Homeಮುಖಪುಟಅದಾನಿ ವಿರುದ್ಧ ಸುದ್ದಿ ಪ್ರಕಟಿಸದಂತೆ ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ

ಅದಾನಿ ವಿರುದ್ಧ ಸುದ್ದಿ ಪ್ರಕಟಿಸದಂತೆ ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ

- Advertisement -
- Advertisement -

ಅದಾನಿ ಗ್ರೂಪ್‌ನ ಸ್ಟಾಕ್ ಮ್ಯಾನಿಪ್ಯುಲೇಷನ್ ಆರೋಪಗಳ ಬಗ್ಗೆ ವರದಿ ಮಾಡದಂತೆ ಮಾಧ್ಯಮಗಳ ಬಾಯಿ ಮುಚ್ಚಿಸಲು ಕೋರಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ವಕೀಲ ಎಂಎಲ್ ಶರ್ಮಾ ಅವರು ಅರ್ಜಿಯನ್ನು ಪ್ರಸ್ತಾಪಿಸಿದರು. ಶರ್ಮಾ ಅವರು, ಈ ವಿಷಯದ ಕುರಿತು ಮಾಧ್ಯಮ ವರದಿಗಳನ್ನು ನಿಲ್ಲಿಸುವಂತೆ ಮನವಿ ಮಾಡಿದಾಗ, ಸಿಜೆಐ ಡಿವೈ ಚಂದ್ರಚೂಡ್ ಅವರು, ”ನಾವು ಎಂದಿಗೂ ಮಾಧ್ಯಮದ ವಿರುದ್ಧ ಯಾವುದೇ ತಡೆಯಾಜ್ಞೆ ನೀಡುವುದಿಲ್ಲ” ಎಂದು ಹೇಳಿದ್ದಾರೆ.

ಹಿಂಡೆನ್‌ಬರ್ಗ್ ರಿಸರ್ಚ್ ವಿರುದ್ಧ ತನಿಖೆ ನಡೆಸುವಂತೆ ಕೋರಿ ಪಿಐಎಲ್ ಸಲ್ಲಿಸಿರುವ ಶರ್ಮಾ, ಮಾಧ್ಯಮವು ಸಮಾಜದಲ್ಲಿ ಅದಾನಿ ವಿರುದ್ಧ ಸಂಚಲನವನ್ನು ಸೃಷ್ಟಿಸುತ್ತಿದೆ. ಹಾಗಾಗಿ ಮಾಧ್ಯಮಗಳು ಆ ಬಗ್ಗೆ ವರದಿ ಮಾಡದಂತೆ ತಮ್ಮ ವಿನಂತಿಯನ್ನು ಪುನರಾವರ್ತಿಸಿದರು. ಆಗ ಸಿಜೆಐ ”ಸಮಂಜಸವಾದ ವಾದವನ್ನು ಮಾಡಿ, ಮಾಧ್ಯಮಕ್ಕೆ ತಡೆಯಾಜ್ಞೆ ನೀಡುವುದಿಲ್ಲ” ಎಂದು ಪುನರುಚ್ಚರಿಸಿದರು.

ಗೌತಮ್ ಅದಾನಿ ನೇತೃತ್ವದ ಪೋರ್ಟ್ಸ್-ಟು-ಎನರ್ಜಿ ಸಮೂಹವು ಜನವರಿ 24 ರಿಂದ ಬಿಕ್ಕಟ್ಟಿನಲ್ಲಿ ಮುಳುಗಿದೆ. ಹಿಂಡೆನ್‌ಬರ್ಗ್ ರಿಸರ್ಚ್ ವರದಿಯಲ್ಲಿ, ಅಧಿಕ ಮೌಲ್ಯದ ಷೇರುಗಳನ್ನು ವಾಗ್ದಾನ ಮಾಡುವ ಮೂಲಕ ಅದಾನಿ ಗ್ರೂಪ್ ಗಣನೀಯ ಸಾಲವನ್ನು ಸಂಗ್ರಹಿಸಿದೆ ಎಂದು ಆರೋಪಿಸಿದೆ.

