Homeಕರ್ನಾಟಕಕಾರವಾರ ಮೆಡಿಕಲ್ ಕಾಲೇಜು; ಆತಂಕದಲ್ಲಿ ದಲಿತರು!

ಕಾರವಾರ ಮೆಡಿಕಲ್ ಕಾಲೇಜು; ಆತಂಕದಲ್ಲಿ ದಲಿತರು!

- Advertisement -
- Advertisement -

ಕಾರವಾರ ಮೆಡಿಕಲ್ ಕಾಲೇಜು ಮತ್ತೆ ಕೆಟ್ಟ ಕಾರಣಕ್ಕಾಗಿ ಸುದ್ದಿಯಾಗುತ್ತಿದೆ. ಅವ್ಯವಹಾರ, ಅವಾಂತರದಿಂದ ಕೋಟ್ಯಾಂತರ ರೂ. ಅನುದಾನ ಈ ಕಾಲೇಜಿನ ಆಡಳಿತದಲ್ಲಿ ಆಧ್ವಾನವಾಗಿದೆ ಎಂಬ ನಿರಂತರ ಆರೋಪದ ನಡುವೆಯೇ ದಲಿತ ವರ್ಗದ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾಗಿ ಕಿರುಕುಳ ಕೊಡಲಾಗುತ್ತಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ.

ಜಾರಕಿಹೊಳಿ ಸಿಡಿ ಕೇಸ್‌ನ ಸಂತ್ರಸ್ತೆಯ ಪರ ವಕೀಲರಾಗಿದ್ದ ಹೋರಾಟಗಾರ-ವಕೀಲ ಜಗದೀಶ್ ಈಚೆಗೆ ಮೆಡಿಕಲ್ ಕಾಲೇಜಿನ ಡೀನ್-ಡೈರೆಕ್ಟರ್ ಡಾ.ಗಜಾನನ ನಾಯಕ್‌ರನ್ನು ಭೇಟಿಮಾಡಿ 9 ಆರೋಪಗಳ ಪಟ್ಟಿ ನೀಡಿ 7 ದಿನದಲ್ಲಿ ಸೂಕ್ತ ಸಮಜಾಯಿಷಿ ಕೊಡುವಂತೆ ಕೇಳಿದ್ದಾರೆ; ಇಲ್ಲದಿದ್ದರೆ ತನಿಖೆಗಾಗಿ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ಕೊಟ್ಟಿದ್ದಾರೆ. ಈ ನಡುವೆ ಮೆಡಿಕಲ್ ಕಾಲೇಜಿನ ಆಡಳಿ ವರ್ಗ ತನ್ನ ಅಕ್ರಮ-ಅನ್ಯಾಯ ಮುಚ್ಚಿಹಾಕಲು ದಲಿತ ದಮನ ಅಭಿಯಾನ ಶುರು ಹಚ್ಚಿಕೊಂಡಿದೆ ಎಂಬುದು ದಾಖಲೆ ಸಮೇತ ಬಹಿರಂಗವಾಗಿದೆ.

ಕಾರವಾರ ರಿಪಬ್ಲಿಕ್!

ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಿಮ್ಸ್) 2014ರಲ್ಲಿ ಶುರುವಾದಾಗ ಡಾ.ಭರತ್ ನಿರ್ದೇಶಕರಾಗಿ ನೇಮಕವಾಗಿದ್ದರು; ಕೆಲವೇ ತಿಂಗಳಲ್ಲಿ ಡಾ.ಭರತ್ ರಾಜೀನಾಮೆ ನೀಡಿದಾಗ ಆಯ್ಕೆ ಪಕ್ರಿಯೆ ಮೂಲಕ ದಲಿತ ಸಮುದಾಯದ ಡಾ.ಶಿವಾನಂದ ದೊಡ್ಮನಿ ನೇಮಕವಾದರು. ’ಕಾರವಾರ ರಿಪಬ್ಲಿಕ್’ ಎಂದೇ ಜನಜನಿವಾಗಿರುವ ಅಕ್ರಮ ವ್ಯವಹಾರ-ಬ್ಲಾಕ್‌ಮೇಲ್‌ನ ಸ್ಥಳೀಯ ಕೂಟವೊಂದು ಡಾ.ಶಿವಾನಂದ ದೊಡ್ಮನಿಯವರನ್ನು ಪಳಗಿಸಲು ವಿಫಲವಾದಾಗ ಎತ್ತಂಗಡಿಗೆ ಪ್ರಯತ್ನಿಸಿತು.

