Homeನ್ಯಾಯ ಪಥಬಿಬಿಸಿ ಮೇಲೆ ಕೈ ಹಾಕಿದರೆ ಇಂದಿರಾ ಗಾಂಧಿಗೆ ಆದಂತೆ ಮೋದಿಜಿಗೂ ಆಗಲಿದೆ!

ಬಿಬಿಸಿ ಮೇಲೆ ಕೈ ಹಾಕಿದರೆ ಇಂದಿರಾ ಗಾಂಧಿಗೆ ಆದಂತೆ ಮೋದಿಜಿಗೂ ಆಗಲಿದೆ!

- Advertisement -
- Advertisement -

ನಾನು ಬಿಬಿಸಿ ಕೇಳುತ್ತ ದೊಡ್ಡವನಾದವನು. ಪ್ರತಿನಿತ್ಯ ಸಂಜೆ 8 ಗಂಟೆಗೆ ಊಟಕ್ಕೆ ಕೂರುವುದು ನಮ್ಮ ಮನೆಯಲ್ಲಿ ನಿಯಮವಾಗಿತ್ತು. ಅದರೊಂದಿಗೆ ರೇಡಿಯೋದಲ್ಲಿ ಬಿಬಿಸಿ ಹಿಂದಿ ಸರ್ವೀಸ್‌ನ ಸುದ್ದಿ ಮತ್ತು ವಿಶ್ಲೇಷಣೆ ಕೇಳುವುದು ನಿಯಮಿತವಾಗಿ ನಡೆಯುತ್ತಿತ್ತು. ಓಂಕಾರನಾಥ್ ಶ್ರೀವಾಸ್ತವ್ ಸುದ್ದಿ ಓದುತ್ತಿದ್ದರೆ, ರತ್ನಾಕರ್ ಭಾರತೀಯ ವಿಶ್ಲೇಷಣೆ ಮಾಡುತ್ತಿದ್ದರು ಹಾಗೂ ದೆಹಲಿಯಿಂದ ಮಾರ್ಕ್ ಟಲಿ ಸುದ್ದಿ ಕಳುಹಿಸುತ್ತಿದ್ದರು. ರಾಜಸ್ಥಾನದ ಒಂದು ಪುಟ್ಟ ಗಡಿಭಾಗದ ನಗರವಾದ ಶ್ರೀಗಂಗಾನಗರದಲ್ಲಿ ನಮ್ಮ ವಾಸವಿದ್ದರೂ ವರ್ಷಗಟ್ಟಳೆ ಪ್ರತಿ ಸಂಜೆ ಬಿಬಿಸಿ ಕೇಳುತ್ತಿದ್ದರಿಂದ ದೇಶ ಹಾಗೂ ವಿಶ್ವದಿಂದ ಕಳಚಿಕೊಂಡಿದ್ದೇವೆ ಎಂದು ಅನ್ನಿಸಲೇ ಇಲ್ಲ. ಬಿಬಿಸಿ ಕೇಳುತ್ತ ಸಮಕಾಲೀನ ವಿಷಯಗಳ ಬಗ್ಗೆ ಅಭಿಪ್ರಾಯ ರೂಪಿಸುವುದನ್ನು ಕಲಿತೆ, ಅದು ವಿಯೆಟ್ನಾಂ ಯುದ್ಧವಾಗಿರಲಿ ಅಥವಾ ಬಾಂಗ್ಲಾದೇಶವಾಗಿರಲಿ ಅಥವಾ ವಾಟರ್‌ಗೇಟ್ ಹಗರಣವಾಗಿರಲಿ ಅಥವಾ ಜಯಪ್ರಕಾಶ ನಾರಾಯಣ ಅವರ ಆಂದೋಲನವಾಗಿರಲಿ.

