Homeಕರ್ನಾಟಕ‘ನಾನುಗೌರಿ.ಕಾಂ’ ಮಾಧ್ಯಮವನ್ನು ನೀವು ಹೀಗೂ ಕೂಡ ಬೆಂಬಲಿಸಬಹುದು!

‘ನಾನುಗೌರಿ.ಕಾಂ’ ಮಾಧ್ಯಮವನ್ನು ನೀವು ಹೀಗೂ ಕೂಡ ಬೆಂಬಲಿಸಬಹುದು!

ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರ ಆದರ್ಶಗಳನ್ನು ಪಾಲಿಸುತ್ತಾ, ಪ್ರಭುತ್ವದ ಜನವಿರೋಧಿ ನೀತಿಗಳ ವಿರುದ್ಧ, ಕೋಮುವಾದದ ವಿರುದ್ಧ, ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಸ್ವತಂತ್ರ ಮಾಧ್ಯಮ ನಾನುಗೌರಿ.ಕಾಂ ಅನ್ನು ನೀವೆಲ್ಲರೂ ಗಮನಿಸಿದ್ದೀರಿ. ನಮ್ಮ ಪತ್ರಿಕೋದ್ಯೋಗವವನ್ನು ಗಮನಿಸಿ ಹಲವಾರು ಜನರು ಆರ್ಥಿಕ ಬೆಂಬಲವನ್ನು ನಿರಂತರವಾಗಿ ನೀಡುತ್ತಲೆ ಇದ್ದಾರೆ. ಅವರಿಗೆ ನಾನುಗೌರಿ.ಕಾಂ ತಂಡದಿಂದ ಹೃತ್ಪೂರ್ವಕ ಧನ್ಯವಾದಗಳು.

ನಮ್ಮ ಪತ್ರಿಕೋದ್ಯೋಗ ಈ ನಾಡಿನ ಪ್ರತಿಯೊಬ್ಬ ಶೋಷಿತರನ್ನೂ, ಅನ್ಯಾಯಕ್ಕೆ ಒಳಗಾಗುವವರನ್ನೂ ತಲುಪಬೇಕು ಹಾಗೂ ಅವರಲ್ಲಿ ಜಾಗೃತಿ ಮೂಡಬೇಕು ಎಂಬುವುದು ನಮ್ಮ ಆಶಯ. ಅದಕ್ಕಾಗಿ ಕೇವಲ ಆರ್ಥಿಕ ಬೆಂಬಲ ಮಾತ್ರ ಸಾಕಾಗುವುದಿಲ್ಲ. ಜನರಿಗೆ ನಮ್ಮ ಸುದ್ದಿ-ಲೇಖನಗಳನ್ನು ತಲುಪಿಸುವ ಕಾರ್ಯಗಳು ಕೂಡಾ ಓದುಗರಾದ ನೀವೆ ಮಾಡಬೇಕಿದೆ. ಆದರೆ ಅದೇನೂ ದುಡ್ಡು ತೆತ್ತು ಮಾಡಬೇಕಾದ ಕಠಿಣ ಕೆಲಸವಲ್ಲ, ತುಂಬಾ ಸರಳವಾದ ವಿಷಯ.

ನಮ್ಮ ಸುದ್ದಿ-ಲೇಖನಗಳನ್ನು ಹೆಚ್ಚು ಜನರಿಗೆ ತಲುಪುವಂತೆ ಮಾಡುವುದು ಹೇಗೆ?

ಸಾಮಾಜಿಕ ಜಾಲತಾಣಗಳ ಮೂಲಕ ನಾವು ವಿಶ್ವದಾದ್ಯಂತ ಇರುವ ಕನ್ನಡಿಗರನ್ನು ತಲುಪುತ್ತಿದ್ದೇವೆ. ಆದರೆ ಈ ಎಲ್ಲಾ ಸಾಮಾಜಿಕ ಮಾಧ್ಯಮಗಳು ಆಳುವ ವರ್ಗದ ಕೈಗೊಂಬೆ ಎಂಬುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಪ್ರಭುತ್ವದ ವಿರೋಧಿ ಅಥವಾ ಜನರ ಪರವಾಗಿರುವ ಸುದ್ದಿ-ಲೇಖನಗಳನ್ನು ಅದು ಹೆಚ್ಚಿನ ಜನರಿಗೆ ತಲುಪಿಸುವಲ್ಲಿ ತುಸು ನಿರ್ಲಕ್ಷ್ಯ ವಹಿಸುತ್ತದೆ ಎಂಬುವುದು ನಾವು ಇಷ್ಟು ವರ್ಷಗಳನ್ನು ಕಂಡುಕೊಂಡಿರುವ ಸತ್ಯ.

ಹಾಗಾಗಿ ನಮ್ಮ ಓದುಗರು ಮಿತ್ರರು ದಿನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಸಾಮಾಜಿಕ ಜಾಲತಾಣಗಳಿಗೆ ಭೇಟಿ ನೀಡಬೇಕು. ಕೆಳಗೆ ಕೊಟ್ಟಿರುವ ಅಂಶಗಳಲ್ಲಿ ಒಂದಿಷ್ಟನ್ನು ನೀವು ಮಾಡಿದರೆ ನಾವು ಮತ್ತಷ್ಟು ಹೆಚ್ಚು ಜನರಿಗೆ ತಲುಪಲು ಸಹಾಯ ಮಾಡಿದಂತೆ ಆಗುತ್ತದೆ.

