HomeUncategorizedಬಜೆಟ್ ಎನ್ನುವ ಬಿಜೆಪಿ ಚುನಾವಣಾ ಪ್ರಣಾಳಿಕೆ

ಬಜೆಟ್ ಎನ್ನುವ ಬಿಜೆಪಿ ಚುನಾವಣಾ ಪ್ರಣಾಳಿಕೆ

- Advertisement -
- Advertisement -

ಮುಂದಿನ ಏಪ್ರಿಲ್-ಮೇ ತಿಂಗಳಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಚುನಾವಣೆಯ ನಂತರ ಅಧಿಕಾರಕ್ಕೆ ಬರುವ ಹೊಸ ಸರಕಾರವು ತನ್ನದೇ ಆದ ಬಜೆಟ್ ಮಂಡಿಸುತ್ತದೆ. ಈ ಕಾರಣಕ್ಕಾಗಿ ಅದಕ್ಕೂ ಎರಡು ತಿಂಗಳ ಮುಂಚೆ ಆಡಳಿತ ನಡೆಸುತ್ತಿರುವ ಸರಕಾರವು ಸಂಪೂರ್ಣ ಬಜೆಟ್ ಬದಲಿಗೆ ’ವೋಟ್ ಆನ್ ಅಕೌಂಟ್ ಮಂಡಿಸಬೇಕಾಗುತ್ತದೆ. ಆದರೆ, ೨೦೦೪ರಲ್ಲಿ ಆಗಿನ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಚುನಾವಣೆಗೂ ಮುಂಚೆ ಬಜೆಟ್ ಮಂಡಿಸಿದರು. ನಂತರ ಚುನಾವಣೆ ನಡೆದು ಅಧಿಕಾರಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಹಣಕಾಸು ಮಂತ್ರಿಯಾಗಿದ್ದ ಸಿದ್ಧರಾಮಯ್ಯನವರು ಹೊಸ ಬಜೆಟ್ ಮಂಡಿಸಿದರು. ನಂತರ ಅಧಿಕಾರದಲ್ಲಿರುವ ಪ್ರತಿ ಸರಕಾರವು ಚುನಾವಣೆ ವರ್ಷದಲ್ಲಿ ಬಜೆಟ್ ಮಂಡಿಸುವ ಕೆಟ್ಟ ಪರಂಪರೆ ಮುಂದುವರಿಸುತ್ತಾ ಬರಲಾಗಿದೆ. ಈಗಿನ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಹ ಎರಡು ತಿಂಗಳ ನಂತರ ಅದರ ಆಸ್ತಿತ್ವ ಇರದ ಚುನಾವಣಾ ಗಿಮಿಕ್ ಆದ ಬಜೆಟ್‌ನ್ನು ಮಂಡಿಸಿದ್ದಾರೆ. ಇದನ್ನು ಬಿಜೆಪಿ ಪಕ್ಷದ ಪ್ರಣಾಳಿಕೆ ಎಂದು ಕರೆಯುವುದು ಸೂಕ್ತ.

