Homeಮುಖಪುಟಲಡಾಖ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ: '3 ಈಡಿಯಟ್ಸ್' ಚಿತ್ರಕ್ಕೆ ಸ್ಫೂರ್ತಿಯಾದ ವ್ಯಕ್ತಿಯಿಂದ ಪ್ರಧಾನಿಗೆ ಮನವಿ

ಲಡಾಖ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ: ‘3 ಈಡಿಯಟ್ಸ್’ ಚಿತ್ರಕ್ಕೆ ಸ್ಫೂರ್ತಿಯಾದ ವ್ಯಕ್ತಿಯಿಂದ ಪ್ರಧಾನಿಗೆ ಮನವಿ

- Advertisement -
- Advertisement -

ಸೋನಮ್ ವಾಂಗ್ಚುಕ್, ಲಡಾಖ್‌ನ ಸಮಾಜ ಸುಧಾರಕರು, ಅವರ ಜೀವನ ಕಥೆಯು ಬಾಲಿವುಡ್ ಚಲನಚಿತ್ರ ‘3 ಈಡಿಯಟ್ಸ್’ಗೆ ಸ್ಫೂರ್ತಿ ನೀಡಿತು. ಕೇಂದ್ರಾಡಳಿತ ಪ್ರದೇಶದಲ್ಲಿನ ಸುಮಾರು 2/3 ರಷ್ಟು ಹಿಮನದಿಗಳು ಅಳಿವಿನಂಚಿನಲ್ಲಿವೆ ಎಂದು ಅಧ್ಯಯನಗಳು ಸೂಚಿಸಿವೆ. ಹಾಗಾಗಿ ಲಡಾಖ್‌ನ ಸುರಕ್ಷತೆ ಮತ್ತು ರಕ್ಷಣೆಯ ಬಗ್ಗೆ ಗಮನಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋನಮ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಭಾನುವಾರ ಎಎನ್‌ಐ ಜೊತೆ ಮಾತನಾಡಿದ ಸೋನಮ್ ವಾಂಗ್‌ಚುಕ್, “ಇದೇ ರೀತಿಯ ಅಜಾಗರೂಕತೆ ಮುಂದುವರಿದರೆ ಮತ್ತು ಲಡಾಖ್‌ಗೆ ಕೈಗಾರಿಕೆಗಳಿಂದ ರಕ್ಷಣೆ ನೀಡದಿದ್ದರೆ, ಇಲ್ಲಿನ ಹಿಮನದಿಗಳು ಅಳಿದುಹೋಗುತ್ತವೆ. ಹೀಗಾಗಿ ಭಾರತ ಮತ್ತು ಅದರ ನೆರೆಹೊರೆಯ ದೇಶಗಳಿಗೆ ನೀರಿನ ಕೊರತೆ ಉಂಟಾಗಿ ಅಗಾಧವಾದ ಸಮಸ್ಯೆಗಳನ್ನು ಸೃಷ್ಟಿಸುತ್ತದೆ” ಎಂದು ಹೇಳಿದರು.

“ಕಾಶ್ಮೀರ ವಿಶ್ವವಿದ್ಯಾನಿಲಯ ಮತ್ತು ಇತರ ಸಂಶೋಧನಾ ಸಂಸ್ಥೆಗಳ ಅಧ್ಯಯನಗಳ ಪ್ರಕಾರ ಲೇಹ್-ಲಡಾಖ್‌ನಲ್ಲಿರುವ ಹಿಮನದಿಗಳ ಬಗ್ಗೆ ಸರಿಯಾಗಿ ಕಾಳಜಿ ವಹಿಸದಿದ್ದರೆ ಅದರ 2/3 ಭಾಗ ಅಳಿದುಹೋಗುತ್ತವೆ ಎಂದು ಹೇಳಿವೆ. ಕಾಶ್ಮೀರ ವಿಶ್ವವಿದ್ಯಾನಿಲಯದ ಅಧ್ಯಯನವು ಹೆದ್ದಾರಿಗಳು ಮತ್ತು ಮಾನವ ಚಟುವಟಿಕೆಗಳಿಂದ ಆವೃತವಾಗಿರುವ ಹಿಮನದಿಗಳು ತುಲನಾತ್ಮಕವಾಗಿ ವೇಗವಾಗಿ ಕರಗುತ್ತಿವೆ ಎಂದು ಕಂಡುಹಿಡಿದಿದೆ” ಎಂದು ವಾಂಗ್ಚುಕ್ ಹೇಳಿದರು.