ನನಗಿನ್ನೂ ನೆನಪಿದೆ, ತುರ್ತು ಪರಿಸ್ಥಿತಿಯ ಅಂಧಕಾರದ ದಿನಗಳಲ್ಲಿ ಬಿಬಿಸಿ ಸುದ್ದಿಯು ಸತ್ಯದ ಏಕಮೇವ ಬೆಳಕಾಗಿತ್ತು. ಆಕಾಶವಾಣಿಯು ಇಪ್ಪತ್ತು ಅಂಶಗಳ ಕಾರ್ಯಕ್ರಮದ ಸಫಲತೆಯ ಬಗ್ಗೆ ಸರಕಾರದ ಸುಳ್ಳು ಪ್ರಚಾರ ಮಾಡುತ್ತಿತ್ತು. ದಿನಪತ್ರಿಕೆಗಳೆಲ್ಲ ಇಂದಿರಾ ಗಾಂಧಿಯ ಎದುರಿಗೆ ಮಲಗಿಬಿದ್ದಿದ್ದವು. ತುರ್ತುಪರಿಸ್ಥಿತಿಯ ವಿರೋಧದಲ್ಲಿ ದೇಶ ಹಾಗೂ ವಿಶ್ವದಲ್ಲಿ ಏನಾಗುತ್ತಿದೆ ಹಾಗೂ ಏನು ಹೇಳಲಾಗುತ್ತಿದೆ ಎಂಬುದು ಕೇವಲ ಬಿಬಿಸಿಯಿಂದ ತಿಳಿಯುತ್ತಿತ್ತು. ಸ್ವಾಭಾವಿಕವಾಗಿಯೇ ಬಿಬಿಸಿಯ ಈ ಪಾತ್ರದಿಂದ ಇಂದಿರಾ ಗಾಂಧಿ ಸರಕಾರವು ವಿಚಲಿತವಾಗಿತ್ತು. ಇಂದಿರಾ ಗಾಂಧಿ ಒಂದಲ್ಲ ಎರಡು ಸಲ ಬಿಬಿಸಿಗೆ ಭಾರತದಲ್ಲಿ ನಿರ್ಬಂಧ ಹೇರಿದ್ದರು. ಮಾರ್ಕ್ ಟುಲಿಯನ್ನು ದೇಶದಿಂದ ಹೊರಹಾಕಲಾಗಿತ್ತು. ಆದರೆ ಧ್ವನಿ ತರಂಗಗಳಿಂದ ಬರುವ ಬಿಬಿಸಿಯ ಸತ್ಯವನ್ನು ಇಂದಿರಾ ಗಾಂಧಿಗೆ ನಿಲ್ಲಿಸಲಾಗಲಿಲ್ಲ.

ಇಂದಿರಾ ಗಾಂಧಿಯ ಸೋಲಿನ ಸುದ್ದಿಯನ್ನು ಅದೇ ಬಿಬಿಸಿಯು ದೇಶಕ್ಕೆ ತಲುಪಿಸಿತು. 1977ರ ಐತಿಹಾಸಿಕ ಚುನಾವಣೆಗಳ ಮತ ಎಣಿಕೆ ಆಗುತ್ತಿದ್ದ ದಿನದಂದು ಸಂಜೆಗೆ ಆಕಾಶವಾಣಿಯು ಕೇವಲ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‌ನ ಮುನ್ನಡೆಯ ಬಗ್ಗೆ ವರದಿ ಮಾಡುತ್ತಿತ್ತು. ಇಡೀ ಉತ್ತರ ಭಾರತದಲ್ಲಿ ಕಾಂಗ್ರೆಸ್ ಸೋಲುತ್ತಿದೆ ಹಾಗೂ ಸ್ವತಃ ಸಂಜಯ್ ಗಾಂಧಿ ಮತ್ತು ಇಂದಿರಾ ಗಾಂಧಿ ಕೂಡ ತಮ್ಮ ಚುನಾವಣಾ ಕ್ಷೇತ್ರಗಳಲ್ಲಿ ಹಿನ್ನಡೆ ಕಂಡಿದ್ದಾರೆ ಎಂದು ಮೊಟ್ಟ ಮೊದಲ ಬಾರಿ ಬಿಬಿಸಿಯು ವರದಿ ಮಾಡಿತು. ಆಪರೇಷನ್ ಬ್ಲೂ ಸ್ಟಾರ್‌ನ ಸತ್ಯವನ್ನು ಬಿಬಿಸಿಯೇ ದೇಶದ ಮುಂದಿಟ್ಟಿತು. ವಿಧಿಯ ವ್ಯಂಗ್ಯ ನೋಡಿ, ಅದೇ ಬಿಬಿಸಿಯು ಇಂದಿರಾ ಗಾಂಧಿಯ ಸಾವಿನ ಪ್ರಾಮಾಣಿಕ ಸೂಚನೆಯನ್ನು ಮೊತ್ತ ಮೊದಲ ಬಾರಿಗೆ ಜಗತ್ತಿಗೆ ನೀಡಿತು.

