16 ವರ್ಷದ ದಲಿತ ಬಾಲಕಿಯು ತರಗತಿ ವೇಳೆ ಮುಂದಿನ ಸಾಲಿನಲ್ಲಿ ಕುಳಿತಿದ್ದಕ್ಕಾಗಿ ಥಳಿಸಿದ್ದಲ್ಲದೆ ಜಾತಿ ನಿಂದನೆ ಮಾಡಿರುವ ಸರ್ಕಾರಿ ಶಿಕ್ಷಕಿಯೊಬ್ಬರ ಮೇಲೆ ಮಧ್ಯಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಆಗಸ್ಟ್ 2ರಂದು ರಾಜ್ಯ ರಾಜಧಾನಿಯಿಂದ 700 ಕಿಮೀ ದೂರದಲ್ಲಿರುವ ಸಿಂಗ್ರೌಲಿ ಜಿಲ್ಲೆಯ ಬೈಧಾನ್‌ನ ಸರ್ಕಾರಿ ಹೈಯರ್ ಸೆಕೆಂಡರಿ ಬಾಲಕಿಯರ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅಂದು 12ನೇ ತರಗತಿಯ ವಿದ್ಯಾರ್ಥಿನಿ ಅಂಜನಾ ಸಾಕೇತ್ (ಹೆಸರು ಬದಲಾಯಿಸಲಾಗಿದೆ), ಶಿಕ್ಷಕಿ ಜಾಗೃತಿ ಸಿಂಗ್ ತರಗತಿಗೆ ಪ್ರವೇಶಿಸಿದಾಗ ತರಗತಿಯ ಮುಂಭಾಗದ ಬೆಂಚ್‌ನಲ್ಲಿ ಕುಳಿತ್ತಿದ್ದರು. ಇದನ್ನು ನೋಡಿದ ಶಿಕ್ಷಕಿ ಕೋಪಗೊಂಡಳು. ತರುವಾಯ ವಿದ್ಯಾರ್ಥಿನಿಯ ಜಾತಿ ನಿಂದನೆ ಮಾಡಿದಳು. ವಿದ್ಯಾರ್ಥಿನಿ ಅಂಜನಾ ತಲೆಗೆ ಪುಸ್ತಕದಿಂದ ಹಲವು ಬಾರಿ ಹೊಡೆದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
“ಶಿಕ್ಷಕಿ ನನ್ನ ತಲೆಯ ಮೇಲೆ ಪುಸ್ತಕದಿಂದ ಹೊಡೆದ ನಂತರ ನಾನು ಕೆಲವು ಸಮಯ ಪ್ರಜ್ಞೆ ತಪ್ಪಿದೆ” ಎಂದು ವಿದ್ಯಾರ್ಥಿನಿ ಹೇಳಿರುವುದನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಶಿಕ್ಷಕಿ ಜಾಗೃತಿ ಸಿಂಗ್ ವಿರುದ್ಧ ಆಗಸ್ಟ್ 17ರಂದು ಸಿಂಗ್ರೌಲಿಯ ಬೈರಾನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
“ದಲಿತ ಬಾಲಕಿಯ ದೂರಿನ ಮೇರೆಗೆ ಪೊಲೀಸರು ಶಿಕ್ಷಕಿ ಜಾಗೃತಿ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 294, 323, 506 ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಎರಡು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ” ಎಂದು ಬೈರಾನ್ ಪೊಲೀಸ್ ಪಟ್ಟಣ ನಿರೀಕ್ಷಕ ಅರುಣ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ರೋಹಿಣಿ ಪ್ರಸಾದ್ ಪಾಂಡೆ ಅವರು ಶಿಕ್ಷಕಿಯ ವಿರುದ್ಧ ಕ್ರಮ ಜರುಗಿಸಿದ್ದಾರೆ ಎಂದು ಎಫ್‌ಐಆರ್ ದಾಖಲಾದ ಒಂದು ದಿನದ ನಂತರ ಜಿಲ್ಲಾಧಿಕಾರಿಗಳು ಹೊರಡಿಸಿರುವ ಅಧಿಕೃತ ಪ್ರಕಟಣೆ ತಿಳಿಸಿದೆ. ರಾಜೀವ್ ರಂಜನ್ ಮೀನಾ ಅವರು ಪ್ರಕರಣದ ತನಿಖೆ ನಡೆಸಲಿದ್ದಾರೆ.
