Homeಮುಖಪುಟ‘ಬಿಜೆಪಿಯಿಂದ ಆಪರೇಷನ್ ಕಮಲಕ್ಕೆ ಯತ್ನ, 30 ಶಾಸಕರಿಗೆ ತಲಾ 100 ಕೋಟಿ ರೂ. ಆಫರ್‌‌’: ತೆಲಂಗಾಣ...

‘ಬಿಜೆಪಿಯಿಂದ ಆಪರೇಷನ್ ಕಮಲಕ್ಕೆ ಯತ್ನ, 30 ಶಾಸಕರಿಗೆ ತಲಾ 100 ಕೋಟಿ ರೂ. ಆಫರ್‌‌’: ತೆಲಂಗಾಣ ಸಿಎಂ ಕೆಸಿಆರ್ ಆರೋಪ

- Advertisement -
- Advertisement -

ತೆಲಂಗಾಣದ ಮುನುಗೋಡೆ ಉಪಚುನಾವಣೆಗೆ ಮುಂಚಿತವಾಗಿ ಪಕ್ಷ ಬದಲಾಯಿಸಲು ಆಡಳಿತಾರೂಢ ಟಿಆರ್‌ಎಸ್ ಪಕ್ಷದ 20 ರಿಂದ 30 ಶಾಸಕರಿಗೆ ಭಾರಿ ಮೊತ್ತದ ಹಣವನ್ನು ಬಿಜೆಪಿ ಪಾವತಿಸುತ್ತಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್‌ (ಕೆಸಿಆರ್‌‌) ಅವರು ಭಾನುವಾರ ಹೇಳಿದ್ದು,‘‘ಬಿಜೆಪಿಯ ‘ದಲ್ಲಾಳಿಗಳು’ ಹಾಲಿ ಶಾಸಕರಿಗೆ ತಲಾ 100 ಕೋಟಿ ರೂ. ಆಫರ್‌ ನೀಡಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.

“ನೀವು ನಿನ್ನೆ ನೋಡಿದ್ದೀರಿ. ಇಲ್ಲಿ ಒಬ್ಬ ಕೆಸಿಆರ್ ಜೋರಾಗಿ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ಹೀಗಾಗಿ ಅವರ ರಾಜಕೀಯ ಅಂತ್ಯವನ್ನು ಮಾಡೋಣ ಎಂದು ಬಿಜೆಪಿ ಯೋಚಿಸುತ್ತಿದೆ. ಅವರು ಪ್ರತಿ ಶಾಸಕರನ್ನು 100 ಕೋಟಿ ರೂ.ಗೆ ಖರೀದಿಸಲು ದಲ್ಲಾಳಿಗಳನ್ನು ಕಳುಹಿಸಿದ್ದಾರೆ” ಎಂದು ಮುಖ್ಯಮಂತ್ರಿ ಕೆಸಿಆರ್‌ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಅವರು 20 ಅಥವಾ 30 ಶಾಸಕರನ್ನು ಖರೀದಿಸಲು ಬಯಸಿದ್ದರು. ಈ ಮೂಲಕ ಕೆಸಿಆರ್ ಸರ್ಕಾರವನ್ನು ಉರುಳಿಸಿ, ತೆಲಂಗಾಣವನ್ನು ಅತಿಕ್ರಮಿಸಿ ನಂತರ ತಮ್ಮ ಇಚ್ಛೆಯಂತೆ ಖಾಸಗೀಕರಣವನ್ನು ಜಾರಿಗೊಳಿಸಬಹುದು ಎಂದು ಬಯಸಿದ್ದರು” ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿಯವರೆ ನನಗೆ ತೊಂದರೆ ಕೊಡುತ್ತಿದ್ದಾರೆ: ಜನಾರ್ದನ ರೆಡ್ಡಿ ಅಸಮಾಧಾನ

ಟಿಆರ್‌ಎಸ್ ಶಾಸಕರಿಗೆ ಲಂಚ ನೀಡಿದ ಆರೋಪದಲ್ಲಿ ಬಿಜೆಪಿ ಏಜೆಂಟರೆಂದು ಹೇಳಲಾದ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಒಂದು ದಿನದ ನಂತರ ಮುಖ್ಯಮಂತ್ರಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