ಬಿಬಿಸಿಯ ಸುದ್ದಿ ಲಂಡನ್‌ನಿಂದ ಬಿತ್ತರಿಸಲಾಗುತ್ತಿರಬಹುದು ಆದರೆ ಅದರಿಂದ ಎಂದೂ ವಿದೇಶಿ ವಾಸನೆ ಬರುವುದಿಲ್ಲ. ಬ್ರಿಟಿಷ್ ರಾಜಕೀಯದ ಹಗ್ಗಜಗ್ಗಾಟ ಮತ್ತು ಪಾಶ್ಚಾತ್ಯ ದೇಶಗಳ ಕರಾಳ ಕೆಲಸಗಳ ಬಗ್ಗೆಯೂ ಭಾರತೀಯ ರಾಜಕೀಯದ ಬಗ್ಗೆ ಆಗುವಷ್ಟೇ ಮುಕ್ತವಾಗಿ ಚರ್ಚೆ ಆ ಸುದ್ದಿವಾಹಿನಿಯಲ್ಲಿ ಆಗುತ್ತವೆ. ಕೇವಲ ನಗರದ ಬುದ್ಧಿಜೀವಿಗಳಲ್ಲದೇ ಹಳ್ಳಿಗಾಡಿನಲ್ಲಿಯೂ ಸತ್ಯದ ಮಾನದಂಡ ಎಂದು ಅದನ್ನು ಪರಿಗಣಿಸಲಾಗಿದೆ.
ಇಂದಿನ ಟಿವಿ ಯುಗದಲ್ಲಿ ಬಿಬಿಸಿಯ ಜನಪ್ರಿಯತೆ ಕಡಿಮೆಯಾಗಿದೆ ಆದರೆ ಇಡೀ ವಿಶ್ವದಲ್ಲಿ ಅದರ ಪ್ರತಿಷ್ಠೆ ಹಾಗೇ ಉಳಿದುಕೊಂಡಿದೆ. ಒಂದು ಬಾರಿಯಲ್ಲ ಅನೇಕ ಬಾರಿ ಬಿಬಿಸಿಯು ಬ್ರಿಟನ್‌ನ ಆಡಳಿತಾರೂಢ ಪಕ್ಷ, ಬ್ರಿಟಿಷ್ ಸರಕಾರ ಹಾಗೂ ಬ್ರಿಟಿನ್‌ನ ಹಿತಾಸಕ್ತಿಯನ್ನು ಹಿಂಬದಿಗೆ ತಳ್ಳುತ್ತ ಸ್ವತಂತ್ರವಾಗಿ ಸುದ್ದಿಗಳನ್ನು ವರದಿ ಮಾಡಿದೆ. ಬ್ರಿಟನ್ ಮತ್ತು ಅರ್ಜೆಂಟೀನಾ ನಡುವೆ ಆದ ಫಾಕ್‌ಲ್ಯಾಂಡ್ ಯುದ್ಧದ ಸಮಯದಲ್ಲಿ ಬಿಬಿಸಿಯು ಬ್ರಿಟಿಷ್ ಸೈನ್ಯದ ಪರ ವಹಿಸಲು ನಿರಾಕರಿಸಿತು ಹಾಗೂ ಬ್ರಿಟನ್ ಸಂಸತ್ತಿನಲ್ಲಿ ಅದರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಯಿತು. ಬಿಬಿಸಿಯ ನಿರ್ದೇಶಕರು ಅನೇಕ ಸಲ ಬ್ರಿಟನ್‌ನ ಪ್ರಧಾನಮಂತ್ರಿಯೊಂದಿಗೆ ಬಹಿರಂಗವಾಗಿ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಈ ಇತಿಹಾಸದ ಆಧಾರದ ಮೇಲೆ ಬಿಬಿಸಿಯು ತನ್ನ ಪ್ರತಿಷ್ಠೆ ಕಾಯ್ದುಕೊಂಡಿದೆ.