ಈ ಹವಾಮಾನ ಬದಲಾವಣೆಗೆ ಅಮೆರಿಕ ಮತ್ತು ಯುರೋಪ್‌ನ ಜಾಗತಿಕ ತಾಪಮಾನ ಮಾತ್ರ ಕಾರಣವಲ್ಲ, ಆದರೆ ಸ್ಥಳೀಯ ಕಾರ್ಖಾನೆಗಳ ಹೊರಸೂಸುವಿಕೆಯೂ ಕೂಡ ಇದಕ್ಕೆ ಸಮಾನವಾಗಿ ಕಾರಣವಾಗಿದೆ. ಲಡಾಖ್‌ನಂತಹ ಪ್ರದೇಶಗಳಲ್ಲಿ ಕನಿಷ್ಠ ಮಾನವ ಚಟುವಟಿಕೆಗಳು ಇರಬೇಕು ಇದರಿಂದ ಹಿಮನದಿಗಳು ಉಳಿಯಬಹುದು” ಎಂದರು.

“ಈ ಪ್ರದೇಶದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಅಳವಡಿಸಿಕೊಳ್ಳುವ ಅಗತ್ಯತೆ ಇದೆ ಎಂದು ಒತ್ತಿಹೇಳುತ್ತಾ, ಲಡಾಖ್ ಮತ್ತು ಇತರ ಹಿಮಾಲಯ ಪ್ರದೇಶಗಳನ್ನು “ಕೈಗಾರಿಕಾ ಶೋಷಣೆ” ಯಿಂದ ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದರು. ಇದು ಜನರ ಜೀವನ ಮತ್ತು ಉದ್ಯೋಗವನ್ನು ರಕ್ಷಿಸಲು ಸಹಾಯ ಮಾಡುತ್ತದೆ” ಎಂದು ಅವರು ಹೇಳಿದರು.

“ಈ ಕೈಗಾರಿಕಾ ಶೋಷಣೆಯಿಂದ ಲಡಾಖ್ ಮತ್ತು ಇತರ ಹಿಮಾಲಯ ಪ್ರದೇಶಗಳಿಗೆ ರಕ್ಷಣೆ ನೀಡುವಂತೆ ಪ್ರಧಾನಿ ಮೋದಿಯವರಿಗೆ ನನ್ನ ಮನವಿಯಾಗಿದೆ ಏಕೆಂದರೆ ಇದು ಜನರ ಜೀವನ ಮತ್ತು ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ರಕ್ಷಿಸುತ್ತದೆ. ಆದರೆ, ಸರ್ಕಾರದ ಜೊತೆಗೆ ಜನರು ಸಹಕರಿಸಬೇಕು. ಹವಾಮಾನ ಬದಲಾವಣೆಯ ಬಗ್ಗೆ ಕಾಳಜಿ ವಹಿಸಿ ಮತ್ತು ಅದನ್ನು ತಗ್ಗಿಸುವ ಕ್ರಮಗಳನ್ನು ಸರ್ಕಾರ ನೋಡಿಕೊಳ್ಳಬೇಕು” ಎಂದು ಹೇಳಿದರು.