ಘಟನೆ ನಡೆದ ಒಂದು ದಿನದ ನಂತರ ಸಂತ್ರಸ್ತ ವಿದ್ಯಾರ್ಥಿನಿ ತನ್ನ ಪೋಷಕರೊಂದಿಗೆ ಶಿಕ್ಷಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿದ್ದರು.
ಹಲ್ಲೆ ಹಾಗೂ ತಾರತಮ್ಯ ಎಸಗಿರುವ ಬಗ್ಗೆ ತನಿಖೆಯ ವೇಳೆ ಸಾಕ್ಷ್ಯ ಸಿಕ್ಕಿದ್ದು, ಜಿಲ್ಲಾಧಿಕಾರಿಯವರಿಗೆ ಡಿಇಒ ಬುಧವಾರ ವರದಿ ಸಲ್ಲಿಸಿದ್ದಾರೆ. ವರದಿಯ ಮೇರೆಗೆ ಶಿಕ್ಷಕಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆಗಸ್ಟ್ 18ರಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ: ದಲಿತ ಬಾಲಕನನ್ನು ಥಳಿಸಿ ಕೊಂದ ಶಿಕ್ಷಕನ ಪರ ಪ್ರತಿಭಟನೆಯಲ್ಲಿ ಚಪ್ಪಾಳೆ ತಟ್ಟಿದ ಜಲೋರ್ ಜಿಲ್ಲಾಧಿಕಾರಿ, ಎಸ್‌ಪಿ?
ಸದರಿ ಶಿಕ್ಷಕಿಯ ವಿರುದ್ಧ ಬಂದಿರುವ ಆರೋಪಗಳು ನಿಜವೆಂದು ಅನೇಕ ವಿದ್ಯಾರ್ಥಿಗಳು, ಸಹ ಶಿಕ್ಷಕರು ಹೇಳುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಧ್ಯಪ್ರದೇಶ ಸಿವಿಲ್ ಸರ್ವಿಸ್ (ನಡತೆ) 1995ರ ಸೆಕ್ಷನ್‌ಗಳನ್ನು ಉಲ್ಲಂಘಿಸಿರುವುದರಿಂದ ಶಿಕ್ಷಕಿಯ ವಿರುದ್ಧ ಇಲಾಖಾ ತನಿಖೆಯನ್ನು ಪ್ರಾರಂಭಿಸುವಂತೆ ಸೂಚಿಸಿ ಜಿಲ್ಲಾಧಿಕಾರಿಯವರು ರೇವಾ ಆಯುಕ್ತರಿಗೆ ಪತ್ರವನ್ನು ಬರೆದಿದ್ದಾರೆ.
ಅಮಾನತು ಪ್ರಕ್ರಿಯೆಯನ್ನು ಪ್ರಾರಂಭಿಸಲು ನಾವು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದೇವೆ ಎಂದು ರಾಜೀವ್ ರಂಜನ್ ಮೀನಾ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಪ್ರತಿ ವರ್ಷ, ಕನಿಷ್ಠ 6-12 ಪ್ರಮುಖ ಅಪರಾಧಗಳಾದ ದಲಿತರ ಮನೆಗಳನ್ನು ಸುಡುವುದು, ಅತ್ಯಾಚಾರ, ಮುಸ್ಲಿಮರಿಂದ ದಲಿತರ ಹತ್ಯೆಗಳು ನಮ್ಮ ಕರ್ನಾಟಕ ಸೇರಿದಂತೆ ಭಾರತದಾದ್ಯಂತ ನಿಯಮಿತವಾಗಿ ನಡೆಯುತ್ತಿವೆ! ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ದಲಿತರ ವಿರುದ್ಧದ ಪ್ರಮುಖ ಅಪರಾಧಗಳ ವಿರುದ್ಧ ನಿಮ್ಮ ಮಾಧ್ಯಮವು ಹೇಗೆ ದೊಡ್ಡ ವಿಷಯವಾಗಿದೆ ಆದರೆ ನಿಶ್ಚೇಷ್ಟಿತವಾಗಿದೆ ಮತ್ತು ಮೂಕರಾಗುತ್ತಿದೆ ಎಂದು ನನಗೆ ಆಶ್ಚರ್ಯವಾಗುತ್ತದೆ !!!
After completion of 75 years still this is persist. Where this country heading.
We talk about gandhi and ambedkar all big things.
Teacher should hanged without any mercy.