ನಿವೃತ್ತ ಅಧಿಕಾರಿ ಅರುಣ್ ಗೋಯೆಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ (ಅನೂಪ್ ಬರನ್ವಾಲ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಓರ್ಸ್) ನೇಮಕ ಮಾಡುವಲ್ಲಿ ಒಕ್ಕೂಟ ಸರ್ಕಾರವು “ಭಾರಿ ಆತುರ” ಪಡಿಸಿರುವ ಬಗ್ಗೆ ಸುಪ್ರೀಂಕೋರ್ಟ್ ಗುರುವಾರ ಪ್ರಶ್ನಿಸಿದೆ.
ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದ ಸಂವಿಧಾನ ಪೀಠವು, ಒಕ್ಕೂಟ ಸರ್ಕಾರವು ಕೇವಲ 24 ಗಂಟೆಗಳ ಅವಧಿಯಲ್ಲಿ ಗೋಯೆಲ್ ಅವರ ಮೌಲ್ಯಮಾಪನ ಮತ್ತು ಆಯ್ಕೆ ಮಾಡಲಾಗಿದೆ ಎಂಬುದನ್ನು ಗಮನಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಅರುಣ್ ಗೋಯೆಲ್ ನೇಮಕಾತಿ ಕಡತವನ್ನು ನವೆಂಬರ್ 18 ರಂದು ಮುಂದೆ ತರಲಾಗಿದೆ. ಇದರ ನಂತರ ಹೆಸರುಗಳನ್ನು ಪರಿಶೀಲಿಸಲಾಗುತ್ತದೆ. ನಂತರ ಪ್ರಧಾನಿ ಬರುತ್ತಾರೆ… ಸಾಮಾನ್ಯವಾಗಿ ಇಷ್ಟು ತರಾತುರಿಯಲ್ಲಿ ನೇಮಕ ಮಾಡಲಾಗುತ್ತದೆಯೇ” ಎಂದು ನ್ಯಾಯಮೂರ್ತಿ ಜೋಸೆಫ್ ಅವರು ಒಕ್ಕೂಟ ಸರ್ಕಾರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರನ್ನು ಕೇಳಿದ್ದಾರೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನ ಕೊಲಿಜಿಯಂ: ನಿರಂತರ ಚರ್ಚೆಗಳ ಒಳಹೊರಗೆ
“ಗೋಯೆಲ್ ಅವರ ನೇಮಕವನ್ನು ನವೆಂಬರ್ 18 ರಂದು ಒಂದೇ ದಿನದಲ್ಲಿ ಮಾಡಿದ್ದೀರಿ. ಈ ಬಗ್ಗೆಗಿನ ಕಡತವು ಅದನ್ನು ಸೂಚುಸುತ್ತಿದೆ” ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
ಕಾರ್ಯಾಂಗವು ಅಧಿಕಾರ ಅನುಭವಿಸುತ್ತದೆ ಎಂಬ ಕಾರಣಕ್ಕೆ ಭಾರತದ ಸಂವಿಧಾನದ 324(2)ನೇ ವಿಧಿಯನ್ನು ಉಲ್ಲಂಘಿಸಿ ಚುನಾವಣಾ ಆಯುಕ್ತರ ನೇಮಕಾತಿಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ಹಾಗೂ ಈ ವ್ಯವಸ್ಥೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿಟಿ ರವಿಕುಮಾರ್ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸುತ್ತಿದೆ.
ಗೋಯೆಲ್ ಅವರು ನವೆಂಬರ್ 18ರ ಶುಕ್ರವಾರದಂದು ತಮ್ಮ ಹಿಂದಿನ ಪೋಸ್ಟಿಂಗ್‌ನಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ನವೆಂಬರ್ 19 ರಂದು ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಂಡರು ಮತ್ತು ನವೆಂಬರ್ 21 ರಂದು ಅಧಿಕಾರ ವಹಿಸಿಕೊಂಡಿದ್ದರು.