ದಕ್ಷರಾಗಿದ್ದ ದೊಡ್ಮನಿ ಬೆನ್ನಿಗೆ ಅಂದಿನ ಜಿಲ್ಲಾ ಉಸ್ತುವಾರಿ ಮಂತ್ರಿ ದೇಶಪಾಂಡೆ ಬಲವಾಗಿ ನಿಂತಿದ್ದರು. ಆದರೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಕಾರವಾರ ರಿಪಬ್ಲಿಕ್ ಡಾ.ದೊಡ್ಮನಿಯವರನ್ನು ವರ್ಗಾಯಿಸಲು ಯಶಸ್ವಿಯಾಯಿತು; ಅಷ್ಟೇ ಅಲ್ಲ ಮೆಡಿಕಲ್ ಕಾಲೇಜಿನ ಡೀನ್-ಡೈರೆಕ್ಟರ್‌ಗೆ ನಿಗದಿಪಡಿಸಿರುವ ಅರ್ಹತೆ ಇಲ್ಲದವರೆನ್ನಲಾಗಿರುವ ಡಾ.ಗಜಾನನ ನಾಯಕ್‌ರನ್ನು ಹುಬ್ಬಳ್ಳಿ ಕೆಎಂಸಿಯಿಂದ ಆ ಸ್ಥಾನಕ್ಕೆ ತಂದುಕೊಂಡಿತು ಎನ್ನಲಾಗುತ್ತಿದೆ. ಡಾ.ದೊಡ್ಮನಿ ನಂತರ ನ್ಯಾಯವಾಗಿ ಪರಿಶಿಷ್ಠ ವರ್ಗದ ಡಾ.ಹೇಮಗಿರಿ ಅವರಿಗೆ ಅವಕಾಶ ಸಿಗಬೇಕಾಗಿತ್ತು. ಆದರೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಡಾ.ಹೇಮಗಿರಿಯವರಿಗೆ ಮೋಸ-ವಂಚನೆ ಮಾಡಲಾಯಿತು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಡಾ. ಗಜಾನನ ನಾಯಕ್

ಡಾ.ದೊಡ್ಮನಿಯವರಿಂದ ತೆರವಾದ ಸ್ಥಾನಕ್ಕೆ ಖಾಯಂ ನಿರ್ದೇಶಕರನ್ನು ನೇಮಿಸಲು 2022ರಲ್ಲಿ ಪ್ರಕ್ರಿಯೆಯ ಕಣ್ಕಟ್ಟು ನಡೆಯಿತು. ನಿಯಮದಂತೆ ಮೊದಲ ನಿರ್ದೇಶಕರ ನಂತರ ಆ ಪೀಠಕ್ಕೆ ಬರುವವರು ಅದೇ ಸಂಸ್ಥೆಯಲ್ಲಿ ಸೇವಾ ಹಿರಿತನ ಮತ್ತಿತರ ಅರ್ಹತೆ ಇರುವವರಾಗಿರಬೇಕು. ಅದರಂತೆ ಕಿಮ್ಸ್‌ನಲ್ಲಿ ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಹೇಮಗಿರಿ ಸಕಲ ಅರ್ಹತೆ ಹೊಂದಿದ್ದರು. ಆದರೆ ಹೇಮಗಿರಿಯವರನ್ನು ವ್ಯವಸ್ಥಿತವಾಗಿ ಬದಿಗೆ ಸರಿಸಿ ಅರ್ಹತೆಯಿಲ್ಲದ ಡಾ.ಗಜಾನನ ನಾಯಕ್‌ರನ್ನು ಹಿಂಬಾಗಿಲಿನಲ್ಲಿ ಕಿಮ್ಸ್‌ನ ನಿರ್ದೇಶಕರಾಗಿ ಪ್ರತಿಷ್ಠಾಪಿಸಲಾಯಿತೆಂಬ ಆರೋಪ ದಟ್ಟವಾಗಿದೆ.

ರಾಜ್ಯಪಾಲರ ಹೆಸರಲ್ಲಿ ವಂಚನೆ!

ವೈದ್ಯಕೀಯ ಶಿಕ್ಷಣ ಇಲಾಖೆಯ ಆಧೀನ ಕಾರ್ಯದರ್ಶಿ ದಿನಾಂಕ:19.08.2022ರಂದು ಹೊರಡಿಸಿರುವ ಅಧಿಸೂಚನೆ ಸಂಖ್ಯೆ:ಎಂಇಡಿ 379 ಎಂಪಿಎಸ್ 2022 ಪ್ರಕಾರ ಡಾ.ಗಜಾನನ ನಾಯಕ್ ಕಿಮ್ಸ್‌ನ ಪ್ರಥಮ ನಿರ್ದೇಶಕರು! ಹಾಗಾದರೆ 2014ರಲ್ಲಿ ಸ್ಥಾಪನೆಯಾಗಿ 2016ರಲ್ಲಿ ಕಾರ್ಯಾರಂಭ ಮಾಡಿದ ಕಿಮ್ಸ್‌ಗೆ ಡಾ.ಗಜಾನನ ನಾಯಕ್ ಬರುವ ಮೊದಲು ನಿರ್ದೇಶಕರೇ ಇರಲಿಲ್ಲವೇ? ನೇಮಕಾತಿ ಸಮಿತಿ ಡೈರೆಕ್ಟರ್-ಡೀನ್ ಎಂದು ಆಯ್ಕೆಮಾಡಿ ಕಳಿಸಿದ್ದ ಡಾ.ಭರತ್ ಯಾರು? ಆ ಬಳಿಕ ನಾಲ್ಕು ವರ್ಷ ಡೈರೆಕ್ಟರ್-ಡೀನ್ ಹುದ್ದೆ ನಿರ್ವಹಿಸಿದ ಡಾ.ದೊಡ್ಮನಿ ಎಷ್ಟನೆಯವರು? ಎಂಬ ಪ್ರಶ್ನೆಗಳು ಇಲ್ಲಿ ಸಹಜವಾಗಿ ಉದ್ಭವಿಸುತ್ತವೆ. ಅರ್ಹತೆಯಿಲ್ಲದ ಡಾ.ಗಜಾನನ ನಾಯಕ್‌ರನ್ನು ಕಿಮ್ಸ್‌ನ ಆಯಕಟ್ಟಿನ ಅಧಿಕಾರ ಸ್ಥಾನಕ್ಕೆ ತರುವ ಒಳ ಸಂಚಿನಿಂದ-ಮೊದಲ ನಿರ್ದೇಶಕರ ನಂತರದ ನಿರ್ದೇಶಕ, ಸಂಬಂಧಿಸಿದ ಸಂಸ್ಥೆಯಲ್ಲಿರುವವರೇ ಆಗಿರಬೇಕೆಂಬ ನಿಯಮದ ಕಣ್ಣಿಗೆ ಮಣ್ಣೆರಚಲು-ಈ ಸುಳ್ಳು ಸೃಷ್ಟಿಸಲಾಗಿದೆ ಎಂದು ತರ್ಕಿಸಲಾಗುತ್ತಿದೆ.