ಹೇಗೆ ಇಂದಿರಾ ಗಾಂಧಿಯು ಬಿಬಿಸಿಯ ಮೇಲೆ ಕೈ ಹಾಕಿದ್ದಾರೋ, ಅದೇ ರೀತಿ ಇಂದು ಮೋದಿ ಸರಕಾರವು ಬಿಬಿಸಿಯ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಇನ್‌ಕಂಟ್ಯಾಕ್ಸ್ ನಿಯಮಗಳ ಉಲ್ಲಂಘನೆಯ ನೆಪ ಮಾಡಿಕೊಂಡು ಬಿಬಿಸಿಯ ದೆಹಲಿ ಮತ್ತು ಮುಂಬಯಿಯ ಕಚೇರಿಗಳ ಮೇಲೆ ದಾಳಿ ಮಾಡಿದೆ. ಮೂರು ದಿನಗಳವರೆಗೆ ಅಲ್ಲಿ ಸರಕಾರಿ ಅಧಿಕಾರಿಗಳು ಕುಳಿತುಕೊಂಡರು, ಬಿಬಿಸಿ ಪತ್ರಕರ್ತರ ಫೋನ್ ಬಂದ್ ಮಾಡಲಾಯಿತು, ಅವರ ಲ್ಯಾಪ್‌ಟಾಪ್ ಮತ್ತು ಕಂಪನಿಯ ಎಲ್ಲಾ ಕಂಪ್ಯೂಟರ್‌ಗಳ ಪರೀಕ್ಷೆ ನಡೆಸಲಾಯಿತು. ಸರಕಾರಿ ವಕ್ತಾರರು ತುಂಬಾ ಮುಗ್ಧತೆಯಿಂದ ಹೇಳಿದ್ದೇನೆಂದರೆ, ಬಿಬಿಸಿಯ ಮೇಲೆ ’ರೇಡ್ ಮಾಡಿಲ್ಲ, ಕೇವಲ ಅವರ ’ಸರ್ವೆ/ಸಮೀಕ್ಷೆ ಮಾಡಲಾಗುತ್ತಿದೆ ಎಂದು. ಆದರೆ ಚಿಕ್ಕ ಮಕ್ಕಳಿಗೂ ಗೊತ್ತಾಗಿದ್ದೇನೆಂದರೆ ಮೋದಿ ಸರಕಾರವು ಬಿಬಿಸಿ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಎಂದು. ಪ್ರಧಾನಮಂತ್ರಿಗೆ ಇರುವ ಸಿಟ್ಟೇನೆಂದರೆ, ಬಿಬಿಸಿಯು ಕಳೆದ ತಿಂಗಳು ಗುಜರಾತಿನ 2002ರ ದಂಗೆಗಳಲ್ಲಿ ಮುಸಲ್ಮಾನರ ಮಾರಣಹೋಮದ ಬಗ್ಗೆ ಒಂದು ಡಾಕ್ಯುಮೆಂಟರಿ ತೋರಿಸಿತ್ತು, ಅದರಲ್ಲಿ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿಯ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿತ್ತು. ಪ್ರೆಸ್ ಕ್ಲಬ್ ಆಫ್ ಇಂಡಿಯಾ ಮತ್ತು ಸಂಪಾದಕರ ಒಕ್ಕೂಟ ಸಂಸ್ಥೆಯಾದ ಎಡಿಟರ್‍ಸ್ ಗಿಲ್ಡ್ ಒಳಗೊಂಡಂತೆ ಪತ್ರಕರ್ತರ ಎಲ್ಲಾ ಸ್ವತಂತ್ರ ಸಂಘಟನೆಗಳು ಬಿಬಿಸಿ ಮೇಲೆ ಮಾಡಲಾದ ಈ ಕಾರ್ಯಾಚರಣೆಯನ್ನು ದೇಶದ ಸ್ವತಂತ್ರ ಪತ್ರಿಕೋದ್ಯಮದ ಕತ್ತು ಹಿಸುಕುವ ಇನ್ನೊಂದು ಉದಾಹರಣೆ ಎಂದು ಹೇಳಿವೆ. ಜಗತ್ತಿನೆಲ್ಲೆಡೆ ಮಾಧ್ಯಮಗಳು ಈ ಘಟನೆಯ ಮೇಲೆ ಟಿಪ್ಪಣಿ ಮಾಡಿ, ಭಾರತದಲ್ಲಿ ಮಾಧ್ಯಮದ ಸ್ವಾತಂತ್ರ್ಯ ಇಲ್ಲವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿವೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದಮೇಲೆ ಜಗತ್ತಿನಲ್ಲಿ ಮಾಧ್ಯಮದ ಸ್ವಾತಂತ್ರದ ವಿಷಯದಲ್ಲಿ ಭಾರತದ ಸೂಚ್ಯಂಕವು 130ರಿಂದ ಕೆಳಗಿಳಿದು 152ಕ್ಕೆ ಕುಸಿದಿದೆ.

