Homeಕರ್ನಾಟಕಮುರುಘಾ ಶರಣರು ಕಾನೂನಿಗಿಂತ ದೊಡ್ಡವರೇ?: ಬಂಧನಕ್ಕೆ ದಲಿತ ಮುಖಂಡರ ಆಗ್ರಹ

ಮುರುಘಾ ಶರಣರು ಕಾನೂನಿಗಿಂತ ದೊಡ್ಡವರೇ?: ಬಂಧನಕ್ಕೆ ದಲಿತ ಮುಖಂಡರ ಆಗ್ರಹ

- Advertisement -
- Advertisement -

“ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದರೂ ಯಾಕಿನ್ನೂ ಸ್ವಾಮೀಜಿಯ ಬಂಧನವಾಗಿಲ್ಲ?” ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.

ಚಿತ್ರದುರ್ಗದ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ ಅವರನ್ನು ಕೇಳಿದರೆ, ‘ತನಿಖೆಯಾಗುತ್ತಿದೆ. ಕ್ರಮ ಜರುಗಿಸುತ್ತೇವೆ’ ಎನ್ನುತ್ತಾರೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಸ್ವಾಮೀಜಿಯನ್ನು ಯಾವಾಗ ಬಂಧಿಸುತ್ತೀರಿ? ಪೋಕ್ಸೋ ಪ್ರಕರಣದಲ್ಲಿ ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕಲ್ಲ, ಬೇರೆಯವರಾಗಿದ್ದರೆ ಹೀಗೆಯೇ ವಿಳಂಬವಾಗುತ್ತಿತ್ತೇ ಎಂದು ಕೇಳಿದರೆ, “ಆರೋಪಗಳನ್ನು ಪರಿಶೀಲನೆ ಮಾಡಬೇಕು. ಏಕಾಏಕಿ ಬಂಧಿಸಲು ಆಗುವುದಿಲ್ಲ. ತನಿಖೆ ನಡೆಸುತ್ತಿದ್ದೇವೆ. ಮೈಸೂರಿನಿಂದ ನಿನ್ನೆಯಷ್ಟೇ ಪ್ರಕರಣ ಚಿತ್ರದುರ್ಗಕ್ಕೆ ವರ್ಗಾವಣೆಯಾಗಿದೆ” ಎನ್ನುತ್ತಾರೆ ಎಸ್.ಪಿ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅತ್ಯಂತ ಶೋಷಿತ ಸಮುದಾಯಕ್ಕೆ ಸೇರಿದ, ಅಸಹಾಯಕ, ಬಡ ಬಾಲಕಿಯರು ಪೊಲೀಸ್ ಠಾಣೆಯ ಮೆಟ್ಟಿಲೇರಿರುವುದೇ ದೊಡ್ಡ ಸಂಗತಿ. ಈ ಸಂತ್ರಸ್ತ ಮಕ್ಕಳಿಗೆ ಸಹಾಯ ಮಾಡಿರುವ ಒಡನಾಡಿ ಸಂಸ್ಥೆಯ ಪರಶು ಹೇಳುವಂತೆ, “ತಮಗೆ ನ್ಯಾಯ ದೊರಕದೆಂದು ಭಾವಿಸಿ ಈ ಮಕ್ಕಳು ಆತ್ಯಹತ್ಯೆಗೂ ಯೋಚಿಸಿದ್ದರು” ಎಂಬುದು ಆಘಾತಕಾರಿ ಸಂಗತಿ.

ಇದೆಲ್ಲದರ ನಡುವೆ ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜಕಾರಣಿಗಳು ಹೇಗೆ ವರ್ತಿಸಬೇಕು? ಸ್ವಾಮೀಜಿ ಯಾವುದೇ ತಪ್ಪು ಮಾಡಿರಲಿಕ್ಕಿಲ್ಲ ಎಂಬ ಅಭಿಪ್ರಾಯ ತಾಳುವುದು ಸಂತ್ರಸ್ತ ಶೋಷಿತ ಮಕ್ಕಳಿಗೆ ತೋರುವ ಅಗೌರವ ತಾನೇ? ಆದರೆ ಆಘಾತಕಾರಿ ಸಂಗತಿಗಳೆಂದರೆ- ಪ್ರಕರಣವನ್ನು ಸಂಧಾನದ ಮೂಲಕ ಮುಚ್ಚಿಹಾಕುವ ಯತ್ನಗಳು ನಡೆಯುತ್ತಿರುವುದು ತಿಳಿದುಬಂದಿದೆ. ಶೋಷಿತ ಸಮುದಾಯದ ಜನಪ್ರತಿನಿಧಿಗಳು ಹಾಗೂ ಶಾಸಕರನ್ನೇ ಈ ಸಂಧಾನಕ್ಕೆ ಬಳಸಲಾಗುತ್ತಿದೆ ಎಂಬ ಆರೋಪಗಳು ಬರುತ್ತಿವೆ.