ರಾಜ್ಯಪಾಲರ ಹೆಸರಿನಲ್ಲಿರುವ ಅದೇ ಆದೇಶದಲ್ಲಿ ಡಾ.ಗಜಾನನ ನಾಯಕ್ ಕಿಮ್ಸ್‌ನ ನ್ಯಾಯಶಾಸ್ತ್ರ ಪ್ರಾಧ್ಯಾಪಕ ಮತ್ತು ಆ ವಿಭಾಗದ ಮುಖ್ಯಸ್ಥನೆಂದು ನಮೂದಿಸಲಾಗಿದೆ. ಆದರೆ ಡಾ.ನಾಯಕ್ ಹುಬ್ಬಳ್ಳಿ ಕೆಎಂಸಿಯ ಸದ್ರಿ ವಿಷಯ ವಿಭಾಗದ ಎಚ್‌ಒಡಿಯಾಗಿದ್ದರು. ಈಗ ಕಿಮ್ಸ್ ಡೈರೆಕ್ಟರ್ ಆಗಿದ್ದರೂ ವೇತನ ಕೆಎಮ್‌ಸಿಯಿಂದಲೆ ಬಟವಾಡೆಯಾಗುತ್ತಿದೆ. ಅಂದರೆ ಕೆಎಂಸಿಯಿಂದ ಡಾ.ನಾಯಕ್ ಅಕ್ರಮವಾಗಿ ಕಿಮ್ಸ್‌ಗೆ ಎರವಲು ಬಂದಿದ್ದಾರೆ. ಕಿಮ್ಸ್ ಆರಂಭವಾದಂದಿನಿಂದ ಡಾ.ಪ್ರಮೋದ್ ನ್ಯಾಯಶಾಶ್ತ್ರ ವಿಭಾಗದ ಮುಖ್ಯಸ್ಥರಾಗಿದ್ದಾರೆಂದು ದಾಖಲೆಗಳು ಹೇಳುತ್ತವೆ. ಒಂದೇ ಹುದ್ದೆಯಲ್ಲಿ ಇಬ್ಬರು ಕಾರ್ಯನಿರ್ವಹಿಸಲು ಅವಕಾಶವಿದೆಯೆ? ಒಟ್ಟಿನಲ್ಲಿ ಎಲ್ಲ ನಿಯಮ ಗಾಳಿಗೆ ತೂರಿ ಪರಿಶಿಷ್ಟ ವರ್ಗದ ಡಾ.ಹೇಮಗಿರಿಯವರಿಗೆ ಅನ್ಯಾಯ ಮಾಡಿರುವುದು ಸ್ಪಷ್ಟವಾಗುತ್ತದೆ. ರೆಸಿಡೆಂಟ್ ವಿದ್ಯಾರ್ಥಿನಿಯೊಬ್ಬಳಿಂದ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದು ಡಾ.ಹೇಮಗಿರಿಯವರನ್ನು ಮಾನಸಿಕವಾಗಿ ಕುಗ್ಗಿಸಿತು. ಇದನ್ನು ಬೇಕೆಂದೇ ಮಾಡಿಸಲಾಗಿದೆ ಎಂಬ ಆರೋಪವೂ ಎದುರಾಯಿತು. ವಾಸ್ತವ ಅರಿತ ಆ ರೆಸಿಡೆಂಟ್ ವಿದ್ಯಾರ್ಥಿನಿ ಹಿಂದೆ ಸರಿದರೆನ್ನುವ ಮಾತುಗಳು ಈಗಲೂ ಮೆಡಿಕಲ್ ಕಾಲೇಜಿ ವಠಾರದಲ್ಲಿ ಕೇಳಿಬರುತ್ತದೆ.