ಇದನ್ನೂ ಓದಿ: ಗೋಮಾಂಸ ತಿನ್ನುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ: ಮೇಘಾಲಯ ಬಿಜೆಪಿ ರಾಜ್ಯಾಧ್ಯಕ್ಷ

ಸರಕಾರಿ ಮತ್ತು ಸರಕಾರದ ಭಟ್ಟಂಗಿಗಳು ಈಗ ತಿರುಗಿಬಿದ್ದು ಬಿಬಿಸಿಯ ಮೇಲೆ ಆರೋಪಿಸುತ್ತಿದ್ದಾರೆ, ಅದನ್ನು ಸಾಮ್ರಾಜ್ಯಶಾಹಿಯ ಏಜೆಂಟ್ ಎಂದು ಕರೆದು, ಭಾರತದ ರಾಜಕೀಯದಲ್ಲಿ ವಿದೇಶಿ ಹಸ್ತಕ್ಷೇಪದ ಅಪಾಯ ತೋರಿಸುತ್ತಿದ್ದಾರೆ. ತುರ್ತುಪರಿಸ್ಥಿತಿಯ ಮುನ್ನ ಹಾಗೂ ಅದರ ಕಾಲದಲ್ಲಿ ಇಂದಿರಾ ಗಾಂಧಿಯ ಭಟ್ಟಂಗಿಗಳು ಪ್ರತಿಯೊಂದು ಸಣ್ಣಪುಟ್ಟ ವಿಷಯಗಳಲ್ಲೂ ವಿದೇಶ ಕೈವಾಡ ಹುಡುಕುತ್ತಿದ್ದರು. ಅದಕ್ಕೂ ಹಾಗೂ ಇಂದಿನ ಭಟ್ಟಂಗಿಗಳು ಹೇಳುತ್ತಿರುವುದಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಬಿಬಿಸಿಯ ಮೇಲಿನ ಈ ದಾಳಿ ಪ್ರಧಾನಮಂತ್ರಿಯ ಒಪ್ಪಿಗೆಯಿಲ್ಲದೇ ಆಗಲು ಸಾಧ್ಯವಿಲ್ಲ. ವಿಡಂಬನೆಯೇನೆಂದರೆ, ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ 2013ರಲ್ಲಿ ಹೇಳಿದ್ದೇನೆಂದರೆ, ಜನರು ಆಕಾಶವಾಣಿ ಮತ್ತು ದೂರದರ್ಶನದ ಮೇಲೆ ವಿಶ್ವಾಸ ಇಡುವುದಿಲ್ಲ, ಅವರು ವಿಶ್ವಾಸ ಇಡುವುದು ಬಿಬಿಸಿಯ ಮೇಲೆ ಎಂದು. ಪ್ರಶ್ನೆ ಏನೆಂದರೆ, ಈ ಸರಕಾರ ಸತ್ಯವನ್ನು ಸಂಪೂರ್ಣವಾಗಿ ಮುಚ್ಚಿಹಾಕುವ ಮಿಷನ್‌ನಲ್ಲಿ ತೊಡಗಿಸಿಕೊಳ್ಳುವಷ್ಟು ವಿಚಲಿತವಾಗಿದೆಯೇ? ತುರ್ತುಪರಿಸ್ಥಿತಿಯ ವಿರುದ್ಧ ಭೂಗತರಾಗಿ ಕೆಲಸ ಮಾಡಿದ ಕಾರ್ಯಕರ್ತ ನರೇಂದ್ರ ಮೋದಿಯವರು ಬಿಬಿಸಿಯ ಧ್ವನಿ ಮುಚ್ಚಿಸುವ ಅಸಫಲ ಪ್ರಯತ್ನದ ಪಾಠವನ್ನು ಮರೆತಿದ್ದಾರೆಯೇ?

