ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ ಬಿಜೆಪಿ ನಾಯಕ ಗುರ್ತಾಜ್ ಸಿಂಗ್ ಭುಲ್ಲರ್ ಅವರ ಪತ್ನಿಯನ್ನು ಉತ್ತರ ಪ್ರದೇಶದ ಪೊಲೀಸ್ ತಂಡವು ಅವರ ನಿವಾಸದಲ್ಲಿ ಗುಂಡಿಕ್ಕಿ ಕೊಂದು ಹಾಕಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಗುರ್ತಾಜ್ ಸಿಂಗ್ ಶನಿವಾರ ಆಗ್ರಹಿದ್ದಾರೆ.
ತನ್ನ ಪತ್ನಿಯನ್ನು ಕೊಂದ ಪೊಲೀಸ್ ಅಧಿಕಾರಿಗಳು ಪಾನಮತ್ತರಾಗಿದ್ದು, ಸಮವಸ್ತ್ರ ಧರಿಸಿರಲಿಲ್ಲ ಹಾಗೂ ಯಾವುದೇ ಸರ್ಚ್ ವಾರೆಂಟ್ ಹೊಂದಿರಲಿಲ್ಲ ಎಂದು ಗುರ್ತಾಜ್ ಸಿಂಗ್ ಆರೋಪಿಸಿದ್ದಾರೆ. ಪೊಲೀಸರ ವಾಹನದಲ್ಲಿ ನೋಂದಣಿ ಫಲಕಗಳಿಲ್ಲ ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪೊಲೀಸರನ್ನು ನಮ್ಮ ನಿವಾಸದಲ್ಲಿ ಒತ್ತೆಯಾಳಾಗಿ ಇರಿಸಲಾಗಿದೆ ಎಂದು ಪೊಲೀಸ್ ತಂಡವು ಅಪಪ್ರಚಾರ ಮಾಡುತ್ತಿದೆ ಎಂದು ಭುಲ್ಲಾರ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಮೀಸಲಾತಿ ಹೆಚ್ಚಳ ಮತ್ತು ಬಿಜೆಪಿಯ ಎರಡು ನಾಲಗೆ
‘‘ಪೊಲೀಸ್ ತಂಡ ಮತ್ತು ಅಕ್ರಮ ಮರಳು ಗಣಿಗಾರಿಕೆಯಲ್ಲಿ ಬೇಕಾಗಿದ್ದ ವ್ಯಕ್ತಿ ಜಾಫರ್ ನಡುವಿನ ಗುಂಡಿನ ಚಕಮಕಿಯಲ್ಲಿ ಬಿಜೆಪಿ ಮುಖಂಡ ಗುರ್ತಾಜ್ ಸಿಂಗ್ ಅವರ ಪತ್ನಿ ಸಾವನ್ನಪ್ಪಿದ್ದಾರೆ” ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ.
ತನ್ನ ಪತ್ನಿಯ ಹತ್ಯೆಯನ್ನು ಸಮರ್ಥಿಸಲು ಯುಪಿ ಪೊಲೀಸರು ಕತೆ ಕಟ್ಟಲು ಪ್ರಯತ್ನಿಸುತ್ತಿದ್ದಾರೆ ಎಂದು ಗುರ್ತಾಜ್ ಸಿಂಗ್ ಆರೋಪಿಸಿದ್ದಾರೆ.
U'khand | I want justice. I appeal to govt for a CBI probe.BJP govt is there in both states. If I'm at fault then I should be punished but a fair probe should be done: G Singh, whose wife was shot dead during a raid two days ago by a UP Police team in Bharatpur, Udham Singh Nagar pic.twitter.com/rlCmCAOb7O
— ANI UP/Uttarakhand (@ANINewsUP) October 15, 2022
ಇದನ್ನೂ ಓದಿ: ಮುಜಾಫರ್‌ನಗರ ಗಲಭೆ: ಬಿಜೆಪಿ ಶಾಸಕ ಸೇರಿದಂತೆ 12 ಮಂದಿಗೆ ಜೈಲು ಶಿಕ್ಷೆ
ಯುಪಿ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿಲ್ಲ ಮತ್ತು ಸಮವಸ್ತ್ರದಲ್ಲಿ ಇರಲಿಲ್ಲ ಎಂದು ಕುಮಾನ್‌ನ ಡಿಐಜಿ ನೀಲೇಶ್ ಆನಂದ್ ಭರ್ನೆ ಈ ಹಿಂದೆ ಹೇಳಿಕೆ ನೀಡಿದ್ದರು. ಇದಲ್ಲದೆ ಯುಪಿ ಪೊಲೀಸರು ಹೇಳಿಕೊಂಡಂತೆ ಕ್ರಾಸ್ ಫೈರಿಂಗ್‌ನ ಯಾವುದೇ ಸೂಚನೆಯಿಲ್ಲ ಎಂದು ಸ್ಥಳವನ್ನು ತನಿಖೆ ಮಾಡಿದ ವಿಧಿವಿಜ್ಞಾನ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.