ದಲಿತರಿಗೆ ಕಿರುಕುಳ

ಯಾರೋ ಮಾಡಿದ ಭ್ರಷ್ಟಾಚಾರ-ಅವಾಂತರ ಅಪರಾಧ ಅಮಾಯಕ ದಲಿತರ ಮೇಲೆ ಹೊರಿಸಲಾಗುತ್ತಿದೆ ಎಂಬ ಅಳಲು ಕಿಮ್ಸ್‌ನಲ್ಲಿದೆ. ಆರ್ಥೋಪಿಡಿಕ್ ವಿಭಾಗದಲ್ಲಿ ಅಂಗವಿಕಲ ಪ್ರಮಾಣ ಪತ್ರ ಕೊಡಲು ಲಂಚ ಪಡೆಯಲಾಗುತ್ತದೆ ಎಂಬ ಗುಲ್ಲೆದ್ದಿತ್ತು. ಸಹಾಯಕ ಪ್ರಾಧ್ಯಾಪಕ ಡಾ.ಶ್ರೀಶ ತಪ್ಪೊಪ್ಪಿಕೊಂಡಿದ್ದರು. ಈ ಹಗರಣದಲ್ಲಿ ದಲಿತ ಸಮುದಾಯದ ಡಾ.ಮಧುಕರ್‌ರನ್ನು ಸಿಕ್ಕಿಹಾಕಿಸಲು ಕುತಂತ್ರ ಮಾಡಲಾಯಿತು. ತಾನು ಅರ್ಥೋಪಿಡಿಕ್ ವಿಬಾಗದ ಮುಖ್ಯಸ್ಥ ಡಾ.ಮಧುಕರ್ ಸೂಚನೆಯಂತೆ ಲಂಚ ಪಡೆದಿರುವುದಾಗಿ ಸುಳ್ಳು ಹೇಳಿಕೆಯನ್ನು ಲಂಚ ಪಡೆದಿದ್ದ ಡಾ.ಶ್ರೀಶರಿಂದ ಆಡಳಿತಗಾರರು ಪಡೆದುಕೊಂಡರು. ತಮ್ಮ ಮಾತು ಕೇಳದ ಡಾ.ಮಧುಕರ್ ಮೇಲೆ ಆಡಳಿಗಾರರಿಗೆ ಸಿಟ್ಟಿತ್ತು. ಮಾಜಿ ಶಾಸಕರೊಬ್ಬರ ಮಧ್ಯಪ್ರವೇಶದಿಂದ ಪ್ರಕರಣವನ್ನು ಪರಿಸಮಾಪ್ತಿಗೊಳಿಸಲಾಯಿತು. ಆದರೆ ಇವತ್ತಿಗೂ ಲಂಚದ ಹಣ 35 ಸಾವಿರ ಎಲ್ಲಿ ಹೋಯಿತೆಂಬುದು ಯಾರಿಗೂ ಗೊತ್ತಿಲ್ಲ!

ಫೋರ್ಜರಿ ನೇಮಕಾತಿಗಳು!

ಕಿಮ್ಸ್‌ನಲ್ಲಿ ಅಕ್ರಮ ನೇಕಾತಿಗಳ ಮೂಲಕ ದಲಿತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬುದು ಹಳೆಯ ಆರೋಪ. ವೃಂದ ಹಾಗು ನೇಮಕಾತಿ ನಿಯಮದಂತೆ ವೈದ್ಯಕೀಯ ಕಾಲೇಜಿನ ಸಹಾಯಕ ಅಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದ ಅಭ್ಯರ್ಥಿಗೆ 38 ವರ್ಷ ಗರಿಷ್ಠ ವಯೋಮಿತಿ. ಆದರೆ ದಂತ ವೈದ್ಯಕೀಯದ ಸಹಾಯಕ ಅಧ್ಯಾಪಕ ನೇಮಕಾತಿಗೆ 25.11.2020ರಂದು ನಡೆದ ನೇರ ಸಂದರ್ಶನದಲ್ಲಿ 39 ವರ್ಷ ಮೀರಿದ ಡಾ.ವಿನುತಾ ಹೆಗಡೆಯವರನ್ನು ಆಯ್ಕೆ ಮಾಡಲಾಗಿದೆ! ಹವ್ಯಕ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಡಾ.ವಿನುತಾ ಹೆಗಡೆ ಶಾಲಾ ದಾಖಲಾತಿಗಳ ಪ್ರಕಾರ ಜನ್ಮ ದಿನಾಂಕ 5.11.1981. ವಯೋಮಿತಿ ಮೀರಿದ ಡಾ.ವಿನುತಾ ಅರ್ಜಿ ಸಲ್ಲಿಸಲಿಕ್ಕೂ ಅರ್ಹರಲ್ಲ; ಅರ್ಜಿ ಹಾಕಿದರೂ ಅದನ್ನು ನಿಯಮದಂತೆ ತಿರಸ್ಕರಿಸಬೇಕು.