ಇದನ್ನೂ ಓದಿ: ನವ್ಲಾಖಾ ಗೃಹಬಂಧನದ ವಿರುದ್ಧ ಎನ್‌ಐಎ ಅರ್ಜಿ ತಿರಸ್ಕರಿಸಿದ ಸುಪ್ರೀಂ; ಹಿಂದಿನ ಆದೇಶ ಜಾರಿಗೆ ಸೂಚನೆ
ಭಾರತೀಯ ಚುನಾವಣಾ ಆಯೋಗ (ಇಸಿಐ)ದ ನೇಮಕಾತಿಗಳಿಗೆ ತಡೆಯಾಜ್ಞೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಬಾಕಿ ಇರುವಾಗ ಈ ನೇಮಕಾತಿಯನ್ನು ಮಾಡಲಾಗಿತ್ತು. ಹೀಗಾಗಿ ಗೋಯೆಲ್ ಅವರನ್ನು ಚುನಾವಣಾ ಆಯುಕ್ತವಾರಿ ನೇಮಿಸಿದ್ದಕ್ಕೆ ಸಂಬಂಧಿಸಿದ ಕಡತವನ್ನು ಹಾಜರುಪಡಿಸುವಂತೆ ನ್ಯಾಯಾಲಯ ಬುಧವಾರ ಸರ್ಕಾರಕ್ಕೆ ಸೂಚಿಸಿತ್ತು.
ಅದರಂತೆ ಒಕ್ಕೂಟ ಸರ್ಕಾರವು ಕಡತಗಳನ್ನು ಹಾಜರುಪಡಿಸಿದ್ದು, ಪೀಠವು ಇಂದು ಪರಿಶೀಲಿಸಲು ಮುಂದಾಯಿತು.
“ನಿಮ್ಮ ಮೊದಲ ಪುಟದ ಪ್ರಕಾರ, ಈ ಹುದ್ದೆಯು ಮೇ 15 ರಿಂದ ಖಾಲಿಯಾಗಿದೆ. ಮೇ ನಿಂದ ನವೆಂಬರ್ ತಿಂಗಳ ವರೆಗೆ ಕಾದು, ನವೆಂಬರ್‌ನಲ್ಲಿ ಎಲ್ಲವನ್ನೂ ಸೂಪರ್‌ಫಾಸ್ಟ್ ಆಗಿ ಮಾಡಬೇಕು ಎಂದು ಸರ್ಕಾರಕ್ಕೆ ಯಾಕೆ ಅನಿಸಿತು ಎಂದು ನಮಗೆ ಹೇಳಬಹುದೇ. ಎಲ್ಲಿ ಇಚ್ಛೆ ಇರುತ್ತದೋ ಅಲ್ಲಿ ದಾರಿ ಇರುತ್ತದೆ ಎಂದು ನಮಗೆ ತಿಳಿದಿದೆ” ಎಂದು ನ್ಯಾಯಮೂರ್ತಿ ಅಜಯ್ ರಸ್ತೋಗಿ ಹೇಳಿದ್ದಾರೆ.
ಇದನ್ನೂ ಓದಿ: ಜಾರ್ಖಂಡ್ ಸಿಎಂ ವಿರುದ್ಧ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಪಿಐಎಲ್‌ಗೆ ಸುಪ್ರೀಂಕೋರ್ಟ್ ತಡೆ
“ಅದೇ ದಿನ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಕೇವಲ 24 ಗಂಟೆಗಳಲ್ಲಿ ಯಾವ ರೀತಿಯ ಮೌಲ್ಯಮಾಪನ ನಡೆದಿದೆ” ಎಂದು ನ್ಯಾಯಾಲಯ ಪ್ರಶ್ನಿಸಿದೆ.
“ಸರಿಯಾದ ಪ್ರಕ್ರಿಯೆಗಳೊಂದಿಗೆ ಹೆಸರನ್ನು ಪರಿಗಣಿಸಲಾಗಿದೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. 12 ಅಥವಾ 24 ಗಂಟೆಗಳಲ್ಲಿ ಸಾರ್ವಜನಿಕ ಕಚೇರಿಗಳಲ್ಲಿ ಎಷ್ಟು ನೇಮಕಾತಿಗಳು ನಡೆಯುತ್ತವೆ? ಇಂತಹ ಪ್ರಶ್ನೆಗಳು ಬೆಳೆಯುತ್ತಲೆ ಹೋಗುತ್ತದೆ. ಅಂತಹ ಎಲ್ಲಾ ನಿದರ್ಶನಗಳನ್ನು ಪಡೆಯಬಹುದೆ” ಎಂದು ಒಕ್ಕೂಟ ಸರ್ಕಾರದ ಪರ ಹಾಜರಾದ ಅಟಾರ್ನಿ ಜನರಲ್ ನ್ಯಾಯಾಲಯಕ್ಕೆ ಹೇಳಿದ್ದಾರೆ.