ವಾಂಗ್‌ಚುಕ್ ಅವರು 13 ನಿಮಿಷಗಳ ಸುದೀರ್ಘ ವೀಡಿಯೊವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಅವರು ಲಡಾಖ್‌ನ “ಪರಿಸರ ಸೂಕ್ಷ್ಮ” ಪ್ರದೇಶವನ್ನು ರಕ್ಷಿಸಲು ತುರ್ತಾಗಿ ಸಹಾಯ ಮಾಡಲು ದೇಶದ ಮತ್ತು ಪ್ರಪಂಚದ ಜನರಿಗೆ ಮನವಿ ಮಾಡಿದ್ದಾರೆ. ಪರಿಸರ ವ್ಯವಸ್ಥೆಯ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಮತ್ತು ರಕ್ಷಿಸಲು ಅವರು ಪ್ರಧಾನಿ ಮೋದಿಯವರಿಗೆ ಭಾರತೀಯ ಸಂವಿಧಾನದ ಆರನೇ ಶೆಡ್ಯೂಲ್ ಅಡಿಯಲ್ಲಿ ಹೈಲೈಟ್ ಮಾಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರ ನಿಷೇಧಿಸುವವರಿಗೆ ಗಾಂಧಿ ಗೋಡ್ಸೆ ಚಿತ್ರ ಕಾಣಿಸಲಿಲ್ಲವೇ?: ಅಸಾದುದ್ದೀನ್ ಓವೈಸಿ

ಈ ಬಗ್ಗೆ ಅವರು ಟ್ವೀಟ್ ಕೂಡ ಮಾಡಿದ್ದು, “ಲಡಾಖ್‌ನಲ್ಲಿ ಎಲ್ಲವೂ ಚೆನ್ನಾಗಿಲ್ಲ! ನನ್ನ ಇತ್ತೀಚಿನ ವೀಡಿಯೊದಲ್ಲಿ ನಾನು @narendramodi ಜೀ ಅವರಿಗೆ ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡುತ್ತಿದ್ದೇನೆ. ಹಾಳಾಗುತ್ತಿರುವ ಲಡಾಕ್ ಪ್ರದೇಶಕ್ಕೆ ರಕ್ಷಣೆ ನೀಡಿ. ಸರ್ಕಾರ ಮತ್ತು ಪ್ರಪಂಚದ ಗಮನ ಸೆಳೆಯಲು ನಾನು 26 ಜನವರಿಯಿಂದ 5 ದಿನ ಖರ್ಡೊಂಗ್ಲಾ ಪಾಸ್‌ನಲ್ಲಿ 18000 ಅಡಿ -40 ಡಿಗ್ರಿ ಸೆಲ್ಸಿಯಸ್‌ ಹವಾಮಾನದಲ್ಲಿ ಉಪವಾಸ ಕುಳಿತುಕೊಳ್ಳಲು ನಿರ್ಧರಿಸಿದ್ದೇನೆ” ಎಂದು ಅವರು ತಿಳಿಸಿದ್ದಾರೆ.

ವಾಂಗ್‌ಚುಕ್ ಎಎನ್‌ಐ ಜೊತೆ ಮಾತನಾಡುತ್ತಾ, “ಗಣರಾಜ್ಯೋತ್ಸವದಂದು ಪ್ರಧಾನಿ ಮೋದಿ ಮತ್ತು ಜನರಿಗೆ ನಾನು ಸಂದೇಶವನ್ನು ತಲುಪಿಸಬೇಕೆಂದು ಬಯಸುತ್ತಿದ್ದೇನೆ ಅದಕ್ಕಾಗಿ, ಖರ್ಡೊಂಗ್ಲಾ ಪಾಸ್‌ನಲ್ಲಿ ಐದು ದಿನಗಳ ಕಾಲ ಉಪವಾಸ ಕುಳಿತುಕೊಳ್ಳುತ್ತೇನೆ” ಎಂದು ಹೇಳಿದರು.