ಜಗದೀಶ್

ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದ 6.11.2020ಕ್ಕೆ ಡಾ.ವಿನುತಾರವರ ವಯಸ್ಸು 38 ವರ್ಷವೆಂದು ಸಾಧಿಸಲು ಜನ್ಮ ದಾಖಲೆಯನ್ನು 5.11.1982 ಎಂದು ತಿದ್ದುಪಡಿ ಮಾಡಲಾಗಿದೆ ಎಂಬ ದೂರು ವೈದ್ಯಕೀಯ ಶಿಕ್ಷಣ ಇಲಾಖೆಗೂ ಹೋಗಿದೆ. ಈ ಆಯ್ಕೆ ಪಟ್ಟಿಯಲ್ಲಿ ವಿನುತಾ ಹೆಗಡೆ ನಂತರದ ಸ್ಥಾನದಲ್ಲಿದ್ದ ಪರಿಶಿಷ್ಠ ಪಂಗಡದ ಡಾ.ರವಿ ತಳವಾರ್‌ರಿಗೆ ವಂಚಿಸಲಾಗಿದೆ. ಡೀನ್-ಡೈರೆಕ್ಟರ್ ಡಾ.ಗಜಾನನ ನಾಯಕರ ಪರಮಾಪ್ತ ಅನೆಸ್ಥೇಸಿಯಾ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಭಟ್ಟರ ಮಡದಿ ಈ ಡಾ.ವಿನುತಾ ಹೆಗಡೆ ಎಂಬುದು ಗಮನಾರ್ಹ ಸಂಗತಿ.

ಅಂಕೋಲಾದ ಕೆಎಲ್‌ಇ ಆಸ್ಪತ್ರೆಯಲ್ಲಿನ ಅನುಭವವನ್ನು ಬೆಳಗಾವಿ ಕೆಎಲ್‌ಇ ವೈದ್ಯಕೀಯ ಕಾಲೇಜಿನ ಅನುಭವವೆಂದು ತಿರಿಚಿ ಜನರಲ್ ಮೆಡಿಸಿನ್ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಹುದ್ದೆ ಪಡೆದಿರುವ ಡಾ.ಅಮಿತ್ ಕಾಮತ್ ಪರಿಶಿಷ್ಟ ಪಂಗಡದ ಡಾ.ರಾಜು ತಳವಾರ್‌ರಿಗೆ ನಿರಂತರವಾಗಿ ಕಾಡುತ್ತಿದ್ದಾರೆಂಬ ದೂರುಗಳಿದ್ದರೆ, ಪೀಡ್ರಿಯಾಟ್ರಿಕ್ ವಿಭಾಗದ ಡಾ.ರಾಜಕುಮಾರ್ ಮರೋಳಿ ದಲಿತ ಸಮುದಾಯದ ವಿದ್ಯಾರ್ಥಿಯೋರ್ವನನ್ನು ಪ್ರಾಯೋಗಿಕ ಪರೀಕ್ಷೆಯಲ್ಲಿ ಸುಖಾಸುಮ್ಮನೆ ಅನುತ್ತೀರ್ಣಗೊಳಿಸಿದ್ದಾರೆಂಬ ಪ್ರಕರಣ ಹೈಕೋರ್ಟ್ ಕಟಕಟೆಯನ್ನೇರಿತ್ತು. ’ಹಾವೇರಿಯಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ಡಾ.ರಾಜಕುಮಾರ್ ಮರೋಳಿ ದಾವಣಗೆರೆ ವೈದ್ಯಕೀಯ ಕಾಲೇಜಿನಿಂದ ಫೋರ್ಜರಿ ಅನುಭವ ಪತ್ರ ಪಡೆದು ಪ್ರೊಫೆಸರ್ ಹುದ್ದೆ ಪಡೆದಿದ್ದಾರೆ; ತನಗೆ ಅಕ್ರಮವಾಗಿ ಉದ್ಯೋಗ ದಯಪಾಲಿಸಿರುವ ಡೈರೆಕ್ಟರ್ ಋಣ ತೀರಿಸಲು ದಲಿತ ವರ್ಗದ ವಿದ್ಯಾರ್ಥಿ ಸಂದೀಪ್‌ರನ್ನು ಪ್ರಾಯೋಗಿಕ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸಿದ್ದಾರೆ’ ಎಂಬ ಆರೋಪವಿದೆ.

ದಲಿತ ವಿದ್ಯಾರ್ಥಿ ಬಲಿ!

