“ಬಿಜೆಪಿ ಮುಖಂಡ ಮಾಡಿದ ದೌರ್ಜನ್ಯದಿಂದಾಗಿ ಮಗು ಕಳೆದುಕೊಂಡ ತಾಯಿಗೆ ಮತ್ತೆ ಮಗುವನ್ನು ಮರಳಿಸಲು ಸಾಧ್ಯವೇ?” ಎಂದು ಕಾಂಗ್ರೆಸ್‌ನ ಕರ್ನಾಟಕ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.
ಮಹಿಳೆಯರೂ ಸೇರಿದಂತೆ ಸುಮಾರು 14 ಮಂದಿ ದಲಿತ ಕಾರ್ಮಿಕರನ್ನು ಕೂಡಿ ಹಾಕಿ, ಸವರ್ಣೀಯ ಜಾತಿಯ ಎಸ್ಟೇಟ್ ಮಾಲೀಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ತಾಲೂಕಿನಲ್ಲಿ ನಡೆದಿದೆ. ದೌರ್ಜನ್ಯ ಎಸಗಿರುವ ಎಸ್ಟೇಟ್ ಮಾಲೀಕ ಜಗದೀಶ್ ಗೌಡ ಭಾರತೀಯ ಜನತಾ ಪಕ್ಷದ ಸ್ಥಳೀಯ ಮುಖಂಡ ಎಂದು ಹೇಳಲಾಗಿದ್ದು, ಬಂಧನದ ಭೀತಿಯಲ್ಲಿ ತಲೆಮರಿಸಿಕೊಂಡಿದ್ದಾನೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಚಿಕ್ಕಮಗಳೂರು ತಾಲ್ಲೂಕು ಠಾಣೆಯಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಹುಣಸೆಹಳ್ಳಿಪುರದಲ್ಲಿ ಘಟನೆ ನಡೆದಿದ್ದು, ಎಸ್ಟೇಟ್ ಮಾಲೀಕನಾದ ಜಗದೀಶಗೌಡ ಹಾಗೂ ಆತನ ಮಗ ತಿಲಕ್ ಎಂಬವರು ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಆಲ್ದೂರಿನ ಗಾಳಿಗಂಡಿಯಿಂದ ಬಂದು ಇಲ್ಲಿನ ಲೈನ್‌ಮನೆಯಲ್ಲಿ ವಾಸವಿದ್ದು ಕೆಲಸ ಮಾಡುತ್ತಿದ್ದ ದಲಿತ ಕಾರ್ಮಿಕ ಮಹಿಳೆ ಅರ್ಪಿತಾ ಪೊಲೀಸರಿಗೆ ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಾಗಿದೆ.
ಅರ್ಪಿತಾ ಗರ್ಭಿಣಿಯಾಗಿದ್ದು, ಜಗದೀಶ್ ಗೌಡ ಹಲ್ಲೆ ನಡೆಸಿದ್ದರಿಂದ ಗರ್ಭಪಾತವಾಗಿದೆ. ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ದಲಿತರ ಮನೆಗಳಿಗೆ ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭೇಟಿ ನೀಡಿ ಊಟ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಟ್ವೀಟ್ ಮಾಡಿದ್ದಾರ.ಎ
“ಬೊಮ್ಮಾಯಿಯವರೇ, ಬಹುಸಂಖ್ಯಾತ ದಲಿತರು ಮತ್ತು ಬಡವರ ಬೇಡಿಕೆಗೆ ಉತ್ತರಿಸಿ. ಬಿಜೆಪಿ ನಾಯಕರಿಂದ ದಲಿತರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಮೌನವಾಗಿರುವುದೇಕೆ? ಮೌನ ಎಂದರೆ ಸಮ್ಮತಿಯಲ್ಲವೇ?” ಎಂದು ಸುರ್ಜೇವಾಲ ಪ್ರಶ್ನಿಸಿದ್ದಾರೆ.
Mr. Bommai, large majority of Dalits and poor demand answers-:
4. Why have Dalit atrocities gone up by 54% over last year? Is it by a design to target SC/ST’s?
5. Is diversion of SCP/TSP Funds of ₹6,500 CR by ur Govt a design to weaken their empowerment?
Wake up, Act or Quit. https://t.co/sgmrJlKwrW
— Randeep Singh Surjewala (@rssurjewala) October 12, 2022
“ದೌರ್ಜನ್ಯ ನಡೆದ ಗ್ರಾಮಕ್ಕೆ ನೀವೇಕೆ ಭೇಟಿ ನೀಡಿಲ್ಲ? ಕಳೆದುಹೋದ ಮಗುವನ್ನು ನೀವು ಮರಳಿ ತರಬಹುದೇ?” ಎಂದು ಕೇಳಿದ್ದಾರೆ.