ಪ್ರತಿ ಬಜೆಟ್ ಮಂಡನೆಯ ನಂತರ ಅದರ ಖರ್ಚು ಮತ್ತು ವೆಚ್ಚ, ಹಂಚಿಕೆ, ವಿತ್ತೀಯ ಕೊರತೆ ಇತ್ಯಾದಿಗಳ ಚರ್ಚೆ ನಡೆಯುತ್ತದೆ. ಆದರೆ ಬಜೆಟ್ ಮಂಡಿಸುವ ಸರಕಾರವು ಆರ್ಥಿಕ ಶಿಸ್ತು ಕಾಪಾಡಿಕೊಂಡು ಬರುತ್ತದೆಯೇ ಎನ್ನುವ ಮುಖ್ಯ ಪ್ರಶ್ನೆಯೇ ಚರ್ಚೆಗೆ ಬರುವುದಿಲ್ಲ. ಈ ಬಜೆಟ್ ಎನ್ನುವುದು ಅಂದಾಜು ಲೆಕ್ಕಾಚಾರ ಮಾತ್ರ. ಆದರೆ ಒಂದು ವರ್ಷದ ನಂತರ ಪ್ರಕಟವಾಗುವ ಪರಿಷ್ಕೃತ ಅಂದಾಜು (ಆರ್‌ಇ) ಆಯಾ ವರ್ಷದ ಬಜೆಟ್‌ನ ನಿಜವಾದ ಹಣೆಬರಹವಾಗಿರುತ್ತದೆ. ಎರಡು ವರ್ಷಗಳ ನಂತರ ಮಂಡಿಸುವ ಬಜೆಟ್‌ನಲ್ಲಿ ಎರಡು ವರ್ಷ ಹಿಂದಿನ ಬಜೆಟ್‌ನ ಅಸಲಿಯತ್ತು ಗೊತ್ತಾಗುತ್ತದೆ. ಅಂದರೆ 2203-24ರ ಬಜೆಟ್‌ನಲ್ಲಿ 2021-22ರ ಬಜೆಟ್‌ನ ಕರಾರುವಕ್ಕಾದ ಅಂಕಿಅಂಶಗಳು ಗೊತ್ತಾಗುತ್ತದೆ. ಆದರೆ ಆ ವರ್ಷದ ಬಜೆಟ್‌ನ ಅಂದಾಜು ಮತ್ತು ನಂತರ ಲಭ್ಯವಾಗುವ ಅಸಲಿ ಆಯವ್ಯಯವನ್ನು ತೌಲನಿಕವಾಗಿ ನೋಡಿ ಚರ್ಚೆಯಾಗುವುದಿಲ್ಲ. ಪ್ರತಿ ವರ್ಷ ಮಂಡಿತವಾದ ಬಜೆಟ್ ಕುರಿತು ಚರ್ಚೆಯಲ್ಲಿ ಕಳೆದ ಎರಡು ವರ್ಷಗಳ ಆಶ್ವಾಸನೆಗಳು, ಹಂಚಿಕೆ, ಯೋಜನೆಗಳ ವಾಸ್ತವವೇನು ಎನ್ನುವುದು ಚರ್ಚೆಗೆ ಬರದೆ ಹಿನ್ನಲೆಗೆ ಸರಿಯುತ್ತದೆ.

ಉದಾಹರಣೆಗೆ 2020-21ರ ಬಜೆಟ್‌ನಲ್ಲಿ ಜಿಎಸ್‌ಟಿ ಪರಿಹಾರ 16,116 ಕೋಟಿ ಎಂದು ಅಂದಾಜಿಸಿದ್ದರು. ಆದರೆ ಕೇಂದ್ರ ನೀಡಿದ್ದು 13,798 ಕೋಟಿ. ಶೇ.14ರಷ್ಟು ಕಡಿತವಾಗಿತ್ತು. ಈ ಬಾರಿಯ ಬಜೆಟ್ ಎನ್ನುವ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ 2023-24ರಲ್ಲಿ ಜಿಎಸ್‌ಟಿ ಪಾಲು 37,252 ಕೋಟಿ ಎಂದು ಅಂದಾಜಿಸಿದ್ದಾರೆ. ಎರಡು ವರ್ಷಗಳ ಹಿಂದೆ ಅಂದಾಜಿಸಿದ ಜಿಎಸ್‌ಟಿ ಪಾಲಿನಲ್ಲಿ ಶೇ.14ರಷ್ಟು ಕಡಿತವಾದದ್ದರ ಬಗ್ಗೆ ಮಾತಿಲ್ಲ. ಈ ಬಾರಿಯೂ ನೀವು ಹೇಳುವ ಮೊತ್ತ ರಾಜ್ಯದ ಬೊಕ್ಕಸಕ್ಕೆ ಸೇರುತ್ತದೆ ಎನ್ನುವ ಖಾತರಿ ಏನು ಎಂದು ಯಾರೂ ಕೇಳುತ್ತಿಲ್ಲ. 2022-23ರ ಬಜೆಟ್‌ನಲ್ಲಿ ಕೇಂದ್ರ ಸರಕಾರದ ಸಹಾಯ ಅನುದಾನದ ಪ್ರಮಾಣ ಶೇ.6ರಷ್ಟು ಎಂದು ಅಂದಾಜಿಸಿದ್ದರು. ಆದರೆ 2023-24ರಲ್ಲಿ ಅದು ಶೇ.4ಕ್ಕೆ ಕುಸಿದಿದೆ. ಇದನ್ನು ಪ್ರಶ್ನಿಸಬೇಕಲ್ಲವೇ?