ಕಾರವಾರ ಮೆಡಿಕಲ್ ಕಾಲೇಜಿನ ಆಡಳಿತಗಾರರ ದಲಿತ ದ್ವೇಷಕ್ಕೆ ಪಾಪದ ವಿದ್ಯಾರ್ಥಿಗಳೂ ಬಲಿಯಾಗುತ್ತಿರುವುದು ಆಘಾತಕಾರಿಯಾಗಿದೆ. ಕಳೆದ ಫೆಬ್ರುವರಿ 2022ರಲ್ಲಿ ಜರುಗಿದ ಎಂಬಿಬಿಎಸ್ ಅಂತಿಮ ವರ್ಷದ ಪರೀಕ್ಷೆಯಲ್ಲಿ ಪರಿಶಿಷ್ಟ ವರ್ಗದ ಸಂದೀಪ್ ಎಂಬ ಪ್ರತಿಭಾನ್ವಿತ ವಿದ್ಯಾರ್ಥಿ ಅನುತ್ತೀರ್ಣನಾಗುವಂತೆ ಮಾಡಿದ್ದು ಆ ಸಮುದಾಯದ ವಿದ್ಯಾರ್ಥಿಗಳನ್ನು ಕಂಗೆಡಿಸಿಬಿಟ್ಟಿದೆ; ಹಾಸ್ಟೆಲ್‌ನ ಅವ್ಯವಸ್ಥೆ, ಕಳಪೆ ಊಟ-ಉಪಹಾರ ಮತ್ತು ಸರಕಾರದಿಂದ ಬರುವ ಸವಲತ್ತು ಒದಗಿಸದಿರವುದನ್ನು ಸಂದೀಪ್ ಪ್ರಶ್ನಿಸಿದ್ದು ಬೋಗಸ್ ’ಬಿಲ್’ವಿದ್ಯಾ ಪಾರಂಗತರ ಕಣ್ಣು ಕೆಂಪಾಗಿಸಿತ್ತು ಎನ್ನಲಾಗಿದೆ.

ಸಾಮಾನ್ಯವಾಗಿ ವೈದ್ಯಕೀಯ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಯಲ್ಲಿ ನಪಾಸಾಗುವುದಿಲ್ಲ; ಪರೀಕ್ಷಕರೂ ಫೇಲ್ ಮಾಡುವಷ್ಟು ಕಟ್ಟುನಿಟ್ಟಾಗಿರುವುದಿಲ್ಲ. ಸಂದೀಪ್ ಪೀಡ್ರಿಯಾಟ್ರಿಕ್ಸ್ ಪ್ರಾಕ್ಟಿಕಲ್ ಒಂದನ್ನು ಬಿಟ್ಟು ಬೇರೆಲ್ಲಾ ಥಿಯರಿ ಹಾಗು ಪ್ರಾಕ್ಟಿಕಲ್ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಪಾಸಾಗಿದ್ದ.

ಇದನ್ನೂ ಓದಿ: ಮೋದಿ ಸರ್ಕಾರ ಭಾರತದ ಬಹುತ್ವವನ್ನು ಧ್ವಂಸಗೊಳಿಸುತ್ತಿದೆ: ಅಮರ್ತ್ಯ ಸೇನ್

ಆಘಾತಗೊಂಡ ಸಂದೀಪ್ ಹೈಕೋರ್ಟ್ ಮೊರೆಹೋದ. ರಿಟ್ ಅರ್ಜಿ (ಸಂಖ್ಯೆ:10694/2022) ವಿಚಾರಣೆ ನಡೆಸಿದ ಹೈಕೋರ್ಟ್ ಸಂದೀಪ್‌ಗೆ ಮರು ಪ್ರಾಯೋಗಿಕ ಪರೀಕ್ಷೆ ನಡೆಸುವಂತೆ ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಆದೇಶಿಸಿತು. ಬೆಂಗಳೂರಿನ ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಮರು ಪ್ರಯೋಗಿಕ ಪರೀಕ್ಷೆಯಲ್ಲಿ ಸಂದೀಪ್ ಉತ್ತಮ ಅಂಕ ಗಳಿಸಿ ಉತ್ತೀರ್ಣನಾದ! ತಮ್ಮ ಹಿಡನ್ ಹಿತಾಸಕ್ತಿ ಮತ್ತು ಪ್ರತಿಷ್ಠೆಗೆ ಮುಗ್ಧ ವಿದ್ಯಾರ್ಥಿಗಳ ಭವಿಷ್ಯವನ್ನೇ ಕರಾಳವಾಗಿಸುವ ಬರ್ಬರ ಕ್ರೌರ್ಯಕ್ಕೂ ಕಾರವಾರ ಮೆಡಿಕಲ್ ಕಾಲೇಜಿನ ಆಡಳಿತಗಾರರು ಹೇಸುವುದಿಲ್ಲ ಎಂಬುದೀಗ ಜಗಜ್ಜಾಹೀರಾಗಿಹೋಗಿದೆ!