ತನ್ನ ಪತ್ನಿಯ ನ್ಯಾಯಕ್ಕಾಗಿ ಮನವಿ ಮಾಡಿರುವ ಗುರ್ತಾಜ್ ಸಿಂಗ್, “ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. ನನ್ನ ತಪ್ಪಾಗಿದ್ದರೆ ನನ್ನನ್ನು ಶಿಕ್ಷಿಸಬೇಕು ಆದರೆ ನ್ಯಾಯಯುತ ತನಿಖೆ ನಡೆಯಬೇಕು” ಎಂದು ಹೇಳಿದ್ದಾರೆ.
ತನ್ನ ದುಃಖವನ್ನು ವ್ಯಕ್ತಪಡಿಸಿದ ಅವರು, “ನಾನು ಕೂಡಾ ಸರ್ಕಾರದ ಸಾರ್ವಜನಿಕ ಪ್ರತಿನಿಧಿ, ಆದರೂ ನನಗೆ ಇದೆಲ್ಲವೂ ಆಯಿತು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಬಿಜೆಪಿ ಮುಖಂಡನ ದೌರ್ಜನ್ಯದಿಂದ ಮಗು ಕಳೆದುಕೊಂಡ ತಾಯಿಗೆ ಮಗು ಮರಳಿಸುವಿರೇ?- ಕಾಂಗ್ರೆಸ್
ಏನಿದು ಪ್ರಕರಣ
ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಕಾಶಿಪುರ ಸಮೀಪದ ಭರತ್‌ಪುರ ಗ್ರಾಮದಲ್ಲಿ ಬುಧವಾರ ರಾತ್ರಿ ಘರ್ಷಣೆ ನಡೆದಿದೆ. ಗಣಿಗಾರಿಕೆ ಮಾಫಿಯಾದ ಸದಸ್ಯನೆಂದು ಹೇಳಲಾದ ಜಾಫರ್‌ನನ್ನು ಹುಡುಕಲು ಪೊಲೀಸರು ಪಕ್ಕದ ಮೊರಾದಾಬಾದ್ ಜಿಲ್ಲೆಯಿಂದ ಬಂದಿದ್ದರು.
ಸುಳಿವಿನ ಮೇರೆಗೆ ಮೊರಾದಾಬಾದ್‌ನ ಠಾಕುರ್ದ್ವಾರ ಪೊಲೀಸ್ ಠಾಣೆಯ ತಂಡವು ಜಾಫರ್‌ನನ್ನು ಹುಡುಕಾಡುತ್ತಾ ಬಿಜೆಪಿ ನಾಯಕ, ಜಸ್ಪುರ್ ಹಿರಿಯ ಬ್ಲಾಕ್ ಪ್ರಮುಖ್ ಗುರ್ತಾಜ್ ಸಿಂಗ್ ಭುಲ್ಲರ್ ಅವರ ಮನೆ ಮೇಲೆ ದಾಳಿ ಮಾಡಲು ಭತರ್‌ಪುರ ತಲುಪಿತ್ತು.
ಪೊಲೀಸರು ಗುರ್ತಾಜ್ ಸಿಂಗ್ ಭುಲ್ಲರ್ ಮನೆಗೆ ಬಂದಾಗ ಅಲ್ಲಿ ವಾಗ್ವಾದ ನಡೆದಿದೆ. ಎರಡೂ ಕಡೆಯವರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಗುರ್ತಾಜ್ ಸಿಂಗ್ ಅವರ ಪತ್ನಿ ಗುರುಪ್ರೀತ್ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಸೌರವ್ ಗಂಗೂಲಿ ಬಿಜೆಪಿ ಸೇರದ ಕಾರಣಕ್ಕೆ ಬಿಸಿಸಿಐನಿಂದ ಹೊರಕ್ಕೆ: TMC ಆರೋಪ
ದಾಳಿಯ ಬಗ್ಗೆ ಯುಪಿ ಪೊಲೀಸ್ ತಂಡವು ತಮ್ಮ ಉತ್ತರಾಖಂಡ ಪೊಲೀಸರಿಗೆ ಮುಂಚಿತವಾಗಿ ತಿಳಿಸಲಿಲ್ಲ ಎಂದು ಉಧಮ್ ಸಿಂಗ್ ನಗರ ಎಸ್ಎಸ್ಪಿ ಮಂಜುನಾಥ್ ಟಿಸಿ ಹೇಳಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕಾಶಿಪುರ ಶಾಸಕ ತ್ರಿಲೋಕ್ ಸಿಂಗ್ ಚೀಮಾ, ಗದರ್‌ಪುರ ಶಾಸಕ ಅರವಿಂದ್ ಪಾಂಡೆ ಮತ್ತು ಮಾಜಿ ಸಂಸದ ಬಲರಾಜ್ ಪಾಸಿ ಪ್ರತಿಭಟನಾಕಾರರೊಂದಿಗೆ ಸೇರಿಕೊಂಡಿದ್ದಾರೆ.



ತಲೆಗೆ ಹೊಯ್ದು ನೀರು ಕಾಲಿಗೆ ಇಳಿಬೇಕಲ್ಲ …….ಅಷ್ಟೇ ಇಲ್ ಆಗಿದೆ