ತೆಲಂಗಾಣದಲ್ಲಿ ಆಪರೇಷನ್ ಕಮಲ ನಡೆಸಲು ಬಿಜೆಪಿ ದಳ್ಳಾಳಿಗಳನ್ನು ಕಳುಹಿಸಿದೆ ಎಂದು ಆರೋಪಿಸಿ ಇತ್ತೀಚೆಗೆ ಮೂವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ ಬಿಜೆಪಿ ಈ ಆರೋಪವನ್ನು ನಿರಾಕರಿಸಿತ್ತು. ಆದರೆ ಆಡಳಿತರೂಢ ಟಿಆರ್‌ಎಸ್ ಆಪಾದಿತ ಬಿಜೆಪಿಯ ದಳ್ಳಾಳಿಗಳು ತಮ್ಮ ಪಕ್ಷದ ಶಾಸಕರೊಂದಿಗೆ ನಡೆಸಿದ ವಿಡಿಯೊವನ್ನು ಇದೀಗ ಬಿಡುಗಡೆ ಮಾಡಿದೆ.
ಟಿಆರ್‌ಎಸ್ ಪಕ್ಷ ಬಿಡುಗಡೆ ಮಾಡಿರುವ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಟ್ವಿಟರ್‌ನಲ್ಲಿ #LotusLeaks (ಲೋಟಸ್ ಲೀಕ್) ಟ್ರೆಂಡ್ ಆಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ವಿಡಿಯೊದಲ್ಲಿ, ‘‘ರಾಷ್ಟ್ರಮಟ್ಟದ ತಂಡ ಆಪರೇಷಣ್ ಕಮಲ ಮಾಡುತ್ತದೆ ಮತ್ತು ಈ ತಂಡದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಇದ್ದಾರೆ” ಎಂದು ಆಪಾದಿತ ದಳ್ಳಾಳಿಗಳು ಹೇಳಿರುವುದು ದಾಖಲಾಗಿದೆ.
ಇದನ್ನೂ ಓದಿ: ತೆಲಂಗಾಣ ಶಾಸಕರ ಖರೀದಿಗೆ ಬಿಜೆಪಿ ಯತ್ನ ಆರೋಪ: ವಿಡಿಯೊ ಪ್ರದರ್ಶಿಸಿದ ಮುಖ್ಯಮಂತ್ರಿ ಕೆಸಿಆರ್
ವೈರಲ್ ಆಗಿರುವ ಒಂದು ವಿಡಿಯೊದಲ್ಲಿ ಟಿಆರ್‌ಎಸ್ ಶಾಸಕ ಕೇರಳದ ಬಿಜೆಡಿಎಸ್ ನಾಯಕ ತುಷಾರ್ ವೆಳ್ಳಪ್ಪಳ್ಳಿ ಅವರೊಂದಿಗೆ ಮಾತನಾಡಿದ್ದಾರೆ. ತುಷಾರ್ ವೆಳ್ಳಪಳ್ಳಿ ಅವರು ಕೇರಳದಲ್ಲಿ ಬಿಜೆಪಿಯ ಮೈತ್ರಿ ಪಕ್ಷವಾಗಿದ್ದು, ಕಳೆದ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಸ್ಪರ್ಧಿಸಿದ್ದರು. ಜೊತೆಗೆ ಅವರು ಅಮಿತ್ ಶಾ ಅವರ ಆಪ್ತ ಎಂದು ವರದಿಯಾಗಿದೆ.
ಟಿಆರ್‌ಎಸ್ ಶಾಸಕ ತುಷಾರ್ ವೆಳ್ಳಪ್ಪಳ್ಳಿ ಅವರೊಂದಿಗೆ ಫೋನ್ ಮೂಲಕ ಮಾತನಾಡಿದ್ದು ವಿಡಿಯೊದಲ್ಲಿ ದಾಖಲಾಗಿದ್ದು, ಅವರು ಆಪರೇಷನ್ ಕಮಲ ಬಗ್ಗೆ ಮಾತನಾಡಲು ಬಿ.ಎಲ್. ಸಂತೋಷ್ ಅವರ ಭೇಟಿಯ ಬಗ್ಗೆ ಬಗ್ಗೆ ಹೇಳುತ್ತಾರೆ. ಜೊತೆಗೆ ಜೆ.ಪಿ. ನಡ್ಡಾ ಅವರ ಹೆಸರನ್ನು ಕೂಡಾ ತುಷಾರ್ ಅವರು ಹೇಳುತ್ತಾರೆ.