ಕಿಮ್ಸ್‌ನ ನಿರ್ದೇಶಕ ಡಾ.ಗಜಾನನ ನಾಯಕ್ ಮತ್ತು ಅಧೀಕ್ಷಕ ಡಾ.ಶಿವಾನಂದ ಕುಡ್ತರ್‌ಕರ್‌ರ ದಲಿತ ದ್ವೇಷದಿಂದ ನಿರಪರಾಧಿ ವಿದ್ಯಾರ್ಥಿ ಸಂದೀಪ್ ಕಷ್ಟ-ನಷ್ಟಕ್ಕೆ ಈಡಾಗಿದ್ದಾನೆಂಬುದು ಮೇಲಿನ ಪ್ರಕರಣದಿಂದ ತಿಳಿಯುತ್ತದೆ. ಆತ ಇಂಟರ್‍ನ್‌ಶಿಪ್‌ಅನ್ನು ನಾಲ್ಕು ತಿಂಗಳು ವಿಳಂಬವಾಗಿ ಆರಂಭಿಸುವಂತಾಗಿದೆ. ’ಗುರು’ಗಳ ದ್ರೋಹದಿಂದಾದ ಈ ವಿಳಂಬ ಮುಂದೆ ಆತನನ್ನು ಹಲವು ಅವಕಾಶಗಳಿಂದ ವಂಚಿತನಾಗಿಸುವ ಸಾಧ್ಯತೆಯೂ ಇದೆ. ಇಂಟರ್‍ನಶಿಪ್‌ಅನ್ನು ಕಾರವಾರದಲ್ಲೇ ಮಾಡುತ್ತಿರುವ ಸಂದೀಪ್‌ಗೆ ಹೈಕೋರ್ಟ್ ತೀರ್ಪಿನಿಂದ ಮುಖಭಂಗವಾಗಿರುವ ’ಗುರು’ಗಳು ಕಾಡುತ್ತಲೇ ಇದ್ದಾರಂತೆ; “ನೀನು ಅದ್ಹೇಗೆ ಇಟರ್‍ನಶಿಪ್ ಮುಗಿಸುತ್ತೀಯೋ ನೋಡ್ತೇವೆ” ಎಂಬ ಬೆದರಿಕೆಯನ್ನೂ ಹಾಕಿದ್ದಾರನ್ನಲಾಗಿದೆ. ಕಿರುಕುಳದಿಂದ ಸಂದೀಪ್‌ಗೆ ಅಭದ್ರತೆ, ಭಯ ಶುರುವಾಗಿದೆ! ಈ ನಪಾಸು ಪ್ರಕರಣ ಮತ್ತು ಒಂದರ ಹಿಂದೊಂದರಂತೆ ನಡಯುತ್ತಿರುವ ದಾಳಿಯಿಂದ ಕಿಮ್ಸ್‌ನ ದಲಿತ ವಿದ್ಯಾರ್ಥಿ-ಸಿಬ್ಬಂದಿ ಸಮೂಹ ಆತಂಕದಲ್ಲಿ ದಿನ ದೂಡುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ದಲಿತೇತರ ಬೋಧಕ ಸಿಬ್ಬಂದಿಯೊಬ್ಬರು ’ನ್ಯಾಯಪಥ’ಕ್ಕೆ ಹೇಳಿದರು.

ಅನರ್ಹರ ಆಡುಂಬೊಲ

ಮತ್ತೊಂದಡೆ ಕಿಮ್ಸ್, ನ್ಯಾಷನಲ್ ಮೆಡಿಕಲ್ ಕಮಿಷನ್ (ಎನ್‌ಎಂಸಿ) ನಿಗದಿಪಡಿಸಿರುವ ಅರ್ಹತೆ-ಅನುಭವಗಳಿಲ್ಲದವರ ಆಡಳಿತಕ್ಕೊಳಪಟ್ಟಿದೆ ಎಂಬ ಕೂಗೆದ್ದಿದೆ. ಡೀನ್-ಡೈರೆಕ್ಟರ್ ಡಾ.ಗಜಾನನ ನಾಯಕ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತರ್‌ಕರ್ ಅಲಂಕರಿಸಿರುವ ಹುದ್ದೆಗೆ ಬೇಕಾದ ಅರ್ಹತೆಯೇ ಇಲ್ಲ; ಇವರು ನೇಮಿಸಿಕೊಂಡಿರುವ ಕೆಲವು ಅಧ್ಯಾಪಕರು ಮತ್ತಿತರ ಸಿಬ್ಬಂದಿಗೂ ಆ ಸ್ಥಾನಕ್ಕೆ ಬೇಕಾದ ಅರ್ಹತೆ ಹೊಂದಿಲ್ಲ. ಹೀಗಾಗಿ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಋಣಾಯ್ಮಕ ಪರಿಣಾಮ ಆಗುತ್ತಿದೆ ಎನ್ನುವ ಪುಕಾರುಗಳಿವೆ.

ಎನ್‌ಎಂಸಿ ನಿಯಮದಂತೆ ವೈದ್ಯಕೀಯ ಕಾಲೇಜಿನಲ್ಲಿ ನಿರ್ದೇಶಕನಾಗಬೇಕಾದರೆ ಕನಿಷ್ಟ ಐದು ವರ್ಷ ಪ್ರಾಧ್ಯಾಪಕನಾಗಿ ಪಾಠಮಾಡಿದ ಅನುಭವವಿರಬೇಕು. ಕಾಲೇಜಿನ ಅಧೀಕ್ಷಕನಾಗಲು ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ (ಎಂಡಿ/ಎಂಎಸ್) ಕನಿಷ್ಠ ಹತ್ತು ವರ್ಷ ಆಡಳಿತದಲ್ಲಿ ಅನುಭವವಿರಬೇಕು. ಈ ಅರ್ಹತೆ ಡಾ.ಗಜಾನನ ನಾಯಕ್ ಮತ್ತು ಡಾ.ಶಿವಾನಂದ ಕುಡ್ತರ್‌ಕರ್‌ಗೆ ಇಲ್ಲ. ಆರೋಗ್ಯ ಇಲಾಖೆಯ ನೌಕರರಾದ ಡಾ.ಕುಡ್ತರ್‌ಕರ್ ಮೆಡಿಕಲ್ ಕಾಲೇಜಿಗೆ ಬರಬಹುದೇ? ಎಂಬ ಪ್ರಶ್ನೆ ಎದ್ದಿದೆ.