ಇದನ್ನೂ ಓದಿರಿ: ಮಕ್ಕಳ ಮೇಲೆ ಮುರುಘಾ ಶರಣರಿಂದ ಅತ್ಯಾಚಾರ ಆರೋಪ: ಪ್ರಕರಣ ಬಯಲಿಗೆಳೆದ ಒಡನಾಡಿ ಸಂಸ್ಥೆ ಹೇಳಿದ್ದೇನು?

ಇಷ್ಟೆಲ್ಲದರ ನಡುವೆ ಚಿತ್ರದುರ್ಗದ ಆತ್ಮಸಾಕ್ಷಿ ಸುಮ್ಮನಿಲ್ಲ. ಆಗುತ್ತಿರುವ ಬೆಳವಣಿಗೆಗಳು ಆಘಾತಕಾರಿ ಹಾಗೂ ತಕ್ಷಣವೇ ಸ್ವಾಮೀಜಿಯ ಬಂಧನವಾಗಬೇಕಿರುವುದು ಸಾಂವಿಧಾನಿಕ ನಡೆ ಎಂಬ ಆಗ್ರಹಗಳೂ ಬರುತ್ತಿವೆ. ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆಯನ್ನೂ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆಯನ್ನು ಪ್ರಜ್ಞಾವಂತರು ನೀಡುತ್ತಿದ್ದಾರೆ.

ಚಿತ್ರದುರ್ಗದಲ್ಲಿ ಸಕ್ರಿಯವಾಗಿರುವ ದಲಿತ ಹಾಗೂ ಶೂದ್ರ ಸಮುದಾಯಗಳ ಸಾಮಾಜಿಕ ಸಂಘರ್ಷ ಸಮಿತಿಯು ಪ್ರಕರಣದ ಸುತ್ತ ಆಗುತ್ತಿರುವ ಬೆಳವಣಿಗೆಯನ್ನು ಖಂಡಿಸಿದೆ. ತಕ್ಷಣವೇ ಸ್ವಾಮೀಜಿ ಸಂವಿಧಾನಕ್ಕೆ ಗೌರವಕ್ಕೆ ಕೊಟ್ಟು ಬಂಧನಕ್ಕೊಳಗಾಗಿ ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ದಲಿತ ಚಿಂತಕ ಸಿ.ಕೆ.ಮಹೇಶ್, “ಪೋಕ್ಸೋ ಪ್ರಕರಣ ದಾಖಲಾಗಿದೆ. ಸ್ವಾಮೀಜಿಯಾಗಲೀ, ಮತ್ತೆ ಯಾವನೇ ಆಗಿರಲಿ, ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಒಂದೇ. ಇದು ಮಠಕ್ಕೂ ಅನ್ವಯಿಸುತ್ತದೆ. ಸಾಮಾನ್ಯ ಮನುಷ್ಯನಿಗೆ ಅನ್ವಯವಾಗುವ ಕಾನೂನು ಈ ದೇಶದ ಪ್ರಭಾವಿಗೂ ಅನ್ವಯವಾಗುತ್ತದೆ” ಎಂದರು.