ಈ ಬಾರಿ ಬಜೆಟ್‌ನಲ್ಲಿ 77,750 ಕೋಟಿ ವಾರ್ಷಿಕ ಸಾಲ ಮತ್ತು ಒಟ್ಟು ಸಾಲ 5.64 ಲಕ್ಷ ಕೋಟಿ ಎಂದು ಅಂದಾಜಿಸಿದ್ದಾರೆ. 2020-21ರಲ್ಲಿ ವಾರ್ಷಿಕ ಸಾಲ 84,527 ಕೋಟಿ, 2021-22ರಲ್ಲಿ 80,767 ಕೋಟಿ, 2022-22ರಲ್ಲಿ 67,000 ಕೋಟಿ ಎಂದು ಅಂದಾಜಿಸಿದ್ದರು. ಅಂದರೆ ಒಟ್ಟು 3.10 ಲಕ್ಷ ಕೋಟಿ ಸಾಲ ಮಾಡಲಾಗಿದೆ. ಇದರ ಹೊರತಾಗಿ 2021ರಲ್ಲಿ ಬಜೆಟ್‌ನ ಹೊರಗೆ ಅಂದರೆ ಸಾರ್ವಜನಿಕ ಉದ್ಯಮಗಳ ಮೂಲಕ 10,000 ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ. ಈ ಸಾಲವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸುವುದಿಲ್ಲ.2020-21 ರಲ್ಲಿ 23,620 ಕೋಟಿ ಬಡ್ಡಿ, 2021-22ರಲ್ಲಿ 24,983 ಕೋಟಿ, 2022-23ರಲ್ಲಿ 29,394 ಕೋಟಿ ಬಡ್ಡಿ ಕಟ್ಟಿದ್ದಾರೆ. 2023-24ರಲ್ಲಿ 34,023 ಕೋಟಿ ಬಡ್ಡಿ ಎಂದು ಅಂದಾಜಿಸಿದ್ದಾರೆ. ಅಂದರೆ ಒಟ್ಟು 1.12 ಲಕ್ಷ ಕೋಟಿ ಬಡ್ಡಿ ಕಟ್ಟಲಾಗಿದೆ. 2019-20ರಲ್ಲಿ ಶೇ.10.6ರಷ್ಟಿದ್ದ ಬಡ್ಡಿಯ ಪ್ರಮಾಣವು 2023-24ರ ಹೊತ್ತಿಗೆ ಶೇ.15.1ರಷ್ಟಾಗಿದೆ. ಮತ್ತೊಂದೆಡೆ 2021-22ರಲ್ಲಿ ಯೋಜನೇತರ ವೆಚ್ಚ 97,150. 2022-23 ಪರಿಷ್ಕೃತ ಯೋಜನೇತರ ವೆಚ್ಚ 1.16ಲಕ್ಷ ಕೋಟಿಯಾಗಿದೆ. 2023-24ರಲ್ಲಿ ಯೋಜನೇತರ ವೆಚ್ಚ 20.25 ಲಕ್ಷ ಕೋಟಿ ಎಂದು ಅಂದಾಜಿಸಿದ್ದಾರೆ. ಅಂದರೆ ಮೂರು ವರ್ಷಗಳ ಹಿಂದೆ ಶೇ.45ರಷ್ಟಿದ್ದ ಯೋಜನೇತರ ವೆಚ್ಚ 2023-24ರ ಹೊತ್ತಿಗೆ ಶೇ.60ರಷ್ಟಾಗಿದೆ. ಇದೇ ಸಂದರ್ಭದಲ್ಲಿ 2021-22ರಲ್ಲಿ ಯೋಜನಾಧಾರಿತ ವೆಚ್ಚ 74,879 ಕೋಟಿ, 2022-23 ಪರಿಷ್ಕೃತ ಯೋಜನಾಧಾರಿತ ವೆಚ್ಚ 69,766 ಕೋಟಿಯಾಗಿದೆ. 2023-24ರಲ್ಲಿ ಯೋಜನಾಧಾರಿತ ವೆಚ್ಚ 71,570 ಕೋಟಿ ಎಂದು ಅಂದಾಜಿಸಿದ್ದಾರೆ. ಅಂದರೆ ಯೋಜನಾಧಾರಿತ ವೆಚ್ಚ ಮೂರು ವರ್ಷಗಳಲ್ಲಿ ಶೇ.3ರಷ್ಟು ಕಡಿಮೆಯಾಗಿದೆ. ಮೇಲಿನ ಅಂಕಿಅಂಶಗಳನ್ನು ಒಂದಕ್ಕೊಂದು ತಾಳೆಯಾಗುವಂತೆ ಜೋಡಿಸಿಕೊಂಡಾಗ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಕೇಳಬೇಕಿರುವ ಪ್ರಶ್ನೆಗಳು