ಅನರ್ಹ ಮೆಡಿಕಲ್ ಸುಪರಿಂಡೆಂಟ್ ಇರುವುದರಿಂದ ಎಂಸಿಐ 2018-19ರಲ್ಲಿ ಕಿಮ್ಸ್ ಮಾನ್ಯತೆ ರದ್ದುಪಡಿಸಿತ್ತು. ಆಗ ಅನರ್ಹ ಅಧೀಕ್ಷನನ್ನು ಬದಲಾಯಿಸುವುದಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿ.ಮಂಜುಳಾ ಕೋರ್ಟಿಗೆ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಆದರೆ ಡಾ.ಕುಡ್ತರ್‌ಕರ್ ಇವತ್ತಿಗೂ ಅದೇ ಹುದ್ದೆಯಲ್ಲಿ ಅಬಾಧಿತವಾಗಿ ಮುಂದುವರಿದ್ದಾರಷ್ಟೇ ಅಲ್ಲ, ಕಿಮ್ಸ್ ಆಡಳಿತವನ್ನು ನಿಯಂತ್ರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಡಾ.ಕುಡ್ತರ್‌ಕರ್ ವೈದ್ಯಕೀಯ ಕಲಿಯುತ್ತಿರುವ ತನ್ನ ಮಗನಿಂದ ಗೀತಾ ಬಾನಾವಳಿ ಎಂಬ ಬಾಣಂತಿಗೆ ಅರವಳಿಕೆ ಚುಚ್ಚುಮದ್ದು ಕೊಡಿಸಿ ಅನಾಹತವಾಗಿತ್ತು ಎಂಬ ಆರೋಪ ಹಿಂದೆಎದ್ದಿತ್ತು. ಗೀತಾ ಸಾವಿಗೀಡಾಗಿದ್ದರು. ಆಗ ಕಾರವಾರದಲ್ಲಿ ಆಕ್ರೋಶ-ಪ್ರತಿಭಟನೆ ತಿಂಗಳುಗಟ್ಟಲೆ ಭುಗಿಲೆದ್ದಿತ್ತು; ಶಾಸಕಿ ರೂಪಾಲಿ ನಾಯ್ಕ್ ತಿರುಗಿಬಿದ್ದಿದ್ದರು. ಬೆಂಗಳೂರಿನ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿರುವ ಕೆಲವರ ಕೃಪಾಶ್ರಯದಿಂದ ಡಾ.ಕುಡ್ತರ್‌ಕರ್ ಶಾಸಕಿಗೂ ಕೇರ್ ಮಾಡದೆ ಕಿಮ್ಸ್‌ನಲ್ಲಿ ಉಳಿದುಕೊಂಡದ್ದಾರೆಂಬ ಮಾತು ಸಾಮಾನ್ಯವಾಗಿದೆ!

ಕಿಮ್ಸ್‌ನ ಖರೀದಿ-ಕಾಮಗಾರಿ-ಗುತ್ತಿಗೆ ಮತ್ತಿತರ ಹಣಕಾಸಿನ ವ್ಯವಹಾರದ್ದೇ ಪ್ರತ್ಯೇಕ ಪುರಾಣ ಆಗುವಷ್ಟಿದೆ ಎನ್ನಲಾಗಿದೆ. ಇದೆಲ್ಲವನ್ನು ಸರಿಪಡಿಸಬೇಕಾದ ರಾಜ್ಯ ಸರಕಾರ ಮತ್ತು ದಿಲ್ಲಿಯ ಎನ್‌ಎಂಸಿ (National Medical Council) ಕಣ್ಮುಚ್ಚಿ ಕೂತಿದೆ. ಎನ್‌ಎಂಸಿ ಪರಿಶೀಲನಾ ಸಮಿತಿ ಮುಖ್ಯಸ್ಥ ಡಾ.ಗಂಗಾಧರಯ್ಯ ಕಿಮ್ಸ್ ತಪಾಸಣೆ ಮಾಡದೆ ’ಸನ್ಮಾನ’ ಸ್ವೀಕರಿಸಿ ಹೋಗಿದ್ದಾರೆಂಬ ಆರೋಪ ಗುಲ್ಲೆದ್ದಿದೆ; ನ್ಯಾಯಾಧೀಶರಂತೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿಭಾಯಿಸಬೇಕಿದ್ದ ಎನ್‌ಎಂಸಿ ಮುಖ್ಯಸ್ಥರ ನಡೆ ಅನೇಕ ಅನುಮಾನಗಳಿಗೆ ಎಡೆಮಾಡಿದೆ ಎಂಬ ಚರ್ಚೆ ಕಿಮ್ಸ್ ಕಾರಿಡಾರ್‌ನಲ್ಲಿ ಜೋರಾಗಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...