ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಕೆಲವು ದಿನಗಳಿಂದ ಮುಂಬೈಗೆ ಶಿಫ್ಟ್ ಆದ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರನ್ನು ಮನವೊಲಿಸಲು ಟ್ರಬಲ್ ಶೂಟರ್ ಎಂದು ಕರೆಯಲ್ಪಡುವ ಡಿ.ಕೆ ಶಿವಕುಮಾರ್ ಸಹ ಮುಂಬೈ ತೆರಳಿದ್ದು, ಅಲ್ಲಿ ಅವರನ್ನು ಹೋಟೆಲ್ ಒಳಗೆ ಬಿಡದೇ ತಡೆದುದ್ದು, ಡಿ.ಕೆ.ಶಿ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಡಿ.ಕೆ.ಶಿಯನ್ನು ವಶಕ್ಕೆ ಪಡೆದಿದ್ದಾರೆ. ಇವೆಲ್ಲಾ ನಿಮಗೆ ಗೊತ್ತಿರುವ ವಿಷಯಗಳು.
ಡಿ.ಕೆ ಶಿವಕುಮಾರ್ ಹೋಟೆಲ್ ಮುಂಭಾಗದಿಂದ ಕದಲುವುದಿಲ್ಲ ಎಂದು ಹಠ ಹಿಡಿದು ನಿಂತಿರುವಾಗ, ಅವರನ್ನು ಪೊಲೀಸರು ವಶಕ್ಕೆ ಪಡೆದಾಗ ಯೂಸ್‍ಲೆಸ್ ಮುಂಬೈ ಕಾಂಗ್ರೆಸ್ ಘಟಕ ಏಕೆ ಅವರನ್ನು ಬೆಂಬಲಿಸುತ್ತಿಲ್ಲ? ರಾಷ್ಟ್ರೀಯ ಕಾಂಗ್ರೆಸ್ ನಿಮಗೆ ಕರ್ನಾಟಕ ಸರ್ಕಾರ ಉಳಿಯುವುದು ಬೇಡವೇ? ಎಂದು ಸ್ವಾತಿ ಚರ್ತುವೇದಿ ಸರಣಿ ಟ್ವೀಟ್ ಮಾಡಿದ್ದಾರೆ.
So D K Shivakumar is standing outside the hotel trying to get back the rebel #Karnataka MLA’s while the useless Mumbai unit of @INCIndia cannot give him any support or even stand with him. What a pathetic bunch @RahulGandhi sack them all
— Swati Chaturvedi (@bainjal) July 10, 2019
ಪತ್ರಕರ್ತೆಯಾಗಿರುವ ಸ್ವಾತಿ ಚತುರ್ವೇದಿಯವರನ್ನು ಈ ಹಿಂದೆ ಬಿಜೆಪಿಯ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ಟ್ರೋಲ್ ಮಾಡಿದ್ದರು. ವ್ಯಕ್ತಿಗತ ನಿಂದನೆ ಮಾಡಿದ್ದರು. ಆಗ ಅವರು “ಐ ಆಮ್ ಎ ಟ್ರೋಲ್” ಎಂಬ ಪುಸ್ತಕ ಬರೆದಿದ್ದು ಅದು ಸಾಕಷ್ಟು ಪ್ರಸಿದ್ದಿಯಾಗಿತ್ತು.
ಇನ್ನು ಮೂರು ತಿಂಗಳಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಿದೆ. ಆದರೂ ಮಹಾರಾಷ್ಟ್ರ ಕಾಂಗ್ರೆಸ್ ಇಲ್ಲಿ ಡಿ.ಕೆ ಶಿವಕುಮಾರ್ ನೆರವಿಗೆ ಬಂದಿಲ್ಲ. ಮಹರಾಷ್ಟ್ರದಲ್ಲಿ ಕಾಂಗ್ರೆಸ್ ಇದಿಯೋ ಇಲ್ಲವೋ? ಪ್ರಿಯ ರಾಹುಲ್ ಗಾಂಧಿಯವರೆ ದಯವಿಟ್ಟು ಗಮನಕೊಡಿ ಎಂದಿದ್ದಾರೆ.
ಮುಂಬೈ ಕಾಂಗ್ರೆಸ್ ಅಧ್ಯಕ್ಷ ಮಿಲಿಂದ್ ದೇವ್ರಾ ಡಿ.ಕೆ ಶಿವಕುಮಾರ್‍ರನ್ನು ಆನಂತರ ಭೇಟಿಯಾಗಿದ್ದಾರೆ. ಈ ಮೊದಲು ಪೋನ್ ಮಾಡಿ ಮಾತಾಡಿದ್ದೇನೆ ಎಂದು ಟ್ವೀಟ್ ಮಾಡಿದ್ದಕ್ಕೆ ತರಾಟೆಗೆ ತೆಗೆದುಕೊಂಡಿರುವ ಸ್ವಾತಿಯವರು ನೀವೇನಾ ಕಾಂಗ್ರೆಸ್ ನ ಭಾವಿ ಅಧ್ಯಕ್ಷ ಎಂದು ವ್ಯಂಗ್ಯವಾಡಿದ್ದಾರೆ.
Dear @RahulGandhi you should have been next to @DKShivakumar after a huge outcry your useless leaders fighting each other made a guest appearance post noon. https://t.co/woEMWP7sqk
— Swati Chaturvedi (@bainjal) July 10, 2019
ನಂತರ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರದಲ್ಲಿ ಕಾಂಗ್ರೆಸ್ ಮೇಲೆ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ನಿಮ್ಮ ಕೆಲವು ನಾಯಕರು ಡಿ.ಕೆ ಶಿವಕುಮಾರ್ ಭೇಟಿ ಮಾಡಿದ್ದಾರೆ. ಉಳಿದವರೆಲ್ಲಿ ಎಂದು ಟ್ವೀಟ್ ಮಾಡಿದ ಸ್ವಾತಿಯವರು ರಾಹುಲ್ ಗಾಂಧಿಯವರೆ ನೀವೇ ಖುದ್ದಾಗಿ ಡಿ.ಕೆ ಶಿವಕುಮಾರ್ ರವರ ಜೊತೆಗಿರಬೇಕು. ನಿಮ್ಮ ಪಕ್ಷದ ಮುಖಂಡರು ಪರಸ್ಪರ ಜಗಳವಾಡುತ್ತಿದ್ದಾರೆ ಎಂದಿದ್ದಾರೆ.