“ಇಲ್ಲಿ ದೌರ್ಜನ್ಯಕ್ಕೊಳಗಾಗಿರುವ ಮಕ್ಕಳು ಶೋಷಿತ ಸಮುದಾಯಕ್ಕೆ ಸೇರಿದವರೋ, ಬೇರೆಯ ಸಮುದಾಯಕ್ಕೆ ಸೇರಿದವರೋ ಬೇಕಿಲ್ಲ. ಎಳೆಯ ಹೆಣ್ಣುಮಕ್ಕಳನ್ನು ಪೋಷಣೆ ಮಾಡುವುದಾಗಿ ಸೇರಿಸಿಕೊಂಡು ಲೈಂಗಿಕ ಕ್ರಿಯೆಗೆ ಬಳಸಿದ್ದರೆ ಅದು ಅಕ್ಷಮ್ಯ ಅಪರಾಧ. ಅಂತಹ ಅಪರಾಧ ಮಾಡಿರುವ ವ್ಯಕ್ತಿಗೆ ಶಿಕ್ಷೆಯಾಗಲೇಬೇಕು. ಪೋಕ್ಸೋ ಕಾನೂನಿನ ಪ್ರಕಾರ, ಎಫ್‌ಐಆರ್‌ ಆದ ತಕ್ಷಣವೇ ಅರೆಸ್ಟ್ ಮಾಡಿ ಮುಂದಿನ ಕ್ರಮಗಳನ್ನು ಜರುಗಿಸಬೇಕು” ಎಂದರು.

ಇದನ್ನೂ ಓದಿರಿ: ಮುರುಘಾ ಮಠ: ಮಕ್ಕಳ ಪ್ರಕರಣದಲ್ಲಿ ಆರೋಪಿಯಾದ ಮಹಿಳಾ ವಾರ್ಡನ್‌ ದೂರು; ಮಠದ ಮಾಜಿ ಆಡಳಿತಾಧಿಕಾರಿ ವಿರುದ್ಧ ಅತ್ಯಾಚಾರ ಯತ್ನ ಪ್ರಕರಣ ದಾಖಲು

“ಇಲ್ಲಿ ಆರೋಪಿಯು ಸ್ವಾಮೀಜಿಯಾಗಿರುವ ಕಾರಣಕ್ಕಾಗಿಯೋ, ಅಥವಾ ಅವರು ಪ್ರಭಾವಿಯಾಗಿರುವ ಕಾರಣಕ್ಕಾಗಿಯೋ ಪೋಕ್ಸೋ ಕೂಡ ನಿಷ್ಕ್ರಿಯವಾದಂತೆ ಕಾಣುತ್ತಿದೆ. ಸಾಮಾನ್ಯ ವ್ಯಕ್ತಿ ಏನಾದರೂ ಈ ಕೆಲಸ ಮಾಡಿದ್ದರೆ ತಕ್ಷಣವೇ ಅರೆಸ್ಟ್ ಮಾಡಲಾಗುತ್ತಿತ್ತು” ಎಂದು ತಿಳಿಸಿದರು.

‘ಬುದ್ಧ, ಬಸವಣ್ಣನವರ ಅನುಯಾಯಿಯಾಗಿದ್ದರೆ ಬಂಧನಕ್ಕೊಳಗಾಗಲಿ’

“ಮುರುಘಾ ಶರಣರು ಇಡೀ ರಾಜ್ಯದಲ್ಲಿ ಗುರುತಿಸಿಕೊಂಡವರು. ಬುದ್ಧ, ಯೇಸು, ಪೈಗಂಬರ್‌ ಮೇಲೆಯೂ ಆರೋಪಗಳು ಬಂದಿದ್ದವು ಎಂದು ಸ್ವಾಮೀಜಿ ಹೇಳಿಕೊಳ್ಳುತ್ತಿದ್ದಾರೆ. ಆ ಮೂಲಕ ಮಹಾನೀಯರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುತ್ತಿದ್ದಾರೆ. ತಮ್ಮ ಮೇಲೆ ಆರೋಪಗಳು ಬಂದಾಗ ಬಸವಣ್ಣ ಹಾಗೂ ಬುದ್ಧ ಮುಕ್ತ ತನಿಖೆಗೆ ಒಳಪಟ್ಟಿದ್ದರು ಎಂಬುದನ್ನು ಮುರುಘಾ ಶರಣರು ಮರೆಯಬಾರದು” ಎಂದು ಸಿ.ಕೆ.ಮಹೇಶ್ ಆಗ್ರಹಿಸಿದರು.

