Homeಕರ್ನಾಟಕಮುರುಘಾ ಶರಣರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿ: ದಲಿತರ ಆಗ್ರಹ

ಮುರುಘಾ ಶರಣರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿ: ದಲಿತರ ಆಗ್ರಹ

- Advertisement -
- Advertisement -

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪದಡಿಯಲ್ಲಿ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಡಾ. ಶಿವರಾತ್ರಿ ಮುರುಘಾ ಶರಣರ ವಿರುದ್ಧ ಕೇವಲ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆದರೆ ಇವರ ವಿರುದ್ಧ ಎಸ್‌.ಸಿ., ಎಸ್‌.ಟಿ. ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲೂ ಪ್ರಕರಣ ದಾಖಲಿಸಬೇಕು ಎಂದು ದಲಿತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.

ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಕೇಳಿ ಬಂದಿರುವ ಪೋಕ್ಸೋ ಪ್ರಕರಣ ಕ್ಷಣ ಕ್ಷಣಕ್ಕೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸ್ವಾಮೀಜಿ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಲಿ ಎಂದು ಚಿತ್ರದುರ್ಗದಲ್ಲಿ ಸ್ಥಳೀಯರು ಆಗ್ರಹಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಭಾನುವಾರ ಚಿತ್ರದುರ್ಗದಲ್ಲಿ ಮಾಧ್ಯಮದವರ ಜೊತೆ ಚಳ್ಳಕೆರೆಯ ಮಾಜಿ ಪುರಸಭಾ ಸದಸ್ಯ ಶಿವಮೂರ್ತಿ ಮಾತನಾಡಿ, “ಈ ಪ್ರಕರಣದಲ್ಲಿ ಸ್ವಾಮೀಜಿಯ ವಿರುದ್ಧ ಪರಿಶಿಷ್ಟ ಜಾತಿಗಳ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಕೇಸು ದಾಖಲಿಸಬೇಕು” ಎಂದು ಆಗ್ರಹಿಸಿದರು.

“ಸದರಿ ಪ್ರಕರಣದಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ಹೆಣ್ಣುಮಗಳು ಸಂತ್ರಸ್ತೆಯಾಗಿದ್ದಾರೆ. ಈ ಪೊಲೀಸರಿಂದ, ಜಿಲ್ಲಾಧಿಕಾರಿಗಳಿಂದ ಏನೂ ಆಗುವುದಿಲ್ಲ. ಲಿಂಗಾಯತರ ಸರ್ಕಾರ ರಾಜ್ಯದಲ್ಲಿದೆ. ನ್ಯಾಯಾಂಗ ತನಿಖೆಯಾಗಬೇಕು. ಲಿಂಗಾಯತ ಹುಡುಗಿಯರ ಮೇಲೆ ಯಾಕೆ ದೌರ್ಜನ್ಯ ನಡೆಯಲ್ಲ?” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿರಿ: ಮುರುಘಾ ಶರಣರು ಕಾನೂನಿಗಿಂತ ದೊಡ್ಡವರೇ?: ಬಂಧನಕ್ಕೆ ದಲಿತ ಮುಖಂಡರ ಆಗ್ರಹ

“ದಲಿತ ಹುಡಗಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಸ್ವಾಮೀಜಿ ವಿರುದ್ಧ ಅಟ್ರಾಸಿಟಿ ಪ್ರಕರಣವನ್ನು ಯಾಕೆ ದಾಖಲಿಸಿಲ್ಲ? ಒಂದು ಮಗುವಿಗೆ ಅನ್ಯಾಯವಾಗಿದೆ. ಯಾರೋ ವಿರುದ್ಧ ನಾನು ಮಾತನಾಡಿದ್ದಕ್ಕೆ 24 ಗಂಟೆಗಳಲ್ಲಿ ನನ್ನ ಬಂಧಿಸಿದ್ದರು. ಎರಡು ದಿನವಾದರೂ ಸ್ವಾಮೀಜಿಯ ಬಂಧನ ಏಕೆ ಆಗಿಲ್ಲ” ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ‘ಈ ದಿನ ಮಾಧ್ಯಮ’ ವರದಿ ಮಾಡಿದೆ.

ಚಿತ್ರದುರ್ಗದಲ್ಲಿ ಸಕ್ರಿಯವಾಗಿರುವ ದಲಿತ ಹಾಗೂ ಶೂದ್ರ ಸಮುದಾಯಗಳ ಸಾಮಾಜಿಕ ಸಂಘರ್ಷ ಸಮಿತಿಯು ಪ್ರಕರಣದ ಸುತ್ತ ಆಗುತ್ತಿರುವ ಬೆಳವಣಿಗೆಯನ್ನು ಖಂಡಿಸಿದೆ. ತಕ್ಷಣವೇ ಸ್ವಾಮೀಜಿ ಸಂವಿಧಾನಕ್ಕೆ ಗೌರವಕ್ಕೆ ಕೊಟ್ಟು ಬಂಧನಕ್ಕೊಳಗಾಗಿ ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ದಲಿತ ಚಿಂತಕ ಸಿ.ಕೆ.ಮಹೇಶ್, “ಪೋಕ್ಸೋ ಪ್ರಕರಣ ದಾಖಲಾಗಿದೆ. ಸ್ವಾಮೀಜಿಯಾಗಲೀ, ಮತ್ತೆ ಯಾವನೇ ಆಗಿರಲಿ, ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಒಂದೇ. ಇದು ಮಠಕ್ಕೂ ಅನ್ವಯಿಸುತ್ತದೆ. ಸಾಮಾನ್ಯ ಮನುಷ್ಯನಿಗೆ ಅನ್ವಯವಾಗುವ ಕಾನೂನು ಈ ದೇಶದ ಪ್ರಭಾವಿಗೂ ಅನ್ವಯವಾಗುತ್ತದೆ” ಎಂದರು.