ಯೋಗೇಂದ್ರ ಯಾದವ್
ಕನ್ನಡಕ್ಕೆ: ರಾಜಶೇಖರ ಅಕ್ಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

23 COMMENTS

  1. Britishers spoiled Indian culture, treated like slaves. Now we don’t have to learn from those stupid Englishmen. Whole world appreciate our PM’s work. Now some vested interest want Modi to bring down. When supreme court has given clean chit to Modi who are those English people comment on it. It is sad that our own people has no patriotism to their own country.

  2. That was the reason why British ,Mughals ruled us for a long time ,we do not belive in ourselves ,it has become a stupid passion to westernise and like them

    That was the reason why British,, Mughals ruled us for a long time ,we do not belive in ourselves ,it has become a stupid passion to westernise and like them….

  3. Super sir your answer is correct, may be yogendra yadav is mentally imbalanced, he’s comparing modiji with indira gandhi, he don’t know the deference between these two. Actually BBC is against our country, while whole world is appreciating modiji we should ignore them

  4. As reportedly commented earlier by Modi himself,i was also a firm believer of BBC, especially in those days of radio; later on to the visual.i believed that whatever comes out of BBC was authentic.it was a considerable time long back that I heard a story from BBC which I was very familiar with and found to my utter shock that the report was utterly biased and far from the truth.unfortunately, i do not recall the item except that it pertained to a major event relating to the country.since then,i very rarely listen to that channel.Great to talk about freedom of the press etc,etc , the autonomy and great privilege the channel enjoys in uk ; and that it frequently criticises the government of that country.Considerimg the independent,strong political stand taken by India on the russian front, the desperate attempt made by the opposition to target the lndian govt, the rising fiscal position etc ; timing casts a heavy sinister motive on the report . The insinuation that modi will face the same fate as indiragandhi-by whomsoever it be,is highly sinister, darkly diabolical, is highly condemnable with the severest of words possible.Iet such articles not get away under the pretext of freedom of speech, democratic values etc.if BBC is subject to the stringent laws of the country,if the likes of India Today does not find it unpalatable,so be it.BBC,or the likes of it within the

  5. As reportedly commented earlier by Modi himself,i was also a firm believer of BBC, especially in those days of radio; later on to the visual.i believed that whatever comes out of BBC was authentic.it was a considerable time long back that I heard a story from BBC which I was very familiar with and found to my utter shock that the report was utterly biased and far from the truth.unfortunately, i do not recall the item except that it pertained to a major event relating to the country.since then,i very rarely listen to that channel.Great to talk about freedom of the press etc,etc , the autonomy and great privilege the channel enjoys in uk ; and that it frequently criticises the government of that country.Considerimg the independent,strong political stand taken by India on the russian front, the desperate attempt made by the opposition to target the lndian govt, the rising fiscal position etc ; timing casts a heavy sinister motive on the report . The insinuation that modi will face the same fate as indiragandhi-by whomsoever it be,is highly sinister, darkly diabolical, is highly condemnable with the severest of words possible.Iet such articles not get away under the pretext of freedom of speech, democratic values etc.if BBC is subject to the stringent laws of the country,if the likes of India Today does not find it unpalatable,so be it.BBC,or the likes of it within the country do not like it,so be it.god bless India and Modiji.gn Raju

  6. But BBC is not that much powerful as that of in earlier days it was, many Pakistani Britain’s are working in BBC. Moreover after media revolution in 90s’ few people watch BBC otherchannelsdominate, but India market and earnings are good for BBC compared to UK, so Modi spoiled BBC business in India.

