Homeದಲಿತ್ ಫೈಲ್ಸ್ಮಧ್ಯಪ್ರದೇಶ: ದಲಿತರು ದೇವಾಲಯ ಪ್ರವೇಶಿಸಿದರೆಂದು ಹಿಂಸಾಚಾರ; 14 ಜನರಿಗೆ ಗಾಯ

ಮಧ್ಯಪ್ರದೇಶ: ದಲಿತರು ದೇವಾಲಯ ಪ್ರವೇಶಿಸಿದರೆಂದು ಹಿಂಸಾಚಾರ; 14 ಜನರಿಗೆ ಗಾಯ

- Advertisement -
- Advertisement -

ಶನಿವಾರ ಸಂಜೆ ಮಹಾಶಿವರಾತ್ರಿಯಂದು ದಲಿತರು ದೇವಾಲಯ ಪ್ರವೇಶಿಸಿದರು ಎನ್ನುವ ಕಾರಣಕ್ಕೆ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ಹಿಂಸಾಚಾರ ಸಂಭವಿಸಿದೆ. ಈ ಘಟನೆಯಲ್ಲಿ 14 ಜನರು ಗಾಯಗೊಂಡಿದ್ದಾರೆ.

ಖಾರ್ಗೋನ್ ಜಿಲ್ಲಾ ಕೇಂದ್ರದಿಂದ 60 ಕಿಮೀ ಮತ್ತು ಇಂದೋರ್‌ನಿಂದ 90 ಕಿಮೀ ದೂರದಲ್ಲಿರುವ ಸನವಾಡ್ ಪ್ರದೇಶದ ಛಪ್ರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎರಡೂ ಕಡೆಯ ದೂರಿನ ಮೇರೆಗೆ ಪೊಲೀಸರು 50ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆ ಬಗ್ಗೆ ಬರ್ವಾಹಾದ ಉಪವಿಭಾಗದ ಪೊಲೀಸ್ ಅಧಿಕಾರಿ ವಿನೋದ್ ದೀಕ್ಷಿತ್ ಸುದ್ದಿಗಾರರೊಂದಿಗೆ ಮಾತನಾಡಿ, ”ಶನಿವಾರ ಇತರ ಮೂರು ಸಮುದಾಯಗಳ ಜನರು ನಿರ್ಮಿಸಿದ ಶಿವ ದೇವಾಲಯಕ್ಕೆ ದಲಿತರ ಪ್ರವೇಶದ ಬಗ್ಗೆ ವಿವಾದವಿತ್ತು. ಎರಡೂ ಕಡೆಯಿಂದ ಭಾರೀ ಕಲ್ಲು ತೂರಾಟ ನಡೆದಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಕಾರವಾರ ಮೆಡಿಕಲ್ ಕಾಲೇಜು; ಆತಂಕದಲ್ಲಿ ದಲಿತರು!

ಈ ಬಗ್ಗೆ ಮಿಷನ್ ಅಂಬೇಡ್ಕರ್ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ”ದಲಿತರೇ, ದೇವಸ್ಥಾನ ಪ್ರವೇಶಿಸಬೇಡಿ..” ಎಂದು ಮನವಿ ಮಾಡಲಾಗಿದೆ. “ಎಸ್‌ಸಿ ಯುವತಿಯೊಬ್ಬಳನ್ನು ಶಿವನ ದೇವಾಲಯಕ್ಕೆ ಪ್ರವೇಶಿಸದಂತೆ ತಡೆದು ದೇವಸ್ಥಾನದೊಳಗೆ ಪ್ರಾರ್ಥನೆ ಸಲ್ಲಿಸದಂತೆ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ತಡೆದಿದ್ದಾರೆ. ದಲಿತರ ವಿರೋಧಿಗಳು ಸಮಾನ ಸ್ಥಾನಮಾನವನ್ನು ಒಪ್ಪುವುದಿಲ್ಲ. ಅವರಲ್ಲಿನ ಜಾತೀಯತೆ ಮತ್ತೆ ಪ್ರದರ್ಶನವಾಗಿದೆ” ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದ್ದು, ಘಟನೆಯ ವಿಡಿಯೋ ಶೇರ್ ಮಾಡಲಾಗಿದೆ.

ದಲಿತ ಸಮುದಾಯದ ಪ್ರೇಮಲಾಲ್ ಅವರು ನೀಡಿರುವ ದೂರಿನಲ್ಲಿ, ‘ಭಯ್ಯಾ ಲಾಲ್ ಪಟೇಲ್’ ನೇತೃತ್ವದ ಗುಂಪು ದಲಿತ ಹುಡುಗಿಯರನ್ನು ದೇವಸ್ಥಾನಕ್ಕೆ ಪ್ರವೇಶಿಸದಂತೆ ತಡೆದಿದೆ ಎಂದು ಆರೋಪಿಸಿದ್ದಾರೆ.

ಪೊಲೀಸರು 17 ಆರೋಪಿಗಳು ಮತ್ತು 25 ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 147, 148, 294, 323, 506, 505 (2) ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ರವೀಂದ್ರರಾವ್ ಮರಾಠ ಎಂಬುವವರು ನೀಡಿರುವ ದೂರಿನ ಮೇರೆಗೆ, ಪ್ರೇಮಲಾಲ್ ಹಾಗೂ ಇತರ 33 ಜನರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪ್ರಕರಣ ದಾಖಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

0
ಶ್ರೀಮತಿ ಖೋಂಗಮೆನ್ (1) ಅವರು, ಈಗ್ಗೆ ಮೂರು ದಿನಗಳ ಹಿಂದೆ ಈ ಸಮ್ಮೇಳನದ ಕುರಿತು ನನಗೆ ವಿವರಗಳನ್ನು ನೀಡಿದರು. ಈ ಕಾರ್ಯಕ್ರಮದ ಆಯೋಜನೆ ಮತ್ತು ವಿವರಗಳನ್ನು ನೋಡಿ ನನಗೆ ಸಂತೋಷವಾಯಿತು. ಈ ತರಹದ...