“ಇಲ್ಲಿ ದೌರ್ಜನ್ಯಕ್ಕೊಳಗಾಗಿರುವ ಮಕ್ಕಳು ಶೋಷಿತ ಸಮುದಾಯಕ್ಕೆ ಸೇರಿದವರೋ, ಬೇರೆಯ ಸಮುದಾಯಕ್ಕೆ ಸೇರಿದವರೋ ಬೇಕಿಲ್ಲ. ಎಳೆಯ ಹೆಣ್ಣುಮಕ್ಕಳನ್ನು ಪೋಷಣೆ ಮಾಡುವುದಾಗಿ ಸೇರಿಸಿಕೊಂಡು ಲೈಂಗಿಕ ಕ್ರಿಯೆಗೆ ಬಳಸಿದ್ದರೆ ಅದು ಅಕ್ಷಮ್ಯ ಅಪರಾಧ. ಅಂತಹ ಅಪರಾಧ ಮಾಡಿರುವ ವ್ಯಕ್ತಿಗೆ ಶಿಕ್ಷೆಯಾಗಲೇಬೇಕು. ಪೋಕ್ಸೋ ಕಾನೂನಿನ ಪ್ರಕಾರ, ಎಫ್‌ಐಆರ್‌ ಆದ ತಕ್ಷಣವೇ ಅರೆಸ್ಟ್ ಮಾಡಿ ಮುಂದಿನ ಕ್ರಮಗಳನ್ನು ಜರುಗಿಸಬೇಕು” ಎಂದು ಆಗ್ರಹಿಸಿದ್ದಾರೆ.

“ಮುರುಘಾ ಶರಣರು ಇಡೀ ರಾಜ್ಯದಲ್ಲಿ ಗುರುತಿಸಿಕೊಂಡವರು. ಬುದ್ಧ, ಯೇಸು, ಪೈಗಂಬರ್‌ ಮೇಲೆಯೂ ಆರೋಪಗಳು ಬಂದಿದ್ದವು ಎಂದು ಸ್ವಾಮೀಜಿ ಹೇಳಿಕೊಳ್ಳುತ್ತಿದ್ದಾರೆ. ಆ ಮೂಲಕ ಮಹಾನೀಯರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುತ್ತಿದ್ದಾರೆ. ತಮ್ಮ ಮೇಲೆ ಆರೋಪಗಳು ಬಂದಾಗ ಬಸವಣ್ಣ ಹಾಗೂ ಬುದ್ಧ ಮುಕ್ತ ತನಿಖೆಗೆ ಒಳಪಟ್ಟಿದ್ದರು ಎಂಬುದನ್ನು ಮುರುಘಾ ಶರಣರು ಮರೆಯಬಾರದು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ಮಕ್ಕಳ ಮೇಲೆ ಮುರುಘಾ ಶರಣರಿಂದ ಅತ್ಯಾಚಾರ ಆರೋಪ: ಪ್ರಕರಣ ಬಯಲಿಗೆಳೆದ ಒಡನಾಡಿ ಸಂಸ್ಥೆ ಹೇಳಿದ್ದೇನು?

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಪ್ರಗತಿಪರ ಚಿಂತಕ ಶಿವಣ್ಣ, “ಅಂಬೇಡ್ಕರ್‌ ಕೊಟ್ಟ ಸಂವಿಧಾನ ಉಳಿಯಬೇಕು. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಸ್ವಾಮೀಜಿ ಬಂಧನಕ್ಕೆ ಒಳಗಾಗಬೇಕು. ಇದಕ್ಕಾಗಿ ದಲಿತ ಶೋಷಿತರ ಬಳಗದಿಂದ ಹೋರಾಟ ರೂಪಿಸುತ್ತಿದ್ದೇವೆ” ಎಂದು ಮಾಹಿತಿ ನೀಡಿದರು.

ಸಾಮಾಜಿಕ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಿ.ದುರ್ಗೇಶ್‌ ಮಾತನಾಡಿ, “ಈ ಸ್ವಾಮೀಜಿ ಮಾಡಿರುವ ಕೆಲಸ ಅಕ್ಷಮ್ಯ ಅಪರಾಧ. ಸಾಮಾನ್ಯ ಪ್ರಜೆಯಾಗಿದ್ದರೆ ತಕ್ಷಣವೇ ಬಂಧನಕ್ಕೊಳಗಾಗುತ್ತಿದ್ದ. ಆದರೆ ಮಠಾಧಿಪತಿಗೆ ಸರ್ಕಾರ ರಕ್ಷಣೆ ನೀಡುತ್ತಿದೆ ಅನಿಸುತ್ತಿದೆ. ಮುರುಘಾ ಶರಣರನ್ನು ಮೊದಲು ಬಂಧಿಸಬೇಕಾಗಿದೆ” ಎಂದು ಆಗ್ರಹಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...