  7. I fully agree with you.Most of these media , including western media are controlled by forces inimical to the interest of our country and to Modiji / BJP in particular.We, most of the Indians know thd contributions of Modiji to our country .We all know what was the state of affairs of our country prior to 2014.

  8. I fully agree with you.Most of these media , including western media are controlled by forces inimical to the interest of our country and to Modiji / BJP in particular.We, most of the Indians know the contributions of Modiji to our country .We all know what was the state of affairs of our country prior to 2014.It is Modiji whose dedication and hard work has brought glory to our country.Regarding ratings, again some NGOs under the control of vested interests give ratings which can be ignored.

  9. Note to author- Ask your white masters @BBC to make a documentary on bengal famine that was planned and executed by British govt headed by Churchill which took away more than 1000000 Indian lives. Or they could also make a documentary on how British pigs still have kept the monarchs relevant even today. British monarchs are no less than German nazis.

  10. Since honourable Indian court is given clean chit in favour of
    our honourable prime minister Modi,
    Is it require to rise this issue again in BBC?..
    Not required I believe, because no private agencies are superior than our courts.
    It’s shows that it’s a conspiracy made by the other politicians to tarnish the image of Modi ji.
    For Indians, Indian courts and their laws are superior always.

  11. We respect our Supreme Court. We respect our constitution. We respect our Prime Minister. No certificates are required from outside India media for any legal procedures.

  12. Hello readers…, feel a little surprised that modi is compared to indiara Gandhi…but later ..saw the article written by a person nanu Gowri…
    So what else can you expect from ..this name..they not even dare enough to use their real name.they see small prbs and miscomings..they don’t see don’t want to see bigger advantages..and brighter things..so after seeing the name..no use to comment.

  13. Mr. vadav, looks like you are one of the representative of BBC, just because you don’t have the guts to say against the BBC it doesn’t mean that whatever BBC is broadcasting is true. BBC is one of the largest corrupt media and is receiving funds to demolish not only Modi but India. You people have not understood how India stands strong with the world inspite of all other economies in turmoil. This is the game plan of the entire western countries to stop the growth of India by spreading false allegations. They want India to have the corrupt babus to come to power so that they can control India. You people have belief in BBC but not in our supreme court verdict. You people need to be thrown out of the country.

  14. It is sad that Our honourable PM Narendra Modi being targetted since 2002 even after getting clean chit from honourable clean chit.
    There are many urban naxals developed by foreign agencies in India to destabilize the elected govt through all tricks and tactics. But all these mother f**kers should understand that they can not fool people of India anymore, This artical written by a person who does not have capacity to win an municipal election, trying to set agenda for India. The day will not too long, these people will get proper treatment directly from public. These people does not have courage to fight directly with the real issues, try to create unrest in India, these tricks will not be successful

  15. About 20 years ago social media was not robust as now. We get to know the facts first hand.
    The saying, you can fool some of the people some of the time, you can fool some of the people some of the time but you cannot fool all the people all the time

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಕಾಂಗ್ರೆಸ್‌ನಲ್ಲಿ ನಿಲ್ಲದ ರಾಜೀನಾಮೆ ಪರ್ವ; ಎಎಪಿ ಮೈತ್ರಿ ವಿರೋಧಿಸಿ ಪಕ್ಷ ತೊರೆದ ಮತ್ತಿಬ್ಬರು...

0
ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅರವಿಂದ್ ಸಿಂಗ್ ಲವ್ಲಿ ನಂತರ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ರಾಷ್ಟ್ರ ರಾಜಧಾನಿಯ ಎರಡು ಲೋಕಸಭಾ ಸ್ಥಾನಗಳಿಗೆ ನೇಮಿಸಿದ್ದ ಅದರ ಇಬ್ಬರು ನಾಯಕರು, ವೀಕ್ಷಕರಾದ ನೀರಜ್ ಬಸೋಯಾ ಮತ್ತು ನಸೀಬ್...