ಅಪ್ರಾಪ್ತ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಆಕೆಯ ಕೂದಲು ಹಿಡಿದು ರಸ್ತೆಯಲ್ಲಿ ಎಳೆದೊಯ್ದ ಆಘಾತಕಾರಿ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆ ಛತ್ತೀಸ್‌ಗಢದ ರಾಯ್‌ಪುರದ ಗುಧಿಯಾರಿ ಪ್ರದೇಶದ ಬೀದಿಗಳಲ್ಲಿ ನಡೆದಿದೆ. ಹಿಂಸಾಚಾರದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆ ವ್ಯಕ್ತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
16 ವರ್ಷದ ಅಪ್ರಾಪ್ತ ಬಾಲಕಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿ, ಕೂದಲು ಹಿಡಿದು ವ್ಯಕ್ತಿಯೊಬ್ಬ ಎಳೆದೊಯ್ದಿದ್ದಾನೆ. ಈ ಘಟನೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನೆಟ್ಟಿಗರು ಒತ್ತಾಯಿಸಿದ್ದಾರೆ.
From Raipur, Chattisgarh.
47 year old OMKAR TIWARI stabs a 16 year old minor girl and drags her on the road while the public watches it in horror.
The girl who was working for a grocery shop run by Omkar. The girl had quit her job and demanded her money from him. pic.twitter.com/ldq8M1zzA5
— Drunk Journalist (@drunkJournalist) February 19, 2023
ವೈರಲ್ ಆಗಿರುವ ವೀಡಿಯೊದಲ್ಲಿ, ”ಒಬ್ಬ ವ್ಯಕ್ತಿ ಕತ್ತಿಯನ್ನು ಹಿಡಿದುಕೊಂಡು, ಜನರು ನೋಡುತ್ತಿರುವಂತೆ ಹದಿಹರೆಯದ ಹುಡುಗಿಯ ಕೂದಲು ಹಿಡಿದು ಎಳೆದುಕೊಂಡು ಹೋಗುತ್ತಿರುವುದು” ಕಂಡುಬರುತ್ತದೆ.
ಇದನ್ನೂ ಓದಿ: ಮಧ್ಯಪ್ರದೇಶ: ದಲಿತರು ದೇವಾಲಯ ಪ್ರವೇಶಿಸಿದರೆಂದು ಹಿಂಸಾಚಾರ; 14 ಜನರಿಗೆ ಗಾಯ
ಘಟನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ, ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಅಧ್ಯಕ್ಷರು, ದುಃಖ ವ್ಯಕ್ತಪಡಿಸಿ ವಿಡಿಯೋ ಕ್ಲಿಪ್‌ಅನ್ನು ಟ್ವೀಟ್ ಮಾಡಿದ್ದಾರೆ. ”ಬಾಲಕಿ ಮೇಲೆ ಹಲ್ಲೆ ನಡೆಸುತ್ತ, ಆ ರಾಕ್ಷಸ ಆಕೆಯನ್ನು ಕೂದಲು ಹಿಡಿದು ಎಳೆದೊಯ್ಯುತ್ತಿದ್ದರೂ ಆ ಸ್ಥಳದಲ್ಲಿದ್ದ ಜನರು ನೋಡುತ್ತಾ ನಿಂತಿದ್ದಾರೆ ಆದರೆ ಅವರ್ಯಾರು ಆಕೆಯ ಸಹಾಯಕ್ಕೆ ಮುಂದೆ ಬಂದಿಲ್ಲ… ಎಲ್ಲಿದೆ ಮಾನವೀಯತೆ? ನಡುರಸ್ತೆಯಲ್ಲಿಯೇ ಇಂತಹ ಅಮಾನವೀಯ ಘಟನೆ ನಡೆಯುತ್ತಿದೆ, ಎಲ್ಲಿದೆ ಪೊಲೀಸ್ ಇಲಾಖೆ, ಎಲ್ಲಿದೆ ಆಡಳಿತ?” ಎಂದು ಸ್ವಾತಿ ಮಲಿವಾಲ್ ಪ್ರಶ್ನಿಸಿದ್ದಾರೆ.
ये वीडियो छत्तीसगढ़ की बताई जा रही है। महिला को बुरी तरह घायल कर बाल पकड़कर सड़क पर खींच रहा है ये राक्षस। इतने लोग ये सब होता देख रहे हैं लेकिन कोई आगे बढ़कर मदद नहीं कर रहा। कहाँ है प्रशासन ?? pic.twitter.com/L5AfGaGXgQ
— Swati Maliwal (@SwatiJaiHind) February 19, 2023
ಹಿಂಸೆಗೊಳಗಾದ ಬಾಲಕಿಯು ಆ ವ್ಯಕ್ತಿಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯನ್ನು ಮದುವೆಯಾಗುವುದಾಗಿ ಪ್ರಸ್ತಾಪ ಮಾಡಿದ್ದನು, ಆದರೆ ಆಕೆ ಮತ್ತು ಆಕೆಯ ಕುಟುಂಬದವರು ಮದುವೆಗೆ ಒಪ್ಪಲಿಲ್ಲ. ಆಗ ಬಾಲಕಿಯು ಅಲ್ಲಿ ಕೆಲಸ ಬಿಟ್ಟಿದ್ದಾಳೆ. ಆ ನಂತರದಲ್ಲಿ ಈ ಘಟನೆ ಸಂಭವಿಸಿದೆ” ಎಂದು ರಾಯ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಪ್ರಶಾಂತ್ ಅಗರವಾಲ್ ಎಎನ್‌ಐಗೆ ತಿಳಿಸಿದ್ದಾರೆ.
ಸಧ್ಯ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ಸದ್ಯ ವೈದ್ಯರ ನಿರಂತರ ನಿಗಾದಲ್ಲಿದ್ದಾಳೆ.
ತನ್ನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಮತ್ತು ತಮ್ಮ ಅಂಗಡಿಯಲ್ಲಿ ಕೆಲಸವನ್ನು ಬಿಟ್ಟಿದ್ದಕ್ಕಾಗಿ ಹತಾಶೆಗೊಂಡ ವ್ಯಕ್ತಿ, ಚೂಪಾದ ವಸ್ತುವಿನಿಂದ ಆಕೆಯ ಮೇಲೆ ದಾಳಿ ಮಾಡಿದ್ದಲ್ಲದೇ, ಬೀದಿಗಳಲ್ಲಿ ಆಕೆಯ ಕೂದಲು ಹಿಡಿದು ಎಳೆದೊಯ್ದಿದ್ದಾನೆ. ಈ ಘಟನೆಯ ವಿಡಿಯೋವನ್ನು ನೂರಾರು ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಈ ಹಿಂಸಾತ್ಮಕ ನಡವಳಿಕೆಯನ್ನು ಖಂಡಿಸಿದ್ದಾರೆ.
”ಆರೋಪಿಯನ್ನು 47ವರ್ಷದ ಓಂಕಾರ ತಿವಾರಿ ಎಂದು ಪತ್ತೆ ಮಾಡಲಾಗಿದ್ದು, ಆತನ ಮೇಲೆ ಘಟನೆ ಸಂಬಂಧಿತ ಪ್ರಕರಣಗಳು ಮತ್ತು ಶಸ್ತ್ರಾಸ್ತ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ” ಪೊಲೀಸರು ತಿಳಿಸಿದ್ದಾರೆ.