ಇದಕ್ಕೆ ಪ್ರಶ್ನಿಸಿದ ನ್ಯಾಯಾಲಯ, ಸೂಚಿಸಿದ ಕಾರ್ಯವಿಧಾನವನ್ನು ಸರಿಯಾಗಿ ಅನುಸರಿಸಲಾಗಿದೆಯೇ ಎಂದು ತಿಳಿಯಲು ಪೀಠ ಬಯಸುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: ಬಿಲ್ಕಿಸ್ ಬಾನೋ ಅತ್ಯಾಚಾರಿಗಳ ಬಿಡುಗಡೆ ಪ್ರಶ್ನಿಸಿ ಹೊಸ ಅರ್ಜಿ; ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ
“ನೀವು ನೇಮಕಾತಿಯಲ್ಲಿ ಕೈಗೊಂಡ ಪ್ರಕ್ರಿಯೆಯನ್ನು ಮಾತ್ರ ನಾವು ತಿಳಿದುಕೊಳ್ಳಲು ಬಯಸುತ್ತೇವೆ. ನೀವು ಟಾಸ್ ಹಾಕಿ ಎರಡೂ ಕಡೆ ಬಿದ್ದರೂ ಗೆಲ್ಲುತ್ತೀರಿ. ನಮಗೆ ತಿಳಿದಂತೆ ಅಧಿಕಾರ ಹೊಂದಿರುವ ವ್ಯಕ್ತಿ ನಿಮಗೆ ವಿಧೇಯನಾಗಿದ್ದರೆ ಏನು ಮಾಡುವುದು” ಎಂದು ಜಸ್ಟೀಸ್ ಜೋಸೆಫ್ ಪ್ರಶ್ನಿಸಿದ್ದಾರೆ.‘
“ಅವರು ನಮಗೆ ವಿಧೇಯನೆಂದು ಯಾರಾದರೊಬ್ಬರು ಹೇಳುತ್ತಾರೆ. ಅದು ಅಲ್ಲ ಎಂದು ಇನ್ನೊಬ್ಬ ಹೇಳುತ್ತಾರೆ. ಇವುಗಳಲ್ಲಿ ಕೋರ್ಟ್ ಯಾರನ್ನು ಪರಿಗಣಿಸುತ್ತದೆ” ಅಟಾರ್ನಿ ಜನರಲ್ ಕೇಳುತ್ತಾರೆ.
“ನಾಲ್ವರಿಗಿಂತ ಮುಂಚಿತವಾಗಿ ಅವರನ್ನು ಹೇಗೆ ಆಯ್ಕೆ ಮಾಡಲಾಗಿದೆ ಎಂದು ನಮಗೆ ತಿಳಿಸಿ” ಎಂದು ನ್ಯಾಯಮೂರ್ತಿ ಜೋಸೆಫ್ ಪಟ್ಟು ಹಿಡಿದರು.
ಇದನ್ನೂ ಓದಿ: ಪ್ರೊ.ಜಿ.ಎನ್. ಸಾಯಿಬಾಬಾ ಬಿಡುಗಡೆಯ ಆದೇಶ ಅಮಾನತು ಮಾಡಿದ ಸುಪ್ರೀಂಕೋರ್ಟ್
“ಅವರು ಸ್ವಯಂಪ್ರೇರಿತ ನಿವೃತ್ತಿ ಪಡೆದಿದ್ದು, ಸೇರಿದಂತೆ ಇತ್ಯಾದಿ ವಿಚರಗಳನ್ನು ನಾವು ಕಂಡುಕೊಂಡಿದ್ದೇವೆ…ಇದು ಸಾಮಾನ್ಯವೇ? ಸಾಮಾನ್ಯವಾಗಿ ಈ ರೀತಿ ನಡೆಯುತ್ತದೆಯೇ’’ ಎಂದು ನ್ಯಾಯಮೂರ್ತಿ ಬೋಸ್ ಕೇಳಿದ್ದಾರೆ.
ಈ ವೇಳೆ ಉತ್ತರಿಸಿದ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಅಟಾರ್ನಿ ಜನರಲ್, “ಅವರು ಹೇಗಿದ್ದರೂ ಡಿಸೆಂಬರ್ 31 ರಂದು ನಿವೃತ್ತರಾಗಲಿದ್ದಾರೆ” ಎಂದು ಉತ್ತರಿಸಿದ್ದಾರೆ.
ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.