  • ದಿನಕ್ಕೆ ಒಂದು ಬಾರಿಯಾದರೂ ನಮ್ಮ ಜಾಲತಾಣಗಳಿಗೆ ಭೇಟಿ ನೀಡುವುದು.
  • ಅಲ್ಲಿರುವ ಸುದ್ದಿ-ಲೇಖನಗಳನ್ನು ಓದುವುದು.
  • ಸುದ್ದಿ-ಲೇಖನಗಳು ಇಷ್ಟವಾಗಿದ್ದರೆ ಲೈಕ್‌ ಮಾಡುವುದು.
  • ಸುದ್ದಿ-ಲೇಖನಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡುವುದು.
  • ನಿಮ್ಮ ಪ್ರೊಫೈಲ್‌ನಲ್ಲಿ ನಮ್ಮ ಸುದ್ದಿ-ಲೇಖನಗಳನ್ನು ಶೇ‌ರ್‌ ಮಾಡುವುದು.
  • ನೀವು ನಿರಂತರ ಭೇಟಿ ಕೊಟ್ಟು ಸುದ್ದಿ-ಲೇಖನಗಳಿಗೆ ಶೇ‌ರ್‌‌-ಲೈಕ್-ಕಮೆಂಟ್ ಮಾಡಿದರೆ ಜಾಲತಾಣ ನಮ್ಮ ಸುದ್ದಿ-ಲೇಖನಗಳನ್ನು ಮತ್ತಷ್ಟು ಹೆಚ್ಚಿನ ಜನರಿಗೆ ತಲುಪಿಸುತ್ತದೆ.
  • ಹೆಚ್ಚು ಜನರು ನಮ್ಮ ಪೇಜ್ ಅಲ್ಲಿ ಪ್ರತಿಕ್ರಿಯೆ ನೀಡಿದರೆ ಅದುನ್ನು ಇನ್ನಷ್ಟು ಹೆಚ್ಚಿನ ಜನರಿಗೆ ಜಾಲತಾಣಗಳ ಆಲ್‌‌ಗರಿದಂ ತಲುಪಿಸುವಂತೆ ಮಾಡಿರುತ್ತಾರೆ.
  • ಮುಖ್ಯವಾಗಿ ನಮ್ಮ ಪೇಜ್‌ಗಳಲ್ಲಿ ಲೈಕ್ ಕಮೆಂಟ್ ಮಾಡಿದರೆ ಜಾಲತಾಣವೂ ಆಟೋಮ್ಯಾಟಿಕ್ ಆಗಿ ಹೆಚ್ಚಿನ ಜನರಿಗೆ ತಲುಪಿಸುತ್ತದೆ.

ಈ ಕೆಳಗಿನ ಸಾಮಾಜಿಕ ಮಾಧ್ಯಮಗಳಲ್ಲಿ ನಾವು ಕ್ರಿಯಾಶೀಲರಾಗಿದ್ದೇವೆ

  • ಫೇಸ್‌ಬುಕ್‌ ➤ Naanu Gauri
  • ಟ್ವಿಟರ್‌ ➤ Naanu Gauri
  • ಯೂಟ್ಯೂಬ್ ➤ Naanu Gauri
  • ಇನ್‌ಸ್ಟಾಗ್ರಾಮ್ ➤ naanu_gauri
  • ಶೇರ್‌ ಚಾಟ್ ➤ Naanu Gauri
  • ಕೂ ➤ Naanu Gauri
  • ನಿಮ್ಮದೆ ವಾಟ್ಸಪ್‌ ಗ್ರೂಪ್‌ಗಳು ಇದ್ದರೆ ನಮ್ಮ 9901643912 ಮತ್ತು 9741928209 ನಂಬರ್‌ಗಳನ್ನು ಸೇರಿಸಿ, ನಮ್ಮ ಎಲ್ಲಾ ಅ‌ಪ್‌ಡೇಟ್‌ಗಳನ್ನು ಪಡೆಯುತ್ತಿರಿ.

ಮೇಲಿನ ಜಾಲತಾಣಗಳಲ್ಲಿ ನೀವಿದ್ದರೆ ಅಲ್ಲಿ ಕ್ಲಿಕ್ ಮಾಡಿ ನಮ್ಮ ಪೇಜ್‌ಗಳನ್ನು ಲೈಕ್ ಮಾಡಿ. ನಿಮ್ಮ ಗೆಳೆಯರನ್ನೂ ಹಾಗೆ ಮಾಡಲು ಪ್ರೇರೇಪಿಸಿ.

ನಮ್ಮ ಸುದ್ದಿ-ಲೇಖನಗಳ ಬಗ್ಗೆ ನಿಮ್ಮ ಅಭಿಪ್ರಾಯ, ತಪ್ಪು-ಒಪ್ಪುಗಳು ಇದ್ದರೆ [email protected] ಗೆ ಬರೆಯಬಹುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ನಾಡಾ’ದಿಂದ ಕುಸ್ತಿಪಟು ಬಜರಂಗ್ ಪುನಿಯಾ ಅಮಾನತು: ವರದಿ

0
ಡೋಪಿಂಗ್ ಪರೀಕ್ಷೆ (ಮಾದಕವಸ್ತು ಪತ್ತೆ ಪರೀಕ್ಷೆ)ಗೆ ಸರಿಯಾದ ಸಮಯಕ್ಕೆ ಮೂತ್ರದ ಮಾದರಿಯನ್ನು ನೀಡದ ಆರೋಪದ ಮೇಲೆ ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ...