Homeಅಂತರಾಷ್ಟ್ರೀಯನ್ಯೂಜಿಲೆಂಡ್‌: ಗೇಬ್ರಿಯೆಲ್ ಚಂಡಮಾರುತಕ್ಕೆ ಉತ್ತರ ಭಾಗ ತತ್ತರ - ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ

ನ್ಯೂಜಿಲೆಂಡ್‌: ಗೇಬ್ರಿಯೆಲ್ ಚಂಡಮಾರುತಕ್ಕೆ ಉತ್ತರ ಭಾಗ ತತ್ತರ – ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ

- Advertisement -
- Advertisement -

ನ್ಯೂಜಿಲೆಂಡ್‌ನ ಉತ್ತರ ಭಾಗಕ್ಕೆ ಗೇಬ್ರಿಯೆಲ್ ಚಂಡಮಾರುತ ಅಪ್ಪಳಿಸಿದ್ದು, ಲಕ್ಷಾಂತರ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಭಾರೀ ಪ್ರವಾಹ ಪರಿಸ್ಥಿತಿ ಎದುರಾಗಿದ್ದು ಮನೆಗಳು ನೀರಿನಲ್ಲಿ ಮುಳುಗಿವೆ. ವಿದ್ಯುತ್ ಗ್ರಿಡ್ ವ್ಯವಸ್ಥೆ ಹಾಳಾದ ಪರಿಣಾಮ ಲಕ್ಷಾಂತರ ಮನೆಗಳ ವಿದ್ಯುತ್ ಕಡಿತಗೊಂಡಿದೆ. ಇದು ಶತಮಾನದಲ್ಲಿಯೇ ಅತ್ಯಂತ ದೊಡ್ಡ ಪರಿಸರದ ಅವಘಡ ಎಂದು ಪ್ರಧಾನಿ ಕ್ರಿಸ್ ಹಿಪ್ಕಿನ್ಸ್ ತಿಳಿಸಿದ್ದು ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ನ್ಯೂಜಿಲೆಂಡ್‌ನ ಉತ್ತರ ಭಾಗದ ಆಕ್ಲೆಂಡ್, ನಾರ್ತ್‌ಲ್ಯಾಂಡ್‌, ಗಿಸ್ಬೋರ್ನ್, ಹಾಕ್ಸ್ ಬೇ ಸೇರಿದಂತೆ ಮೊದಲಾದ ಪ್ರದೇಶಗಳಲ್ಲಿ ಬಹುತೇಕ ಜನಜೀವನ ಅಸ್ತವ್ಯಸ್ತಗೊಂಡಿದೆ. ಭೂಕುಸಿತ, ಅತಿವೃಷ್ಟಿ, ಮರಗಳು ನೆಲಕ್ಕುರುಳಿರುವುದು ಸೇರಿ ಸುಮಾರು 2 ಲಕ್ಷ ಮನೆಗಳಿಗೆ ತೊಂದರೆಯಾಗಿದ್ದು, 5 ಲಕ್ಷ ಜನರು ಸಂಕಷ್ಟದಲ್ಲಿದ್ದಾರೆ ಎಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ.

ಚಂಡಮಾರುತದ ಪರಿಣಾಮ ನ್ಯೂಜಿಲೆಂಡ್​ನಲ್ಲಿ 1.5 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನಾರ್ತ್​ಲ್ಯಾಂಡ್, ಆಕ್ಲೆಂಡ್ ಮತ್ತು ಹಾಕ್ಸ್​ಬೇ ಪ್ರದೇಶಗಳಲ್ಲಿ ಸಂಪೂರ್ಣ ಕತ್ತಲು ಅವರಿಸಿದೆ.

“ಗೇಬ್ರಿಯೆಲ್ ಚಂಡಮಾರುತವು ಈ ಶತಮಾನದಲ್ಲಿ ನ್ಯೂಜಿಲೆಂಡ್ ಕಂಡ ಅತ್ಯಂತ ದೊಡ್ಡ ಹವಾಮಾನ ಘಟನೆಯಾಗಿದೆ. ಇಂದು ನಾವು ನೋಡುತ್ತಿರುವ ಈ ತೀವ್ರತೆ ಮತ್ತು ಹಾನಿಯನ್ನು ಈ ಪೀಳಿಗೆ ಹಿಂದೆಂದೂ ಕಂಡಿರಲಿಲ್ಲ” ಎಂದು ಪ್ರಧಾನ ಮಂತ್ರಿ ಕ್ರಿಸ್ ಹಿಪ್ಕಿನ್ಸ್ ತಿಳಿಸಿದ್ದಾರೆ.

ನ್ಯೂಜಿಲೆಂಡ್​ನಲ್ಲಿ ಗೇಬ್ರಿಯೆಲ್ ಚಂಡಮಾರುತ ಅಪ್ಪಳಿಸಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಸರ್ಕಾರ ರಾಷ್ಟ್ರೀಯ ತುರ್ತುಸ್ಥಿತಿಯನ್ನು ಘೋಷಿಸಿದೆ. ನಾರ್ತ್​ಲೆಂಡ್, ಆಕ್ಲೆಂಡ್, ಟೈರಾವ್ಹಿಟಿ, ಬೇ ಆಫ್ ಪ್ಲೆಂಟಿ, ವೈಕಾಟೋ, ಹಾಕ್ಸ್​ಬೇ ಮತ್ತು ಟರರುವಾ ಪ್ರದೇಶಗಳಲ್ಲಿ ತುರ್ತುಸ್ಥಿತಿ ಘೋಷಿಸಲಾಗಿದೆ. ಆ ಪ್ರದೇಶಗಳ ಪರಿಹಾರ, ರಕ್ಷಣಾ ಕಾರ್ಯಗಳ ಜವಾಬ್ದಾರಿಯನ್ನು ಸ್ಥಳೀಯ ಆಡಳಿತದ ಬದಲು ಕೇಂದ್ರ ಸರ್ಕಾರವೇ ನಡೆಸುತ್ತಿದೆ.

ಅದೃಷ್ಟವಶಾತ್, ಚಂಡಮಾರುತದಿಂದ ಪ್ರಾಣಹಾನಿಯಾಗಿರುವ ವರದಿ ಆಗಿಲ್ಲ. ಇಲ್ಲಿಯವರೆಗೆ ಸುಮಾರು 2,500 ಜನರನ್ನು ಸ್ಥಳಾಂತರಿಸಲಾಗಿದೆ. ಆದರೆ ಈ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ ಎನ್ನಲಾಗಿದೆ.

ಇದನ್ನೂ ಓದಿ; ಶಾಲೆಗಳಲ್ಲಿ ಸಾತ್ವಿಕ ಆಹಾರ ನೀಡುವ ಚಿಂತನೆಯಿಲ್ಲ: ಶಿಕ್ಷಣ ಸಚಿವ ನಾಗೇಶ್ ಸ್ಪಷ್ಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...