“ಬುದ್ಧನ ಮೇಲೆ ಬ್ರಾಹ್ಮಣರು ಆರೋಪಗಳನ್ನು ಮಾಡಿದಾಗ ಸ್ವಯಃ ಬುದ್ಧ ಗುರುವೇ ತನಿಖೆಗೆ ಒಳಗಾಗುತ್ತಾರೆ. ತನಿಖೆಯಾದ ಬಳಿಕ ಹೊರಗೆ ಬರುತ್ತಾರೆ. ಬುದ್ಧನ ಬಗ್ಗೆ ಮಾತನಾಡುವ ಮುರುಘಾ ಶರಣರು, ತನಿಖೆಗೆ ಒಳಗಾಗಬೇಕು. ನೀವು ಎಷ್ಟೇ ಶುದ್ಧರಾಗಿರಿ, ಪ್ರಾಮಾಣಿಕರಾಗಿರಿ, ಆ ಸರ್ಟಿಫಿಕೇಟ್‌ಗಳನ್ನು ನೀವಾಗಿಯೇ ತೆಗೆದುಕೊಳ್ಳಬಾರದು. ನಿಮ್ಮ ಕ್ರಿಯೆಗಳನ್ನು ಗುರುತಿಸಿದ ಬಳಿಕ ಜನರು ಆ ಸರ್ಟಿಫಿಕೇಟ್‌ಗಳನ್ನು ದೃಢೀಕರಿಸಬೇಕು” ಎಂದು ಆಶಿಸಿದರು.

“ಬುದ್ಧನ ಹೆಸರನ್ನು ಬಳಸಿಯೋ, ಮತ್ತ್ಯಾರೋ ಮಹನೀಯರ ಹೆಸರು ಮುಂದೆ ತರುವ ಮೂಲಕವೋ ರಕ್ಷಣೆ ಮಾಡಿಕೊಳ್ಳುವುದು ಖಂಡನೀಯ. ಬಸವಣ್ಣನವರ ಮೇಲೆ ದ್ರವ್ಯದ ಆರೋಪ ಬಂದಾಗಲೂ ತಾವು ಬಿಜ್ಜಳನ ತನಿಖೆಗೆ ಒಳಪಟ್ಟರು. ತಾವು ಸ್ವಚ್ಛ ಇದ್ದೇವೆ ಎಂಬುದನ್ನು ಸಾಬೀತು ಮಾಡಿದರು. ಆದರೆ ಇಲ್ಲಿ ಮುರುಘಾ ಶರಣರು ಕಾನೂನು ಪಾಲಿಸದೆ ತಮ್ಮ ಕ್ರಿಯೆಗಳ ಮೂಲಕ ತಾವು ತಪ್ಪಿತಸ್ಥರು ಎಂಬುದನ್ನು ಒಪ್ಪಿಕೊಳ್ಳುತ್ತಿದ್ದಾರೆ; ಬಾಯಿಮಾತಿನಲ್ಲಿ ಆರೋಪಿಯಲ್ಲ ಎನ್ನುತ್ತಿದ್ದಾರೆ” ಎಂದರು.

“ಘಟನೆಯನ್ನು ಖಂಡಿಸಿ ಸಾಮಾಜಿಕ ಸಂಘರ್ಷ ಸಮಿತಿ ಹೋರಾಟ ಹಮ್ಮಿಕೊಳ್ಳಲಿದೆ. ಸಂತ್ರಸ್ತ ಮಕ್ಕಳಿಗೆ ನ್ಯಾಯ ದೊರಕಬೇಕಿದೆ” ಎಂದ ಅವರು, “ಪ್ರಭುತ್ವ ಎನ್ನುವುದೇ ಒಂದು ಕೂಟ. ಅಲ್ಲಿ ಪ್ರಭಾವಿಗಳು, ಅಧಿಕಾರಿಗಳು, ಮಠಗಳು ಇರುತ್ತವೆ. ಈ ಕೂಟದ ಸದಸ್ಯನೊಬ್ಬನಿಗೆ ತೊಂದರೆಯಾದಾಗ ಮತ್ತೊಬ್ಬ ಸದಸ್ಯ ಸಂಧಾನಕ್ಕೆ ಬರುತ್ತಾನೆ. ಸಿಎಂ, ಎಂಎಲ್‌ಎ, ಮಂತ್ರಿಗಳು ಈ ಕೂಟದ ಭಾಗವಾಗಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಪ್ರಗತಿಪರ ಚಿಂತಕ ಶಿವಣ್ಣ, “ಅಂಬೇಡ್ಕರ್‌ ಕೊಟ್ಟ ಸಂವಿಧಾನ ಉಳಿಯಬೇಕು. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಸ್ವಾಮೀಜಿ ಬಂಧನಕ್ಕೆ ಒಳಗಾಗಬೇಕು. ಇದಕ್ಕಾಗಿ ದಲಿತ ಶೋಷಿತರ ಬಳಗದಿಂದ ಹೋರಾಟ ರೂಪಿಸುತ್ತಿದ್ದೇವೆ” ಎಂದು ಮಾಹಿತಿ ನೀಡಿದರು.

ಸಾಮಾಜಿಕ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಿ.ದುರ್ಗೇಶ್‌ ಮಾತನಾಡಿ, “ಈ ಸ್ವಾಮೀಜಿ ಮಾಡಿರುವ ಕೆಲಸ ಅಕ್ಷಮ್ಯ ಅಪರಾಧ. ಸಾಮಾನ್ಯ ಪ್ರಜೆಯಾಗಿದ್ದರೆ ತಕ್ಷಣವೇ ಬಂಧನಕ್ಕೊಳಗಾಗುತ್ತಿದ್ದ. ಆದರೆ ಮಠಾಧಿಪತಿಗೆ ಸರ್ಕಾರ ರಕ್ಷಣೆ ನೀಡುತ್ತಿದೆ ಅನಿಸುತ್ತಿದೆ. ಮುರುಘಾ ಶರಣರನ್ನು ಮೊದಲು ಬಂಧಿಸಬೇಕಾಗಿದೆ” ಎಂದು ಆಗ್ರಹಿಸಿದರು.

“ಸಂತ್ರಸ್ತರ ಬಾಯಿ ಮುಚ್ಚಿಸುವ ಕುತಂತ್ರಗಳನ್ನು ಮಾಡಿಯೇ ಮಾಡುತ್ತಾರೆ. ಕೆಲವರು ಹೇಳೋದೊಂದು ಮಾಡೋದೊಂದು. ಇಂಥವರಿಂದ ದೇಶ ಹಾಳಾಗಿದೆ” ಎಂದು ವಿಷಾದಿಸಿದರು.

ಇದನ್ನೂ ಓದಿರಿ: ಮುರುಘಾ ಶರಣರ ಮೇಲಿನ ಪೋಕ್ಸೋ ಪ್ರಕರಣ ಚಿತ್ರದುರ್ಗಕ್ಕೆ ವರ್ಗಾವಣೆ

ಸಮಿತಿಯ ಜಿಲ್ಲಾಧ್ಯಕ್ಷರಾದ ಕೆ.ಕುಮಾರ್‌ ಮಾತನಾಡಿ, “ಬಹಳ ನೋವಾಗುವ ಕೆಲಸವಿದು. ರಾಜಕೀಯ ಪಕ್ಷಗಳು ಸ್ವಾಮೀಜಿಯ ಪರ ಮಾತನಾಡುತ್ತಿವೆ. ಸಾಮಾನ್ಯ ವ್ಯಕ್ತಿಯಾಗಿದ್ದರೆ ಎನ್‌ಕೌಂಟರ್ ವಿಷಯ ಪ್ರಸ್ತಾಪಿಸುತ್ತಿದ್ದರು. ಈಗ ಎಲ್ಲಿ ಹೋಗಿದ್ದಾರೆ ಆ ರಾಜಕಾರಣಿಗಳು?” ಎಂದು ಪ್ರಶ್ನಿಸಿದರು.

“ಮಾಜಿ ಶಾಸಕ ಬಸವರಾಜನ್‌ ಮತ್ತು ಮುರುಘಾ ಶರಣರ ನಡುವಿನ ವೈಯಕ್ತಿಕ ವೈಷಮ್ಯವನ್ನು ಪೋಕ್ಸೋ ಪ್ರಕರಣಕ್ಕೆ ಥಳುಕುಹಾಕುವುದು ಬೇಡ. ಅಮಾಯಕ ಹೆಣ್ಣು ಮಕ್ಕಳು ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ. ಬಸವರಾಜನ್‌ ಮೇಲೆಯೂ ತನಿಖೆಯಾಗಲಿ” ಎಂದು ಒತ್ತಾಯಿಸಿದರು.

ದಲಿತ ಸಮುದಾಯದ ಮುಖಂಡರಾದ ರಾಮು ಘೋಸೆ, ಡಾ.ವಿ.ಬಸವರಾಜು, ಶ್ರೀನಿವಾಸ್‌, ಸಿ.ಕೆ.ಗೋಪಾಲಕೃಷ್ಣ, ತಮ್ಮಣ್ಣ, ಶಿವಕುಮಾರ್‌, ಮಾಯಣ್ಣ ಮೊದಲಾದವರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...