ಟಿಆರ್‌ಎಸ್ ಶಾಸಕರಲ್ಲೊಬ್ಬರಾದ ಪೈಲಟ್ ರೋಹಿತ್ ರೆಡ್ಡಿ ಅವರ ದೂರಿನ ಆಧಾರದ ಮೇಲೆ ರಾಮಚಂದ್ರ ಭಾರತಿ ಅಲಿಯಾಸ್ ಸತೀಶ್ ಶರ್ಮಾ, ನಂದ ಕುಮಾರ್ ಮತ್ತು ಸಿಂಹಯಾಜಿ ಸ್ವಾಮಿ ವಿರುದ್ಧ ಕ್ರಿಮಿನಲ್ ಪಿತೂರಿ, ಲಂಚ ನೀಡುವಿಕೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ 1988 ರ ಉಪಬಂಧಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಆರೋಪಿಗಳು ತನಗೆ 100 ಕೋಟಿ ರೂಪಾಯಿ ನೀಡುವುದಾಗಿ ಹೇಳಿದ್ದಾರೆ ಎಂದು ಶಾಸಕ ರೋಹಿತ್ ರೆಡ್ಡಿ ಆರೋಪಿಸಿದ್ದಾರೆ. ಬಿಜೆಪಿಯ ಹಣಕ್ಕೆ ಪ್ರತಿಯಾಗಿ ಶಾಸಕರು ಟಿಆರ್‌ಎಸ್ ತೊರೆದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಾಗಿತ್ತು.

ಇದನ್ನೂ ಓದಿ: ಪಂಪ್‌ವೆಲ್‌ ಮಹಾವೀರ ವೃತ್ತದಲ್ಲಿ ಶಿವಾಜಿ ಪ್ರತಿಮೆ; ಮಂಗಳೂರು ದೋಚಿದವನ ಪ್ರತಿಮೆ ಬೇಡ ಎಂದ ಜನತೆ

“ಶಾಸಕರಿಗೆ ನೀಡಲಾಗಿದ್ದ 100 ಕೋಟಿ ರೂ.ಗಳನ್ನು ಒದಗಿಸಿದವರು ಯಾರು? ಈ ಬಗ್ಗೆ ತನಿಖೆ ನಡೆಯಬೇಕು. ಈ ಸಮಸ್ಯೆಯ ಹಿಂದೆ ಯಾರಿದ್ದಾರೆ? ಸಮಸ್ಯೆಯ ಸೃಷ್ಟಿಕರ್ತರು ತಮ್ಮ ಹುದ್ದೆಗಳಲ್ಲಿ ಮುಂದುವರಿಯಲು ಅರ್ಹರೇ?” ಎಂದು ಕೆಸಿಆರ್ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಹಿರಿಯ ನಾಯಕ ಮತ್ತು ಒಕ್ಕೂಟ ಸರ್ಕಾರದ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ,“ಇಂದು ನೀವು ಅವರನ್ನು ದೆಹಲಿ ದಲ್ಲಾಳಿಗಳು ಎಂದು ಕರೆಯುತ್ತೀರಿ. ದಲ್ಲಾಳಿತನದ ಮೂಲಕವೇ ನೀವು ಈ ಮೊದಲು ನಿಮ್ಮ ಪಕ್ಷಕ್ಕೆ ಸೇರಿದ ಎಲ್ಲಾ ಶಾಸಕರನ್ನು ಪ್ರೋತ್ಸಾಹಿಸಿದ್ದೀರಿ” ಎಂದು ಟ್ವೀಟ್ ಮಾಡಿದ್ದಾರೆ.

“ನಾನು ಒಂದು ವಿಷಯ ತಿಳಿಸುತ್ತಿದ್ದೇನೆ ಕೆಸಿಆರ್ ಅವರೇ, ನಿಮ್ಮ ಸರ್ಕಾರವನ್ನು ಬೀಳಿಸುವ ಉದ್ದೇಶ ನಮಗಿಲ್ಲ. ಚುನಾವಣೆಯಲ್ಲಿ ನಿಮ್ಮದೇ ಅಜೆಂಡಾ ಆಗುವಂತೆ ನಿಮ್ಮದೇ ಸರ್ಕಾರವನ್ನು ಉರುಳಿಸಿ ಅನುಕಂಪ ಗಳಿಸುವ ಯೋಚನೆ ನಿಮ್ಮಲ್ಲಿರಬಹುದು. ನಮ್ಮ ಪಕ್ಷಕ್ಕೆ ಅಂತಹ ಉದ್ದೇಶವಿಲ್ಲ. ಈಗಾಗಲೇ ನೀವು ಜನರಲ್ಲಿ ನಿಮ್ಮ ಗೌರವವನ್ನು ಕಳೆದುಕೊಂಡಿದ್ದೀರಿ, ಜನರು ನಿಮ್ಮನ್ನು ಮತ್ತು ನಿಮ್ಮ ಪಕ್ಷವನ್ನು ಅಸಹ್ಯಪಡುತ್ತಿದ್ದಾರೆ” ಎಂದು ಕಿಶನ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಸುತ್ತೋಲೆ ಹೊರಡಿಸಿ ವಾಪಸ್‌ ಪಡೆಯುವ ಸರ್ಕಾರ: ಒಂದೇ ತಿಂಗಳಲ್ಲಿ ಮೂರು ಪ್ರಕರಣ

ಈ ಮಧ್ಯೆ, ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೀಡಿದ್ದ ಸಾಮಾನ್ಯ ಸಮ್ಮತಿಯನ್ನು ಹಿಂಪಡೆದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...