“ದಲಿತ ದೌರ್ಜನ್ಯಗಳು ಕಳೆದ ವರ್ಷಕ್ಕಿಂತ 54% ರಷ್ಟು ಏಕೆ ಹೆಚ್ಚಿವೆ? ಇದು ಎಸ್‌ಸಿ/ಎಸ್‌ಟಿಗಳನ್ನು ಟಾರ್ಗೆಟ್ ಮಾಡಲು ರೂಪಿಸಿರುವ ವಿನ್ಯಾಸವಲ್ಲವೇ? ನಿಮ್ಮ ಸರ್ಕಾರವು ₹ 6,500 ಕೋಟಿ ಎಸ್‌ಸಿಪಿ/ಟಿಎಸ್‌ಪಿ ಅನುದಾನವನ್ನು ಕಸಿದಿರುವುದು ಏತಕ್ಕೆ? ಸಬಲೀಕರಣವನ್ನು ದುರ್ಬಲಗೊಳಿಸುವ ವಿನ್ಯಾಸವಿದಲ್ಲವೇ?” ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿರಿ: ಚಿಕ್ಕಮಗಳೂರು: ಗರ್ಭಿಣಿ ಸೇರಿದಂತೆ 14 ದಲಿತ ಕಾರ್ಮಿಕರ ಮೇಲೆ ದೌರ್ಜನ್ಯ; ಎಸ್ಟೇಟ್ ಮಾಲೀಕನ ವಿರುದ್ಧ ಎಫ್‌ಐಆರ್
ಚಿಕ್ಕಮಗಳೂರು ಘಟನೆಯ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಯುವ ನಾಯಕ ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ. “ಗಂಗಾ ಕಲ್ಯಾಣದಲ್ಲಿ ₹430 ಕೋಟಿ ಅಕ್ರಮ, SCP/TSP ಹಣ ಬೇರೆಡೆ ವರ್ಗ, ಭೋವಿ ನಿಗಮದಲ್ಲಿ ₹150 ಕೋಟಿ ಅಕ್ರಮ, ನಾಗಮೋಹನ್ ದಾಸ್ ವರದಿ ಜಾರಿ ಮಾಡಿ SC/ST ಮೀಸಲಾತಿ ಹೆಚ್ಚಿಸಿದ್ದೇವೆಂದು ಸುಳ್ಳು ಪ್ರಚಾರ, BJP ನಾಯಕರಿಂದ ದಲಿತರ ಮೇಲೆ ಅಮಾನವೀಯ ದೌರ್ಜನ್ಯ, ದಲಿತರ ದಮನವೇ RSSನ ನೈಜ ಮನಸ್ಥಿತಿ” ಎಂದು ತಿಳಿಸಿದ್ದಾರೆ.
BJP ಸರ್ಕಾರದಿಂದ
◆ ಗಂಗಾ ಕಲ್ಯಾಣದಲ್ಲಿ ₹430 ಕೋಟಿ ಅಕ್ರಮ
◆ SCP/TSP ಹಣ ಬೇರೆಡೆ ವರ್ಗ
◆ ಭೋವಿ ನಿಗಮದಲ್ಲಿ ₹150 ಕೋಟಿ ಅಕ್ರಮ
◆ ನಾಗಮೋಹನ್ ದಾಸ್ ವರದಿ ಜಾರಿ ಮಾಡಿ SC/ST ಮೀಸಲಾತಿ ಹೆಚ್ಚಿಸಿದ್ದೇವೆಂದು ಸುಳ್ಳು ಪ್ರಚಾರBJP ನಾಯಕರಿಂದ
◆ ದಲಿತರ ಮೇಲೆ ಅಮಾನವೀಯ ದೌರ್ಜನ್ಯದಲಿತರ ದಮನವೇ RSSನ ನೈಜ ಮನಸ್ಥಿತಿ. pic.twitter.com/FWgIn9WM8K
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 12, 2022
ಗರ್ಭಿಣಿಯ ಮೇಲೆ ಹಲ್ಲೆ ನಡೆಸಿದವರು ಪರಾರಿಯಾಗಿದ್ದಾರೆ. ಇದರ ಜೊತೆಗೆ ಆರೋಪಿಗಳು ದಲಿತ ಕಾರ್ಮಿಕ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಸಂಗತಿ ಬಯಲಾಗಿದೆ. ಲೈಂಗಿಕ ಕಿರುಕುಳ ಅನುಭವಿಸಿದ ಮಹಿಳೆಯೂ ಬಾಳೇಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾಳೆ ಬಾಳೇಹೊನ್ನೂರು ಚಲೋ
ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟವು ಅಕ್ಟೋಬರ್ 14ರಂದು ‘ಬಾಳೇಹೊನ್ನೂರು ಚಲೋ’ ಹಮ್ಮಿಕೊಂಡಿದೆ.
“ದಲಿತ ಮಹಿಳೆಯರನ್ನು ಗೃಹಬಂಧನದಲ್ಲಿಟ್ಟು ದೌರ್ಜನ್ಯ ನಡೆಸಿದ ಭೂ ಮಾಲೀಕನನ್ನು ಕೂಡಲೇ ಬಂಧಿಸಬೇಕು” ಎಂದು ಸಂಘಟಕರು ಆಗ್ರಹಿಸಿದ್ದು, ಗುರುವಾರ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.