“ನಾವು ಭೂಮಿಗೆ ಇಂತಹ ಅಪಾಯಗಳನ್ನು ಮಾಡುವುದನ್ನು ಮುಂದುವರಿಸಿದರೆ ಈ ಹಿಮನದಿಗಳು ಇನ್ನು ಮುಂದೆ ಬದುಕುವುದಿಲ್ಲ. ಈ ನನ್ನ ಸಂದೇಶವನ್ನು ನೀಡಲು ನಾನು ಮೈನಸ್ 40 ಡಿಗ್ರಿ ತಾಪಮಾನದಲ್ಲಿ ಖಾರ್ಡೊಂಗ್ಲಾ ಪಾಸ್‌ನಲ್ಲಿ 5 ದಿನಗಳ ದೀರ್ಘ ಉಪವಾಸವನ್ನು ನಡೆಸುತ್ತೇನೆ” ಎಂದು ಅವರು ANI ಗೆ ತಿಳಿಸಿದ್ದಾರೆ.

ವಾಂಗ್‌ಚುಕ್ ಅವರು ತಮ್ಮ ಮತ್ತೊಂದು ಟ್ವೀಟ್‌ನಲ್ಲಿ “ನನ್ನ ಈ ಉಪವಾಸದ ಸಾಂಕೇತಿಕ ಸತ್ಯಾಗ್ರಹ 18,000 ಅಡಿಯಲ್ಲಿರುವ ಖಾರ್ಡೊಂಗ್ಲಾ ನಲ್ಲಿ ಮೈನಸ್ 40 ಡಿಗ್ರಿ ಸೆಲ್ಸಿಯಸ್‌ನಲ್ಲಿ ಜನವರಿ 26 ರಿಂದ ಪ್ರಾರಂಭವಾಗಲಿದೆ. ನನ್ನ ಛಾವಣಿಯ ಮೇಲೆ ಲಡಾಕ್ ಅನ್ನು ರಕ್ಷಿಸಿ ಎಂದು 20 ಅನುಭವಗಳು ಇರಲಿವೆ” ಎಂದು ತಿಳಿಸಿದ್ದಾರೆ.

ವಾಂಗ್ಚುಕ್ ಅವರು 1966 ರಲ್ಲಿ ಜನಿಸಿದ್ದು, ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್, ಲಡಾಖ್ (HIAL) ನ ನಿರ್ದೇಶಕರರಾಗಿದ್ದಾರೆ. 2018 ರಲ್ಲಿ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದರು.

2009ರಲ್ಲಿ ಬಮದಂತಹ ‘3 ಈಡಿಯಟ್ಸ್’ ಅಮೀರ್ ಖಾನ್ ಅವರ ಚಲನಚಿತ್ರದಲ್ಲಿ ಫುನ್ಸುಖ್ ವಾಂಗ್ಡು ಎಂಬ ಕಾಲ್ಪನಿಕ ಪಾತ್ರಕ್ಕೆ ವಾಂಗ್ಚುಕ್ ಅವರ ವ್ಯಕ್ತಿತ್ವವೇ ಸ್ಪೂರ್ತಿಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟ ಪ್ಯಾಲೆಸ್ತೀನ್‌ ಪತ್ರಕರ್ತರಿಗೆ ‘2024ರ ಯುನೆಸ್ಕೋ...

0
ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡದ ಬಗ್ಗೆ ವರದಿ ಮಾಡಿದ ಪ್ಯಾಲೆಸ್ತೀನ್ ಪತ್ರಕರ್ತರನ್ನು 2024ರ ಯುನೆಸ್ಕೋ/ಗಿಲ್ಲೆರ್ಮೊ ಕ್ಯಾನೊ ವರ್ಲ್ಡ್ ಪ್ರೆಸ್ ಫ್ರೀಡಂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂತರಾಷ್ಟ್ರೀಯ ಮಾಧ್ಯಮ ವೃತ್ತಿಪರ ತೀರ್ಪುಗಾರರ ಶಿಫಾರಸಿನ ಮೇರೆಗೆ ವಿಜೇತರನ್ನು...