Thushar Vellappally, NDA’s candidate who contested against @RahulGandhi & a close aid of @AmitShah is talking on phone & assuring the completion of operation 👇 #LotusLeaks pic.twitter.com/zBaRYTgWGr
— YSR (@ysathishreddy) November 4, 2022
ಇದನ್ನೂ ಓದಿ: ‘ಬಿಜೆಪಿಯಿಂದ ಆಪರೇಷನ್ ಕಮಲಕ್ಕೆ ಯತ್ನ, 30 ಶಾಸಕರಿಗೆ ತಲಾ 100 ಕೋಟಿ ರೂ. ಆಫರ್’: ತೆಲಂಗಾಣ ಸಿಎಂ ಕೆಸಿಆರ್
ಮತ್ತೊಂದು ವಿಡಿಯೊದಲ್ಲಿ ಬಿಜೆಪಿಯ ದಳ್ಳಾಳಿಯೊಬ್ಬ ಮಾತನಾಡುತ್ತಾ, ‘‘ನೀವು ಸೇರಿದ ಕೂಡಲೆ ನಿಮಗೆ ಪಕ್ಷದ ವತಿಯಿಂದ ಬಿ ಫಾರ್ಮ್ ನೀಡುವುದು ಖಚಿತವಾಗಿದೆ. ಬಿಜೆಪಿ ಪಕ್ಷದಲ್ಲಿ ಇವು ಎಲ್ಲವನ್ನು ನಿಭಾಯಿಸುವುದು ನಮ್ಮ ರಾಷ್ಟ್ರೀಯ ತಂಡವಾಗಿದ್ದು, ರಾಜ್ಯದ ತಂಡ ಇದರಲ್ಲಿ ತಲೆಹಾಕುವುದಿಲ್ಲ. ಈ ತಂಡದಲ್ಲಿ ಒಂದನೆಯದಾಗಿ ಬಿ.ಎಲ್. ಸಂತೋಷ್, ಎರಡನೆಯದ್ದಾಗಿ ಅಮಿತ್ ಶಾ ಹಾಗೂ ಮೂರನೆಯದ್ದಾಗಿ ಜೆಪಿ ನಡ್ಡಾ” ಎಂದು ಹೇಳುತ್ತಾರೆ.
CM KCR exposes #LotusLeaks 👇
“Three people handle all of this, they are @blsanthosh, @JPNadda & @AmitShah” : BJP brokers in Operation TRS MLAs pic.twitter.com/Mls3ly5zKe
— YSR (@ysathishreddy) November 3, 2022
ಮತ್ತೊಂದು ವಿಡಿಯೊದಲ್ಲಿ ಪ್ರತಿ ಶಾಕರಿಗೆ 50 ಕೋಟಿ ನೀಡುವುದಾಗಿ ಆಪಾದಿತ ಬಿಜೆಪಿ ದಳ್ಳಾಳಿಗಳು ಹೇಳುವುದು ದಾಖಲಾಗಿದ್ದು, ಬಿಎಲ್ ಸಂತೋಷ್ ಮತ್ತು ಅಮಿತ್ ಶಾ ಅವರೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.
