆಯಲ್ಲಿ ನಿತೀಶ್ ಕುಮಾರ್ ಅವರಿಗೆ ವಿಶೇಷಾಧಿಕಾರ ನೀಡಲಾಗುತ್ತದೆ ಎನ್ನಲಾಗಿದೆ.

ಮುಂದಿನ ಸ್ಪೀಕರ್‌‌ ಸ್ಥಾನವನ್ನು ತೇಜಸ್ವಿ ಯಾದವ್‌ ಅವರ ಪಕ್ಷವಾದ ಆರ್‌ಜೆಡಿಯಿಂದ ಆಯ್ಕೆ ಮಾಡಲಾಗುತ್ತಿದೆ. ನಿತೀಶ್ ಕುಮಾರ್ ನೇತೃತ್ವದ ಹೊಸ ಸರ್ಕಾರದಲ್ಲಿ ಪಾಲ್ಗೊಳ್ಳಲು ಸಿದ್ಧರಿರುವ ಎಡಪಕ್ಷಗಳು ಮತ್ತು ಕಾಂಗ್ರೆಸ್‌ನಂತಹ ಇತರ ವಿರೋಧ ಪಕ್ಷಗಳೊಂದಿಗೆ ತೇಜಸ್ವಿ ಯಾದವ್ ಅವರು ಸಭೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬಿಹಾರ: ನಿತೀಶ್-ತೇಜಸ್ವಿ ನಡುವೆ ಒಪ್ಪಂದ; ಹೊಸ ಸರ್ಕಾರದಲ್ಲಿ ಯಾರಿಗೆ ಯಾವ ಸ್ಥಾನ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇನ್ನು ಸ್ವಲ್ಪ ದಿವಸ ಗಳಲ್ಲಿ ಆರ್ಯರೇ ಭಾರತ ಬಿಟ್ಟು ತೊಲಗಿ ಎಂಬ. ಘೋಷಣೆ ಮೊಳಗಿದರೆ ಆಶ್ಚರ್ಯ ವೇನಿಲ್ಲ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...