ಇದನ್ನೂ ಓದಿ:ಹಿಂಡೆನ್‌ಬರ್ಗ್ ಎಫೆಕ್ಟ್: ಮೊದಲ ಬಾರಿಗೆ ಅದಾನಿ ಕಂಪನಿಗಳಲ್ಲಿನ ಎಲ್ಐಸಿ ಹೂಡಿಕೆ ನಿವ್ವಳ ನಷ್ಟದಲ್ಲಿ

ಈ ವರದಿ ಬಿಡುಗಡೆಯಾದಾಗಿನಿಂದ, ಅದಾನಿ ಗ್ರೂಪ್ ಮಾರುಕಟ್ಟೆ ಬಂಡವಾಳದಲ್ಲಿ $136 ಶತಕೋಟಿ (ರೂ. 11.26 ಲಕ್ಷ ಕೋಟಿಗೂ ಹೆಚ್ಚು) ಕಳೆದುಕೊಂಡಿದೆ.

ಶರ್ಮಾ ಮತ್ತು ಮತ್ತೊಬ್ಬ ವಕೀಲ ವಿಶಾಲ್ ತಿವಾರಿ ಸಲ್ಲಿಸಿರುವ ಎರಡು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.

ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥಾಪಕ ನಾಥನ್ ಆಂಡರ್ಸನ್ ಮತ್ತು ಭಾರತದಲ್ಲಿನ ಅವರ ಸಹಚರರ ವಿರುದ್ಧ ತನಿಖೆ ನಡೆಸಲು ಮತ್ತು ಎಫ್‌ಐಆರ್‌ ದಾಖಲಿಸಲು ನ್ಯಾಯಾಲಯವು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನಗಳನ್ನು ಕೋರಿ ಶರ್ಮಾ ಅರ್ಜಿ ಸಲ್ಲಿಸಿದ್ದಾರೆ. ತಿವಾರಿ ಅವರು, ವರದಿಯನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ಅಡಿಯಲ್ಲಿ ಸಮಿತಿಯ ರಚನೆ ಮಾಡಲು ಕೋರಿದ್ದಾರೆ.

ಹಿಂದಿನ ವಿಚಾರಣೆಗಳಲ್ಲಿ, ಹೂಡಿಕೆದಾರರನ್ನು ರಕ್ಷಿಸಲು ಸಮಿತಿಯನ್ನು ರಚಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು, ಆದರೆ ಸಮಿತಿಯ ಸದಸ್ಯರನ್ನು ಸರ್ಕಾರವೇ ಸೂಚಿಸುತ್ತದೆ ಎಂದು ಹೇಳಿತ್ತು.

ಫೆಬ್ರವರಿ 17ರಂದು, ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ಹೆಸರುಗಳನ್ನು ಸಲ್ಲಿಸಿತ್ತು, ಆದರೆ, ಅದನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಮತ್ತು ಸಮಿತಿಯನ್ನು ನೇಮಿಸುವ ವಿಚಾರದಲ್ಲಿ ನ್ಯಾಯಾಲಯ ತನ್ನ ಆದೇಶವನ್ನು ಸಹ ಕಾಯ್ದಿರಿಸಿತ್ತು.

ಜನವರಿ 24ರಂದು ಹಿಂಡೆನ್‌ಬರ್ಗ್ ರಿಸರ್ಚ್ ವರದಿಯನ್ನು ಪ್ರಕಟಿಸಿತು. ಈ ವರದಿಯಿಂದ ಅದಾನಿ ಗ್ರೂಪ್ ಷೇರುಗಳ ಕುಸಿತಕ್ಕೆ ಕಾರಣವಾಯಿತು. ಗೌತಮ್ ಅದಾನಿ ನೇತೃತ್ವದ ಸಮೂಹದ ಮಾರುಕಟ್ಟೆ ಬಂಡವಾಳೀಕರಣವು ಜನವರಿ 24 ರಂದು ರೂ 7.15 ಲಕ್ಷ ಕೋಟಿಗೆ ಕುಸಿದಿದೆ. ಒಟ್ಟು ರೂ. 12.02 ಲಕ್ಷ ಕೋಟಿ ನಷ್ಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ...

0
ಮೇ 1, 2024 ರಂದು ಗುಜರಾತ್‌ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ಏಕೈಕ ಪಕ್ಷ ಬಿಜೆಪಿ"...