‘We are ready to spend ₹50 Crores on each MLA. @blsanthosh will confirm & arrange a meeting with @AmitShah’ 👇 #LotusLeaks pic.twitter.com/2hoKBP1Fr7
— YSR (@ysathishreddy) November 4, 2022
ಇದನ್ನೂ ಓದಿ: ತೆಲಂಗಾಣ: ಬಿಜೆಪಿಯಿಂದ ಆಪರೇಷನ್ ಕಮಲಕ್ಕೆ ಯತ್ನ; ಕೇಂದ್ರ ಸಚಿವರ ಆಪ್ತ ಸೇರಿದಂತೆ ಮೂವರ ಬಂಧನ
ಆಪರೇಷನ್ ಕಮಲದಲ್ಲಿ ಪ್ರಧಾನ ಮಂತ್ರಿ ಇಲ್ಲವೆ ಎಂಬ ಬಗ್ಗೆ ಕೇಳಿದಾಗ, ಅವರು ಇದರಲ್ಲಿ ಡೈರೆಕ್ಟ್ ಆಗಿ ಇರುವುದಿಲ್ಲ. ಎಲ್ಲವನ್ನೂ ಅವರು ಗಮನಿಸುತ್ತಾ ಇರುತ್ತಾರೆ ಮತ್ತು ಅವರಿಗೆ ಕಾಲಕಾಲಕ್ಕೆ ಮಾಹಿತಿಗಳನ್ನು ನೀಡುತ್ತಲೆ ಇರುತ್ತಾರೆ ಎಂದು ಆಪಾದಿತ ಬಿಜೆಪಿಯ ದಳ್ಳಾಳಿಯೊಬ್ಬ ಹೇಳುತ್ತಾರೆ.
At the meeting, the agents mention BJP leaders including Amit Shah, JP Nadda, BL Santhosh. There is an audio in which they says number 1 and number 2 will speak to Santhosh and that they want people to jump ship before Nov 3 pic.twitter.com/HLBEJm9CX4
— Dhanya Rajendran (@dhanyarajendran) November 4, 2022
ಇಷ್ಟೆ ಅಲ್ಲದೆ, ದಳ್ಳಾಳಿಗಳ ತಂಡದಲ್ಲಿದ್ದ ಸ್ವಾಮಿಜಿಯೊಬ್ಬ ಕರ್ನಾಟಕ ಮತ್ತು ಮಹಾರಾಷ್ಟ್ರದ ಸರ್ಕಾರಗಳನ್ನು ಉರುಳಿಸಿರುವ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾನೆ.
The men also boast about bringing down other governments, including the Karnataka and Maharashtra governments. (🙄) pic.twitter.com/SI3fLr5VHh
— Dhanya Rajendran (@dhanyarajendran) November 4, 2022
ಇದನ್ನೂ ಓದಿ: ತೆಲಂಗಾಣ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಮಾಧಿ ಮಾಡಿ ಪ್ರತಿಭಟನೆ!
ಬಿಜೆಪಿಯ ದಳ್ಳಾಳಿಗಳು ಎನ್ನಲಾಗಿರುವ ಮೂವರ ಜೊತೆಗೆ ಟಿಆರ್‌ಎಸ್ ಪಕ್ಷದ ಶಾಸಕರು ಸಭೆ ನಡೆಸಿದ ನಂತರ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ಸಿಕ್ಕಿಬಿದ್ದ ಮೂವರು ಪ್ರಮುಖ ಆರೋಪಿಗಳು ಬಿಜೆಪಿ ಹಿನ್ನೆಲೆಯವರು ಎಂದು ವರದಿಯಾಗಿದೆ. ಆರೋಪಿಗಳನ್ನು ಹರಿಯಾಣದ ಫರಿದಾಬಾದ್ ಮೂಲದ ಪೂಜಾರಿಯಾಗಿರುವ ಸತೀಶ್ ಶರ್ಮಾ (33), ತಿರುಪತಿಯ ಶ್ರೀಮನಾಥ ರಾಜ ಪೀಠದ ಪೀಠಾಧಿಪತಿ D. ಸಿಂಹಯಾಜಿ(45), ಹಾಗೂ ಸರೂರನಗರದ ಉದ್ಯಮಿ ನಂದಕುಮಾರ್ (48) ಎಂದು ಗುರುತಿಸಲಾಗಿದೆ.