ಇದನ್ನೂ ಓದಿ: ಅದಾನಿ ವಿರುದ್ಧ ಸುದ್ದಿ ಪ್ರಕಟಿಸದಂತೆ ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ

ಆದಾಯ ಹೆಚ್ಚಾಗಿದೆ ಎಂದು ಹೇಳಿಕೊಳ್ಳುವ ನೀವು ಸಾಲ ಮತ್ತು ಬಡ್ಡಿಯ ಪ್ರಮಾಣ ಹೆಚ್ಚು ಮಾಡಿದ್ದು ಯಾಕೆ?

ಆದಾಯ ಹೆಚ್ಚಾಗಿದ್ದರೆ ಯೋಜನಾಧಾರಿತ ವೆಚ್ಚ ಕಡಿಮೆಯಾಗಿದ್ದು ಯಾಕೆ? ಶಿಕ್ಷಣಕ್ಕೆ ಬಜೆಟ್ ವೆಚ್ಚದ ಶೇ.12 ಮತ್ತು ಜಿಡಿಪಿಯ ಶೇ.2.25ರಷ್ಟು ಮಾತ್ರ ಯಾಕೆ ಹಂಚಿಕೆ ಮಾಡುತ್ತಿರುವಿರಿ? ಆರೋಗ್ಯಕ್ಕೆ ಬಜೆಟ್ ವೆಚ್ಚದ ಶೇ.4ರಷ್ಟು ಮಾತ್ರ ಯಾಕೆ ಹಂಚಿಕೆ ಮಾಡುವಿರಿ?

ರಾಜ್ಯದಲ್ಲಿ 2.4 ಲಕ್ಷ ಹುದ್ದೆಗಳು ಖಾಲಿಯಿವೆ. ಅಲ್ಲಿ ನೇಮಕಾತಿ ಮಾಡಿಕೊಳ್ಳದೆ ನಿರುದ್ಯೋಗಿಗಳನ್ನು ಸೃಷ್ಟಿಸುವ ನೀವು ಮತ್ತೊಂದೆಡೆ ನಿರುದ್ಯೋಗಿಗಳಿಗೆ 2000 ಸ್ಟೈಫಂಡ್ ಕೊಡುತ್ತೇವೆ ಎಂದು ಕೊಚ್ಚಿಕೊಳ್ಳುವುದು ಜೀವವಿರೋಧಿಯಲ್ಲವೇ? ಮುಖ್ಯವಾಗಿ ಒಂದು ಕಾಲು ಭಾಗದಷ್ಟು ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡರೆ ನಿಮ್ಮ ಯೋಜನೇತರ ವೆಚ್ಚ ಹೆಚ್ಚಾಗುತ್ತದೆ. ಅದನ್ನು ಸರಿದೂಗಿಸಲು ಆದಾಯ ಮೂಲಗಳಿಲ್ಲ. ಈ ಸತ್ಯವನ್ನು ಹೇಳಲು ನಿಮಗೆ ಧೈರ್ಯವಿಲ್ಲ.

ವೆಚ್ಚ ಕಡಿಮೆ ಮಾಡಲು ಸಬ್ಸಿಡಿಗಳನ್ನು ನಿಲ್ಲಿಸುವುದೊಂದೇ ಸರಕಾರಗಳು ಕಂಡುಕೊಂಡ ಹೊಸ ಪರಿಹಾರ ಮಾರ್ಗವಾಗಿದೆ. ಇದು ಬಜೆಟ್‌ನಲ್ಲಿ ಪ್ರತಿಫಲನವಾಗಿದೆ.

ಬಿ. ಶ್ರೀಪಾದ ಭಟ್
ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪೊಲೀಸ್ ತುರ್ತು ವಾಹನದ ಚಾಲಕ ಸೇರಿ ಐವರಿಂದ ಯುವತಿ ಮೇಲೆ ಅತ್ಯಾಚಾರ!

ಪೊಲೀಸ್ ತುರ್ತು ಸೇವೆ (112) ವಾಹನದ ಚಾಲಕ ಸೇರಿದಂತೆ ಐವರು ಪುರುಷರು 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯ ಬಂಕಿಮೊಂಗ್ರ ಪ್ರದೇಶದಲ್ಲಿ ನಡೆದಿದೆ. ಜನವರಿ...

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...